ಅಷ್ಟಕ್ಕೂ KL ರಾಹುಲ್, ಲಕ್ನೋ ಮಾಲೀಕರ ಬಗ್ಗೆ ಹೇಳಿದ್ದೇನು..?
ಲಕ್ನೋ ಫ್ರಾಂಚೈಸಿ ಓನರ್ ವಿರುದ್ಧ ಗುಡುಗಿದ ಕನ್ನಡಿಗ ರಾಹುಲ್!
ಅಂದಿನ ಸೋಲಿಗೆ ಅವಮಾನ ಎದುರಿಸಿದ್ದ ನಾಯಕ ರಾಹುಲ್
ಕೆ.ಎಲ್ ರಾಹುಲ್ ಲಕ್ನೋ ಫ್ರಾಂಚೈಸಿಗೆ ಗುಡ್ ಬೈ ಹೇಳ್ತಾರಾ?. ಮುಂದಿನ ಐಪಿಎಲ್ ಸೀಸನ್ನಲ್ಲಿ ಬೇರೆ ತಂಡದಲ್ಲಿ ಕಾಣಿಸಿಕೊಳ್ತಾರಾ ಅನ್ನೋ ಪ್ರಶ್ನೆಗಳು ಚರ್ಚೆಯಲ್ಲಿವೆ. ಇದರ ನಡುವೆ ಕನ್ನಡಿಗ ರಾಹುಲ್ ಲಕ್ನೋ ಫ್ರಾಂಚೈಸಿ ಮಾಲೀಕರ ವಿರುದ್ಧ ಗುಡುಗಿದ್ದಾರೆ. ಇದು ಲಕ್ನೋ ತಂಡ ಬಿಡುವ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಅಷ್ಟಕ್ಕೂ ರಾಹುಲ್, ಲಕ್ನೋ ಮಾಲೀಕರ ಬಗ್ಗೆ ಹೇಳಿದ್ದೇನು?.
ಇದನ್ನೂ ಓದಿ: ಪಾಂಡ್ಯ ಮೇಲೆ ನತಾಶಾ ಆಪ್ತರಿಂದ ಸ್ಫೋಟಕ ಆರೋಪ.. ಸಂಸಾರದ ಹಳಿ ತಪ್ಪಿದ್ರಾ ಸ್ಟಾರ್ ಕ್ರಿಕೆಟರ್?
ಕಳೆದ ಐಪಿಎಲ್ ಸೀಸನ್ ವೇಳೆ ನಡೆದ ಆ ಒಂದು ಘಟನೆಯನ್ನ ಯಾರೊಬ್ಬರೂ ಇದನ್ನ ಮರೆಯಲು ಸಾಧ್ಯವಿಲ್ಲ. ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳಂತೂ ಯಾವ ಕಾರಣಕ್ಕೂ ಮರೆತಿರಲ್ಲ. ಅಂದು ಹೈದ್ರಾಬಾದ್ ವಿರುದ್ಧ ಲಕ್ನೋ ಸೋತಿತ್ತು. ಹೀನಾಯವಾಗಿ ಪರಾಭವಗೊಂಡ ಬೆನ್ನಲ್ಲೆ ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ, ಆನ್ ಫೀಲ್ಡ್ನಲ್ಲೆ ಕ್ಯಾಪ್ಟನ್ ಕೆ.ಎಲ್ ರಾಹುಲ್ ವಿರುದ್ಧ ಕಿಡಿಕಾರಿದ್ರು. ಏರು ಧ್ವನಿಯಲ್ಲೇ ಆನ್ ಫೀಲ್ಡ್ನಲ್ಲಾದ ತಪ್ಪುಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ರು.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಬಿಗ್ ಶಾಕ್ ಕೊಟ್ಟ ಬಾಂಗ್ಲಾ ಪ್ಲೇಯರ್ಸ್.. ಐತಿಹಾಸಿಕ ದಾಖಲೆ ಬರೆದ ಆಟಗಾರರು
ಗೋಯೆಂಕಾ ತರಾಟೆಗೆ ಪ್ರತಿಯಾಗಿ ಸಖತ್ ಕೌಂಟರ್..!
