newsfirstkannada.com

ಹಾರ್ದಿಕ್​​ ಇದ್ರೂ ಕೆ.ಎಲ್​​ ರಾಹುಲ್​ಗೆ ಟೀಮ್​ ಇಂಡಿಯಾ ಕ್ಯಾಪ್ಟನ್ಸಿ ನೀಡಲು ಕಾರಣವೇನು?

Share :

Published July 9, 2024 at 7:24pm

Update July 9, 2024 at 7:26pm

    ಜಿಂಬಾಬ್ವೆ ಟಿ20 ಸರಣಿ ಬೆನ್ನಲ್ಲೇ ಟೀಮ್​ ಇಂಡಿಯಾ ಶ್ರೀಲಂಕಾ ಪ್ರವಾಸ

    ಭಾರತ, ಶ್ರೀಲಂಕಾ ಮಧ್ಯೆ 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿ!

    ಹಾರ್ದಿಕ್​ ಇದ್ರೂ ಕನ್ನಡಿಗ ರಾಹುಲ್​ ಕ್ಯಾಪ್ಟನ್​​ ಆಗಲು ಕಾರಣವೇನು?

ಜಿಂಬಾಬ್ವೆ ವಿರುದ್ಧದ 5 ಪಂದ್ಯಗಳ ಟಿ20 ಸರಣಿ ಬೆನ್ನಲ್ಲೇ ಟೀಮ್​ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ಶ್ರೀಲಂಕಾ ವಿರುದ್ಧ ಟೀಮ್​​ ಇಂಡಿಯಾ 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಸರಣಿಗೆ ರೋಹಿತ್​ ಶರ್ಮಾ ಅಲಭ್ಯರಾಗಿದ್ದು, ಟೀಮ್​ ಇಂಡಿಯಾ ವಿಕೆಟ್​ ಕೀಪರ್​ ಬ್ಯಾಟರ್​​ ಕೆ.ಎಲ್​​ ರಾಹುಲ್​​​ ಕ್ಯಾಪ್ಟನ್​ ಆಗಲಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು, ಜುಲೈ 27ನೇ ತಾರೀಕಿನಿಂದ ಶುರುವಾಗಲಿರೋ ಪ್ರವಾಸಕ್ಕೆ ಇನ್ನಷ್ಟೇ ತಂಡವನ್ನು ಪ್ರಕಟಿಸಬೇಕಿದೆ. ಜತೆಗೆ ಟೀಮ್​ ಇಂಡಿಯಾಗೆ ಹೊಸ ಕೋಚ್​​ ಕೂಡ ಆಯ್ಕೆಯಾಗಬೇಕಿದೆ. ಇದರ ಮಧ್ಯೆ ಪ್ರಮುಖ ಸುದ್ದಿ ಒಂದು ಹೊರಬಿದ್ದಿದ್ದು, ಶ್ರೀಲಂಕಾ ಪ್ರವಾಸಕ್ಕೆ ಟೀಮ್​ ಇಂಡಿಯಾದ ಮೂವರು ಅನುಭವಿ ಆಟಗಾರರು ಲಭ್ಯರಿರುವುದಿಲ್ಲ ಎಂದು ತಿಳಿದು ಬಂದಿದೆ. ಕ್ಯಾಪ್ಟನ್​ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾಗೆ ಸೀರೀಸ್​ನಿಂದ ರೆಸ್ಟ್​ ನೀಡಲಾಗುತ್ತಿದೆ.

ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ ಕೊಹ್ಲಿ, ರೋಹಿತ್​​ ಮತ್ತು ಬುಮ್ರಾ ಅವರಿಗೆ ರೆಸ್ಟ್​ ನೀಡಲಾಗಿದೆ. ಟೀಮ್​ ಇಂಡಿಯಾಗೆ ಕಮ್​ಬ್ಯಾಕ್​ ಮಾಡೋ ಮುನ್ನ ಈ ಮೂವರು ತಮ್ಮ ವಿರಾಮದ ಅವಧಿ ವಿಸ್ತರಣೆಗೆ ಮನವಿ ಮಾಡಿದ್ದಾರೆ. ಹೀಗಾಗಿ ಶ್ರೀಲಂಕಾ ಪ್ರವಾಸಕ್ಕೆ ಇವರು ಅಲಭ್ಯರಾಗಿದ್ದು, ರೋಹಿತ್​​​ ಅನುಪಸ್ಥಿತಿಯಲ್ಲಿ ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಹಾರ್ದಿಕ್​ ಪಾಂಡ್ಯ ಮುನ್ನಡೆಸಲಿದ್ದಾರೆ. ಏಕದಿನ ಫಾರ್ಮೆಟ್​ನಲ್ಲಿ ಟೀಮ್​ ಇಂಡಿಯಾದ ಕ್ಯಾಪ್ಟನ್​​ ಕೆ.ಎಲ್​ ರಾಹುಲ್​ ಆಗಲಿದ್ದಾರೆ. ಹಾರ್ದಿಕ್​​, ರಾಹುಲ್​ ಇಬ್ಬರು ಬಿಸಿಸಿಐ ಮೊದಲ ಆಯ್ಕೆಯಾಗಿದ್ದಾರೆ.

ಹಾರ್ದಿಕ್​ ಇದ್ರೂ ರಾಹುಲ್​ಗೆ ಕ್ಯಾಪ್ಟನ್ಸಿ ಯಾಕೆ?

ಹಾರ್ದಿಕ್​​ ಪಾಂಡ್ಯ ಟಿ20 ಕ್ರಿಕೆಟ್​​ಗೆ ಬೆಸ್ಟ್​ ಕ್ಯಾಪ್ಟನ್​​. ಏಕದಿನ ಮಾದರಿ ಕ್ಯಾಪ್ಟನ್ಸಿಗೆ ರಾಹುಲ್​ ಬೆಸ್ಟ್​ ಚಾಯ್ಸ್​​. ಇದಕ್ಕೆ ಹಲವಾರು ಕಾರಣಗಳು. ಗೌತಮ್​ ಗಂಭೀರ್​​ ಟೀಮ್​ ಇಂಡಿಯಾದ ಮುಖ್ಯ ಕೋಚ್​​ ಆದಮೇಲೆ ಎಲ್ಲಾ ಮಾದರಿಗೂ ಪ್ರತ್ಯೇಕ ತಂಡಗಳು ಮಾಡೋ ಪ್ಲಾನ್​ ಇದೆ. ಹಾಗಾಗಿ ಭವಿಷ್ಯದಲ್ಲಿ ಒಂದೊಂದು ಫಾರ್ಮೇಟ್​ ಒಬ್ಬೊಬ್ಬರು ಕ್ಯಾಪ್ಟನ್​ ಆಗೋ ಸಾಧ್ಯತೆ ಇದೆ. ಆದ್ದರಿಂದ ರಾಹುಲ್​ ಅವರಿಗೆ ಏಕದಿನ ಫಾರ್ಮೇಟ್​ ಕ್ಯಾಪ್ಟನ್​ ಮಾಡಲು ಬಿಸಿಸಿಐ ಸಜ್ಜಾಗಿದೆ. ಈ ಹಿಂದೆ ಕೆ.ಎಲ್​ ರಾಹುಲ್​​ ಅವರು ಸೌತ್​ ಆಫ್ರಿಕಾ ವಿರುದ್ಧ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಅಷ್ಟೇ ಅಲ್ಲ ಹಾರ್ದಿಕ್​ ಪಾಂಡ್ಯ ಕೂಡ ಟಿ20 ಕ್ರಿಕೆಟ್​ನಲ್ಲಿ ಭಾರತ ತಂಡವನ್ನು ಲೀಡ್​ ಮಾಡಿದ್ದಾರೆ.

ಇದನ್ನೂ ಓದಿ: ಅಂದು ಅವಮಾನ ಇಂದು ಸನ್ಮಾನ! ಕ್ಯಾಪ್ಟನ್​ ಆಗುವಂತೆ KL ರಾಹುಲ್​ ಕಾಲು ಹಿಡಿದ BCCI

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಹಾರ್ದಿಕ್​​ ಇದ್ರೂ ಕೆ.ಎಲ್​​ ರಾಹುಲ್​ಗೆ ಟೀಮ್​ ಇಂಡಿಯಾ ಕ್ಯಾಪ್ಟನ್ಸಿ ನೀಡಲು ಕಾರಣವೇನು?

https://newsfirstlive.com/wp-content/uploads/2024/07/Pandya_KL-Rahul.jpg

Load More