newsfirstkannada.com

ಕಿಂಗ್​ ಕೊಹ್ಲಿ ಅಂದ್ರೆ KKRಗೆ ಭಯ.. ಈಡನ್ ಗಾರ್ಡನ್ಸ್​​ನಲ್ಲಿ ವಿರಾಟ್​ ವಿಶ್ವರೂಪದ ರೆಕಾರ್ಡ್​ ಹೇಗಿದೆ?

Share :

Published April 21, 2024 at 10:29am

  ಕೆಕೆಆರ್​ ಎದುರು ವಿರಾಟ್ ಕೊಹ್ಲಿ ಟ್ರ್ಯಾಕ್ ರೆಕಾ್ಡ್ ಏನು ಹೇಳುತ್ತದೆ..?

  ಸದ್ಯ ಕೋಲ್ಕತ್ತಾ ನೈಟ್ ರೈಡರ್ಸ್​​ ಟಾಪ್​ ಕ್ಲಾಸ್​ ಪರ್ಫಾಮೆನ್ಸ್​ ನೀಡುತ್ತಿದೆ

  ಈಡನ್ ಗಾರ್ಡನ್ಸ್​​ನಲ್ಲಿ ಆರ್​​​ಸಿಬಿ ಕೊನೆಯದಾಗಿ ಗೆದ್ದಿದ್ದು ಯಾವ ವರ್ಷ?

ಕಿಂಗ್​ ವಿರಾಟ್​ ಕೊಹ್ಲಿಯೇ ಇಂದಿನ ಕೆಕೆಆರ್​ VS ಆರ್​​ಸಿಬಿ ನಡುವಿನ ಪಂದ್ಯದ ಸೆಂಟರ್​ ಆಫ್​ ಅಟ್ರಾಕ್ಷನ್​. ಸತತ ಸೋಲಿನಿಂದ ಹತಾಶೆಗೆ ಒಳಗಾಗಿರೋ ಫ್ಯಾನ್ಸ್​ ಮನದಲ್ಲಿ ಆರ್​​ಸಿಬಿ ಮೇಲೆ ಹೋಪ್​ ಉಳಿದಿಲ್ಲ. ಹಾಗಂತ ಕೊಹ್ಲಿ ಮೇಲಿನ ಭರವಸೆ ಕಿಂಚಿತ್ತೂ ತಗ್ಗಿಲ್ಲ. ಇವತ್ತು ಈಡನ್​ ಗಾರ್ಡನ್​ನಲ್ಲೂ ಕಿಂಗ್​ ಕೊಹ್ಲಿ ದರ್ಬಾರ್​ ನಡೆಸ್ತಾರೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ.

ಆರ್​​ಸಿಬಿ VS ಕೆಕೆಆರ್​​ ದಂಗಲ್​ಗೆ ವೇದಿಕೆ ಸಜ್ಜಾಗಿದೆ. ಸತತ ಸೋಲಿನಿಂದ ಕಂಗೆಟ್ಟಿರೋ ಆರ್​​ಸಿಬಿ ಪಾಳಯದಲ್ಲಿ ಆತ್ಮವಿಶ್ವಾಸಕ್ಕಿಂತ ಆತಂಕವೇ ಹೆಚ್ಚಾಗಿದೆ. ಬ್ಯಾಟ್ಸ್​​ಮನ್​ಗಳ ಕಳಪೆ ಆಟ, ಬೌಲರ್​​ಗಳ ಹೀನಾಯ ಪ್ರದರ್ಶನ ತಂಡದಲ್ಲಿ ಟೆನ್ಶನ್​​ ಹೆಚ್ಚಿಸಿದೆ. ಆರ್​​ಸಿಬಿ ಹೋಲಿಸಿದ್ರೆ, ಎದುರಾಳಿ ಕೆಕೆಆರ್​ ಟಾಪ್​ ಕ್ಲಾಸ್​ ಪರ್ಫಾಮೆನ್ಸ್​ ನೀಡ್ತಿದೆ. ಆದ್ರೆ, ಕೊಲ್ಕತ್ತಾ ನೈಟ್ ರೈಡರ್ಸ್​ ಪಾಳಯದಲ್ಲಿ ಭಯ ಕಾಡ್ತಿದೆ. ಆ ಭಯ ಹುಟ್ಟು ಹಾಕಿರೋದು ಬೇರಾರೂ ಅಲ್ಲ.. ಒನ್​ & ಒನ್ಲಿ ಕಿಂಗ್​ ವಿರಾಟ್​ ಕೊಹ್ಲಿ.

