ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲದ ಭವಿಷ್ಯ
ಕಾಲಜ್ಞಾನಿ ಕೊಡೇಕಲ್ ಬಸವಣ್ಣ ಅಚ್ಚರಿಯ ನುಡಿ..!
ಸರ್ಕಾರಕ್ಕೆ ಕಂಟಕದ ಮುನ್ಸೂಚನೆ ನೀಡಿದ ಬಸವಣ್ಣ
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲದ ಭವಿಷ್ಯವಾಣಿ ಹೊರಬಿದ್ದಿದೆ. 15ನೇ ಶತಮಾನದಲ್ಲಿ ಕಾಲಜ್ಞಾನಿ ಕೊಡೇಕಲ್ ಬಸವಣ್ಣ ಬರೆದಿಟ್ಟ ನುಡಿ, ಸಂಚಲನ ಸೃಷ್ಟಿಸಿದೆ. ಪಕ್ಷಗಳಲ್ಲಿನ ಗೊಂದಲ ಸರಿಪಡಿಸದಿದ್ರೆ ಕಂಟಕ ಖಚಿತ ಅನ್ನೋ ಭವಿಷ್ಯ ಕಥನ ಕುತೂಹಲ ಎಬ್ಬಿಸಿದೆ. ಅಷ್ಟಕ್ಕೂ ಕಾಲ ಜ್ಞಾನಿ ಕೊಡೇಕಲ್ ಬಸವಣ್ಣ ಬರೆದಿಟ್ಟ ತಾಳೆಗರೆಯಲ್ಲಿನ ಈ ಸಲದ ನುಡಿ ಏನು? ಎಂದು ತಿಳಿದುಕೊಳ್ಳಲು ಸ್ಟೋರಿ ಓದಿ!
ತಮ್ಮ ತಾವರಿತರೆ ತಮಗ್ಯಾಕೆ ದುರ್ಮರಣ. ತಮ್ಮ ತಾವರಿತರೆ ತಮಗ್ಯಾಕೆ ದುರಿತಗಳು. ತಮ್ಮಲ್ಲೆ ಇಹ ಉಂಟು, ತಮ್ಮಲ್ಲೆ ಪರ ಉಂಟು. ತಮ್ಮಲ್ಲೆ ಗುರು ಉಂಟು, ತಮ್ಮಲ್ಲೆ ಲಿಂಗವಿದ್ದೆಡೆ, ತಮ್ಮ ತಾವರಿಯದೇ ಕೆಟ್ಟಿತು ಜಗವೆಲ್ಲ. ಇದು ಕೊಡೆಕಲ್ ಬಸವಣ್ಣನ ನುಡಿ. ಮುಂದೆ ನಡೆಯುವ ಘಟನೆಗಳು, ಹಾಗು ಭವಿಷ್ಯವಾಣಿಗಳನ್ನ ಕಾಲಜ್ಞಾನದ ಶಕ್ತಿಯಿಂದ ತಮ್ಮ ವಚನಗಳ ಮೂಲಕ ಅಖಂಡ ಜ್ಞಾನವನ್ನ ದಾಸೋಹ ಮಾಡಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಫಿಕ್ಸಾ?
15ನೇ ಶತಮಾನದಲ್ಲಿ ನಡೆದಾಡಿದ ಈ ಬ್ರಹ್ಮಜ್ಞಾನಿ, ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಕೊಡೇಕಲ್ನಲ್ಲಿ ನೆಲೆಸಿದ್ದಾರೆ. ವಿಜಯ ನಗರದಿಂದ ಶುರುವಾದ ಲೋಕಸಂಚಾರ, ಕೊಡೆಕಲ್ನಲ್ಲಿ ಸ್ಥಿರವಾಗಿ ಕಾಲಜ್ಞಾನ ಬರೆದ ಪುಣ್ಯ ನೆಲವಾಯ್ತು. ಸಮುದ್ರದಲ್ಲಿ ತೇಗಿನ ರೂಪದ ಎಲೆ ಮೇಲೆ ಜನ್ಮವೆತ್ತಿ ಬಂದ ಈ ಅವತಾರ ಪುರುಷ ಬರೆದ, 5 ಶತಮಾನದ ಹಿಂದಿನ ಭವಿಷ್ಯವಾಣಿಯನ್ನ ವರ್ಷದ ಎರಡು ಬಾರಿ ಪ್ರಕಟಿಸಲಾಗುತ್ತೆ.. ಈ ಬಾರಿಯ ದೀಪಾವಳಿಯ ನರಕ ಚತುರ್ದಶಿಯ ವೇಳೆಗೆ ನುಡಿದ ಕಾಲಜ್ಞಾನ, ಇಡೀ ರಾಜ್ಯ ರಾಜಕೀಯವನ್ನೇ ಅಲ್ಲೋಲಕಲ್ಲೋದ ಸುಳಿವು ನೀಡಿದೆ.
