newsfirstkannada.com

ಟೀಕಿಸಿದವರಿಗೆ ಬ್ಯಾಟ್​​ನಿಂದಲೇ ಉತ್ತರ ಕೊಡ್ತಾರೆ ಕೊಹ್ಲಿ! ವಿರಾಟ್​ನ ಸಕ್ಸಸ್​ ಹಿಂದಿರುವ ಸೀಕ್ರೆಟ್​​ ಇದೇನಾ?

Share :

25-05-2023

    ಕೊಹ್ಲಿ 15 ವರ್ಷಗಳ ಸಕ್ಸಸ್​ ಹಿಂದಿದೆ ಮೇನ್ ರೀಸನ್ಸ್

    ಟೀಕಿಸಿದವರಿಗೆ ಟಕ್ಕರ್​ ಕೊಡೋದೆ ಕೊಹ್ಲಿ ಖದರ್​.!

    ಫಿಟ್​ನೆಸ್​​ ಮಾತ್ರವಲ್ಲ.. ಮೆಂಟಲಿ ಕೂಡ ಕೊಹ್ಲಿ ಸ್ಟ್ರಾಂಗ್​..!

ಈ ಸೀಸನ್​ನ ಐಪಿಎಲ್​ ಆರಂಭಕ್ಕೂ ಮುನ್ನ ಟಿ20 ಫಾರ್ಮೆಟ್​​ಗೆ ಕೊಹ್ಲಿ ಸೂಟ್​ ಆಗ್ತಾರಾ ಅನ್ನೋ ಪ್ರಶ್ನೆ ಎದ್ದಿತ್ತು. ಟೂರ್ನಿ ಆರಂಭವಾದ ಮೇಲೆ ವಿರಾಟ್​​ ಚುಟುಕು ಫಾರ್ಮೆಟ್​​ಗೆ ಗುಡ್​​ ಬೈ ಹೇಳೋದೆ ಬೆಸ್ಟ್​​ ಅಂದಿದ್ರು. ಆದ್ರೀಗ ಅಂದು ಟೀಕಿಸಿದವರೆಲ್ಲಾ ಬಾಯ ಮೇಲೆ ಬೆರಳಿಟ್ಟಿದ್ದಾರೆ. ಎರಡೇ ಇನ್ನಿಂಗ್ಸ್​​​ ಎಲ್ಲಾ ಪ್ರಶ್ನೆಗಳಿಗೆ ಆನ್ಸರ್​ ಕೊಟ್ಟಿದೆ.

ಇಂಡಿಯನ್​ ಪ್ರೀಮಿಯರ್​​ ಲೀಗ್​ ಟೂರ್ನಿ ಅಂತಿಮ ಘಟ್ಟ ತಲುಪಿದೆ. ಈ ಸಲ ಕಪ್​ ನಮ್ದೇ ಅಂತಾ ಅಭಿಯಾನ ಆರಂಭಿಸಿದ್ದ ಆರ್​​ಸಿಬಿ ಪಡೆ ಸೋತು ಟೂರ್ನಿಯಿಂದ ಹೊರಬಿದ್ದಾಗಿದೆ. ತಂಡದ ಮೇನ್​ ಪಿಲ್ಲರ್​​ ಕಿಂಗ್​ ಕೊಹ್ಲಿ, ಇದೀಗ ಇಂಗ್ಲೆಂಡ್​​ ಫ್ಲೈಟ್​​ ಹತ್ತಿದ್ದೂ ಆಗಿದೆ. ಆದ್ರೂ, ಐಪಿಎಲ್​ ಜಗತ್ತಿನಲ್ಲಿ ಕಿಂಗ್​ ಕೊಹ್ಲಿಯ ಗುಂಗುಆವರಿಸಿದೆ.