ಬಲಿಷ್ಠ ಕೆಕೆಆರ್​​ಗೆ ಕಿಂಗ್​ ಕೊಹ್ಲಿಯ ಭಯ.!

ಇದನ್ನೂ ಓದಿ: ಪೋಷಕರೇ ಎಚ್ಚರ! ಚಾಕೊಲೇಟ್ ತಿಂದು ರಕ್ತ ವಾಂತಿ ಮಾಡಿದ ಒಂದೂವರೆ ವರ್ಷದ ಮಗು; ಆಗಿದ್ದೇನು?

ಆರ್​​ಸಿಬಿ ಬ್ಯಾಟ್ಸ್​ಮನ್​ಗಳು ಇನ್​ಕನ್ಸಿಸ್ಟೆಂಟ್​ ಪರ್ಫಾಮೆನ್ಸ್​ ನೀಡ್ತಿದ್ದಾರೆ. ಆರ್​​​ಸಿಬಿ ಬೌಲರ್ಸ್​​ ಕಳಪೆ ಪ್ರದರ್ಶನ​ ನೀಡ್ತಿದ್ದಾರೆ. ಪಾಯಿಂಟ್ಸ್​ ಟೇಬಲ್​ನಲ್ಲಿ ಆರ್​​ಸಿಬಿ ಪಾತಾಳಕ್ಕೆ ಕುಸಿದಿದೆ. ಇದೆಲ್ಲವೂ ನಿಜ. ಆದ್ರೆ, ಇಡೀ ತಂಡ ವೈಫಲ್ಯ ಸುಳಿಗೆ ಸಿಲುಕಿರೋ ಸಂದರ್ಭದಲ್ಲಿ ವೀರ ಯೋಧನಂತೆ ಕಿಂಗ್​ ಕೊಹ್ಲಿ ಏಕಾಂಗಿಯಾಗಿ ಹೋರಾಡ್ತಿದ್ದಾರೆ. ಇದೇ ಕೆಕೆಆರ್​ ಕ್ಯಾಂಪ್​ನಲ್ಲೂ ಆತಂಕ ಹುಟ್ಟಿಸಿದೆ.

ಕ್ಲಾಸ್​ಗೆ ಕ್ಲಾಸ್​.. ಮಾಸ್​ಗೆ ಮಾಸ್​.. ಕನ್ಸಿಸ್ಟೆಂಟ್​ ಪರ್ಫಾಮೆನ್ಸ್.!

ಈ ಸೀಸನ್​ ಐಪಿಎಲ್​ನಲ್ಲಿ ವಿರಾಟ್​ ಕೊಹ್ಲಿ ಬ್ಯಾಟಿಂಗ್​ ಪರ್ಫಾಮೆನ್ಸ್​ ಸಾಲಿಡ್​ ಆಗಿದೆ. ಸಿಚ್ಯವೇಶನ್​ಗೆ ತಕ್ಕಂತೆ ಸಖತ್​ ಆಟವಾಡ್ತಿರೋ ವಿರಾಟ್​, ಕನ್ಸಿಸ್ಟೆಂಟ್​​ ಪರ್ಫಾಮೆನ್ಸ್​ ನೀಡ್ತಿದ್ದಾರೆ. ಆಡಿದ 7 ಇನ್ನಿಂಗ್ಸ್​ಗಳಲ್ಲಿ ತಾಳ್ಮೆಯಿಂದ ಎಚ್ಚರಿಕೆಯಿಂದಲೂ ಆಡಿದ್ದಾರೆ. ಅಗ್ರೆಸ್ಸೀವ್​ ಇಂಟೆಂಟ್​ನಲ್ಲೂ ಘರ್ಜಿಸಿದ್ದಾರೆ. ಕಳೆದ ಹೈದ್ರಾಬಾದ್​ ಎದುರಿನ ಪಂದ್ಯದಲ್ಲಂತೂ ಆಡಿದ್ದು ಖತರ್ನಾಕ್​ ಆಟ..

