newsfirstkannada.com

ಕಂಪ್ಲೀಟ್​ ಫಿಟ್​ ಆಗಲು KL ರಾಹುಲ್​ ಸರ್ಕಸ್​, ಜಿಮ್​ನಲ್ಲಿ ಫುಲ್​ ಬ್ಯುಸಿ.. ವಿಶ್ವಕಪ್​ ಆಡ್ತಾರಾ ಕನ್ನಡಿಗ..?

Share :

24-06-2023

  ಫಿಟ್​​ನೆಸ್​ನತ್ತ​ ಕನ್ನಡಿಗನ ಗಮನ, ಕಮ್​​ಬ್ಯಾಕ್​ ಮಾಡಲು ರಾಹುಲ್​ ರೆಡಿ

  ಕಳೆದ 3 ವರ್ಷದಲ್ಲಿ 6 ಪ್ರಮುಖ ಇಂಜುರಿಗೆ ಒಳಗಾದ ಕೆ.ಎಲ್​ ರಾಹುಲ್​

  ಇಷ್ಟು ದಿನ ಇಂಗ್ಲೆಂಡ್​​ನಲ್ಲಿ ಶಸ್ತ್ರಚಿಕಿತ್ಸೆ, ಸದ್ಯದಲ್ಲೇ ಟೀಮ್​ಗೆ ಕಮ್​ಬ್ಯಾಕ್

ಒಂದು ಕಾಲದಲ್ಲಿ ಟೀಮ್​ ಇಂಡಿಯಾದಲ್ಲಿ ಕನ್ನಡಿಗರದ್ದೇ ದರ್ಬಾರ್​ ನಡೆಯುತಾ ಇತ್ತು. ಆದ್ರೆ, ಈಗ ನೋಡಿದ್ರೆ ಒಬ್ಬರು ಕೂಡ ತಂಡದಲ್ಲಿಲ್ಲ ಅನ್ನೋ ಕೊರಗು ಕನ್ನಡಿಗರನ್ನ ಕಾಡ್ತಿತ್ತು. ಆ ಕೊರಗು ಶೀಘ್ರದಲ್ಲೇ ನೀಗಲಿದೆ. ಗಾಯಗೊಂಡು ಹೊರಬಿದ್ದಿದ್ದ ಕೆ.ಎಲ್ ರಾಹುಲ್​ ಕಮ್​ಬ್ಯಾಕ್​​ಗೆ ಸಿದ್ಧರಾಗಿ ನಿಂತಿದ್ದಾರೆ. every setback is a setup for a comeback ಅಂತಿರೋ ಗಾಯಗೊಂಡಿರುವ ರಾಹುಲ್, ಘರ್ಜಿಸಲು ಸಜ್ಜಾಗಿದ್ದಾರೆ.

ಜೂನ್​ 23, 2013 ಅಂದ್ರೆ ನಿನ್ನೆಗೆ ಭರ್ತಿ 10 ವರ್ಷ ಕಳೀತು. ಟೀಮ್​ ಇಂಡಿಯಾ ಕೊನೆಯ ಬಾರಿ ಐಸಿಸಿ ಟ್ರೋಫಿ ಜಯಿಸಿ. ಆ ಬಳಿಕ ಆಡಿದ ಎಲ್ಲ ಐಸಿಸಿ ಟೂರ್ನಿಗಳನ್ನು ಮುಖಭಂಗ ಅನುಭವಿಸಿರುವ ಟೀಮ್​ ಇಂಡಿಯಾಗೆ ಈ ವರ್ಷದಲ್ಲಿ ಟ್ರೋಫಿ ಮುತ್ತಿಕ್ಕಲು ಮತ್ತೊಂದು ಅವಕಾಶವಿದೆ. ಅದೇ ಏಕದಿನ ವಿಶ್ವಕಪ್​ ಟೂರ್ನಿ. ಅಕ್ಟೋಬರ್​- ನವೆಂಬರ್​ನಲ್ಲಿ ನಮ್ಮದೇ ನೆಲದಲ್ಲಿ ಗೆದ್ದು, ವಿಶ್ವ ಚಾಂಪಿಯನ್​ ಆಗೋ ಅವಕಾಶ ಟೀಮ್​ ಇಂಡಿಯಾದ ಮುಂದಿದೆ.

