ನಾಳೆಯಿಂದ ವಿಂಡೀಸ್ ವಿರುದ್ಧದ ಏಕದಿನ ಸರಣಿ ಶುರು
ಬಾರ್ಬಡೋಸ್ ಕೆನ್ಸಿಂಗ್ಟನ್ ಓವಲ್‌ನಲ್ಲಿ ಮೊದಲ ಪಂದ್ಯ
ಹಲವು ದಾಖಲೆಗಳ ಮೇಲೆ ರೋಹಿತ್, ವಿರಾಟ್ ಕಣ್ಣು..!
ಇತ್ತೀಚೆಗೆ ನಡೆದ ಟೆಸ್ಟ್ ಸರಣಿಯಲ್ಲಿ ಗೆದ್ದು ಬೀಗಿದ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಟೂರ್ನಿ ಗೆಲ್ಲಲು ಮುಂದಾಗಿದೆ. ನಾಳೆಯಿಂದಲೇ ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ವಿಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಶುರುವಾಗಲಿದೆ. ಸದ್ಯದಲ್ಲೇ ನಡೆಯೋ 2023 ಐಸಿಸಿ ಏಕದಿನ ವಿಶ್ವಕಪ್ ದೃಷ್ಟಿಕೋನದಿಂದ ಈ ಟೂರ್ನಿ ಮಹತ್ವದ್ದಾಗಿದೆ. ಇನ್ನೊಂದೆಡೆ ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಕ್ಯಾಪ್ಟನ್ ರೋಹಿತ್ ಶರ್ಮಾ ಹೊಸ ದಾಖಲೆಗಳ ಮೇಲೆ ಕಣ್ಣಿಟ್ಟಿದ್ದಾರೆ.
ಸಚಿನ್ ದಾಖಲೆ ಮುರಿಯಲಿದ್ದಾರೆ ವಿರಾಟ್..!
ಏಕದಿನ ಕ್ರಿಕೆಟ್‌ನಲ್ಲಿ 13 ಸಾವಿರ ರನ್ ಪೂರೈಸಲು ಕೊಹ್ಲಿಗೆ ಕೇವಲ 102 ರನ್ ಬೇಕು. ಒಂದು ವೇಳೆ ಕೊಹ್ಲಿ 102 ರನ್ ಗಳಿಸಿ 13 ಸಾವಿರ ರನ್ ಪೂರೈಸಿದರೆ ಕೊಹ್ಲಿ ಮತ್ತೊಂದು ದಾಖಲೆ ಸೃಷ್ಟಿಸಲಿದ್ದಾರೆ. 13 ಸಾವಿರಕ್ಕೂ ಹೆಚ್ಚು ರನ್ ಪೂರೈಸಿದ ವಿಶ್ವದ 5ನೇ ಮತ್ತು ಸಚಿನ್ ನಂತರ ಭಾರತದ 2ನೇ ಬ್ಯಾಟರ್ ಆಗಲಿದ್ದಾರೆ.
ಸಚಿನ್ 321 ಇನ್ನಿಂಗ್ಸ್‌ಗಳಲ್ಲಿ 13,000 ರನ್ ಗಳಿಸಿದರು. ಒಂದು ವೇಳೆ ಕೊಹ್ಲಿ ಈ ಸೀರೀಸ್ನಲ್ಲಿ 102 ರನ್ ಗಳಿಸಿದರೆ ಏಕದಿನ ಕ್ರಿಕೆಟ್‌ನಲ್ಲಿ 13,000 ರನ್‌ಗಳ ಮೈಲುಗಲ್ಲು ಸ್ಥಾಪಿಸಿದ ಅತ್ಯಂತ ವೇಗದ ಬ್ಯಾಟರ್ ಆಗಲಿದ್ದಾರೆ. ಈ ಮೂಲಕ ಕೊಹ್ಲಿ ಭಾರತದ ಲೆಜೆಂಡ್ ಸಚಿನ್ ದಾಖಲೆ ಮುರಿಯಲಿದ್ದಾರೆ.
ಹೊಸ ದಾಖಲೆ ನಿರ್ಮಿಸಲಿರುವ ರೋಹಿತ್
ಟೀಂ ಇಂಡಿಯಾದ ಹಾಲಿ ಕ್ಯಾಪ್ಟನ್ ರೋಹಿತ್ ಶರ್ಮಾಗೆ ಏಕದಿನ ಕ್ರಿಕೆಟ್‌ನಲ್ಲಿ 10,000 ರನ್ ಪೂರೈಸಲು 175 ರನ್ ಬೇಕಿದೆ. ಒಂದು ವೇಳೆ ರೋಹಿತ್ 175 ರನ್ ಬಾರಿಸಿದರೆ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 10,000 ರನ್ ಗಳಿಸಿದ ಕೊಹ್ಲಿ ನಂತರದ ಎರಡನೇ ಬ್ಯಾಟರ್ ಆಗಲಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್