ಈ ಸೀಸನ್​ನ ಆರಂಭಕ್ಕೂ ಮುನ್ನ ಕೊಹ್ಲಿಯನ್ನ ಟಿ20 ಫಾರ್ಮೆಟ್​ನಿಂದ ಕೈ ಬಿಡೋ ಚರ್ಚೆ ನಡೆದಿತ್ತು. ಟೂರ್ನಿಯ ಮಧ್ಯದಲ್ಲಿ ಸ್ಲೋ ಬ್ಯಾಟಿಂಗ್​ ನಡೆಸಿದ ಕಾರಣಕ್ಕೆ ಟಿ20ಗೆ ಗುಡ್​ ಬೈ ಹೇಳೋದೆ ಬೆಸ್ಟ್​ ಅಂತಾ ಬಹಳಷ್ಟು ಮಂದಿ ಹೇಳಿದ್ರು. ಈ ಎಲ್ಲಾ ಟೀಕೆಗಳಿಗೆ ಎರಡೇ ಎರಡು ಇನ್ನಿಂಗ್ಸ್​ನಿಂದಲೇ ಕೊಹ್ಲಿ ಆನ್ಸರ್​ ಕೊಟ್ರು.

ಕೊಹ್ಲಿ ಕ್ರಿಕೆಟ್​ ಜಗತ್ತಿನಲ್ಲಿ ಸಕ್ಸಸ್​​ನ ಪೀಕ್​ನಲ್ಲಿದ್ದಾಗ ರಾಜವೈಭೋಗವನ್ನೇ ಅನುಭವಿಸಿದ್ರು. ಆದ್ರೆ, ಕಳೆದ ಕೆಲ ತಿಂಗಳ ಹಿಂದೆ ವೈಫಲ್ಯದ ಸುಳಿಗೆ ಸಿಲುಕಿದ್ದಾಗ ಅನುಭವಿಸಿದ್ದು ಅಕ್ಷರಶಃ ನರಕ. ಇಷ್ಟೇ ಅಲ್ಲ, ಸುಮಾರು 15 ವರ್ಷಗಳ ಕರಿಯರ್​ನಲ್ಲಿ ಅದೆಷ್ಟೋ ಟೀಕೆಗಳನ್ನ ಅನುಭವಿಸಿದ್ದಾರೆ. ಈ ಬಾರಿಯ ಐಪಿಎಲ್​ ವೇಳೆಯೂ ಆಗಿದ್ದು ಅದೇ.

ಆದ್ರೆ, ಕೊಹ್ಲಿ ಇವುಗಳಿಗ್ಯಾವತ್ತೂ ತಲೆ ಕೆಡಿಸಿಕೊಂಡಿಲ್ಲ. ಮುಂದೆ ಮುಂದೆ ಸಾಗಿ ಲೆಜೆಂಡ್​ ಆಗಿ ಗುರುತಿಸಿಕೊಂಡಿದ್ದಾರೆ. ಅಷ್ಟಕ್ಕೂ ಕೊಹ್ಲಿಯ ಈ ಸಕ್ಸಸ್​​ಗೆ ಕಾರಣವಾಗಿದ್ದೇನು..?

ವಿರಾಟ್​ ಕೊಹ್ಲಿ ಜೀವನದ ಮೊದಲ ಮೊಟಿವೇಷನ್​ ಇದೇ.. ಎಲ್ಲಿ ಅವಮಾನವಾಗುತ್ತೋ ಅಲ್ಲೇ ಎದ್ದು ನಿಲ್ಲಬೇಕು ಅನ್ನೋದು ಕೊಹ್ಲಿ ಥೇರಿ.. ಯಾರೇ ಟೀಕಿಸಿದ್ರೂ, ಹೀಯಾಳಿಸಿದ್ರೂ.. ಮೇಲ್ನೋಟಕ್ಕೆ ಕೊಹ್ಲಿ ನೆಗ್ಲೆಟ್​ ಮಾಡ್ತಿದ್ದಾರೆ ಅನ್ನೋವಂತೆ ಕಾಣುತ್ತೆ. ಆದ್ರೆ, ವಿರಾಟ್​ ಕೊಹ್ಲಿ ಮೈಂಡ್​ನಲ್ಲಿ ಹಾಗೂ ಮನಸ್ಸಲ್ಲಿ ಮಾತ್ರ ತೀರುಗೇಟು ನೀಡೋ ಛಲ ಇದ್ದೇ ಇರುತ್ತೆ. ಇದಕ್ಕೆ ಬ್ಯಾಟ್​ನಿಂದಲೇ ಉತ್ತರ ನೀಡ್ತಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್.. ಪ್ರಸಕ್ತ ಆವೃತ್ತಿಯಲ್ಲಿ ವಿರಾಟ್​ ಕೊಹ್ಲಿಯ ಬ್ಯಾಟಿಂಗ್ ಆರ್ಭಟ..