ಟೀಮ್​ ಇಂಡಿಯಾ ಕ್ಯಾಂಪ್​ಗೆ ಪಾಸಿಟಿವ್​ ನ್ಯೂಸ್​​​.!

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಟೀಮ್​ ಇಂಡಿಯಾ ಸೋತಿದ್ದೇ ಸೋತಿದ್ದು, ಭಾರತೀಯ ಕ್ರಿಕೆಟ್​ನಲ್ಲೆ ನೆಗೆಟಿವ್​ ಸುದ್ದಿಯದ್ದೆ ಸದ್ದು. ಟೀಕಾಕಾರರು ಆಟಗಾರರು, ಕೋಚ್​-ಕ್ಯಾಪ್ಟನ್​ ಎಲ್ಲರ ಮೇಲೆ ಮುಗಿಬಿದ್ದಿದ್ದಾರೆ. ಇದೆಲ್ಲದರ ನಡುವೆ ಟೀಮ್​ ಇಂಡಿಯಾ ಕ್ಯಾಂಪ್​ಗೆ ಪಾಸಿಟಿವ್​ ಎನರ್ಜಿ ಬಂದಿದೆ. ತಂಡದಿಂದ ಹೊರ ಬಿದ್ದಿರೋ ಸ್ಟಾರ್​​ ಕಮ್​ಬ್ಯಾಕ್​ಗೆ ರೆಡಿಯಾಗಿದ್ದಾನೆ.

ಕಮ್​​ಬ್ಯಾಕ್​ ಮಾಡಲು ಕನ್ನಡಿಗ ರಾಹುಲ್​ ರೆಡಿ.!

ಐಪಿಎಲ್​ ವೇಳೆ ಇಂಜುರಿಗೆ ತುತ್ತಾದ ಕನ್ನಡಿಗ ಕೆ.ಎಲ್​ ರಾಹುಲ್​, ಇಂಗ್ಲೆಂಡ್​​ಗೆ ತೆರಳಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ರು. ಸಕ್ಸಸ್​ಫುಲ್​ ಸರ್ಜರಿ ಬಳಿಕ ವಿಶ್ರಾಂತಿಗೆ ಜಾರಿದ್ದ ರಾಹುಲ್​ ಇದೀಗ, ರಿಹ್ಯಾಬ್​ಗೆ ಒಳಗಾಗಿದ್ದಾರೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿ ರಿಹ್ಯಾಬ್​ ಆರಂಭಿಸಿರೋ ರಾಹುಲ್​, ಟೀಮ್​ಗೆ ಕಮ್​ಬ್ಯಾಕ್​ ಮಾಡೋ ತವಕದಲ್ಲಿದ್ದಾರೆ.

ಫಿಟ್​​ನೆಸ್​ನತ್ತ​ ಗಮನ ಹರಿಸಿದ ಕನ್ನಡಿಗ.!

