ಲಂಡನ್ಗೆ ಹೋದ್ರೂ ತಪ್ಪಲಿಲ್ಲ ಕೊಹ್ಲಿಗೆ ಕಾಟ..!
ಅಂದುಕೊಂಡಿದ್ದೆ ಒಂದು.. ಆಗ್ತಿರೋದೆ ಇನ್ನೊಂದು..!
ವಿರಾಟ್ ಕೊಹ್ಲಿ ಹಿಂದೆ ಇವ್ರು ಬಿದ್ದಿರೋದ್ಯಾಕೆ..?
ಕಿಂಗ್ ಕೊಹ್ಲಿ ಮಾರ್ಡನ್ ಕ್ರಿಕೆಟ್ನ ದೊರೆ ಮಾತ್ರವಲ್ಲ. ಜಾಹೀರಾತು ಲೋಕಕ್ಕೂ ವಿರಾಟನೇ ಸುಲ್ತಾನ. ಕೊಹ್ಲಿ ಇವ್ರನ್ನ ಬಿಟ್ರು, ಇವ್ರು ಕೊಹ್ಲಿಯನ್ನ ಬಿಡಲ್ಲ. ಕ್ರಿಕೆಟ್ನಿಂದ ದೂರ ಉಳಿದು. ಪ್ರೈವಸಿ ಬೇಕು ಅಂತಾ ಭಾರತವನ್ನೇ ಬಿಟ್ಟು, ವಿದೇಶದಲ್ಲಿ ಕೊಹ್ಲಿ ಬೀಡು ಬಿಟ್ಟಿದ್ದಾರೆ. ಇಲ್ಲೂ ವಿರಾಟ್ ಕೊಹ್ಲಿಯನ್ನ ಇವ್ರು ಬಿಟ್ಟಿಲ್ಲ. ಕೊಹ್ಲಿಗೆ ಸಖತ್ ಕಾಟ ಕೊಡ್ತಿದ್ದಾರೆ.
ಕ್ರಿಕೆಟ್ ಲೋಕದ ಅಧಿಪತಿ ವಿರಾಟ್ ಕೊಹ್ಲಿ, ಈ ವರ್ಷದ ಆರಂಭದಿಂದ ವಿದೇಶ ವಾಸಿ ಆಗ್ಬಿಟ್ಟಿದ್ದಾರೆ. ಕ್ರಿಕೆಟ್ ಇದ್ದಾಗ ಮಾತ್ರ ಭಾರತಕ್ಕೆ ಬರ್ತಾ ಇರೋ ಕೊಹ್ಲಿ, ಸರಣಿ ಅಥವಾ ಟೂರ್ನಿ ಮುಗಿದ್ರೆ ಸಾಕು ಲಂಡನ್ಗೆ ಶಿಫ್ಟ್ ಆಗ್ತಿದ್ದಾರೆ. ಈ ತಿಂಗಳ ಆರಂಭದಲ್ಲಿ ಲಂಡನ್ನಿಂದ ನೇರವಾಗಿ ಕೊಲಂಬೋಗೆ ಬಂದಿದ್ದ ಕೊಹ್ಲಿ ಲಂಕಾ ಎದುರು 3 ಪಂದ್ಯವನ್ನಾಡಿದ್ರು. ಅದ್ರ ಬೆನ್ನಲ್ಲೇ ಡೈರೆಕ್ಟ್ ಫ್ಲೈಟ್ ಏರಿ ಲಂಡನ್ಗೆ ಹಾರಿದ್ರು. ಟಿ20 ವಿಶ್ವಕಪ್ ಗೆದ್ದ ಬಳಿಕ ಭಾರತಕ್ಕೆ ಬಂದಾಗಲೂ ಇದೇ ಕಥೆ. ಸಂಭ್ರಮಾಚಾರಣೆ ಮುಗಿದ ಮರುದಿನವೇ ಬೆಳ್ಳಂಬೆಳಗ್ಗೆ ಮುಂಬೈನಿಂದ, ಲಂಡನ್ಗೆ ಹಾಡಿದ್ರು.
ಇದನ್ನೂ ಓದಿ:ತುಂಬಾ ವರ್ಷಗಳ ನಂತರ.. ಮತ್ತೆ ತಂಡ ಕೂಡಿಕೊಳ್ಳಲಿದ್ದಾರೆ RCB ಮೂವರು ಹಳೇ ಆಟಗಾರರು..!
ಕಿಂಗ್ ಕೊಹ್ಲಿಯ ವಿದೇಶ ವಾಸ್ತವ್ಯದ ಸೀಕ್ರೆಟ್ ಏನು?
