newsfirstkannada.com

ವಿ​ಧಾನಸೌಧಕ್ಕೆ ಚಾಕು ತಂದ ಮಹಿಳೆ; ಸೆಕ್ಯೂರಿಟಿ ಟೈಟ್​ ಮಾಡಿರೋ ಅಧಿಕಾರಿಗಳು

Share :

Published July 11, 2023 at 6:22am

Update July 11, 2023 at 6:27am

    ವಿ​ಧಾನಸೌಧಕ್ಕೆ ಬಂದ ಮಹಿಳೆಯ ಬ್ಯಾಗ್​ನಲ್ಲಿ ಪತ್ತೆಯಾಯ್ತು ಚಾಕು..!

    ಚಾಕು ಸಮೇತ ವಿಧಾನಸೌಧಕ್ಕೆ ಬಂದ ಮಹಿಳೆ ಸಿಬ್ಬಂದಿಗೆ ಹೇಳಿದ್ದೇನು?

    ವಿಧಾನಸೌಧ ಸುತ್ತ ಭದ್ರತೆಯ ಪರಿಶೀಲನೆ ನಡೆಸಿದ ಯು.ಟಿ ಖಾದರ್

ಬೆಂಗಳೂರು: ಬಜೆಟ್​ ದಿನದಂದು ಖಾಸಗಿ ವ್ಯಕ್ತಿಯೊಬ್ಬರು ಸದನದ ಒಳಗೆ ಬಂದು ನೇರವಾಗಿ ಶಾಸಕರ ಆಸನದಲ್ಲಿ ಕೂತಿದ್ದ ಘಟನೆ ಸಾಕಷ್ಟು ಸದ್ದು ಮಾಡಿತ್ತು. ಈ ಹಿನ್ನೆಲೆ ಸೆಕ್ಯೂರಿಟಿ ಟೈಟ್​ ಮಾಡಿರೋ ಅಧಿಕಾರಿಗಳು ಶಾಸಕರು ಸಚಿವರು ಅಧಿಕಾರಿಗಳು ಸಿಬ್ಬಂದಿ ಸೇರಿದಂತೆ ಎಲ್ಲರ ಬ್ಯಾಗ್​ಗಳ ಪರಿಶೀಲನೆಗೆ ಮುಂದಾಗಿದ್ರು. ಈ ವೇಳೆ ಅಡಿಗೆ ಮನೆಯಲ್ಲಿರಬೇಕಿದ್ದ ಚಾಕುವೊಂದು ವಿಧಾನಸೌಧಕ್ಕೆ ಬಂದಿರೋ ವಿಚಾರ ಬೆಳಕಿಗೆ ಬಂದಿದೆ.

ಚಾಕು ಸಮೇತ ವಿಧಾನಸೌಧಕ್ಕೆ ಬಂದ ಸಿಬ್ಬಂದಿ

ವಿಧಾನಸೌಧದ ಪೂರ್ವ ಗೇಟ್​ನಲ್ಲಿ ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸುವ ವೇಳೆ ಮಹಿಳೆಯ ಬ್ಯಾಗ್​ನಲ್ಲಿ ಚಾಕು ಪತ್ತೆಯಾಗಿದೆ. ಬಳಿಕ ಅಲರ್ಟ್​​ ಆದ ಸಿಬ್ಬಂದಿ ಚಾಕುವನ್ನ ವಶಕ್ಕೆ ಪಡೆದರು. ಅನಿತಾ ಎಂಬುವವರು ಕಾಂಟ್ರ್ಯಾಕ್ಟ್​ ಬೇಸಿಸ್ ಮೇಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಯರ ಕಚೇರಿಯಲ್ಲಿ ಜೂನಿಯರ್ ಅಸಿಸ್ಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿರೋದಾಗಿ ತಿಳಿದು ಬಂದಿದೆ. ಚಾಕುವಿನ ಬಗ್ಗೆ ಸ್ಪಷ್ಟನೆ ನೀಡಿರೋ ಅನಿತಾ ಆಸ್ಪತ್ರೆಯಲ್ಲಿರುವ ಸಂಬಂಧಿಕರೊಬ್ಬರನ್ನ ಭೇಟಿ ಮಾಡಿ ಅವರಿಗೆ ಹಣ್ಣು ಕತ್ತರಿಸಲು ಉಪಯೋಗಿಸಿದ್ದ ಚಾಕುವನ್ನ ಮರೆತು ಬ್ಯಾಗ್​ನಲ್ಲಿ ಹಾಕಿಕೊಂಡು ಬಂದಿರುವುದಾಗಿ ಹೇಳಿದ್ದಾರೆ.

ಭದ್ರತೆ ಬಗ್ಗೆ ಸದನದಲ್ಲಿ ಶಾಸಕರಿಗೆ ಮಾಹಿತಿ ಕೊಟ್ಟ ಖಾದರ್​

ವಿಧಾನಸೌಧದಲ್ಲಿ ಭದ್ರತೆ ಮತ್ತಷ್ಟು ಕಟ್ಟುನಿಟ್ಟಾಗಿದೆ ಅನ್ನೋ ವಿಚಾರವನ್ನ ಸ್ಪೀಕರ್​ ಖಾದರ್​ ಸದನಲ್ಲಿ ಪ್ರಸ್ತಾಪ ಮಾಡಿದ್ದರು. ಎಲ್ಲರೂ ಇದಕ್ಕೆ ಸ್ಪಂದಿಸಬೇಕೆಂದು ಹೇಳಿದ್ದರು. ಹಾಗೂ ಈ ಘಟನೆ ಒಂದು ಪಾಠವಾಗಿದ್ದು, ಆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳೋದಾಗಿ ತಿಳಿಸಿದ್ದರು. ಇದಕ್ಕೂ ಮುನ್ನ ಸದನ ಸೇರಿದಂತೆ ಶಕ್ತಿಸೌಧದ ಒಳಗೆ ಮತ್ತು ಹೊರಗೆ ಪೊಲೀಸ್​ ಕಮಿಷನರ್​ ಮತ್ತು ಸಿಸಿಬಿ ಜಂಟಿ ಆಯುಕ್ತರ ಜೊತೆಗೆ ಭದ್ರತೆಯ ಪರಿಶೀಲನೆ ನಡೆಸಿದ್ರು. ಅದೇನೇ ಇರಲಿ ಕೊಳ್ಳೆ ಹೊಡೆದ್ಮೇಲೆ ಊರ್​ ಬಾಗಿಲು ಹಾಕಿದ್ರು ಅನ್ನೋ ಹಾಗೆ ಈ ವ್ಯಕ್ತಿ ಎಂಟ್ರಿ ಆದ್ಮೇಲೆ ಅಧಿಕಾರಿಗಳು ಎಚ್ಚೆತ್ತುಕೊಂಡಿರೋದಂತೂ ಸತ್ಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿ​ಧಾನಸೌಧಕ್ಕೆ ಚಾಕು ತಂದ ಮಹಿಳೆ; ಸೆಕ್ಯೂರಿಟಿ ಟೈಟ್​ ಮಾಡಿರೋ ಅಧಿಕಾರಿಗಳು

https://newsfirstlive.com/wp-content/uploads/2023/07/vidanasowda.jpg

Load More