ಅಂದು ಲಕ್ನೋ ಫ್ರಾಂಚೈಸಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಫ್ಯಾನ್ಸ್ ಹಿಗ್ಗಾಮುಗ್ಗಾ ಜಾಡಿಸಿದ್ರು. ಲಕ್ನೋ ಫ್ರಾಂಚೈಸಿ ಓನರ್ ರಾಹುಲ್ನ ಅವಮಾನಿಸಿ 3 ತಿಂಗಳಾಗಿದೆ. ಇಲ್ಲಿವರೆಗೆ ಘಟನೆ ಬಗ್ಗೆ ಕನ್ನಡಿಗ ತುಟಿಕ್ ಪಿಟಿಕ್ ಅಂದಿರ್ಲಿಲ್ಲ. ಇದೀಗ ಮೊದಲ ಬಾರಿ ಸಾರ್ವಜನಿಕವಾಗಿ ಐಪಿಎಲ್ ಮಾಲೀಕರ ವಿರುದ್ಧ ಕಿಡಿ ಕಾರಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರೋ ರಾಹುಲ್, ಮಾಲೀಕರ ನಡೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಐಪಿಎಲ್ ಮಾಲೀಕರಿಗೆ ಬ್ಯುಸಿನೆಸ್ ಹಿನ್ನೆಲೆ ಇರುತ್ತೆ. ಅವರು ಹುಡುಕಾಟ ನಡೆಸಿ ಜಾಗರೂಕತೆಯಿಂದ ತಂಡವನ್ನ ಕಟ್ಟುತ್ತಾರೆ. ಆದರೆ ಪ್ರತಿ ಪಂದ್ಯದಲ್ಲಿ ಗೆಲುವಿನ ಗ್ಯಾರಂಟಿ ಇರಲ್ಲ. ಟಾಪ್ ಆಟಗಾರರನ್ನ ಅಂಕಿ-ಅಂಶಗಳ ಆಧಾರದ ಮೇಲೆ ಖರೀದಿಸುತ್ತಾರೆ. ಅವರು ಕೂಡ ಕೆಟ್ಟ ಸೀಸನ್ ನೋಡುತ್ತಾರೆ. ಆಟದಲ್ಲಿ ಪ್ರತಿಯೊಬ್ಬ ಆಟಗಾರ ಕೂಡ ಕೆಟ್ಟ ದಿನಗಳನ್ನ ಎದುರಿಸುತ್ತಾನೆ.
ಕೆಎಲ್ ರಾಹುಲ್, ಲಕ್ನೋ ಕ್ಯಾಪ್ಟನ್
ಸಂದರ್ಶನವೊಂದರಲ್ಲಿ ರಾಹುಲ್ ಹೇಳಿರೋ ಮಾತಿವು. ರಾಹುಲ್ ಇಲ್ಲಿ ನೇರವಾಗಿ ಸಂಜೀವ್ ಗೋಯೆಂಕಾ ಹೆಸರು ಪ್ರಸ್ತಾಪಿಸದೇ ಇರಬಹುದು. ಆದ್ರೆ ಇನ್ಡೈರೆಕ್ಟ್ ಆಗಿ ಟಾಂಗ್ ಕೊಟ್ಟಿರೋದು ಲಕ್ನೋ ಮಾಲೀಕರಿಗೆ. ಅಂದು ಒಂದು ಸೋಲಿಗೆ ಅವಮಾನ ಎದುರಿಸಿದ ಕೆ.ಎಲ್ ರಾಹುಲ್, ಇದೀಗ ಆಟದಲ್ಲಿ ಪ್ರತಿ ಪಂದ್ಯ ಗೆಲ್ಲಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಮೂಲಕ ಸಂಜೀವ್ ಗೋಯೆಂಕಾಗೆ ಸಖತ್ ಕೌಂಟರ್ ಕೊಟ್ಟಿದ್ದಾರೆ.
