newsfirstkannada.com

×

ಆಪದ್ಬಾಂಧವನೇ ಆಗ್ತಾನಾ ತಂಡಕ್ಕೆ ವಿಲನ್? ಬೆಂಗಳೂರಲ್ಲಿ K.L ರಾಹುಲ್​ ಮುಂದಿದೆ ಬಿಗ್ ಚಾಲೆಂಜ್​; ಏನದು?

Share :

Published November 12, 2023 at 12:08pm

Update November 12, 2023 at 12:12pm

    ಬೆಂಗಳೂರಿನ ಹೋಮ್ ಗ್ರೌಂಡ್​ನಲ್ಲಿ K.L ರಾಹುಲ್‌ ಪ್ರದರ್ಶನ ಫೇಲ್

    ವಿಶ್ವಕಪ್ ಆರಂಭದಲ್ಲಿ ಕನ್ನಡಿಗನ ಅಬ್ಬರ.. ಕೊನೆಯಲ್ಲಿ ಸೈಲೆಂಟ್​!

    ಟೀಮ್ ಇಂಡಿಯಾಗೆ ಕೆ.ಎಲ್.ರಾಹುಲ್ ಅಬ್ಬರದ್ದೇ ಟೆನ್ಶನ್​​

ಕೆ.ಎಲ್ ರಾಹುಲ್​ ಪ್ರಸಕ್ತ ಏಕದಿನ ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾದ ಆಪದ್ಬಾಂಧವ. ಆದ್ರೀಗ ಇದೇ ಆಪದ್ಬಾಂಧವ ಟೀಮ್ ಇಂಡಿಯಾಗೆ ವಿಲನ್ ಆಗ್ಬಿಡ್ತಾನಾ ಎಂಬ ಅನುಮಾನ ಹುಟ್ಟಿಹಾಕಿದೆ. ಅದ್ಯಾಕೆ.. ಅಂತೀರಾ.. ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ..

ಏಕದಿನ ವಿಶ್ವಕಪ್​​ ಉಂಪಾತ್ಯಕ್ಕೆ ಬಂದು ತಲುಪಿದೆ. ನಾಕೌಟ್ ಸ್ಟೇಜ್​​ಗೆ ಎಂಟ್ರಿ ಕೊಟ್ಟಿರುವ ಪ್ರತಿ ತಂಡಗಳು ವಿಶ್ವ ಕಿರೀಟಕ್ಕೆ ಮುತ್ತಿಡುವ ಲೆಕ್ಕಚಾರದಲ್ಲಿದೆ. ವಿಶ್ವ ಕಿರೀಟ ಗೆಲ್ಲೋದೊಂದೇ ನಾಲ್ಕು ತಂಡಗಳ ಟಾರ್ಗೆಟ್. ಇದಕ್ಕಾಗಿ ಭಾರೀ ತೆರೆ ಹಿಂದೆ ಗೇಮ್​​ ಪ್ಲಾನ್​ಗಳು, ಸ್ಟ್ರಾಟರ್ಜಿಗಳು ರೂಪುಗೊಳುತ್ತಿವೆ. ಆದ್ರೆ, ಈ ನಡುವೆ ಟೀಮ್ ಇಂಡಿಯಾಗೆ ಕೆ.ಎಲ್.ರಾಹುಲ್ ಟೆನ್ಶನ್​​ ಶುರುವಾಗಿದೆ. ಇದಕ್ಕೆಲ್ಲಾ ಕಾರಣ ಕನ್ನಡಿಗ ಕೆ.ಎಲ್.ರಾಹುಲ್​​​​​​​​​​​​​​​​​​​​​​​​​​​​​​​​​​​.. ಪರ್ಫಾಮೆನ್ಸ್​.

ಆರಂಭದಲ್ಲಿ ಅಬ್ಬರ.. ಕೊನೆಯಲ್ಲಿ ಸೈಲೆಂಟ್​..!
ಆಪದ್ಬಾಂಧವನೇ ಆಗ್ತಾನಾ ತಂಡಕ್ಕೆ ವಿಲನ್..?

ಸದ್ಯ ಕನ್ನಡಿಗ ಕೆ.ಎಲ್.ರಾಹುಲ್ ಪರಿಸ್ಥಿತಿ ಇದು. ಯಾಕಂದ್ರೆ, ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಸಾಲಿಡ್ ಪಾರ್ಫಮೆನ್ಸ್​ ನೀಡಿದ್ದ ರಾಹುಲ್, ಟೀಮ್ ಇಂಡಿಯಾ ಪಾಲಿನ ಆಪದ್ಬಾಂಧವನೇ ಆಗಿದ್ರು. ಅದರಲ್ಲೂ ಆಸ್ಟ್ರೇಲಿಯಾ ಎದುರಿನ ಫಸ್ಟ್​ ಮ್ಯಾಚ್​ನಲ್ಲಿ ರಾಹುಲ್ ತೋರಿದ ಬ್ಯಾಟಿಂಗ್ ನಿಜಕ್ಕೂ ಅಭಿಮಾನಿಗಳ ಹೃದಯ ಗೆದ್ದಿತ್ತು. ಟೀಮ್ ಇಂಡಿಯಾದ ಆಧಾರವಾಗಿ ನಿಲ್ಲುತ್ತಿದ್ದ ಕನ್ನಡಿಗ ಆಟಕ್ಕೆ ಮನಸೋತಿದ್ದ ಕ್ರಿಕೆಟ್ ಅಭಿಮಾನಿಗಳು, ದಿನಕಳೆದಂತೆ ರಾಹುಲ್ ಮತ್ತಷ್ಟು ವೈಲೆಂಟ್ ಆಗ್ತಾರೆ ಅಂತಾನೇ ಊಹಿಸಿದ್ರು.