ಕೋಲ್ಕತ್ತಾದಲ್ಲಿ ಕೊಹ್ಲಿ ಕಮಾಲ್​, ಕೆಕೆಆರ್​ಗೆ ಟೆನ್ಶನ್​.!

ಎಸ್​​ಆರ್​ಹೆಚ್​ ವಿರುದ್ಧದ ಪಂದ್ಯದಲ್ಲಿ ಕಿಂಗ್​​​ ಕೊಹ್ಲಿ ಪವರ್​​ ಫುಲ್ ಆಟವಾಡಿದ್ರು. 210ರ ಸ್ಟ್ರೈಕ್​​ರೇಟ್​​ನಲ್ಲಿ ಘರ್ಜಿಸಿದ ಕೊಹ್ಲಿ, 20 ಎಸೆತಗಳಲ್ಲಿ 42 ರನ್​ ಚಚ್ಚಿದ್ರು. ಒಟ್ಟಾರೆ ಈ ಐಪಿಎಲ್​ನಲ್ಲಿ ಸಾಲಿಡ್​ ಫಾರ್ಮ್​ನಲ್ಲಿರೋ ಕೊಹ್ಲಿ, ಈಡನ್​ ಗಾರ್ಡನ್​ನಲ್ಲೂ ಉತ್ತಮ ಟ್ರ್ಯಾಕ್​ ರೆಕಾರ್ಡ್​​ ಹೊಂದಿದ್ದಾರೆ. ಆರ್​​​ಸಿಬಿ ಕೊನೆಯದಾಗಿ ಈಡನ್ ಗಾರ್ಡನ್ಸ್​​ನಲ್ಲಿ ಗೆದ್ದಿದ್ದು 2019ರಲ್ಲಿ. ಅಂದು ಕೊಹ್ಲಿ ಶತಕದ ದರ್ಬಾರ್​ ನಡೆಸಿದ್ರು.

ಇದನ್ನೂ ಓದಿ: ಗೆದ್ದರೆ ಫ್ಲೇ ಆಫ್ ಜೀವಂತ.. KKR ವಿರುದ್ಧ RCBಗೆ ಇಂದಾದ್ರೂ ಗೆಲುವು ಸಿಗುತ್ತಾ?

ಈಡನ್​ ಗಾರ್ಡನ್​ನಲ್ಲಿ ಕೊಹ್ಲಿ ಪ್ರದರ್ಶನ

ಈಡನ್​ ಗಾರ್ಡನ್​ನಲ್ಲಿ 11 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್​ ಬೀಸಿರುವ ವಿರಾಟ್​ ಕೊಹ್ಲಿ 353 ರನ್​ಗಳಿಸಿದ್ದಾರೆ. 126.97ರ ಡಿಸೆಂಟ್​ ಸ್ಟ್ರೈಕ್​ರೇಟ್​ನಲ್ಲಿ 1 ಶತಕ, 1 ಅರ್ಧಶತಕ ಸಿಡಿಸಿದ್ದಾರೆ.

ಇದನ್ನೂ ಓದಿ: ಬರೋಬ್ಬರಿ 6 ಮಕ್ಕಳನ್ನ ಒಂದೇ ಬಾರಿ ಹೆತ್ತ ಮಹಾತಾಯಿ.. ಗಂಡ, ಕುಟುಂಬಸ್ಥರು ಫುಲ್ ಖುಷ್!