ಲಕ್ನೋ ತಂಡದಿಂದ ಹೊರಬರ್ತಾರಾ ಕೆಎಲ್ ರಾಹುಲ್..?
ಯಾವಾಗ ಲಕ್ನೋ ಫ್ರಾಂಚೈಸಿ ಮಾಲೀಕರು ರಾಹುಲ್ ವಿರುದ್ಧ ಕೋಪಕಾರಿದ್ರೋ ಅಂದೇ ಮನಸ್ತಾಪ ತಲೆದೂರಿತ್ತು. ಕ್ಯಾಪ್ಟನ್ ರಾಹುಲ್ ಆಗಲೇ ಒಂದು ಹೆಜ್ಜೆ ಹೊರಗಿಟ್ಟಿದ್ರು. ಇದೀಗ ರಾಹುಲ್, ಗೋಯೆಂಕಾ ವಿರುದ್ಧ ಗುಡುಗುವ ಮೂಲಕ ಲಕ್ನೋ ತಂಡದಿಂದ ಹೊರಬರುವ ಸುಳಿವು ನೀಡಿದ್ದಾರೆ.
ಇದನ್ನೂ ಓದಿ: ಪರಪ್ಪನ ಜೈಲಿನಿಂದ ಸಸ್ಪೆಂಡ್ ಆದ ಅಧಿಕಾರಿಗಳು ಯಾರು ಯಾರು.. ಗೃಹ ಸಚಿವರು ಹೇಳಿದ ಹೆಸರುಗಳು?
ಈಗಾಗ್ಲೇ ರಾಹುಲ್ ಮೇಲೆ ಅನೇಕ ಫ್ರಾಂಚೈಸಿಗಳು ಕಣ್ಣಿಟ್ಟಿವೆ. ಆ ಪೈಕಿ ಆರ್ಸಿಬಿ ಕೂಡ ಒಂದು. ಈ ಬಾರಿ ತಂಡ ಕನ್ನಡಿಗನನ್ನ ಸೆಳೆಯಲು ಹೆಚ್ಚು ಒಲವು ಹೊಂದಿದ್ದು, ರಾಹುಲ್ ಖರೀದಿಗೂ ಈಗಿನಿಂದಲೇ ತೆರೆಮರೆಯಲ್ಲೇ ಕಸರತ್ತು ಅರಂಭಿಸಿದೆ ಎಂದು ಹೇಳಲಾಗ್ತಿದೆ.
ರಾಹುಲ್ ಪರೋಕ್ಷ ಮಾತುಗಳಲ್ಲಿ ಸಂಜೀವ್ ಗೋಯೆಂಕಾ ವಿರುದ್ಧ ಬೇಸರ ವ್ಯಕ್ತಪಡಿಸುವ ಮೂಲಕ ತನ್ನ ಹಾಗೂ ಲಕ್ನೋ ಮಧ್ಯೆ ಎಲ್ಲವೂ ಸರಿಯಿಲ್ಲ ಅನ್ನೋ ಸಂದೇಶ ರವಾನಿಸಿದ್ದಾರೆ. ಈ ಅಸಮಾಧಾನ ಲಕ್ನೋ ತಂಡದಿಂದ ಹೊರಬರಲು ಕಾರಣವಾಗುತ್ತಾ?. ಆರ್ಸಿಬಿಗೆ ರಾಹುಲ್ ಬರ್ತಾರಾ?. ಅನ್ನೋದು ಸದ್ಯ ಅಭಿಮಾನಿಗಳ ಮಿಲಿಯನ್ ಡಾಲರ್ ಪ್ರಶ್ನೆಯಾಗಿದ್ದು, ಮೆಗಾ ಆಕ್ಷನ್ನಲ್ಲಿ ಇದಕ್ಕೆ ಉತ್ತರ ಸಿಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