ಕೊಹ್ಲಿ ಸಕ್ಸಸ್​​ನಲ್ಲಿ ಫಿಟ್ನೆಸ್​ ಬಹುಮುಖ್ಯ ಪಾತ್ರವನ್ನೇ ವಹಿಸಿದೆ. 34ರ ವಯಸ್ಸಲ್ಲೂ ಯುವ ಆಟಗಾರರನ್ನ ನಾಚಿಸುವತ ಫಿಟ್ನೆಸ್ ಹೊಂದಿರುವ ಕೊಹ್ಲಿ, ಫಿಟ್​​ನೆಸ್​ನಲ್ಲಿ ಮಾತ್ರವೇ ಅಲ್ಲ. ಮೆಂಟಲಿ ಕೂಡ ವೆರಿ ವೆರಿ ಸ್ಟ್ರಾಂಗ್.. ಇನ್​ಫ್ಯಾಕ್ಟ್​_ ವೈಫಲ್ಯದ ವೇಳೆ ಕುಗ್ಗದ ಮನಸ್ಥಿತಿ, ಕಾಲೆಳೆದರೂ ಕೇರ್​ ಮಾಡದ ಕೊಹ್ಲಿ ಮೆಂಟಾಲಿಟಿ ನಿಜಕ್ಕೂ ಅದ್ಬುತ. ಇದಕ್ಕೆ ಬೆಸ್ಟ್ ಎಕ್ಸಾಂಪಲ್_  3 ವರ್ಷಗಳ ಸತತ ವೈಫಲ್ಯ ನಡುವೆಯೂ ಕೊಹ್ಲಿ, ಕಮ್​​ಬ್ಯಾಕ್​ ಮಾಡಿದ ಪರಿ. ಅಷ್ಟೇ ಅಲ್ಲ.! ಕೊಹ್ಲಿ ಮೆಂಟಲಿ ಸ್ಟ್ರಾಂಗ್ ಇರೋದೇ ಸಕ್ಸಸ್ ಹಿಂದಿನ ಸಿಕ್ರೇಟ್​ ಅನ್ನೋದನ್ನ ಮರೆಯುವಂತಿಲ್ಲ.

ವಿರಾಟ್​ ಕೊಹ್ಲಿಗೆ ತೀರದ ರನ್​​ ದಾಹ..!