ವಿರಾಟ್ ಕೊಹ್ಲಿಯ ಸದ್ಯದ ನಡೆಯನ್ನ ನೋಡಿದ ಮೇಲೆ ನಿಮ್ಮನ್ನೂ ಈ ಪ್ರಶ್ನೆ ಕಾಡದೇ ಇರಲ್ಲ. ವಿಶ್ವ ಕ್ರಿಕೆಟ್ ಲೋಕದ ಸುಲ್ತಾನ ವಿರಾಟ್ ಕೊಹ್ಲಿ ಸದ್ಯ ನೆಮ್ಮದಿಯ ಜೀವನದ ಹುಡುಕಾಟ ನಡೆಸ್ತಿದ್ದಾರೆ. ಪತ್ನಿ, ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಬೇಕು ಅನ್ನೋ ಏಕೈಕ ಕಾರಣಕ್ಕೆ ಭಾರತವನ್ನ ಬಿಟ್ಟು ವಿದೇಶದಲ್ಲಿ ಬೀಡು ಬಿಟ್ಟಿದ್ದಾರೆ. ಏನ್ ಮಾಡೋದು ಕಿಂಗ್ ಕೊಹ್ಲಿ ಅಂದು ಕೊಂಡಿದ್ದೇ ಒಂದು ಆಗ್ತಿರೋದೆ ಒಂದು. ಕೊಹ್ಲಿಗೆ ಕೆಲವರು ಕ್ವಾಟ್ಲೆ ಕೊಡ್ತಿದ್ದಾರೆ.
ಲಂಡನ್ನಲ್ಲಿ ಕೊಹ್ಲಿಗೆ ಜಾಹೀರಾತುದಾರರ ಕಾಟ
ಕೊಹ್ಲಿಗೆ ಕ್ವಾಟ್ಲೆ ಅಂದ ತಕ್ಷಣ ಫ್ಯಾನ್ಸ್ ಕಾಟ ಕೊಡ್ತಿರಬಹದು ಅನ್ನೋ ಯೋಚನೆ ನಿಮ್ಮ ತಲೆಗೆ ಬಂದಿರಬಹುದು. ಅಸಲಿಗೆ ಕಾಟ ಕೊಡ್ತಿರೋದು ಜಾಹೀರಾತುದಾರರು. ನೆಮ್ಮದಿ ಜೀವನ ಬೇಕು ಅಂತಾ ಕೊಹ್ಲಿ, ಲಂಡನ್ ಹೋದ್ರೂ ಬಿಡ್ತಿಲ್ಲ ನೋಡಿ ಬ್ರ್ಯಾಂಡ್ಗಳು. ಕೆಲ ದಿನಗಳ ಹಿಂದಷ್ಟೇ ನಡೆದ ಫೋಟೋ ಶೂಟ್ನ ವಿಡಿಯೋ ಇದು. ಲಂಡನ್ನಲ್ಲೇ ನಡೆದ ಶೂಟ್ ಝಲಕ್ನ ಸ್ವತಃ ವಿರಾಟ್ ಕೊಹ್ಲಿ ಹಂಚಿಕೊಂಡಿದ್ದಾರೆ. ಇದೊಂದೇ ಅಲ್ಲ.. ಕಳೆದ ಕೆಲ ದಿನಗಳಿಂದ ಹಲವು ಬ್ರ್ಯಾಂಡ್ಗಳ ಸಾಲು-ಸಾಲು ಶೂಟ್ಗಳಲ್ಲಿ ವಿರಾಟ್ ಫುಲ್ ಬ್ಯುಸಿಯಾಗಿ ಬಿಟ್ಟಿದ್ದಾರೆ.
