ಇಂಡೋ-ಪಾಕ್ ಏಷ್ಯಾಕಪ್ ಸೂಪರ್-4 ಪಂದ್ಯ
ಸೆಂಚುರಿ ಸಿಡಿಸಿ ರಾಹುಲ್ ಸ್ಟ್ರಾಂಗ್ ಕಮ್ಬ್ಯಾಕ್
ರಾಹುಲ್ ಸೆಂಚುರಿ ಭರಾಟೆ.. ಪಾಕ್ ಗಿರಗಿರ..!
ಸುದೀರ್ಘ ಸಮಯದ ಬಳಿಕ ತಂಡಕ್ಕೆ ಕಮ್ಬ್ಯಾಕ್. ಎಕ್ಸ್ಪೆಕ್ಟೇಶನ್ ಬೆಟ್ಟದಷ್ಟು. ಕಠಿಣ ಸವಾಲಿನ ಚಕ್ರವ್ಯೂಹ. ಸೂಪರ್ ಡೂಪರ್ ಫರ್ಮಾಮೆನ್ಸ್ ಮೂಲಕ ಕೆ.ಎಲ್.ರಾಹುಲ್ ಚಾಲೆಂಜ್ ಗೆದ್ದಿದ್ದಾರೆ. ಪಾಕಿಸ್ತಾನ ಎದುರಿನ ಸೂಪರ್-4 ಪಂದ್ಯದಲ್ಲಿ ಜಬರ್ದಸ್ತ್ ಸೆಂಚುರಿ ಸಿಡಿಸಿದ್ದಾರೆ. ಆ ಮೂಲಕ ಎಲ್ಲಾ ಟೀಕೆ ಹಾಗೂ ಗೊಂದಲಗಳಿಗೆ ಬ್ಯಾಟಿಂಗ್ನಿಂದಲೇ ಆನ್ಸರ್ ಕೊಟ್ಟಿದ್ದಾರೆ.
ರಾಹುಲ್, ರಾಹುಲ್, ರಾಹುಲ್..! ಶ್ರೀಲಂಕಾದ ಕೊಲಂಬೋದಲ್ಲಿ ಮಾರ್ದನಿಸಿದ್ದು ಒಂದೇ ಹೆಸರು. ಅದು ಕನ್ನಡದ ಕಲಿ ಕೆ.ಎಲ್ ರಾಹುಲ್ ಹೆಸರು. ಆಡುವ ಹನ್ನೊಂದರ ಬಳಗದಲ್ಲಿ ಕೊನೆ ಘಳಿಗೆಯಲ್ಲಿ ಚಾನ್ಸ್ ಸಿಗ್ತು. ಶ್ರೇಯಸ್ ಅಯ್ಯರ್ ಬದಲಿ ಕಣಕ್ಕಿಳಿದು ಪಾಕ್ಗೆ ಮುಟ್ಟಿನೋಡಿಕೊಳ್ಳುವಂಥ ರಗಢ್ ಪರ್ಫಾಮೆನ್ಸ್ ನೀಡಿದ್ದಾರೆ.
ಕಮ್ಬ್ಯಾಕ್ ಪಂದ್ಯದಲ್ಲಿ ಕನ್ನಡಿಗ ಬ್ಯಾಕ್ ವಿಥ್ ಬ್ಯಾಂಗ್..!
7 ತಿಂಗಳ ತಪಸ್ಸಿನ ಫಲ..! ಹ್ಯಾಮ್ಸ್ಟ್ರಿಂಗ್ ಇಂಜುರಿಯಿಂದ ಚೇತರಿಕೆ ಕಂಡು ತಂಡಕ್ಕೆ ಮರಳಿದ ರಾಹುಲ್ ಮೇಲೆ, ಅಪಾರ ನಿರೀಕ್ಷೆ ಇತ್ತು. ಕೊನೆಗೂ ರಾಹುಲ್ ಅದನ್ನು ಹುಸಿಗೊಳಿಸಲಿಲ್ಲ. ಪಾಕ್ ಎದುರಿನ ಸೂಪರ್-4 ಪಂದ್ಯದಲ್ಲಿ ಫೈರಿ ಇನ್ನಿಂಗ್ಸ್ ಕಟ್ಟಿದ್ದರು. ಬದ್ಧವೈರಿ ಪಾಕ್ ಬೌಲಿಂಗ್ ಕೋಟೆಯನ್ನು ಮಟಾಶ್ ಮಾಡಿದ ರಾಹುಲ್, ಏಕದಿನದಲ್ಲಿ 6ನೇ ಶತಕ ಸೆಂಚುರಿ ಸಿಡಿಸಿ ಶೈನ್ ಆದರು.
