newsfirstkannada.com

Kohli: ಡೆಬ್ಯು ಮ್ಯಾಚ್​ ವೇಳೆ ನಡೆದಿತ್ತು ತಮಾಷೆಯ ಪ್ರಸಂಗ.. ಕೊಹ್ಲಿ ಅಂದು ಗಾಬರಿಗೊಂಡು ಸುಮ್ಮನಾಗಿದ್ರು!

Share :

29-06-2023

    ವಿರಾಟ್​ ಅಂತರಾಷ್ಟ್ರೀಯ ಕ್ರಿಕೆಟ್​​ಗೆ​​​​​ ಎಂಟ್ರಿಕೊಟ್ಟು 16 ವರ್ಷ

    ಕೊಹ್ಲಿ ನೆನಪಿನ ಬುತ್ತಿಯಲ್ಲಿವೆ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿ

    ಡೆಬ್ಯು​​ ಮ್ಯಾಚ್​ ವೇಳೆ ಕೊಹ್ಲಿ ಗಾಬರಿಯಿಂದಲೇ ಸ್ಮೈಲ್​ ಮಾಡಿದ್ರಂತೆ

ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್​​ಗೆ​​​​​ ಎಂಟ್ರಿಕೊಟ್ಟು 16 ವರ್ಷ ಕಳೆದಿವೆ. ಮರೆಯಲಾಗದ ಅದೆಷ್ಟೋ ನೆನಪುಗಳಿವೆ. ಆ ನೆನಪಿನ ಬುತ್ತಿಯಲ್ಲಿ ನೀವೆಂದು ಕೇಳಿರದ ಇಂಟ್ರೆಸ್ಟಿಂಗ್ ಸಂಗತಿ ಇಲ್ಲಿದೆ.

ಪ್ರತಿಯೊಬ್ಬ ಕ್ರಿಕೆಟಿಗನಿಗೆ ಡೆಬ್ಯು​​ ಮ್ಯಾಚ್​​ ಅಂದ್ರೆ ವೆರಿ ಮೆಮೊರೇಬಲ್​​​. ಏನನ್ನೂ ಮರೆತ್ರೂ ಆ ಪಂದ್ಯವನ್ನ ಮಾತ್ರ ಮರೆಯಲಾರರು. ಅಂತೆಯೇ ವಿರಾಟ್ ಕೊಹ್ಲಿಗೆ ಫಸ್ಟ್​​​​​ ಡೇ ವೆರಿ ಸ್ಪೆಷಲ್​​. ಯಾಕಂದ್ರೆ ಆ ದಿನ ಒಂದು ಸ್ವೀಟ್​ ಇನ್ಸಿಡೆಂಟ್​ ​ ನಡೆದಿದ್ದಂತೆ. ಅದು ಕ್ರಿಕೆಟ್ ದೇವರು ಸಚಿನ್​​ ತೆಂಡೂಲ್ಕರ್​​ ಎದುರಿನಲ್ಲಿ. ಆ ಕಥೆ ಕೇಳಲು ಸಖತ್​ ಇಂಟ್ರೆಸ್ಟಿಂಗ್ ಆಗಿದೆ.

ಅದು 2008ನೇ ಇಸವಿ..! ವಿರಾಟ್ ಕೊಹ್ಲಿ ಮೊದಲ ದಿನ ಡ್ರೆಸ್ಸಿಂಗ್ ರೂಮ್ ಶೇರ್ ಮಾಡಿಕೊಂಡಿದ್ರು. ಆಗ ಟೀಮ್ ಇಂಡಿಯಾದಲ್ಲಿ ಒಂದು ಆಚರಣೆ ಇತ್ತು. ಅದೇನಂದ್ರೆ ತಂಡಕ್ಕೆ ಹೊಸಬರು ಬಂದ್ರೆ ಹಿರಿಯ ಆಟಗಾರರು ಅವರ ತಮಾಷೆ ಮಾಡ್ತಿದ್ರು. ಮೊದಲ ದಿನ ಡ್ರೆಸ್ಸಿಂಗ್​ ರೂಮ್​​ಗೆ ಎಂಟ್ರಿಕೊಟ್ಟಿದ್ದ ಕೊಹ್ಲಿ ಸುಮ್ಮನೇ ಕೂತಿದ್ರಂತೆ. ಆಗ ಕೆಲ ಸಹ ಆಟಗಾರರು ಬಂದು ವಿರಾಟ್ ಕೊಹ್ಲಿ ಅವರಿಗೆ ಸಚಿನ್​ ಪಾದಗಳನ್ನ ಮುಟ್ಟಿ ಆಶೀರ್ವಾದ ಪಡೆಯಬೇಕು ಎಂದು ಹೇಳಿದ್ರು. ಕೂಡಲೇ ಕೊಹ್ಲಿ ಹೋಗಿ ಸಚಿನ್​​​​​​​​​​​​​ರ ಪಾದಗಳನ್ನ ಮುಟ್ಟಿ ನಮಸ್ಕರಿರ್ತಾರೆ. ಆಗ ಸಚಿನ್​​​​​ ನಿನಗೇನಾದ್ರು ಬೇಕಾ ಅಂತ ಕೇಳಿದ್ರಂತೆ. ಆಗ ಕೊಹ್ಲಿ ಗಾಬರಿಯಿಂದಲೇ ಸ್ಮೈಲ್​ ಮಾಡಿ ಸುಮ್ಮನಾಗ್ತಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Kohli: ಡೆಬ್ಯು ಮ್ಯಾಚ್​ ವೇಳೆ ನಡೆದಿತ್ತು ತಮಾಷೆಯ ಪ್ರಸಂಗ.. ಕೊಹ್ಲಿ ಅಂದು ಗಾಬರಿಗೊಂಡು ಸುಮ್ಮನಾಗಿದ್ರು!

https://newsfirstlive.com/wp-content/uploads/2023/06/Kohli-3-1.jpg

Load More