newsfirstkannada.com

ಫ್ಯಾನ್ಸ್​ಗೆ ಭರ್ಜರಿ ಗುಡ್​​ನ್ಯೂಸ್​​.. ಆರ್​​ಸಿಬಿ ತಂಡಕ್ಕೆ ಸ್ಫೋಟಕ ಬ್ಯಾಟರ್​ ಎಂಟ್ರಿ!

Share :

Published August 29, 2024 at 10:09pm

Update August 29, 2024 at 10:10pm

    2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಮೆಗಾ ಹರಾಜಿಗಾಗಿ ಭಾರೀ ತಯಾರಿ

    ಎಲ್ಲಾ ತಂಡಗಳಿಗೂ 4+2 ಆಟಗಾರರನ್ನು ರೀಟೈನ್​ ಮಾಡಿಕೊಳ್ಳಲು ಅವಕಾಶ..!

    ಈ ಮುನ್ನ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಸ್ಟಾರ್​​​​ ಬ್ಯಾಟರ್​ ಎಂಟ್ರಿ

2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಮೆಗಾ ಹರಾಜಿಗಾಗಿ ಭಾರೀ ತಯಾರಿ ನಡೆಯುತ್ತಿದೆ. ಸದ್ಯದಲ್ಲೇ ಎಲ್ಲಾ ಐಪಿಎಲ್​​​ ಫ್ರಾಂಚೈಸಿಗಳು ಎಷ್ಟು ಆಟಗಾರರನ್ನು ರೀಟೈನ್​ ಮಾಡಿಕೊಳ್ಳಬೇಕು ಅನ್ನೋ ನಿರ್ಧಾರ ಅಂತಿಮವಾಗಲಿದೆ. ಈ ಸಲ ಎಲ್ಲಾ ತಂಡಗಳಿಗೂ 4+2 ಆಟಗಾರರನ್ನು ರೀಟೈನ್​ ಮಾಡಿಕೊಳ್ಳಲು ಅವಕಾಶ ನೀಡಬಹುದು ಎಂದು ತಿಳಿದು ಬಂದಿದೆ.

ಇನ್ನು, ಮೆಗಾ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಗಳು ನಾಲ್ವರನ್ನು ನೇರ ರಿಟೈನ್ ಮಾಡಿಕೊಳ್ಳಬಹುದು. ಬಳಿಕ ಉಳಿದ ಇಬ್ಬರು ಆಟಗಾರರನ್ನು ಆರ್​ಟಿಎಂ ಕಾರ್ಡ್​ ಬಳಸಿ ಹರಾಜಿಗೆ ರಿಲೀಸ್​ ಮಾಡಲು ಅವಕಾಶ ನೀಡಲಾಗಿದೆ ಎಂದು ವರದಿಯಾಗಿದೆ. ಇದರ ಪ್ರಕಾರ ಮೆಗಾ ಹರಾಜಿಗೂ ಮುನ್ನ ಎಲ್ಲಾ ತಂಡಗಳು ಕನಿಷ್ಠ 19 ಆಟಗಾರರನ್ನು ರಿಲೀಸ್​ ಮಾಡಲಿದೆ ಎಂಬುದು ಖಚಿತವಾಗಿದೆ. ಇದರ ಮಧ್ಯೆ ಕೆಕೆಆರ್​ ತಂಡದ ಸ್ಟಾರ್​ ಫಿನಿಶರ್​ ರಿಂಕು ಸಿಂಗ್​ ಆರ್​​ಸಿಬಿ ತಂಡ ಸೇರಲಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ.

ಇತ್ತೀಚೆಗೆ ರಿಂಕು ಸಿಂಗ್ ಸ್ಪೋರ್ಟ್ಸ್​ ತಕ್​ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ತನಗೆ ಆರ್​ಸಿಬಿ ಪರ ಆಡಬೇಕೆಂಬ ಆಸೆಯಿದೆ ಎಂದು ಬಿಚ್ಚಿಟ್ಟಿದ್ದಾರೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಸದ್ಯ ರಿಂಕು ಸಿಂಗ್ ಅವರನ್ನು ಕೆಕೆಆರ್ ರಿಲೀಸ್ ಮಾಡುವ ಸಾಧ್ಯತೆ ಇದ್ದು, ಆರ್​ಸಿಬಿ ಅವರನ್ನು ಖರೀದಿ ಮಾಡಲು ಪ್ಲಾನ್​ ಮಾಡಿಕೊಂಡಿದೆ ಎನ್ನಲಾಗಿದೆ.

ಈ ಹಿಂದೆ ರಿಂಕು ಸಿಂಗ್​​​ ಹೇಳಿದ್ದೇನು?

ಮುಂದಿನ ಸೀಸನ್​ಗೆ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ನಿಮ್ಮನ್ನು ರಿಟೈನ್ ಮಾಡಿಕೊಳ್ಳದಿದ್ರೆ ಯಾವ ತಂಡದ ಪರ ಆಡುತ್ತೀರಿ? ಅನ್ನೋ ಪ್ರಶ್ನೆ ರಿಂಕು ಸಿಂಗ್​ಗೆ ಕೇಳಲಾಯ್ತು. ಈ ಪ್ರಶ್ನೆಗೆ ಕೆಕೆಆರ್ ಬ್ಯಾಟರ್​ ರಿಂಕು ಸಿಂಗ್​ ನೀಡಿದ ಉತ್ತರ ಹೀಗಿತ್ತು. ಕೆಕೆಆರ್ ನನ್ನನ್ನು ರಿಟೈನ್ ಮಾಡದಿದ್ರೆ, ನಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಲು ಎದುರು ನೋಡುತ್ತಿದ್ದೇನೆ ಎಂದರು.

ಇದನ್ನೂ ಓದಿ: ಆರ್​​​ಸಿಬಿ ತಂಡಕ್ಕೆ ಸ್ಟಾರ್​ ಫಿನಿಶರ್​​ ಎಂಟ್ರಿ.. ಸ್ಫೋಟಕ ಸುಳಿವು ಬಿಚ್ಚಿಟ್ಟ ಇಂಡಿಯನ್​ ಬ್ಯಾಟರ್​​!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಫ್ಯಾನ್ಸ್​ಗೆ ಭರ್ಜರಿ ಗುಡ್​​ನ್ಯೂಸ್​​.. ಆರ್​​ಸಿಬಿ ತಂಡಕ್ಕೆ ಸ್ಫೋಟಕ ಬ್ಯಾಟರ್​ ಎಂಟ್ರಿ!

https://newsfirstlive.com/wp-content/uploads/2024/08/RCB_TEAM-3.jpg

Load More