newsfirstkannada.com

ವಿಂಡೀಸ್​​​​ ವಿರುದ್ಧ ಸೋತ ಟೀಂ ಇಂಡಿಯಾಗೆ ಗುಡ್​ನ್ಯೂಸ್​​; ಸ್ಟಾರ್​​ ಪ್ಲೇಯರ್​ ಕಮ್​ಬ್ಯಾಕ್​ ಸಾಧ್ಯತೆ!

Share :

31-07-2023

    ವಿಂಡೀಸ್​​ ವಿರುದ್ಧ ಸೋತಿದ್ದ ಟೀಂ ಇಂಡಿಯಾ

    ಟೀಂ ಇಂಡಿಯಾಗೆ ಬಂತು ಕೊನೆಗೂ ಆನೆ ಬಲ

    ಐರ್ಲೆಂಡ್​​ ಸೀರೀಸ್​ಗೆ ಸ್ಟಾರ್​ ಪ್ಲೇಯರ್​​ ಕಂ​ಬ್ಯಾಕ್​​

ಇತ್ತೀಚೆಗೆ ನಡೆದ 2ನೇ ಏಕದಿನ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​​ ವಿರುದ್ಧ ಸೋತಿದ್ದ ಟೀಂ ಇಂಡಿಯಾಗೆ ಗುಡ್​​ನ್ಯೂಸ್​ ಸಿಕ್ಕಿದೆ. ಇಷ್ಟು ದಿನ ತೀವ್ರವಾಗಿ ಗಾಯಗೊಂಡು ಟೀಂ ಇಂಡಿಯಾದಿಂದ ಹೊರಗುಳಿದಿದ್ದ ಸ್ಟಾರ್​ ಆಟಗಾರ ಕೆ.ಎಲ್​​ ರಾಹುಲ್​​ ಸದ್ಯದಲ್ಲೇ ಕಮ್​ಬ್ಯಾಕ್​​ ಮಾಡಲಿದ್ದಾರೆ.

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ರಿಹ್ಯಾಬ್‌ನಲ್ಲಿ ಭಾಗಿಯಾಗಿರೋ ಕೆಎಲ್ ರಾಹುಲ್ ಸಂಪೂರ್ಣ ಚೇತರಿಕೆ ಕಂಡಿದ್ದಾರೆ. ಸದ್ಯ ಎನ್‌ಸಿಎನಿಂದ ಬ್ರೇಕ್​​ ತೆಗೆದುಕೊಂಡ ರಾಹುಲ್​​ ಮುಂದಿನ ಸೀರೀಸ್​ಗೆ ಭಾರೀ ತಯಾರಿ ನಡೆಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಕಳೆದ ಇಂಡಿಯನ್​​ ಪ್ರೀಮಿಯರ್​​ ಲೀಗ್​​ ಟೂರ್ನಿಯಲ್ಲಿ ಕೆ.ಎಲ್​​ ರಾಹುಲ್​ ತೀವ್ರ ಗಾಯಕ್ಕೆ ತುತ್ತಾಗಿದ್ದರು. ಇದಾದ ಬಳಿಕ ಕೆ.ಎಲ್​​ ರಾಹುಲ್​​ಗೆ ಸರ್ಜರಿ ಮಾಡಿ, ಫಿಟ್ನೆಸ್​​ಗಾಗಿ ಎನ್​ಸಿಎಗೆ ಕಳಿಸಲಾಗಿತ್ತು. ಈಗ ಕಂಪ್ಲೀಟ್​ ಫಿಟ್​ ಆಗಿದ್ದು, ಐರ್ಲೆಂಡ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೆ ಕಮ್​​ಬ್ಯಾಕ್​ ಮಾಡಲಿದ್ದಾರೆ ಎನ್ನಲಾಗಿದೆ.

ಐರ್ಲೆಂಡ್ ಸರಣಿಯಲ್ಲಿ ರಾಹುಲ್ ಆಡೋದು ಬಹುತೇಕ ಫಿಕ್ಸ್​​​

ಕೆಎಲ್ ರಾಹುಲ್ ಮುಂದಿನ ಐರ್ಲೆಂಡ್ ವಿರುದ್ಧದ ಸರಣಿಗೆ ಲಭ್ಯವಾಗೋದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಸೆಲೆಕ್ಷನ್​ ಕಮಿಟಿ ಮೆಂಬರ್​​ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಸರಣಿಗೆ ಇನ್ನು 18 ದಿನಗಳು ಬಾಕಿಯಿದ್ದು, ಸೆಲೆಕ್ಷನ್​ ಕಮಿಟಿ ನಿರ್ಧಾರವೇನು ಎಂದು ಕಾದು ನೋಡಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಂಡೀಸ್​​​​ ವಿರುದ್ಧ ಸೋತ ಟೀಂ ಇಂಡಿಯಾಗೆ ಗುಡ್​ನ್ಯೂಸ್​​; ಸ್ಟಾರ್​​ ಪ್ಲೇಯರ್​ ಕಮ್​ಬ್ಯಾಕ್​ ಸಾಧ್ಯತೆ!

https://newsfirstlive.com/wp-content/uploads/2023/07/Team-India_KL.jpg

Load More