newsfirstkannada.com

20 ವರ್ಷದಲ್ಲಿ ಕೇವಲ ಒಂದು ಬಾರಿ ಮಾತ್ರ ನಂದಿನಿ ತುಪ್ಪ ಪೂರೈಕೆ ಮಾಡಿದ್ಯಂತೆ -KMF ಮೇಲೆ ಹೊಸ ಗೂಬೆ ಕೂರಿಸಿದ ಟಿಟಿಡಿ

Share :

03-08-2023

    ಗುಣಮಟ್ಟವಿಲ್ಲದ 18 ಟನ್ನಿನ, 42 ಟ್ರಕ್​ ಹಸುವಿನ ತುಪ್ಪ ತಿರಸ್ಕೃತ

    ಕಡಿಮೆ ಗುಣಮಟ್ಟದ ತುಪ್ಪ ಬಳಕೆ ಎಂದಿದ್ದ ಕೆಎಂಎಫ್‌ಗೆ ಟಾಂಗ್

    ಮುಗಿಯದ ಟಿಟಿಡಿ ತುಪ್ಪ ಸಮರ.. ಎ.ವಿ. ಧರ್ಮಾರೆಡ್ಡಿ ಕೌಂಟರ್..!

ತಿರುಪತಿ ಲಾಡು ತಯಾರಿಕೆಗೆ ಇನ್ಮುಂದೆ ರಾಜ್ಯದ ಕೆಎಂಎಎಫ್ ನಂದಿನಿ ತುಪ್ಪ ಬಳಕೆಯಾಗುವುದಿಲ್ಲ ಅಂತ ವಿಪಕ್ಷ ಬಿಜೆಪಿ ಮತ್ತು ಆಡಳಿತಾರೂಢ ಕಾಂಗ್ರೆಸ್ ನಡುವೆ ವಾರ್​ ಶುರುವಾಗಿತ್ತು. ಇದೇ ವಿಚಾರ ರಾಜಕೀಯ ವಾಗ್ದಾಳಿಗಳು, ಆರೋಪಗಳು. ಟೀಕೆ ಟಿಪ್ಪಣಿಗೆ ಕಾರಣವಾಗಿತ್ತು. ಜೊತೆಗೆ ಟಿಟಿಡಿ ವಿರುದ್ಧವೂ ಕೆಲ ಆರೋಪಗಳು ಕೇಳಿಬಂದಿದ್ವು. ನಂದಿನಿ ತುಪ್ಪವನ್ನು ತಿರಸ್ಕರಿಸಿರೋ ವಿವಾದವೂ ಹುಟ್ಟಿಕೊಂಡಿತ್ತು. ಈ ಎಲ್ಲಾ ಆರೋಪಗಳಿಗೆ ಟಿಟಿಡಿ ಸ್ಪಷ್ಟನೆ ಕೊಟ್ಟಿದೆ.

20 ವರ್ಷದಲ್ಲಿ ಒಂದು ಬಾರಿ ಮಾತ್ರ ನಂದಿನಿ ತುಪ್ಪ ಪೂರೈಕೆ

ತಿರುಪತಿ ಲಡ್ಡು-ಕರುನಾಡಿನ ಬ್ರ್ಯಾಂಡ್​​​ ನಂದಿನಿ ತುಪ್ಪ, ಅದು ತಾಯಿ ಮತ್ತು ಕರುವಿನ ಸಂಬಂಧ. ಆದ್ರೀಗ ಟಿಟಿಡಿ ಲಡ್ಡುಗೆ ಕರ್ನಾಟಕ ಹಾಲು ಒಕ್ಕೂಟ ತುಪ್ಪ ನೀಡುತ್ತಿಲ್ಲ ಅಂತ ಹೇಳಿತ್ತು. ಕಡಿಮೆ ಬೆಲೆಗೆ ತುಪ್ಪವನ್ನ ಕೇಳ್ತಿದೆ ಅಂತಾ ಟೆಂಡರ್‌ನಿಂದ ಕೆಎಂಎಫ್ ಹಿಂದೆ ಸರಿದಿತ್ತು. ದಶಕಗಳ ಬಳಿಕ ಟಿಟಿಡಿ ಮತ್ತು ನಂದಿನಿ ತುಪ್ಪದ ಸಂಬಂಧ ಕಡಿತಗೊಂಡಿದೆ ಎಂದು ಬಿಜೆಪಿ, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬೊಟ್ಟು ಮಾಡಿದ್ರು. ಇದೀಗ ತುಪ್ಪದ ವಿವಾದದ ಬಗ್ಗೆ ಟಿಟಿಡಿ ದೇವಸ್ಥಾನದ ಕಾರ್ಯನಿರ್ವಾಹಕರಾದ ಎ.ವಿ. ಧರ್ಮಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ‘ತಿರುಪತಿಗೆ ನಂದಿನಿ ತುಪ್ಪ ಪೂರೈಸಲು ನಮಗೆ ಯಾವುದೇ ಸಮಸ್ಯೆಗಳಿಲ್ಲ, ಆದರೆ..’ -ಸಿದ್ದರಾಮಯ್ಯ

