ಇವರೇನಾ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್?
ಇಬ್ಬರ ಬಾಂಡಿಂಗ್ ಕಂಡು ಎಲ್ಲರೂ ಶಾಕ್..!
ಏನಿಲ್ಲ, ಏನಿಲ್ಲ, ನಮ್ಮ ನಡುವೆ ಈಗ ಏನೇನಿಲ್ಲ..!
ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಹಗೆತನ ಯಾರಿಗೆ ಗೊತ್ತಿಲ್ಲ ಹೇಳಿ. ಇಬ್ಬರೂ ಹಾವು-ಮುಂಗುಸಿ ರೀತಿಯಲ್ಲಿ ಆಡುತ್ತಿದ್ದರು. ಆನ್ಫೀಲ್ಡ್ನಲ್ಲೇ ಜಿದ್ದಿಗೆ ಬಿದ್ದು ಕಿತ್ತಾಡುತ್ತಿದ್ದರು. ಆದರೀಗ ಇದೇ ಕಿರಿಕ್ ಜೋಡಿಗಳಾದ ಕೊಹ್ಲಿ ಹಾಗೂ ಗಂಭೀರ್ ನಂಬಲಾಗದಷ್ಟು ಬದಲಾಗಿದ್ದಾರೆ.
ಇವರೇನಾ ಕೊಹ್ಲಿ-ಗೌತಿ?
ವಿರಾಟ್ ಕೊಹ್ಲಿ -ಗೌತಮ್ ಗಂಭೀರ್. ಅಗ್ರೆಸ್ಸಿವ್ ಕ್ರಿಕೆಟರ್ಸ್. ಆನ್ಫೀಲ್ಡ್ನಲ್ಲಿ ದಿಗ್ಗಜದ್ವಯರ ಕಿರಿಕ್ ಬಗ್ಗೆ ದೊಡ್ಡ ಇತಿಹಾಸವೇ ಇದೆ. ಇಬ್ಬರೂ ಆಡಿದ್ದು ಒಂದೇ ದೇಶದ ಪರವಾದ್ರು, ಒಬ್ಬರನ್ನ ಕಂಡ್ರೆ ಒಬ್ಬರಿಗೆ ಆಗ್ತಿರ್ಲಿಲ್ಲ. ಹಾವು-ಮುಂಗಿಸಿ ಸಂಬಂಧ. ಅನೇಕ ಬಾರಿ ಇಬ್ಬರ ಮಧ್ಯೆ ವಾಗ್ಯುದ್ಧ ಏರ್ಪಟ್ಟಿದೆ. ಇಂತಹ ದುಷ್ಮನ್ಸ್ ಈಗ ಬೆಸ್ಟ್ ಫ್ರೆಂಡ್ಸ್ ಆಗಿದ್ದಾರೆ. ಗೌತಮ್ ಗಂಭೀರ್ ಟೀಮ್ ಇಂಡಿಯಾ ಹೆಡ್ಕೋಚ್ ಆದ್ಮೇಲೆ ಕೊಹ್ಲಿ-ಗೌತಿ ನಡುವೆ ಸ್ಪೆಷಲ್ ಬಾಂಡಿಂಗ್ ಬೆಳೆದಿದೆ. ವೈರತ್ವ ಮಾಯವಾಗಿದೆ. ದಿನಕಳೆದಂತೆ ಇಬ್ಬರ ನಡುವೆ ಆತ್ಮೀಯತೆ ಗಾಢವಾಗ್ತಿದೆ.
ಇದನ್ನೂ ಓದಿ:ಕಾನ್ಪುರ ಪಿಚ್ನ ಮಣ್ಣಿನಲ್ಲಿ ವಿಶೇಷ ಗುಣ; ಏನಿದು ಉನ್ನಾವೋ ಕಪ್ಪು ಮಣ್ಣು..?