ಈ ಸೀಸನ್​ನ ಮೊದಲ ಮುಖಾಮುಖಿಯಲ್ಲೂ ಕೊಲ್ಕತ್ತಾವನ್ನ ಕಾಡಿದ್ದು ಕೊಹ್ಲಿಯೇ. ಒಂದು ಪಂದ್ಯ ಮಾತ್ರವಲ್ಲ. ಕೊಹ್ಲಿ ಪರಾಕ್ರಮ ಈಡನ್​ ಗಾರ್ಡನ್​ಗೆ ಮಾತ್ರ ಸೀಮಿತವೂ ಆಗಿಲ್ಲ. ಕೆಕೆಆರ್​​ ಎದುರಿನ ಪಂದ್ಯ ಅಂದ್ರೆ ಸಾಕು ವಿರಾಟ್​ ಕೊಹ್ಲಿ, ಕೆಚ್ಚೆದೆಯ ಹೋರಾಟ ನಡೆಸ್ತಾರೆ. ಇದನ್ನ ಈ ಹಿಂದಿನ ಟ್ರ್ಯಾಕ್​ ರೆಕಾರ್ಡ್​​ ಹೇಳ್ತಿದೆ.

ಕೆಕೆಆರ್​​ ಎದುರು ಕೊಹ್ಲಿ ಪ್ರದರ್ಶನ

ಕೆಕೆಆರ್​ ಎದುರು 30 ಇನ್ನಿಂಗ್ಸ್​ಗಳಲ್ಲಿ ಬ್ಯಾಟಿಂಗ್​ ನಡೆಸಿರುವ ಕೊಹ್ಲಿ 944 ರನ್​ಗಳಿಸಿದ್ದಾರೆ. 1 ಶತಕ, 6 ಅರ್ಧಶತಕ ಸಿಡಿಸಿರುವ ಕೊಹ್ಲಿಯ ಸ್ಟ್ರೈಕ್​ರೇಟ್​​ 130.92 ಆಗಿದೆ. ಒಂದೆಡೆ ಕೆಕೆಆರ್​​ಗೆ ಕೊಹ್ಲಿಯ ಭಯ ಕಾಡ್ತಿದೆ. ಇನ್ನೊಂದೆಡೆ ಸತತ ಸೋಲಿನಿಂದ ಕಂಗೆಟ್ಟಿರೋ ಆರ್​​​ಸಿಬಿಯೂ ಕೊಹ್ಲಿಯೊಬ್ಬರನ್ನೇ ನೆಚ್ಚಿಕೊಂಡಿದೆ. ಕ್ರಿಕೆಟ್​ ಲೋಕದ ಕಣ್ಣು ಕೂಡ ಕೊಹ್ಲಿಯ ಮೇಲೆ ನೆಟ್ಟಿದೆ. ಕಿಂಗ್​ ಕೊಹ್ಲಿಯೇ ಇಂದಿನ ಪಂದ್ಯದ ಸೆಂಟರ್​ ಆಫ್​ ಅಟ್ರಾಕ್ಷನ್​ ಆಗಿದ್ದು, ವಿರಾಟ್​ ಇಂದು ಕಮಾಲ್​ ಮಾಡ್ತಾರಾ.? ಕಾದು ನೋಡೋಣ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕಿಂಗ್​ ಕೊಹ್ಲಿ ಅಂದ್ರೆ KKRಗೆ ಭಯ.. ಈಡನ್ ಗಾರ್ಡನ್ಸ್​​ನಲ್ಲಿ ವಿರಾಟ್​ ವಿಶ್ವರೂಪದ ರೆಕಾರ್ಡ್​ ಹೇಗಿದೆ?

https://newsfirstlive.com/wp-content/uploads/2024/04/VIRAT_KOHLI_RCB-1.jpg

Load More