ಆನ್​​ಫೀಲ್ಡ್​ನಲ್ಲಿ ರನ್​ ಸುನಾಮಿಯೇ ಸೃಷ್ಟಿಸಿರುವ ವಿರಾಟ್​, ರನ್​​​​ಶಿಖರವನ್ನೇ ಕಟ್ಟಿದ್ದಾರೆ. ಮಾಡ್ರನ್ ಡೇ ಕ್ರಿಕೆಟ್​​​ನ ದೇವರಾಗಿ ರೂಪುಗೊಂಡಿದ್ದಾರೆ. ಟೀಮ್ ಇಂಡಿಯಾ ಪರ 25 ಸಾವಿರಕ್ಕಿಂತ ಹೆಚ್ಚು ರನ್ ಗಳಿಸಿರೋ ಕೊಹ್ಲಿ, ಐಪಿಎಲ್​ನಲ್ಲಿ 7 ಸಾವಿರ ಗಡಿ ದಾಟಿದ್ದಾರೆ. ಇಷ್ಟೇಲ್ಲಾ ರನ್​ ಗುಡ್ಡೆ ಹಾಕಿರೋ ಕೊಹ್ಲಿಗೆ, ಇಂದಿಗೂ ರನ್​ ಗಳಿಸೋ ಹಸಿವು ಕಡಿಮೆಯಾಗಿಲ್ಲ. ತಂಡಕ್ಕಾಗಿ ಏನಾದರೂ ಮಾಡಬೇಕೆಂಬ ಕಮಿಟ್​ಮೆಂಟ್​​​ ರನ್​​ ಗಳಿಸುವ ಹಸಿವನ್ನ ದಿನೇ ದಿನೇ ಹೆಚ್ಚಿಸುತ್ತಲೇ ಇದೆ.

ಅಸಾಧ್ಯವಾದುದನ್ನ ಸಾಧಿಸೋ ಛಲ.!

ಹೌದು! ಸಚಿನ್ ಮಾಡಿರೋ ಅರ್ಧದಷ್ಟು ದಾಖಲೆ ಬ್ರೇಕ್ ಮಾಡೋದು ಅಸಾಧ್ಯದ ಮಾತು ಎನ್ನಲಾಗಿತ್ತು. ಆಸ್ಟ್ರೇಲಿಯಾ, ಇಂಗ್ಲೆಂಡ್​​ನಂಥ ಬೌನ್ಸಿ ಟ್ರ್ಯಾಕ್​​ನಲ್ಲಿ ಭಾರತೀಯರು ರನ್​ ಗಳಿಸೋದು ಕಷ್ಟ ಎನ್ನಲಾಗ್ತಿತ್ತು. ಆದ್ರೆ, ಈ  ಅಸಾಧ್ಯ ಅನ್ನೋ ಮಾತು ವಿರಾಟ್​ಗೆ ಅನ್ವಯಿಸಲ್ಲ. ಯಾಕಂದ್ರೆ, ಅಸಾಧ್ಯವನ್ನ ಸಾಧಿಸಲೇಬೇಕೆಂಬ ಕೊಹ್ಲಿಯ ಛಲವೇ, ಇಂದು ವಿರಾಟ್​ ಕೊಹ್ಲಿಯನ್ನ ಛಲದಂಕಮಲ್ಲನಾಗಿ ರೂಪಿಸಿದೆ. ಇದಕ್ಕೆಲ್ಲಾ ಸಾಕ್ಷಿ ಕೊಹ್ಲಿಯ ಸಾಧನೆಗಳೇ ಆಗಿವೆ.

ಒಟ್ನಲ್ಲಿ..! ಅದೇನೇ ಆಗಲಿ, ಕೊಹ್ಲಿಯಲ್ಲಿರುವ ಸಾಧಿಸುವ ಛಲ, ಏನಾದರೂ ಮಾಡಬೇಕೆಂಬ ಹಸಿವೇ ಕೊಹ್ಲಿಯನ್ನ ಇಂದಿಗೂ ಸಕ್ಸಸ್​ ಟ್ರ್ಯಾಕ್​ನಲ್ಲಿ ಮುನ್ನಡೆಸುತ್ತಿದೆ ಅನ್ನೋದು ಅಕ್ಷರಶಃ ಸತ್ಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಕಿಸಿದವರಿಗೆ ಬ್ಯಾಟ್​​ನಿಂದಲೇ ಉತ್ತರ ಕೊಡ್ತಾರೆ ಕೊಹ್ಲಿ! ವಿರಾಟ್​ನ ಸಕ್ಸಸ್​ ಹಿಂದಿರುವ ಸೀಕ್ರೆಟ್​​ ಇದೇನಾ?

https://newsfirstlive.com/wp-content/uploads/2023/05/kohli-4.jpg

Load More