ಇದನ್ನೂ ಓದಿ:ಸ್ಟಾರ್ಗಳಿಗೊಂದು ನ್ಯಾಯ, ಉಳಿದವರಿಗೊಂದು ನ್ಯಾಯ; ಬಿಸಿಸಿಐ ವಿರುದ್ಧ ಭುಗಿಲೆದ್ದ ಆಕ್ರೋಶ
ಆನ್ ಫೀಲ್ಡ್, ಆಫ್ ಫೀಲ್ಡ್.. ಎಲ್ಲೆಲ್ಲೂ ಕೊಹ್ಲಿ ಕಿಂಗ್
ದೂರದ ಲಂಡನ್ಗೆ ಹೋಗಿ ಬೀಡು ಬಿಟ್ಟಿದ್ರೂ ಜಾಹೀರಾತುದಾರರು ಕೊಹ್ಲಿ ಹಿಂದೆ ಬಿದ್ದಿರೋ ಸೀಕ್ರೆಟ್ ಇದೇ ನೋಡಿ. ಈ ಕ್ರಿಕೆಟ್ ಲೋಕದ ಸುಲ್ತಾನನಿಗಿರೋ ಕ್ರೇಜ್, ವಿಶ್ವದ ಬೇರಾವ ಕ್ರಿಕೆಟರ್ಗೂ ಇಲ್ಲ. ಇನ್ಫ್ಯಾಕ್ಟ್ ಕ್ರಿಕೆಟ್ ದೇವರು ಅನ್ನಿಸಿಕೊಳ್ಳೋ ಸಚಿನ್ರನ್ನೇ ವಿರಾಟ್ ಕೊಹ್ಲಿ ಮೀರಿಸಿದ್ದಾರೆ ಅಂದ್ರೆ ತಪ್ಪಾಗಲ್ಲ. ಕಿಂಗ್ ಕೊಹ್ಲಿಯ ಹವಾ ಹಂಗಿದೆ. ವಿಶ್ವದಾದಂತ್ಯ ಅಸಂಖ್ಯ ಅಭಿಮಾನಿಗಳ ಬಳಗ ಕೊಹ್ಲಿಗಿದೆ. ವಿರಾಟ್, ಕ್ರೀಸ್ಗೆ ಇಳಿದ್ರೆ ಸಾಕು ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾಯ್ತಿದ್ದಾರೆ. ಸ್ಟೇಡಿಯಂನ ವಾತಾವರಣವೇ ಬದಲಾಗುತ್ತೆ. ಸ್ಟೇಡಿಯಂ ಮಾತ್ರವಲ್ಲ. ಟಿವಿ ಮುಂದೆ ಕೂಡ ರೆಪ್ಪೆಯಾಡಿಸದೆ ಪಂದ್ಯ ವೀಕ್ಷಿಸೋ ಕೋಟ್ಯಾಂತರ ಫ್ಯಾನ್ಸ್ ಇದ್ದಾರೆ. ಕೊಹ್ಲಿ ಆರಾಧಕರ ಬಳಗವೇ ಇದೆ.
ಸೋಷಿಯಲ್ ಮೀಡಿಯಾಗೂ ಕೊಹ್ಲಿಯೇ ಕಿಂಗ್
ಆನ್ಫೀಲ್ಡ್ ಮಾತ್ರವಲ್ಲ..ಆಫ್ ದ ಫೀಲ್ಡ್ನಲ್ಲೂ ಕೊಹ್ಲಿಯ ಕ್ರೇಜ್ ಜೋರಾಗಿದೆ. ವಿಶ್ವದಲ್ಲೇ ಅತಿ ಹೆಚ್ಚು ಫಾಲೋವರ್ಸ್ ಹೊಂದಿರೋ 3ನೇ ಅಥ್ಲೀಟ್ ಕೊಹ್ಲಿ. ಕೊಹ್ಲಿಯ ಅಧಿಕೃತ ಅಕೌಂಟ್ ಮಾತ್ರವಲ್ಲ. ಫ್ಯಾನ್ಸ್ ಪೇಜ್ಗಳಿಗೂ ಮಿಲಿಯನ್ಗಟ್ಟಲೇ ಫಾಲೋವರ್ಸ್ ಇದ್ದಾರೆ. ಹೀಗಾಗಿ ಸೋಷಿಯಲ್ ಮೀಡಿಯಾಗಳಲ್ಲಂತೂ ಕೊಹ್ಲಿ ಸದಾ ಟಾಪಿಕ್ ಆಗಿರ್ತಾರೆ. ಗೂಗಲ್ನಲ್ಲೂ ಕೊಹ್ಲಿ ಹುಡುಕಾಟ ಜೋರಾಗಿ ನಡೆಯುತ್ತೆ. ಇಷ್ಟೆಲ್ಲಾ ಕ್ರೇಜ್ ಇರೋದ್ರಿಂದಲೇ ಮಾರ್ಕೆಟಿಂಗ್ ಕಂಪನಿಗಳು ಇದೀಗ ಕೊಹ್ಲಿ ಇದ್ದಲ್ಲಿಗೆ ಹುಡುಕಿಕೊಂಡು ಹೋಗಿರೋದು.
ಇದನ್ನೂ ಓದಿ:ಗಾಯಕ್ವಾಡ್ಗೆ ಬಿಗ್ ಶಾಕ್; ಧೋನಿ ಶಿಷ್ಯನಿಗೆ ಗಾಳ ಹಾಕಿದ CSK, ಕ್ಯಾಪ್ಟನ್ಸಿ ಆಫರ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್