newsfirstkannada.com

ಅಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದ ಸಚಿನ್​ಗೆ ಬೆಲೆ ಕಟ್ಟಲಾಗದ ಗಿಫ್ಟ್ ಕೊಟ್ಟಿದ್ದ ಕೊಹ್ಲಿ​.. ಆದ್ರೆ ತೆಂಡೂಲ್ಕರ್​​ ಅದನ್ನ ವಾಪಸ್​ ನೀಡಿದ್ಯಾಕೆ?

Share :

14-09-2023

    ಆ ದಿನವನ್ನು ಭಾರತೀಯ ಕ್ರಿಕೆಟ್​ ಅಭಿಮಾನಿ ಕೂಡ ಮರೆಯಲು ಸಾಧ್ಯವಿಲ್ಲ

    ರೂಮ್​ನ ಮೂಲೆಯೊಂದರಲ್ಲಿ ಕುಳಿತು ಬಿಕ್ಕಿ ಬಿಕ್ಕಿ ಅಳುತ್ತಿದ್ದ ಕ್ರಿಕೆಟ್​ ದೇವರು

    ಕೊಹ್ಲಿ ಕೊಟ್ಟ ಗಿಫ್ಟ್ ಕಂಡು ಮತ್ತಷ್ಟು ಕಣ್ಣೇರು ಹೆಚ್ಚಿಸಿಕೊಂಡ ಸಚಿನ್​ ತೆಂಡೂಲ್ಕರ್

ಅವತ್ತು ಡ್ರೆಸ್ಸಿಂಗ್​ ರೂಮ್​ ತುಂಬಾ ನೀರವ ಮೌನ ಆವರಿಸಿತ್ತು. ಮೂಲೆಯೊಂದರಲ್ಲಿ ಸಚಿನ್​ ತೆಂಡೂಲ್ಕರ್​ ಬಿಕ್ಕಿ ಬಿಕ್ಕಿ ಅಳ್ತಿದ್ರು. ಅಂತಾ ಸಂದರ್ಭದಲ್ಲಿ ವಿರಾಟ್​ ಕೊಹ್ಲಿ ಸಚಿನ್​ಗೆ​ ಬೆಲೆ ಕಟ್ಟಲಾಗದ ಗಿಫ್ಟ್​ ಒಂದನ್ನ ನೀಡಿದ್ರು. ಆ ಗಿಫ್ಟ್​ ಯಾವುದು.? ಗಿಫ್ಟ್​ ಪಡೆದ ಸಚಿನ್​ ಹೇಳಿದ್ದೇನು.? ಈ ಸ್ಟೋರಿ ಓದಿ.

16 ನವೆಂಬರ್​ 2013ರ ಈ ದಿನವನ್ನ ಯಾವೊಬ್ಬ ಭಾರತೀಯ ಕ್ರಿಕೆಟ್​ ಅಭಿಮಾನಿ ಕೂಡ ಮರೆಯಲು ಸಾಧ್ಯವೇ ಇಲ್ಲ. ಆ ದಿನ ಟೀಮ್​ ಇಂಡಿಯಾ ಪಂದ್ಯವನ್ನಾಡ್ತಾ ಇದ್ರು, ಇಡೀ ವಾಂಖೆಡೆ ಮೈದಾನದಲ್ಲಿ ನೀರವ ಮೌನ ಆವರಿಸಿತ್ತು. ಟೀಮ್​ ಇಂಡಿಯಾ ಡ್ರೆಸಿಂಗ್​ ರೂಮ್​​ನ ಛಾಯೆ ಸಂಪೂರ್ಣ ಬದಲಾಗಿತ್ತು. ಯಾಕಂದ್ರೆ ರೂಮ್​ನ ಮೂಲೆಯೊಂದರಲ್ಲಿ ಕುಳಿತಿದ್ದ ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ ಕಣ್ಣೀರಿಡ್ತಾ ಇದ್ರು.