ಪಾಕ್ ವಿರುದ್ಧ ರಾಹುಲ್ ಸೆಂಚುರಿಯೋತ್ಸವ
ಪಾಕಿಸ್ತಾನ ವಿರುದ್ಧ ಅಬ್ಬರಿಸಿ ಬೊಬ್ಬಿರಿದ ರಾಹುಲ್ 94 ಎಸೆತಗಳಲ್ಲಿ ಸಿಡಿಲಬ್ಬರದ 111 ರನ್ ಬಾರಿಸಿದರು. ಅವರ ಇನ್ನಿಂಗ್ಸ್ನಲ್ಲಿ 3 ಮನಮೋಹಕ ಸಿಕ್ಸರ್ ಹಾಗೂ 9 ಬೌಂಡ್ರಿಗಳು ಸೇರಿಕೊಂಡಿದ್ದವು. ರಾಹುಲ್ ಏಷ್ಯಾಕಪ್ ತಂಡಕ್ಕೆ ಆಯ್ಕೆಯಾದರು. ಅವರ ಫಿಟ್ನೆಸ್ ಬಗ್ಗೆ ಅಪಸ್ವರ ಕೇಳಿ ಬಂದಿತ್ತು. ಟೂರ್ನಿಯ ಮೊದಲೆರಡು ಪಂದ್ಯಗಳನ್ನು ಆಡಲಿಲ್ಲ. ಆ ಬಳಿಕವಂತೂ ರಾಹುಲ್ ಫಿಟ್ನೆಸ್ ಬಗೆಗಿದ್ದ ಗೊಂದಲ ಇನ್ನಷ್ಟು ಹೆಚ್ಚಾಯ್ತು. ತನ್ನ ಮೇಲೆ ನಂಬಿಕೆ ಇಟ್ಟಿದ್ದ ಸ್ಟೈಲಿಶ್ ಬ್ಯಾಟ್ಸ್ಮನ್ ದಮ್ದಾರ್ ಸೆಂಚುರಿ ಸಿಡಿಸಿ ಇಂಜುರಿ ಗೊಂದಲಕ್ಕೆ ಕ್ಲೀಯರ್ ಕ್ಲಾರಿಟಿ ಕೊಟ್ಟಿದ್ದಾರೆ.
ಮಿಡಲ್ ಆರ್ಡರ್ನಲ್ಲಿ ಬೊಂಬಾಟ್ ಆಟ..!
ಕೆ.ಎಲ್.ರಾಹುಲ್ ಟೀಮ್ ಇಂಡಿಯಾದ ನಂಬಿಗಸ್ಥ ಬ್ಯಾಟ್ಸ್ಮನ್ ಅನ್ನೋ ಮಾತಿತ್ತು. ಎಸ್ಪೆಷಲಿ ಮಿಡಲ್ ಆರ್ಡರ್ ಸ್ಪೆಷಲಿಸ್ಟ್. ದಿ ಬೆಸ್ಟ್ ಶೋ ಮೂಲಕ ಅಗೈನ್ ಪ್ರೂವ್ ಮಾಡಿದ್ದಾರೆ. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಸೆಂಚುರಿ ಸಿಡಿಸಿದ್ದಲ್ಲದೇ, ವಿರಾಟ್ ಕೊಹ್ಲಿ ಜೊತೆ ಸೇರಿ ಡಬಲ್ ಸೆಂಚುರಿ ಜೊತೆಯಾಟವಾಡಿ ಪಾಕ್ಗೆ ಬೃಹತ್ ಟಾರ್ಗೆಟ್ ನೀಡಲು ಕಾರಣರಾದರು.
ವಿಶ್ವಕಪ್ ಸ್ಥಾನ ಸೇಫ್.. ಸೆಲೆಕ್ಟರ್ಸ್ ದಿಲ್ ಗೆದ್ದ ರಾಹುಲ್..!
ರಾಹುಲ್ಗೆ ಏಷ್ಯಾಕಪ್ ಟೂರ್ನಿ ಬರೀ ಒಂದು ಟೂರ್ನಿ ಆಗಿರಲಿಲ್ಲ. ಏಕದಿನ ವಿಶ್ವಕಪ್ಗೆ ರಹದಾರಿ ಆಗಿತ್ತು. ಫಿಟ್ನೆಸ್ ಜೊತೆ ಫಾರ್ಮ್ ಕಂಡುಕೊಳ್ಳಕೊಳ್ಳಬೇಕಿತ್ತು. ಕೊನೆಗೂ ಚಾಲೆಂಜಿಂಗ್ ವಾರ್ನಲ್ಲಿ ರಾಹುಲ್ ಗೆದ್ದು ಬೀಗಿದರು. ಸುದೀರ್ಘ ಸಮಯದ ಬಳಿಕ ತಂಡಕ್ಕೆ ಮರಳಿದ್ರೂ ಅಸಲಿ ಖದರ್ ತೋರೋದನ್ನು ಮರೆಯಲಿಲ್ಲ. ಡು ಆರ್ ಡೈ ಚಾನ್ಸ್ನಲ್ಲಿ ವೀರಾವೇಶ ತೋರಿದರು. ಪಾಕ್ನಂತ ಬಲಾಢ್ಯ ತಂಡದೆದರು, ಬಿಗ್ ಗೇಮ್ನಲ್ಲಿ ಸೆಂಚುರಿ ಶೋ ನಡೆಸಿ ಒನ್ಡೇ ವಿಶ್ವಕಪ್ ಸ್ಥಾನ ಭದ್ರಪಡಿಸಿಕೊಂಡರು. ಜತೆಗೆ ಸೆಲೆಕ್ಟರ್ಸ್ ತನ್ನ ಮೇಲಿಟ್ಟ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್