newsfirstkannada.com

ಕೊಹ್ಲಿ, ರೋಹಿತ್​​ ಟಿ20 ಕ್ರಿಕೆಟ್​ ನಿವೃತ್ತಿ ಘೋಷಣೆಗೆ ಗಂಭೀರ್​​​ ಕಾರಣ.. ಏನಿದು ಹೊಸ ಟ್ವಿಸ್ಟ್​?

Share :

Published June 30, 2024 at 6:43pm

Update June 30, 2024 at 6:44pm

    ಇತ್ತೀಚೆಗೆ ನಡೆದ ಬಹುನಿರೀಕ್ಷಿತ 2024ರ ಟಿ20 ವಿಶ್ವಕಪ್​ ಫೈನಲ್ ಮ್ಯಾಚ್​​​..!

    ಟಿ20 ವಿಶ್ವಕಪ್​ ಫೈನಲ್​ನಲ್ಲಿ ಸೌತ್​ ಆಫ್ರಿಕಾ ವಿರುದ್ಧ ಗೆದ್ದ ಟೀಮ್​ ಇಂಡಿಯಾ

    ಟ್ರೋಫಿ ಗೆದ್ದ ಬೆನ್ನಲ್ಲೇ ಟಿ20 ಕ್ರಿಕೆಟ್​ಗೆ ಗುಡ್​ ಬೈ ಹೇಳಿದ ಕೊಹ್ಲಿ, ರೋಹಿತ್​​

2024ರ ಟಿ20 ವಿಶ್ವಕಪ್​ ಗೆದ್ದ ಬೆನ್ನಲ್ಲೇ ಸಾಲು ಸಾಲು ಟೀಮ್​ ಇಂಡಿಯಾದ ಸ್ಟಾರ್​ ಆಟಗಾರರು ಈ ಫಾರ್ಮೇಟ್​​ಗೆ ಗುಡ್​ ಬೈ ಹೇಳುತ್ತಿದ್ದಾರೆ. ನಿನ್ನೆಯಷ್ಟೇ ಟೀಮ್​ ಇಂಡಿಯಾ ದಿಗ್ಗಜ ವಿರಾಟ್​ ಕೊಹ್ಲಿ ಮತ್ತು ಕ್ಯಾಪ್ಟನ್​ ರೋಹಿತ್​ ಶರ್ಮಾ ಅಂತರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ಗುಡ್​ ಬೈ ಹೇಳಿದ್ರು. ಈಗ ಜಡೇಜಾ ಟಿ20 ಕ್ರಿಕೆಟ್​ನಿಂದ ನಿವೃತ್ತಿಯಾಗಿದ್ದಾರೆ. ಇಷ್ಟು ಬೇಗ ಸೀನಿಯರ್ಸ್​​​ ಟಿ20 ಫಾರ್ಮೇಟ್​ನಿಂದ ರಿಟೈರ್​ ಆಗಲು ಕಾರಣವೇನು ಅನ್ನೋ ಚರ್ಚೆ ಶುರುವಾಗಿದೆ.

ಮೂಲಗಳ ಪ್ರಕಾರ ಟೀಮ್​ ಇಂಡಿಯಾ ಮುಖ್ಯ ಕೋಚ್​ ಸ್ಥಾನದಲ್ಲಿ ರಾಹುಲ್​ ದ್ರಾವಿಡ್​ ಅವರು ಕೆಳಗಿಳಿಯುತ್ತಿದ್ದಾರೆ. ಇವರ ಸ್ಥಾನಕ್ಕೆ ಗೌತಮ್​ ಗಂಭೀರ ಕೋಚ್​​ ಆಗಿ ಬರಲಿದ್ದಾರೆ. ಅಷ್ಟೇ ಮೂರು ಫಾರ್ಮೇಟ್​ಗೂ ಪ್ರತ್ಯೇಕ ಆಟಗಾರರನ್ನು ಆಯ್ಕೆ ಮಾಡೋ ಪ್ಲಾನ್​​ ಗಂಭೀರ್​ ಅವರದ್ದು. ಜತೆಗೆ ಕೊಹ್ಲಿ, ರೋಹಿತ್​ ವೈಟ್​​ ಬಾಲ್​ ಕ್ರಿಕೆಟ್​ನಿಂದ ಹೊರ ಹೋಗಬೇಕು ಅನ್ನೋ ಡಿಮ್ಯಾಂಡ್​ ಕೂಡ ಇದೆಯಂತೆ. ಹಾಗಾಗಿ ರೋಹಿತ್​​, ಕೊಹ್ಲಿ ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಖುದ್ದು ಕ್ಯಾಪ್ಟನ್​ ರೋಹಿತ್​ ಶರ್ಮಾ ಕೂಡ ಪ್ರತಿಕ್ರಿಯೆ ಕೊಟ್ಟಿದ್ದಾರೆ. ನಾನು ಟಿ20 ಕ್ರಿಕೆಟ್​ ಫಾರ್ಮೆಟ್​ನಿಂದ ರಿಟೈರ್​ ಆಗೋ ಯೋಚಕೆ ಮಾಡಿರಲಿಲ್ಲ. ಆದರೆ, ಸಂದರ್ಭ ಹಾಗೇ ಮಾಡಿಬಿಡ್ತು. ಟಿ20 ವಿಶ್ವಕಪ್​​ ಗೆಲ್ಲುವುದಕ್ಕಿಂತ ಖುಷಿ ವಿಚಾರ ಮತ್ತೊಂದಿಲ್ಲ. ಹಾಗಾಗಿ ಟಿ20 ಕ್ರಿಕೆಟ್​ ಫಾರ್ಮೆಟ್​ಗೆ ಗುಡ್​ ಬೈ ಹೇಳಿದ್ದೇನೆ ಎಂದು ಬೇಸರ ಹೊರಹಾಕಿದ್ರು. ಜತೆಗೆ ಮುಂದೆ ಐಪಿಎಲ್​ ಆಡುವುದಾಗಿ ಹೇಳಿದ್ರು. ಹಾಗಾಗಿ ಐಪಿಎಲ್​ ಆಡೋಕೆ ರೆಡಿ ಇರೋ ಇವರು ಅಂತರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಲು ಗಂಭೀರ್​​​ ಕಾರಣ ಅನ್ನೋ ಟಾಕ್​ ಕೂಡ ಇದೆ.

ಇದನ್ನೂ ಓದಿ: ಕ್ರಿಕೆಟ್​ ನಿವೃತ್ತಿ ಬೆನ್ನಲ್ಲೇ ಗಂಭೀರ್​​ ವಿರುದ್ಧ ರೋಹಿತ್​​​ ಬಹಿರಂಗ ಅಸಮಾಧಾನ.. ಅಂಥದ್ದೇನಾಯ್ತು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕೊಹ್ಲಿ, ರೋಹಿತ್​​ ಟಿ20 ಕ್ರಿಕೆಟ್​ ನಿವೃತ್ತಿ ಘೋಷಣೆಗೆ ಗಂಭೀರ್​​​ ಕಾರಣ.. ಏನಿದು ಹೊಸ ಟ್ವಿಸ್ಟ್​?

https://newsfirstlive.com/wp-content/uploads/2024/06/DRAVID-KOHLI-ROHIT.jpg

Load More