ಆರಂಭಿಕ ಪಂದ್ಯಗಳಲ್ಲಿ ಗೆಲುವಿನ ದಡ ಸೇರಿಸ್ತಿದ್ದ ಕೆ.ಎಲ್.ರಾಹುಲ್, ಮೊದಲ 3 ಇನ್ನಿಂಗ್ಸ್​ಗಳಿಂದ 150 ರನ್ ಗಳಿಸಿದ್ರು. ಆದ್ರೀಗ ಇದೆಲ್ಲವೂ ಉಲ್ಟಾ ಆಗಿದೆ. ಕಳೆದ 4 ಪಂದ್ಯಗಳಿಂದ ವೈಫಲ್ಯದ ಸುಳಿಗೆ ಸಿಲುಕಿರುವ ರಾಹುಲ್, ಬಿಗ್ ಮ್ಯಾಚ್​ಗಳಲ್ಲಿ ವೈಫಲ್ಯಕ್ಕೆ ಸಿಲುಕಿಸ್ತಾರಾ ಎಂಬ ಅನುಮಾನ ಹುಟ್ಟಿಹಾಕಿದೆ. ಇದಕ್ಕೆ ಕಾರಣ ರಾಹುಲ್ ಬ್ಯಾಟಿಂಗ್.

ಕಳೆದ 4 ಪಂದ್ಯಗಳಲ್ಲಿ ರಾಹುಲ್

ಎಸೆತ 129
ರನ್ 95
ಸ್ಟ್ರೇಕ್​ರೇಟ್​ 73.64

ಬೆಂಗಳೂರಿನ ಹೋಮ್ ಗ್ರೌಂಡ್​ನಲ್ಲಿ ರಾಹುಲ್ ಫೇಲ್..!
ಬೆಂಗಳೂರಲ್ಲಿ ತೋರಿಸಬೇಕು ಕನ್ನಡಿಗ ಖದರ್​​..!

ಚಿನ್ನಸ್ವಾಮಿ ಕೆ.ಎಲ್.ರಾಹುಲ್​ರ ಹೋಮ್ ಗ್ರೌಂಡ್ ಆಗಿದೆ. ಆದ್ರೆ, ಇದೇ ಗ್ರೌಂಡ್​ನಲ್ಲಿ ರಾಹುಲ್ ವೈಫಲ್ಯ ಅನುಭವಿಸಿದ್ದಾರೆ. ಆಡಿರೋ ಒಂದೇ ಒಂದು ಏಕದಿನ ಪಂದ್ಯದಲ್ಲಿ ಜಸ್ಟ್​ 19 ರನ್​ಗೆ ವಿಕೆಟ್ ಒಪ್ಪಿಸಿರುವ ರಾಹುಲ್, ಆಡಿರೋ 2 ಟಿ20 ಪಂದ್ಯಗಳಿಂದ 69 ರನ್ ಗಳಿಸಿದ್ದಾರೆ. ಹೀಗಾಗಿ ನಾಕೌಟ್​ ಮ್ಯಾಚ್​ಗೂ ಮುನ್ನ ನಡೆಯಲಿರುವ ಈ ಕೊನೆ ಲೀಗ್​​ ಮ್ಯಾಚ್​ನಲ್ಲಿ ರಾಹುಲ್, ಧಮ್ ತೋರಿಸಬೇಕಿದೆ.

ನಾಕೌಟ್​​ನಲ್ಲಿ ಕೆ.ಎಲ್.ರಾಹುಲ್​ ಬಿಗ್ ಚಾಲೆಂಜ್​..!

ಸದ್ಯ ಬ್ಯಾಕ್ ಟು ಬ್ಯಾಕ್ ವೈಫಲ್ಯ ಅನುಭವಿಸಿರುವ ರಾಹುಲ್​​​, ಮುಂದೆ ಬಿಗ್ ಚಾಲೆಂಜ್ ಇದೆ. ಹಾರ್ದಿಕ್ ಪಾಂಡ್ಯ ಗೈರಿನಿಂದಾಗಿ ಟೀಮ್ ಇಂಡಿಯಾವನ್ನ ಗೆಲುವಿನ ದಡ ಸೇರಿಸಬೇಕಾದ ಜವಾಬ್ದಾರಿ ರಾಹುಲ್​ ಹೆಗಲಿಗಿದೆ. ಅಷ್ಟೇ ಅಲ್ಲ ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಗೆಲ್ಲಬೇಕಾದ್ರೆ, ನಾಕೌಟ್​ನಲ್ಲಿ ಕೆ.ಎಲ್.ರಾಹುಲ್, ರೋಲ್ ಮೋಸ್ಟ್​ ಇಂಪಾರ್ಟೆಂಟ್. ಹೀಗಾಗಿ ಬಿಗ್ ಮ್ಯಾಚ್​ಗೂ ಆತ್ಮವಿಶ್ವಾಸ ವೃದ್ದಿಸಿಕೊಳ್ಳಬೇಕಾದ ಅನಿವಾರ್ಯತೆ ರಾಹುಲ್​​​​ ಮುಂದಿರೋದು ಸುಳ್ಳಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಆಪದ್ಬಾಂಧವನೇ ಆಗ್ತಾನಾ ತಂಡಕ್ಕೆ ವಿಲನ್? ಬೆಂಗಳೂರಲ್ಲಿ K.L ರಾಹುಲ್​ ಮುಂದಿದೆ ಬಿಗ್ ಚಾಲೆಂಜ್​; ಏನದು?

https://newsfirstlive.com/wp-content/uploads/2023/06/KL-rahul.jpg

Load More