newsfirstkannada.com

×

ಕೊಹ್ಲಿ ಆಪ್ತನಿಗೆ ಬಂಪರ್​ ಆಫರ್​​.. ಇವರೇ ನೋಡಿ ಆರ್​​ಸಿಬಿ ಮುಂದಿನ ಕ್ಯಾಪ್ಟನ್​​!

Share :

Published October 13, 2024 at 4:03pm

Update October 13, 2024 at 4:05pm

    ವರ್ಷದ ಕೊನೆಗೆ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​​ ಮೆಗಾ ಆಕ್ಷನ್​!

    ಈ ಮುನ್ನ ಐಪಿಎಲ್​​ ತಂಡಗಳು ರೀಟೈನ್​ ಆಟಗಾರರ ಫೈನಲ್​​ ಮಾಡಬೇಕು

    ಫಾಫ್​ ಡುಪ್ಲೆಸಿಸ್​ ಬಳಿಕ ಆರ್​​​ಸಿಬಿ ತಂಡದ ನಾಯಕ ಯಾರಾಗಬಹುದು?

ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್​​ಗೆ ಇನ್ನೇನು 5 ತಿಂಗಳು ಮಾತ್ರ ಬಾಕಿ ಇದೆ. ಇನ್ನೆರಡು ತಿಂಗಳಲ್ಲಿ ಐಪಿಎಲ್​ ಮೆಗಾ ಹರಾಜು ನಡೆಯಲಿದೆ. ಇದಕ್ಕಾಗಿ ಎಲ್ಲಾ ಐಪಿಎಲ್ ಫ್ರಾಂಚೈಸಿ ತಂಡಗಳು ಭರ್ಜರಿ ತಯಾರಿ ಮಾಡಿಕೊಂಡಿವೆ. ಈಗಾಗಲೇ ಪ್ರತಿ ಐಪಿಎಲ್​ ತಂಡಕ್ಕೆ 6 ಆಟಗಾರರನ್ನು ರೀಟೈನ್​ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಇದರ ಮಧ್ಯೆ ಆರ್​​​ಸಿಬಿ ಫ್ಯಾನ್ಸ್​ಗೆ ಶಾಕಿಂಗ್​ ನ್ಯೂಸ್​ ಒಂದಿದೆ.

ಐಪಿಎಲ್ ಮೆಗಾ ಹರಾಜಿಗೆ ಮೊದಲು ಆರ್​​​ಸಿಬಿ ಅಗತ್ಯವಿರೋ ಆಟಗಾರರನ್ನು ಉಳಿಸಿಕೊಳ್ಳಲು ಪ್ಲಾನ್​ ಮಾಡಿಕೊಂಡಿದೆ. ಇದಕ್ಕೆ ಕಾರಣ ಅಕ್ಟೋಬರ್​​​ 31ನೇ ತಾರೀಕಿನ ಒಳಗೆ ರೀಟೈನ್​ ಲಿಸ್ಟ್​ ಬಿಸಿಸಿಐಗೆ ಸಲ್ಲಿಸಬೇಕಿದೆ. ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ ಆರ್​​ಸಿಬಿ ತಂಡದಿಂದ ಫಾಫ್​ ಡುಪ್ಲೆಸಿಸ್​ ಅವರನ್ನು ಕೈ ಬಿಡಲಾಗಿದೆ.

ಫಾಫ್​ ಡುಪ್ಲೆಸಿಸ್​ ಕೈ ಬಿಡಲು ಕಾರಣವೇನು?