ಅಂದು 24 ವರ್ಷಗಳ ಸುದೀರ್ಘ ಕ್ರಿಕೆಟ್​ ಕರಿಯರ್​​ಗೆ ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ ಫುಲ್​ ಸ್ಟಾಫ್ ಇಟ್ಟ ದಿನವದು. ನೆಚ್ಚಿನ ಆಟಕ್ಕೆ ಗುಡ್​ ಬೈ ಹೇಳಿದ ಸಚಿನ್​ ತೆಂಡೂಲ್ಕರ್, ಡ್ರೆಸ್ಸಿಂಗ್​ ರೂಮ್​ನ ಮೂಲೆಯಲ್ಲಿ ಕುಂತು ಬಿಕ್ಕಿ ಬಿಕ್ಕಿ ಅಳ್ತಿದ್ರಂತೆ. ​ಆಗ ಸಚಿನ್​ ಬಳಿ ತೆರಳಿದ್ದ ವಿರಾಟ್​ ಕೊಹ್ಲಿ ಬೆಲೆ ಕಟ್ಟಲಾಗದ ಗಿಫ್ಟ್​ವೊಂದನ್ನ ನೀಡಿದ್ರು. ಆ ಗಿಫ್ಟ್ ನೋಡಿದ ಬಳಿಕ ಸಚಿನ್​ ಕಣ್ಣೀರು ಮತ್ತಷ್ಟು ಹೆಚ್ಚಾಗಿತ್ತಂತೆ. ಇಷ್ಟೇ ಅಲ್ಲ, ತಕ್ಷಣವೇ ಆ ಗಿಫ್ಟ್​​ ಅನ್ನ ಕೊಹ್ಲಿ ವಾಪಾಸ್​​ ನೀಡಿಬಿಟ್ರೆಂತೆ. ಅಷ್ಟಕ್ಕೂ ಕೊಹ್ಲಿ ಕೊಟ್ಟ ಗಿಫ್ಟ್​ ಏನು ಅಂದ್ರೆ ಅದೊಂದು ಬೆಲೆ ಕಟ್ಟಲಾಗದ ದಾರ.

ಹೌದು.. ಅದು ಬೆಲೆ ಕಟ್ಟಲಾಗದ ದಾರವೇ. ಯಾಕಂದ್ರೆ, ಅದು ವಿರಾಟ್​ ಕೊಹ್ಲಿಯ ದಿವಂಗತ ತಂದೆ ಪ್ರೇಮ್​ ಕೊಹ್ಲಿ, ವಿರಾಟ್​​​ಗೆ ನೀಡಿದ ಉಡುಗೊರೆಯಾಗಿತ್ತಂತೆ. ತಂದೆಯ ನಿಧನದ ಬಳಿಕ ಕೊಹ್ಲಿ ಆ ದಾರವನ್ನ ತಮ್ಮ ಕಿಟ್​ ಬ್ಯಾಗ್​ನಲ್ಲಿ ಇರಿಸಿಕೊಂಡಿದ್ರಂತೆ. ಅದೇ ದಾರವನ್ನ ವಿರಾಟ್​​​, ಅಂದು ಸಚಿನ್​ಗೆ ನೀಡಿದ್ರಂತೆ. ಹೀಗಾಗಿಯೇ ಸಚಿನ್​ ಕಣ್ಣೀರು ಹೆಚ್ಚಾಗಿದ್ದು, ಆ ಗಿಫ್ಟ್​ ಅನ್ನ ವಾಪಾಸ್​ ನೀಡಿದ್ದು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಅಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದ ಸಚಿನ್​ಗೆ ಬೆಲೆ ಕಟ್ಟಲಾಗದ ಗಿಫ್ಟ್ ಕೊಟ್ಟಿದ್ದ ಕೊಹ್ಲಿ​.. ಆದ್ರೆ ತೆಂಡೂಲ್ಕರ್​​ ಅದನ್ನ ವಾಪಸ್​ ನೀಡಿದ್ಯಾಕೆ?

https://newsfirstlive.com/wp-content/uploads/2023/09/Kohli-5.jpg

Load More