ಗಡ್ಡ ಮುಟ್ಟಿ ಕೊಹ್ಲಿ ಮಾತನಾಡಿಸಿದ ಗಂಭೀರ್
ಈ ಒಂದು ಪೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಟೀಮ್ ಇಂಡಿಯಾ ಕಾನ್ಪರ ಟೆಸ್ಟ್ಗೆ ಭರ್ಜರಿ ಸಿದ್ಧತೆ ನಡೆಸಿತ್ತು. ಈ ಪ್ರಾಕ್ಟೀಸ್ ಸೆಷನ್ ವೇಳೆ ಹೆಡ್ಕೋಚ್ ಗೌತಮ್ ಗಂಭೀರ್ ಹಾಗೂ ಕಿಂಗ್ ಕೊಹ್ಲಿ ಮುಖಾಮುಖಿಯಾದ್ರು. ಈ ವೇಳೆ ಹೆಡ್ಕೋಚ್ ಗಂಭೀರ್ ಪ್ರೀತಿಯಿಂದ ಕೊಹ್ಲಿಯ ಗಡ್ಡ ಮಟ್ಟಿ ಮುಖಕ್ಕಂಟಿಂದ ಏನನ್ನೋ ವರೆಸಿದ್ದಾರೆ. ಈ ಪೋಟೋ ನೋಡಿದ ಫ್ಯಾನ್ಸ್ ಫುಲ್ ಖುಷ್ ಆಗಿದ್ದು, ಇಬ್ಬರ ಬಾಂಡಿಂಗ್ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.
ಚೆನ್ನೈನಿಂದ ಡೆಲ್ಲಿಗೆ ಜೊತೆಯಾಗಿ ಪ್ರಯಾಣ
ಚೆಪಾಕ್ ಟೆಸ್ಟ್ ಮುಗಿದ ಬೆನ್ನಲ್ಲೆ ಟೀಮ್ ಅನ್ನ ಬಿಟ್ಟು ಕಿಂಗ್ ಕೊಹ್ಲಿ, ಕೋಚ್ ಗಂಭೀರ್ ಹಾಗೂ ರಿಷಬ್ ಪಂತ್ ಡೆಲ್ಲಿಗೆ ಪ್ರಯಾಣ ಬೆಳೆಸಿದ್ರು. ಮೂವರು ಡೆಲ್ಲಿ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡ ವಿಡಿಯೋ ವೈರಲ್ ಆಗಿತ್ತು.
ಗಾಲ್ಫ್ ಕಾರ್ಟ್ನಲ್ಲಿ ಗಂಭೀರ್-ಕೊಹ್ಲಿ
ಡೆಲ್ಲಿಗೆ ಜೊತೆಯಾಗಿ ಪ್ರಯಾಣಿಸಿದ ಕೊಹ್ಲಿ ಹಾಗೂ ಹೆಡ್ಕೋಚ್ ಗಂಭೀರ್, ಒಟ್ಟಾಗಿಯೇ ಕಾನ್ಪುರ ಏರ್ಪೊರ್ಟ್ನಲ್ಲಿ ಕಾಣಿಸಿಕೊಂಡ್ರು. ಅಲ್ಲದೇ ಅಕ್ಕಪಕ್ಕ ಕುಳಿತು ಕೊಹ್ಲಿ ಹಾಗೂ ಗಂಭೀರ್ ಗಾಲ್ಫ್ ಕಾರ್ಟ್ನಲ್ಲಿ ಜಾಲಿ ರೈಡ್ ಮಾಡಿದ್ರು. ಚೆಪಾಕ್ ಟೆಸ್ಟ್ ಪಂದ್ಯದ ವೇಳೆ ಕಿಂಗ್ ಕೊಹ್ಲಿ, ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಹೆಡ್ಕೋಚ್ ಗಂಭೀರ್ ಡ್ರೆಸ್ಸಿಂಗ್ ರೂಮ್ನಲ್ಲಿ ಜೊತೆಯಾಗಿ ಕೂತಿದ್ರು. ಈ ವೇಳೆ ವಿರಾಟ್ ಏನೋ ಜೋಕ್ ಕಟ್ ಮಾಡಿದ್ರು. ಅದನ್ನ ಕೇಳಿ ಗೌತಿ ನಕ್ಕು ನಕ್ಕು ಸುಸ್ತಾಗಿದ್ರು.