ಕಳೆದ ಕೆಲ ವರ್ಷಗಳಿಂದ ಕೆ.ಎಲ್​ ರಾಹುಲ್​ ತನ್ನ ಬ್ಯಾಟಿಂಗ್​ಗಿಂತ ಇಂಜುರಿಯಿಂದಲೇ ಹೆಚ್ಚು ಸದ್ದು ಮಾಡ್ತಿದ್ದಾರೆ. ಸಾಲು ಸಾಲು ಇಂಜುರಿಗೆ ರಾಹುಲ್​ ತುತ್ತಾಗಿ ಹಲ ಪ್ರಮುಖ ಸರಣಿ ಮಿಸ್​​ ಮಾಡಿಕೊಂಡಿದ್ದಾರೆ. ನೋಡೋಕೆ ಸಖತ್​ ಫಿಟ್​ ಆಗಿ ಕಂಡರೂ ಇಂಜುರಿಗಳು ರಾಹುಲ್​ಗೆ ಪದೇ ಪದೇ ಕಾಡ್ತಿವೆ. ಕಳೆದ 3 ವರ್ಷದಲ್ಲಿ 6 ಪ್ರಮುಖ ಇಂಜುರಿಗೆ ತುತ್ತಾಗಿದ್ದಾರೆ. ಹೀಗಾಗಿಯೇ ಸದ್ಯ ರಾಹುಲ್​ ಬಾಡಿ ಫಿಟ್​ನೆಸ್​ ಮೇಲೆ ಹೆಚ್ಚಿನ ಗಮನ ವಹಿಸ್ತಿದ್ದಾರೆ. ಎನ್​ಸಿಎನ ಫಿಸಿಯೋಗಳ ಮಾರ್ಗದರ್ಶನದಲ್ಲಿ ಫಿಟ್​ನೆಸ್​​ ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸ್ತಿದ್ದಾರೆ.

ಏಷ್ಯಾಕಪ್​ ಟಾರ್ಗೆಟ್​, ಮಿಸ್​ ಆದ್ರೆ ವಿಶ್ವಕಪ್​..!

ಎನ್​ಸಿಎನಲ್ಲಿ ಕಂಪ್ಲೀಟ್​ ಫಿಟ್​ ಆಗಲು ರಾಹುಲ್​ ಸರ್ಕಸ್​ ನಡೆಸ್ತಿದ್ದಾರೆ. ವರ್ಕೌಟ್​​, ಜಿಮ್ ಸೆಷನ್​ನಲ್ಲೇ ಫುಲ್​ ಬ್ಯುಸಿಯಾಗಿದ್ದಾರೆ. ಮುಂಬರುವ ಏಷ್ಯಾಕಪ್​ ವೇಳೆಗೆ ಫಿಟ್​ ಆಗಿ ತಂಡದಲ್ಲಿರಬೇಕು ಅನ್ನೋದು ರಾಹುಲ್​ ಲೆಕ್ಕಾಚಾರವಾಗಿದೆ. ಎನ್​ಸಿಎ ಮೂಲಗಳು ಕೂಡ ರಾಹುಲ್​ ಶೀಘ್ರದಲ್ಲೇ ಫಿಟ್​ ಆಗ್ತಾರೆ ಎಂಬ ಗುಡ್​ನ್ಯೂಸ್​ ಕೊಟ್ಟಿವೆ. ಒಂದು ವೇಳೆ ಮಿಸ್​​ ಆದ್ರೆ, ವಿಶ್ವಕಪ್​ ವೇಳೆಗೆ ತಂಡ ಸೇರುವುದಂತೂ ಕನ್​ಫರ್ಮ್​.

ಏಕದಿನ ವಿಶ್ವಕಪ್​ಗೂ ಮುನ್ನ ಹೆಚ್ಚಿದ ತಂಡದ ಬಲ.!