ಕರ್ನಾಟಕ ಹಾಲು ಒಕ್ಕೂಟ ಅಧ್ಯಕ್ಷ ಕಳೆದ ಇಪ್ಪತ್ತು ವರ್ಷಗಳಿಂದ ಟಿಟಿಡಿಗೆ ನಂದಿನಿ ತುಪ್ಪ ಪೂರೈಸುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಅದಲ್ಲದೇ ಕೆಎಂಎಫ್​ನಿಂದ ತುಪ್ಪ ಪೂರೈಸಲು ಟಿಟಿಡಿ ಬಿಡುತ್ತಿಲ್ಲ ಎಂಬ ಆರೋಪವನ್ನ ಮಾಡಿದ್ದಾರೆ. ಅವರ ಮಾತುಗಳು.. ಟಿಟಿಡಿ ಮೇಲೆ ಸುಳ್ಳು ಆರೋಪ ಮಾಡುವುದು ಸರಿಯಲ್ಲ. ಇ-ಟೆಂಡರ್‌ಗಳನ್ನು ಪಾರದರ್ಶಕವಾಗಿ ನಡೆಸಲಾಗುವುದು. ನಮ್ಮ ಪ್ಯಾರಾಮೀಟರ್‌ಗಳೊಂದಿಗೆ ಕಡಿಮೆ ವೆಚ್ಚದಲ್ಲಿ ತುಪ್ಪ ಪೂರೈಕೆದಾರರ ಅಗತ್ಯವಿದೆ. ಕಳೆದ ಇಪ್ಪತ್ತು ವರ್ಷಗಳಿಂದ ಲಡ್ಡು ತಯಾರಿಕೆಗೆ ತುಪ್ಪ ಪೂರೈಕೆ ಮಾಡುತ್ತಿಲ್ಲ. ಎಲ್​ 1 ಬಿಡ್ಡರ್ ಪೂರೈಕೆದಾರರಿಂದ ಮಾತ್ರ ದೇವಾಲಯವು ಹಸುವಿನ ತುಪ್ಪವನ್ನು ಖರೀದಿಸುತ್ತದೆ. ಒಂದು ಬಾರಿ ಮಾತ್ರ ಕೆಎಂಎಫ್​ನಿಂದ ನಂದಿನಿ ತುಪ್ಪ ಪೂರೈಕೆಯಾಗಿದೆ.
ಎ.ವಿ. ಧರ್ಮಾರೆಡ್ಡಿ, ಟಿಟಿಡಿ ಕಾರ್ಯನಿರ್ವಾಹಕ

ನಂದಿನಿ ತುಪ್ಪವನ್ನ ಬಿಟ್ಟು ಕಡಿಮೆ ಗುಣಮಟ್ಟದ ತುಪ್ಪವನ್ನ ಟಿಟಿಡಿ ಲಡ್ಡು ತಯಾರಿಕೆ ಬಳಸಲಾಗ್ತಿದೆ ಅಂತ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್‌ ಆರೋಪಿಸಿದ್ರು. ಇದಕ್ಕೂ ತಿರುಗೇಟು ಕೊಟ್ಟಿರೋ ಧರ್ಮಾರೆಡ್ಡಿ, ತಿಮ್ಮಪ್ಪನ ಸನ್ನಿಧಿಗೆ ರವಾನೆಯಿಂದ ಎಲ್ಲಾ ತುಪ್ಪದ ಮಾದರಿಗಳನ್ನ ಪರೀಕ್ಷೆ ಮಾಡಲಾಗುತ್ತದೆ. ಟೆಸ್ಟ್‌ನಲ್ಲಿ ಪಾಸ್‌ ಆದ ನಂತರವೇ ತುಪ್ಪ ಹೊತ್ತು ಬಂದ ಟ್ರಕ್‌ಗಳನ್ನು ಪ್ರವೇಶಿಸಲು ಅನುಮತಿಸಲಾಗುತ್ತದೆ. ರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ಡೈರಿ ತಜ್ಞರು ಸಸ್ಯಗಳು ಮತ್ತು ಸಂಭಾವ್ಯ ಪೂರೈಕೆದಾರರ ಮಾದರಿಗಳನ್ನು ಆಡಿಟ್ ಮಾಡುತ್ತಾರೆ ಅಂತಾ ಭೀಮಾನಾಯ್ಕ್‌ ಆರೋಪಕ್ಕೂ ಟಿಟಿಡಿ ತಿರುಗೇಟು ಕೊಟ್ಟಿದೆ.

