newsfirstkannada.com

ತಿರುಪತಿ ಲಡ್ಡು- ನಂದಿನಿ ತುಪ್ಪದ ಹಗ್ಗಜಗ್ಗಾಟಕ್ಕೆ ಹೊಸ ತಿರುವು: TTDಗೆ ಕೆಎಂಎಫ್ ಖಡಕ್ ಸವಾಲು

Share :

03-08-2023

    20 ವರ್ಷದಲ್ಲಿ ಒಂದು ಬಾರಿ ಮಾತ್ರ ನಂದಿನಿ ತುಪ್ಪ ಪೂರೈಕೆ ಆಗಿದ್ಯಾ?

    ನೀವು ಕೇಳಿರೋ ರೇಟ್‌ಗೆ ತುಪ್ಪ ಸರಬರಾಜು ಮಾಡಲ್ಲ ಎಂದ KMF

    ತಿರುಮಲ ದೇವಸ್ಥಾನ ಮಂಡಳಿಗೆ ಕೆಎಂಎಫ್ ಕೊಟ್ಟ ಕ್ಲಾರಿಟಿ ಏನು?

ಬೆಂಗಳೂರು: ತಿರುಪತಿ ಲಡ್ಡು ಪ್ರಸಾದದಿಂದ ನಂದಿನಿ ತುಪ್ಪ ದೂರವಾಗ್ತಿದ್ದಂತೆ ಹೊಸ ಚರ್ಚೆ ಶುರುವಾಗಿದೆ. ತಿರುಪತಿ ಲಡ್ಡು ತಯಾರಿಕೆಗೆ ಕೆಎಂಎಫ್ ನಂದಿನಿ ತುಪ್ಪ ಪೂರೈಕೆ ನಿಲ್ಲಿಸಿದ್ದು ಯಾಕೆ ಅನ್ನೋ ಪ್ರಶ್ನೆಯೇ ವಿವಾದಕ್ಕೆ ಕಾರಣವಾಗಿದೆ. 20 ವರ್ಷಗಳಿಂದ ರಿಯಾಯಿತಿ ದರದಲ್ಲಿ ತಿರುಪತಿಗೆ ನಂದಿನಿ ತುಪ್ಪ ಪೂರೈಕೆ ಮಾಡಲಾಗ್ತಿದೆ. TTD ಕಡಿಮೆ ಬೆಲೆಗೆ ತುಪ್ಪವನ್ನ ಕೇಳ್ತಿದೆ ಅಂತಾ ಟೆಂಡರ್‌ನಿಂದ ಕೆಎಂಎಫ್ ಹಿಂದೆ ಸರಿದಿತ್ತು. ನಂದಿನಿ ತುಪ್ಪವನ್ನ ಬಿಟ್ಟು ಕಡಿಮೆ ಗುಣಮಟ್ಟದ ತುಪ್ಪವನ್ನ ಟಿಟಿಡಿ ಲಡ್ಡು ತಯಾರಿಕೆ ಬಳಸಲಾಗ್ತಿದೆ ಅಂತಾ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್‌ ಹೇಳಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ಟಿಟಿಡಿ ದೇವಸ್ಥಾನದ ಕಾರ್ಯನಿರ್ವಾಹಕರಾದ ಎ.ವಿ. ಧರ್ಮಾರೆಡ್ಡಿ ಅವರು, ಕೆಎಂಎಫ್ ಕಳೆದ 20 ವರ್ಷಗಳಿಂದ ಟಿಟಿಡಿಗೆ ನಂದಿನಿ ತುಪ್ಪ ಪೂರೈಸುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಇದೆಲ್ಲಾ ಸುಳ್ಳು ಆರೋಪ. ಕಳೆದ 20 ವರ್ಷದಲ್ಲಿ ಒಂದು ಬಾರಿ ಮಾತ್ರ ಕೆಎಂಎಫ್​ನಿಂದ ನಂದಿನಿ ತುಪ್ಪ ಪೂರೈಕೆಯಾಗಿದೆ. ತಿಮ್ಮಪ್ಪನ ಸನ್ನಿಧಿಗೆ ರವಾನೆಯಿಂದ ಎಲ್ಲಾ ತುಪ್ಪದ ಮಾದರಿಗಳನ್ನ ಪರೀಕ್ಷೆ ಮಾಡಲಾಗುತ್ತದೆ. ಟೆಸ್ಟ್‌ನಲ್ಲಿ ಪಾಸ್‌ ಆದ ನಂತರವೇ ತುಪ್ಪ ಹೊತ್ತು ಬಂದ ಟ್ರಕ್‌ಗಳನ್ನು ಪ್ರವೇಶಿಸಲು ಅನುಮತಿಸಲಾಗುತ್ತದೆ. ರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ಡೈರಿ ತಜ್ಞರು ಸಸ್ಯಗಳು ಮತ್ತು ಸಂಭಾವ್ಯ ಪೂರೈಕೆದಾರರ ಮಾದರಿಗಳನ್ನು ಆಡಿಟ್ ಮಾಡುತ್ತಾರೆ ಅಂತಾ ಹೇಳಿದ್ದರು.