ಇದನ್ನೂ ಓದಿ:ಅಪರೂಪದ ಸೊಳ್ಳೆಯಿಂದ ಹರಡುತ್ತೆ ‘EEE’ ವೈರಸ್! ಎಚ್ಚರಿಕೆಯಿಂದಿರಿ ಎಂದಿದೆ ಸರ್ಕಾರ
ಡ್ರೆಸ್ಸಿಂಗ್ ರೂಮ್ನಲ್ಲಿ ಹೆಂಗೆ?
ಗಂಭೀರ್ ಟೀಮ್ ಇಂಡಿಯಾ ಹೆಡ್ಕೋಚ್ ಹುದ್ದೆಗೇರಿದ್ದೆ ತಡ, ವಿರಾಟ್ ಡ್ರೆಸ್ಸಿಂಗ್ ರೂಮ್ನಲ್ಲಿ ಗೌತಿ ಜೊತೆನೇ ಹೆಚ್ಚು ಟೈಮ್ ಸ್ಪೆಂಡ್ ಮಾಡ್ತಿದ್ದಾರೆ. ಶ್ರೀಲಂಕಾ ಪ್ರವಾಸದಲ್ಲಿ ಔಟ್ ಆದ ಬಳಿಕ ನೇರವಾಗಿ ಗಂಭೀರ್ ಬಳಿ ಹೋಗಿ ಕೊಹ್ಲಿ ಚರ್ಚಿಸ್ತಾ ಇದ್ರು.
ಕೊಹ್ಲಿ-ಗಂಭೀರ್ ನಗೆ ಬುಗ್ಗೆ
ಶ್ರೀಲಂಕಾ ವಿರುದ್ಧ ಸರಣಿ ವೇಳೆ ಟೀಮ್ ಇಂಡಿಯಾ ಆಟಗಾರರು ಗಂಭೀರವಾಗಿ ಸಿದ್ಧತೆ ನಡೆಸಿದ್ರು. ಈ ಟೈಮ್ನಲ್ಲಿ ಹೆಡ್ಕೋಚ್ ಗಂಭೀರ್, ಕೊಹ್ಲಿ ಬಳಿ ಬರ್ತಾರೆ. ಕೆಲ ಕಾಲ ಮಾತುಕತೆ ನಡೆಸ್ತಾರೆ. ಆಗ ಕೊಹ್ಲಿ ಮತ್ತೆ ಜೋಕ್ ಮಾಡ್ತಾರೆ. ಅದನ್ನ ಕೇಳಿ ತಡಿಯಲಾಗದೇ ಗಂಭಿರ್ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ರು. ಒಂದು ಟೈಮ್ನಲ್ಲಿ ಒಬ್ಬರನ್ನೊಬ್ರು ಕಂಡ್ರೆ ಕಿಂಗ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಉರಿದು ಬೀಳ್ತಿದ್ರು. ಈಗ ನೋಡಿ ಇಬ್ಬರ ಬಾಂಡಿಂಗ್ ಹೇಗಿದೆ ಅನ್ನೋದನ್ನ. ಅದಕ್ಕೆ ಹೇಳೋದು ಕಾಲ ಎಲ್ಲವನ್ನೂ ಬದಲಿಸುತ್ತೆ, ಎಲ್ಲರನ್ನ ಬದಲಿಸುತ್ತೆ ಅಂತ.
ಇದನ್ನೂ ಓದಿ:RCBಗೆ ಪಂತ್ ಕ್ಯಾಪ್ಟನ್ ಆಗಿ ಬರುವುದು ಕೊಹ್ಲಿಗೆ ಇಷ್ಟ ಇಲ್ವಾ.. ಅಭಿಮಾನಿ ವಿರುದ್ಧ ರಿಷಬ್ ಗರಂ ಆಗಿದ್ದೇಕೆ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್