ಟಿಟಿಡಿ ತುಪ್ಪ ಸಮರ!

ತುಪ್ಪ ಖರೀದಿಗೆ ಇ-ಟೆಂಡರ್​ ಪ್ರಕ್ರಿಯೆಯ ಮೂಲಕ ಗುಣಮಟ್ಟದ ತುಪ್ಪವನ್ನು ಖರೀದಿ ಮಾಡಲಾಗುತ್ತದೆ. ಗುಣಮಟ್ಟದಲ್ಲಿ ರಾಜಿಯಾಗದೇ ಎಫ್​ಟಿಆರ್​ಐನಂತಹ ಪ್ರಯೋಗಾಲಯಗಳಲ್ಲಿ ಪರೀಕ್ಷೆ ಮಾಡಲಾಗುತ್ತದೆ. ಅಲ್ಲಿ ಮಾಡಲಾಗುವ ಅವಳಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಮತ್ತು ಕಡಿಮೆ ವೆಚ್ಚದ ಅಂದ್ರೆ ಎಲ್​ 1 ಬಿಡ್ಡರ್ ಪೂರೈಕೆದಾರರಿಂದ ಮಾತ್ರ ದೇವಾಲಯವು ಹಸುವಿನ ತುಪ್ಪವನ್ನು ಖರೀದಿಸುತ್ತದೆ ಅಂತಾ ಧರ್ಮಾರೆಡ್ಡಿ ಹೇಳಿದ್ದಾರೆ. ಇದಲ್ಲದೇ ಪರಿಶುದ್ಧತೆ-ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿರದ ಸುಮಾರು 42 ಟ್ರಕ್​ ಹಸುವಿನ ತುಪ್ಪವನ್ನು ತಿರಸ್ಕರಿಸಲಾಗಿದೆ. 2022 ಜುಲೈ 22ರಿಂದ 2023 ಜೂನ್​ 30ರ ನಡುವೆ ತಲಾ 18 ಟನ್ನಿನ 42 ಟ್ರಕ್ ಲೋಡ್​ ಹಸುವಿನ ತುಪ್ಪವನ್ನು ಗುಣಮಟ್ಟದ ನಮ್ಮ ಮಾನದಂಡಗಳಿಗೆ ಅನುಗುಣವಾಗಿಲ್ಲದ ಕಾರಣ ತಿರಸ್ಕರಿಸಲಾಗಿದೆ ಎಂದು ಟಿಟಿಡಿ ಪ್ರಧಾನ ವ್ಯವಸ್ಥಾಪಕ ಪಿ.ಮುರಳಿಕೃಷ್ಣ ತಿಳಿಸಿದ್ದಾರೆ.

ಒಟ್ಟಾರೆ, ರಾಜ್ಯ ಬಿಜೆಪಿ ಮಾಡಿರುವ ಆರೋಪದಿಂದ ಇಷ್ಟೆಲ್ಲಾ ವಿಚಾರಗಳು ಹೊರ ಬಂದಿದ್ದು, ಇದು ವರೆಗೂ ನಂದಿನಿ ತುಪ್ಪ ತಿರುಪತಿಗೆ ಒಂದು ಸಲ ಮಾತ್ರ ಹೋಗಿದೆ ಎಂಬ ವಿಚಾರ ಹೊರಬಿದ್ದಿದೆ. ಈ ಮಧ್ಯೆ ಟಿಟಿಡಿ ಟೆಂಡರ್​ ಪ್ರಕ್ರಿಯೆಯಲ್ಲಿ ಕೆಎಂಎಪ್ ಭಾಗಿಯಾಗಿ ಜಗತ್ತಿನ ಉತ್ತಮ ಪ್ರಸಾದದ ರುಚಿಯನ್ನ ಮತ್ತೆ ಹೆಚ್ಚಿಸುತ್ತಾ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

20 ವರ್ಷದಲ್ಲಿ ಕೇವಲ ಒಂದು ಬಾರಿ ಮಾತ್ರ ನಂದಿನಿ ತುಪ್ಪ ಪೂರೈಕೆ ಮಾಡಿದ್ಯಂತೆ -KMF ಮೇಲೆ ಹೊಸ ಗೂಬೆ ಕೂರಿಸಿದ ಟಿಟಿಡಿ

https://newsfirstlive.com/wp-content/uploads/2023/08/NANDINI.jpg

Load More