newsfirstkannada.com

ICC Ranking: ಕೊಹ್ಲಿ, ರೋಹಿತ್​​ಗೆ ರೆಸ್ಟ್​​ ಕೊಟ್ಟು ತಪ್ಪು ಮಾಡಿದ ಟೀಂ ಇಂಡಿಯಾ; ಇಬ್ಬರಿಗೂ ಎಷ್ಟನೇ ಸ್ಥಾನ?

Share :

02-08-2023

    ಐಸಿಸಿ ಒನ್​​ಡೇ ಱಂಕಿಂಗ್​​ ರಿಲೀಸ್​​

    ಕೊಹ್ಲಿ, ರೋಹಿತ್​ಗೆ ಎಷ್ಟನೇ ಸ್ಥಾನ?

    ಇಶಾನ್​​ ಕಿಶನ್​​​ಗೆ ಗುಡ್​ನ್ಯೂಸ್​​..!

ವೆಸ್ಟ್​​ ಇಂಡೀಸ್​ ವಿರುದ್ಧ 3ನೇ ಪಂದ್ಯದಲ್ಲಿ 200 ರನ್​​ಗಳಿಂದ ದಾಖಲೆ ಗೆಲುವು ಸಾಧಿಸಿದ ಟೀಂ ಇಂಡಿಯಾ ಏಕದಿನ ಸರಣಿ ವಶಪಡಿಸಿಕೊಂಡ ಬೆನ್ನಲ್ಲೇ ಐಸಿಸಿ ಱಂಕಿಂಗ್​ ಪ್ರಕಟವಾಗಿದೆ. ಸದ್ಯ ಪ್ರಕಟವಾದ ಐಸಿಸಿ ಱಂಕಿಂಗ್​​ನಲ್ಲಿ ಟೀಂ ಇಂಡಿಯಾದ ಕ್ಯಾಪ್ಟನ್​ ರೋಹಿತ್​ ಶರ್ಮಾ, ಮಾಜಿ ನಾಯಕ ವಿರಾಟ್​​ ಕೊಹ್ಲಿ ಕುಸಿತ ಕಂಡಿದ್ದಾರೆ. ರೋಹಿತ್​ ಅಂತೂ ಟಾಪ್​​ ಟೆನ್​​ನಿಂದಲೇ ಔಟ್​ ಆಗಿದ್ದಾರೆ.

ಕಿಂಗ್​ ಕೊಹ್ಲಿ 8ನೇ ಱಂಕಿಂಗ್​​ನಿಂದ 9ನೇ ಸ್ಥಾನಕ್ಕೆ ಕುಸಿದರೆ, ಕ್ಯಾಪ್ಟನ್​ ರೋಹಿತ್​ ಶರ್ಮಾ ಟಾಪ್​​ ಟೆನ್​​ನಿಂದ 11ನೇ ಸ್ಥಾನಕ್ಕೆ ಹಿಂಬಡ್ತಿ ಪಡೆದಿದ್ದಾರೆ. ಸೌತ್​ ಆಫ್ರಿಕಾದ ಸ್ಟಾರ್​ ಪ್ಲೇಯರ್​​​ ಕ್ವಿಂಟನ್ ಡಿ ಕಾಕ್, ಸ್ಟೀವನ್ ಸ್ಮಿತ್ ಇತ್ತೀಚೆಗೆ ಒನ್​​ ಡೇ ಕ್ರಿಕೆಟ್​ ಆಡದಿದ್ರೂ ಱಂಕಿಂಗ್​ನಲ್ಲಿ ಮೇಲಕ್ಕೇರಿದ್ದಾರೆ.

ಇತ್ತೀಚೆಗೆ ನಡೆದ ವಿಂಡೀಸ್​ ವಿರುದ್ಧದ ಏಕದಿನ ಸರಣಿಯ 2 ಪಂದ್ಯಗಳಲ್ಲಿ ಟೀಂ ಇಂಡಿಯಾದ ಪರ ಕ್ಯಾಪ್ಟನ್​​ ರೋಹಿತ್​ ಶರ್ಮಾ, ಮಾಜಿ ನಾಯಕ ಕೊಹ್ಲಿ ಇಬ್ಬರು ಆಡಲಿಲ್ಲ. ಸದ್ಯದಲ್ಲೇ ನಡೆಯಲಿರೋ ವಿಶ್ವಕಪ್​​ಗಾಗಿ ಟೀಂ ಇಂಡಿಯಾ ಸ್ಟ್ರೆಂಥ್​​​ ಹೆಚ್ಚಿಸಲು ಯುವ ಆಟಗಾರರಿಗೆ ಅವಕಾಶ ನೀಡಿತ್ತು. ಹೀಗಾಗಿ ಕೊಹ್ಲಿ, ರೋಹಿತ್​ ಇಬ್ಬರಿಗೂ ರೆಸ್ಟ್​ ಕೊಡಲಾಗಿತ್ತು. ಇದರ ಪರಿಣಾಮ ಇಬ್ಬರು ಱಂಕಿಂಗ್​​ನಲ್ಲಿ ಹಿಂದೆ ಬಿದ್ದಿದ್ದಾರೆ.

ಇನ್ನು, ಇಶಾನ್​​ ಕಿಶನ್​ ಮತ್ತು ಕುಲದೀಪ್ ಯಾದವ್ ಇಬ್ಬರು ವಿಂಡೀಸ್​ ವಿರುದ್ಧದ ಸೀರೀಸ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ರು. ಹೀಗಾಗಿ ಕುಲದೀಪ್ ಯಾದವ್ ಏಕದಿನ ಬೌಲರ್‌ಗಳ ಪಟ್ಟಿಯಲ್ಲಿ ಎಂಟು ಸ್ಥಾನ ಮೇಲಕ್ಕೇರಿ 14ನೇ ಸ್ಥಾನಕ್ಕೆ ತಲುಪಿದ್ದಾರೆ. ಇಶಾನ್ ಕಿಶನ್ 15 ಸ್ಥಾನಗಳ ಜಿಗಿತ ಕಂಡು ಏಕದಿನ ಬ್ಯಾಟಿಂಗ್‌ನಲ್ಲಿ 45ನೇ ಸ್ಥಾನ ತಲುಪಿದ್ದಾರೆ.

ICC Ranking: ಕೊಹ್ಲಿ, ರೋಹಿತ್​​ಗೆ ರೆಸ್ಟ್​​ ಕೊಟ್ಟು ತಪ್ಪು ಮಾಡಿದ ಟೀಂ ಇಂಡಿಯಾ; ಇಬ್ಬರಿಗೂ ಎಷ್ಟನೇ ಸ್ಥಾನ?

https://newsfirstlive.com/wp-content/uploads/2023/08/Kohli_Rohit_Team-India.jpg

Load More