ಕಳೆದ ಸೀಸನ್​​ನಲ್ಲಿ ಆರ್​​ಸಿಬಿ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​ ಹೇಳಿಕೊಳ್ಳುವಷ್ಟು ಪ್ರದರ್ಶನವೇನು ನೀಡಿಲ್ಲ. ತಾನು ಆಡಿದ 15 ಪಂದ್ಯಗಳಲ್ಲಿ ಫಾಫ್​ ಕೇವಲ 438 ರನ್​ ಗಳಿಸಿದ್ದಾರೆ. ಬ್ಯಾಟಿಂಗ್​ ಆವರೇಜ್​​​ 29 ಇದ್ದು, ಸ್ಟ್ರೈಕ್​ ರೇಟ್​​ 160 ಇದೆ. ಕೇವಲ 47 ಫೋರ್​​, 21 ಸಿಕ್ಸರ್​ ಸಿಡಿಸಿದ್ದಾರೆ. 4 ಪಂದ್ಯಗಳಲ್ಲಿ ಮಾತ್ರ ಅರ್ಧಶತಕ ಸಿಡಿಸಿದ್ದು, ಒಂದು ಪಂದ್ಯವೂ ಗೆಲ್ಲಿಸಿಲ್ಲ. ಕೇವಲ ಬ್ಯಾಟಿಂಗ್​ ಮಾತ್ರವಲ್ಲ ಆನ್​ಫೀಲ್ಡ್​ ಡಿಸಿಷನ್​ ತೆಗೆದುಕೊಳ್ಳುವುದರಲ್ಲೂ ಎಡವಿದ್ದು, ಇವರಿಗೆ ಆರ್​​ಸಿಬಿ ನಾಯಕತ್ವ ಸ್ಥಾನದಿಂದ ಕೆಳಗಿಳಿಸಿ ಎಂದು ಒತ್ತಡ ಹಾಕಲಾಗುತ್ತಿದೆ. ಫಾಫ್​ ಡುಪ್ಲೆಸಿಸ್​ಗೆ 40 ವರ್ಷ ಆಗಿದ್ದು, ಮುಂದಿನ ಸೀಸನ್​ಗೆ ರಿಟೈರ್​ ಆಗೋ ಸಾಧ್ಯತೆ ಕೂಡ ಇದೆ.

ರಜತ್​ ಪಾಟಿದಾರ್​ಗೆ ನಾಯಕತ್ವ

ಫಾಫ್​ ಡುಪ್ಲೆಸಿಸ್​ಗೆ 40 ವರ್ಷ ಆಗಿದೆ. ಹಾಗಾಗಿ ಎಲ್ಲಾ ಮಾದರಿ ಕ್ರಿಕೆಟ್​ಗೂ ಫಾಫ್​ ನಿವೃತ್ತಿ ಘೋಷಿಸೋ ಸಾಧ್ಯತೆ ಇದೆ. ಆರ್​​ಸಿಬಿ ತಂಡಕ್ಕೆ ಹೊಸ ಕ್ಯಾಪ್ಟನ್​ ಬೇಕಿದೆ. ಅದು ಲಾಂಗ್​ ಟರ್ಮ್​ ದೃಷ್ಟಿಯಿಂದ ರಜತ್​ ಪಾಟಿದಾರ್​ಗೆ ಕ್ಯಾಪ್ಟನ್ಸಿ ಪಟ್ಟ ನೀಡಲಾಗುವುದು ಎಂದು ವರದಿಯಾಗಿದೆ. ವಿದೇಶಿಗರಿಗೆ ಕ್ಯಾಪ್ಟನ್ಸಿ ನೀಡೋ ಬದಲು ಭಾರತದ ಯಂಗ್​ ಕ್ರಿಕೆಟರ್​ ರಜತ್​ ಪಾಟಿದಾರ್​ಗೆ ಬೆಂಗಳೂರು ಕ್ಯಾಪ್ಟನ್ಸಿ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಇದನ್ನೂ ಓದಿ: ರೀಟೈನ್​ ಲಿಸ್ಟ್​​ನಿಂದ ಸ್ಟಾರ್​ ಪ್ಲೇಯರ್​​ ಔಟ್​​; ಆರ್​​ಸಿಬಿ ತಂಡಕ್ಕೆ ಖ್ಯಾತ ಆಟಗಾರನಿಂದ ಬಂತು ಆನೆಬಲ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೊಹ್ಲಿ ಆಪ್ತನಿಗೆ ಬಂಪರ್​ ಆಫರ್​​.. ಇವರೇ ನೋಡಿ ಆರ್​​ಸಿಬಿ ಮುಂದಿನ ಕ್ಯಾಪ್ಟನ್​​!

https://newsfirstlive.com/wp-content/uploads/2024/03/Faf_Kohli_RCB.jpg

Load More