ರಾಹುಲ್​ ಕಮ್​ಬ್ಯಾಕ್​ ಮಾಡಿದ್ರೆ ಟೀಮ್​ ಇಂಡಿಯಾ ಬಲ ಹೆಚ್ಚೋದ್ರಲ್ಲಿ ಡೌಟೇ ಬೇಡ. ಪಂದ್ಯದ ಸಿಚ್ಯುವೇಶನ್​ಗೆ ತಕ್ಕಂತೆ, ಒತ್ತಡವನ್ನ ನಿಭಾಯಿಸಿ ಕ್ಲಾಸ್​ ಬ್ಯಾಟಿಂಗ್​ ನಡೆಸೋ ಸಾಮರ್ಥ್ಯ ರಾಹುಲ್​​ಗಿದೆ. ಓಪನಿಂಗ್​ ಸ್ಲಾಟ್​​ ಬಿಟ್ಟರೂ, ಮಿಡಲ್​ ಆರ್ಡರ್​ನಲ್ಲಿ ಸಾಲಿಡ್​ ಇನ್ನಿಂಗ್ಸ್​ ಕಟ್ಟೋ ಸಾಮರ್ಥ್ಯ ರಾಹುಲ್​ಗಿದೆ. ಸದ್ಯ ಟೀಮ್​ನಲ್ಲಿ ಇರೋ ಆಟಗಾರರ ಪೈಕಿ, 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ನಡೆಸೋಕೆ ರಾಹುಲ್​ ಬೆಸ್ಟ್​ ಬ್ಯಾಟ್ಸ್​ಮನ್​​.

5ನೇ ಕ್ರಮಾಂಕದಲ್ಲಿ ರಾಹುಲ್​

ಏಕದಿನ ಮಾದರಿಯಲ್ಲಿ 5ನೇ ಕ್ರಮಾಂಕದಲ್ಲಿ 15 ಇನ್ನಿಂಗ್ಸ್​ ಆಡಿರುವ ರಾಹುಲ್​, 651 ರನ್​ಗಳಿಸಿದ್ದಾರೆ. 54.25ರ ಸರಾಸರಿಯಲ್ಲಿ ಬ್ಯಾಟ್​​ ಬೀಸಿರುವ ರಾಹುಲ್​ 6 ಅರ್ಧಶತಕ, 1 ಶತಕ ಸಿಡಿಸಿದ್ದಾರೆ.

ಬ್ಯಾಟಿಂಗ್​ ಮಾತ್ರವಲ್ಲ, ಕೀಪಿಂಗ್​ ಜವಾಬ್ದಾರಿಯನ್ನೂ ಸಮರ್ಥವಾಗಿ ನಿಭಾಯಿಸೋ ಸಾಮರ್ಥ್ಯ ರಾಹುಲ್​ಗಿದೆ. ಹೀಗಾಗಿ ರಾಹುಲ್​ ಕಮ್​ಬ್ಯಾಕ್​ನಿಂದ​ ಟೀಮ್​ ಇಂಡಿಯಾ ಬಲ ಹೆಚ್ಚೊದ್ರಲ್ಲಿ ಅನುಮಾನವೇ ಇಲ್ಲ. ಹಾಗಿದ್ರೂ, ರಾಹುಲ್​, ಫಾರ್ಮ್​ ಬಗ್ಗೆ ಎಲ್ಲರಲ್ಲೂ ಅನುಮಾನವಿದೆ. ಇಂಜುರಿ ಫ್ರಿ ಆಗಲು ಸಾಕಷ್ಟು ವರ್ಕೌಟ್​ ಮಾಡ್ತಿರೋ ರಾಹುಲ್​, ಬ್ಯಾಟಿಂಗ್​ ಟೆಕ್ನಿಕ್​ನಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡ್ರೆ, ಇಂಡಿಯಾದಲ್ಲಿ ಕನ್ನಡಿಗನ ದರ್ಬಾರ್​ ನಡೆಯೋದ್ರಲ್ಲಿ ಅನುಮಾನವೇ ಬೇಡ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕಂಪ್ಲೀಟ್​ ಫಿಟ್​ ಆಗಲು KL ರಾಹುಲ್​ ಸರ್ಕಸ್​, ಜಿಮ್​ನಲ್ಲಿ ಫುಲ್​ ಬ್ಯುಸಿ.. ವಿಶ್ವಕಪ್​ ಆಡ್ತಾರಾ ಕನ್ನಡಿಗ..?

https://newsfirstlive.com/wp-content/uploads/2023/06/KL_RAHIL_FULL_FIT_2.jpg

Load More