newsfirstkannada.com

ನಟ ಕಿಚ್ಚ ಸುದೀಪ್‌ಗೆ ವಾರ್ನಿಂಗ್ ಕೊಟ್ಟ ಸಚಿವ ಕೆ.ಎನ್ ರಾಜಣ್ಣ; ಕಾರಣವೇನು?

Share :

18-06-2023

  ಸ್ಯಾಂಡಲ್​​ವುಡ್​ ನಟ ಕಿಚ್ಚ ಸುದೀಪ್​​ ವಿರುದ್ಧ ಕೆ.ಎನ್​ ರಾಜಣ್ಣ ಆಕ್ರೋಶ

  ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ ಸಚಿವ ಕೆ.ಎನ್​​ ರಾಜಣ್ಣ

  ಸುದೀಪ್​​ ವಿರುದ್ಧ ಕೆ.ಎನ್​​ ರಾಜಣ್ಣ ಬೇಸರ ಹೊರಹಾಕಲು ಕಾರಣವೇನು?

ದಾವಣಗೆರೆ: ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ನಟ ಕಿಚ್ಚ ಸುದೀಪ್​ ಅವರು, ನಮ್ಮ ವಿರುದ್ಧವೇ ಕ್ಯಾಂಪೇನ್ ಮಾಡಿದ್ದು ಬೇಸರವಾಗಿದೆ. ಇನ್ನು ಮುಂದೆ ಅರಿತುಕೊಂಡು ಮುಂದುವರಿಯಲಿ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಕಿಚ್ಚ ಸುದೀಪ್ ನಮ್ಮ ವಿರುದ್ದವೇ ಭಾಷಣ ಮಾಡಿದ್ದಾರೆ. ಸಾಮಾನ್ಯ ಕ್ಷೇತ್ರದಲ್ಲಿ ಬಂದು ಪ್ರಚಾರ ಮಾಡಿದ್ರೆ ಏನು ಅನಿಸುತ್ತಾ ಇರಲಿಲ್ಲ. ಎಸ್​​ಟಿ ಮೀಸಲು ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದು ನೋವು ತಂದಿದೆ. ನಮ್ಮವರು ಎರಡು ಕಡೆ ಸ್ಪರ್ಧಿಸಿದಾಗ ಒಬ್ಬರ ಪರವಾಗಿ, ಇನ್ನೊಬ್ಬರ ವಿರುದ್ಧವಾಗಿ ಪ್ರಚಾರ ಮಾಡಿದ್ದಾರೆ. ಇದು ನಮಗೆಲ್ಲಾ ಬೇಸರ ತಂದಿದೆ. ಇದು ಪ್ರತಿಭಾನ್ವಿತ ನಟನ ಭವಿಷ್ಯಕ್ಕೆ ಕುತ್ತು ತರುತ್ತದೆ. ಆತನಿಗೆ ಅನುಭವ ಕಡಿಮೆ ಇದೆ, ಶ್ರೇಷ್ಠ ನಟನಾಗಲು ಅವಕಾಶ ಇದೆ. ಇದನ್ನು ಅರಿತುಕೊಂಡು ಮುಂದುವರೆಯಲಿ ಎಂದು ಕಿಚ್ಚ ಸುದೀಪ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ನಟ ಕಿಚ್ಚ ಸುದೀಪ್‌ಗೆ ವಾರ್ನಿಂಗ್ ಕೊಟ್ಟ ಸಚಿವ ಕೆ.ಎನ್ ರಾಜಣ್ಣ; ಕಾರಣವೇನು?

https://newsfirstlive.com/wp-content/uploads/2023/06/kn-rajanna-1.jpg

Load More