ಹೌದು, ಕಾಲಜ್ಞಾನಿ ಕೊಡೇಕಲ್ ಬಸವಣ್ಣನ ಭವಿಷ್ಯ ನುಡಿ ಹೊರಬಿದ್ದಿದೆ. ಪಕ್ಷಗಳಲ್ಲಿನ ಗೊಂದಲ ಸರಿಪಡಿಸಿಕೊಳ್ಳದಿದ್ದರೆ ಸರ್ಕಾರಕ್ಕೆ ಕಂಟಕದ ಮುನ್ಸೂಚನೆ ಹೊರ ಬಿದ್ದಿದೆ. ವಿಶ್ವಾದಿಂದ ಹೋಗದಿದ್ರೆ ಅಧಿಕಾರ ತ್ಯಾಗ ಅನಿವಾರ್ಯ ಅಂತ ಕಾಲಜ್ಞಾನಿ ಬಸವಣ್ಣನ ಭವಿಷ್ಯ ನುಡಿಯಾಗಿದೆ. ರಾಜ್ಯದಲ್ಲಿ ಏರ್ಪಟ್ಟ ಪಕ್ಷಗಳಲ್ಲಿನ ಗೊಂದಲಗಳ ಮಧ್ಯೆ ಈ ಕಾಲಜ್ಞಾನಿ ಕೊಡೇಕಲ್ ಬಸವಣ್ಣನ ಭವಿಷ್ಯ ಅಚ್ಚರಿ ಮೂಡಿಸಿದೆ.
ಅಷ್ಟಕ್ಕೂ ಭವಿಷ್ಯವಾಣಿ ಏನು?
ನಂಟು ಪಕ್ಷದ ನುಡಿ ಕಂಟಕ ಎದೆಯೋಳ್ ಉಂಟಾಗಿಹನ ನೆರವಲ್ಲ. ತುಂಟತನವ ಮಾಡಿ ತೊಡಗಿಸಿ ಹಲವರ, ಗಂಟಲಾ ಕೊಯ್ವ ಘಾತುಕನಾ.. ಹೀಗೆ ನುಡಿದ ಈ ಭವಿಷ್ಯವಾಣಿಯನ್ನ ದೇವಾಲಯದ ಪ್ರಮುಖರು ಅರ್ಥೈಸಿದ್ದಾರೆ.
ರಾಜಕೀಯದಲ್ಲಿ ಮುಂದಿನ ದಿನಗಳಲ್ಲಿ ಯಾರನ್ನು ಸಹ ನಂಬದಂತಹ ದಿನಮಾನಗಳು ನಡೆಯಲಿವೆ ಅಂತ ದೀಪಾವಳಿ ಹಬ್ಬದಂದು ಕಾಲಜ್ಞಾನಿ ಭವಿಷ್ಯ ನುಡಿದಿದ್ದು, ಇದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಗಂಟೆ ನೀಡಿತಾ ಭವಿಷ್ಯವಾಣಿ?
ಈ ಮೊದಲೇ ಆಡಳಿತರೂಢ ಕಾಂಗ್ರೆಸ್ನಲ್ಲಿ ಬಣ ರಾಜಕೀಯ ಜೋರಾಗಿದೆ.. ಒಂದು ಕಡೆ ಡಿಕೆಶಿ ಬಣ ಮತ್ತೊಂದೆಡೆ ಸಿದ್ದರಾಮಯ್ಯ ಬಣ ರಾಜಕೀಯ ಮೇಲಾಟಕ್ಕಿಳಿದಿವೆ.. ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಜೋರಾಗಿದೆ.. ಇದರ ಮಧ್ಯೆ ಶಾಸಕ ಹಾಗೂ ಸಚಿವರ ಅಸಮಾಧಾನ ಸಹ ಭುಗಿಲೆದ್ದಿದೆ.. ಹಿರಿಯ ಸಚಿವ ಸತೀಶ್ ಜಾರಕಿಹೊಳಿ ಅಸಮಾಧಾನಗೊಂಡಿದ್ದು, ಕಾಂಗ್ರೆಸ್ನಲ್ಲಿ ಕಂಪನ ಸೃಷ್ಟಿಸಿದೆ.. ಈ ನಡುವೆ ದಲಿತ ಸಿಎಂ ಕೂಗು ಸಹ ಕಾಂಗ್ರೆಸ್ ನಲ್ಲಿ ಕೇಳಿ ಬರುತ್ತಿದೆ.. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಆಪರೇಷನ್ ಕಮಲದ ಮಾತು ದಟ್ಟವಾಗ್ತಿದೆ.. ಇದೆಲ್ಲದರ ಮಧ್ಯೆ ಈ ಬಗ್ಗೆಯೇ ಕಾಲಜ್ಞಾನಿ ಬಸವಣ್ಣನ ಭವಿಷ್ಯ ಕಂಪನ ಸೃಷ್ಟಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