ಫಾಫ್ ಡುಪ್ಲೆಸಿಸ್ ಬಳಿಕ ಆರ್ಸಿಬಿ ತಂಡದ ಕ್ಯಾಪ್ಟನ್ ಯಾರು?
ಆರ್ಸಿಬಿ ಕ್ಯಾಪ್ಟನ್ಸಿಗೆ ಈ ಇಬ್ಬರು ನಡುವೆ ಭಾರೀ ಪೈಪೋಟಿ
ಕೊಹ್ಲಿ ಆಪ್ತ ಮತ್ತು ಕೆ.ಎಲ್ ರಾಹುಲ್ ಮಧ್ಯೆ ಬಿಗ್ ಫೈಟ್..!
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ಗೆ ಇನ್ನೂ 6 ತಿಂಗಳು ಬಾಕಿ ಇದೆ. ವರ್ಷದ ಕೊನೆಗೆ ನಡೆಯಲಿರೋ ಐಪಿಎಲ್ ಮೆಗಾ ಹರಾಜಿನಲ್ಲಿ ಬಲಿಷ್ಠ ಆಟಗಾರರ ಖರೀದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲಾನ್ ಮಾಡಿಕೊಂಡಿದೆ. ಈ ಮಧ್ಯೆ ಫಾಫ್ ಡುಪ್ಲೆಸಿಸ್ ಬಳಿಕ ಆರ್ಸಿಬಿ ಮುಂದಿನ ಕ್ಯಾಪ್ಟನ್ ಯಾರು ಅನ್ನೋ ಚರ್ಚೆ ಜೋರಾಗಿದೆ.
ಯೆಸ್, ಆರ್ಸಿಬಿ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ಗೆ ಈಗ 40 ವರ್ಷ. ಈ ಸೀಸನ್ ಆಡಿದ್ರೂ ಮುಂದಿನ 3 ವರ್ಷ ಫಾಫ್ ಆಡುವುದು ಕಷ್ಟ. ಹಾಗಾಗಿ ತನಗೆ ವಯಸ್ಸಾದ ಕಾರಣ ಫಾಫ್ ಐಪಿಎಲ್ಗೆ ನಿವೃತ್ತಿ ಘೋಷಿಸಲಿದ್ದಾರೆ. ಈ ಕಾರಣಕ್ಕೆ ಆರ್ಸಿಬಿ ತಂಡ ಹೊಸ ನಾಯಕನನ್ನು ಹುಡುಕಬೇಕಾಗಿದೆ.
ಸದ್ಯಕ್ಕೆ ಲಭ್ಯವಿರೋ ಮಾಹಿತಿ ಪ್ರಕಾರ ಆರ್ಸಿಬಿ ತಂಡದಲ್ಲಿರೋ ಕೊಹ್ಲಿ ಆಪ್ತ ರಜತ್ ಪಾಟಿದಾರ್ ಅವರಿಗೆ ನಾಯಕತ್ವ ಪಟ್ಟ ಕಟ್ಟಬಹುದು. ಇಲ್ಲದೆ ಹೋದಲ್ಲಿ ಕರ್ನಾಟಕದ ಹುಡುಗ ಲಕ್ನೋ ತಂಡದ ಕ್ಯಾಪ್ಟನ್ ಆಗಿರೋ ಕೆ.ಎಲ್ ರಾಹುಲ್ ಅವರನ್ನು ಆರ್ಸಿಬಿ ಕ್ಯಾಪ್ಟನ್ ಮಾಡಬಹುದು ಅನ್ನೋ ಮಾತುಗಳು ಕೇಳಿ ಬಂದಿವೆ.
ಕಳೆದ ಸೀಸನ್ನಲ್ಲಿ ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಮತ್ತು ಕೆ.ಎಲ್ ರಾಹುಲ್ ಮಧ್ಯೆ ಜೋರು ಗಲಾಟೆ ಆಗಿತ್ತು. ಕನ್ನಡಿಗ ರಾಹುಲ್ ಮುಂದಿನ ಸೀಸನ್ ವೇಳೆಗೆ ಲಕ್ನೋ ತೊರೆದು ಆರ್ಸಿಬಿಗೆ ಬರಲಿದ್ದಾರೆ ಎಂದು ವರದಿಯಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್