ಇದನ್ನೂ ಓದಿ: 20 ವರ್ಷದಲ್ಲಿ ಕೇವಲ ಒಂದು ಬಾರಿ ಮಾತ್ರ ನಂದಿನಿ ತುಪ್ಪ ಪೂರೈಕೆ ಮಾಡಿದ್ಯಂತೆ -KMF ಮೇಲೆ ಹೊಸ ಗೂಬೆ ಕೂರಿಸಿದ ಟಿಟಿಡಿ

TTDಯ ಈ ಆರೋಪಕ್ಕೆ ಇದೀಗ ಪತ್ರದ ಮೂಲಕ ಕೆಎಂಎಫ್‌ ಸವಾಲು ಹಾಕಿದೆ. ನೀವು ಕೇಳಿರುವ ದರಕ್ಕೆ ತುಪ್ಪ ಸರಬರಾಜು ಮಾಡಲು ಸಾಧ್ಯವಿಲ್ಲ. ಕಳೆದ 20 ವರ್ಷಗಳಿಂದ ಕೆಎಂಎಫ್ ಟಿಟಿಡಿಗೆ ತುಪ್ಪ ನೀಡುತ್ತಿದೆ. ದರದ ವಿಚಾರಕ್ಕೆ ಸ್ಥಗಿತಗೊಂಡಿರೋ ಸರಬರಾಜು ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ನಿಮಗೆ ತುಪ್ಪ ನೀಡಲು ನಾವು ರೆಡಿ ಇದ್ದೇವೆ. ಗೊಂದಲ ಬಗೆಹರಿಕೆ ಬಗ್ಗೆ ಸಭೆ ನಡೆಸಲು ದಿನಾಂಕ ನೀಡುವಂತೆ ಟಿಟಿಡಿಗೆ ಕೆಎಂಎಫ್ ಕೇಳಿದೆ. ಸದ್ಯ ಪತ್ರದ ಮೂಲಕ ಸವಾಲು ಹಾಕಿರುವ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರು ತುಪ್ಪದ ಸಮರದ ಗೊಂದಲಗಳಿಗೆ ಸ್ಪಷ್ಟನೆ ನೀಡಲು ಮುಂದಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ತಿರುಪತಿ ಲಡ್ಡು- ನಂದಿನಿ ತುಪ್ಪದ ಹಗ್ಗಜಗ್ಗಾಟಕ್ಕೆ ಹೊಸ ತಿರುವು: TTDಗೆ ಕೆಎಂಎಫ್ ಖಡಕ್ ಸವಾಲು

https://newsfirstlive.com/wp-content/uploads/2023/08/Tirupati-Laddu.jpg

Load More