newsfirstkannada.com

ಕೊಹ್ಲಿಗಿದೆ ಲೆಫ್ಟ್​ ಆರ್ಮ್​ ಸ್ಪಿನ್​ ಫೋಬಿಯಾ.. ಆತನ ಖೆಡ್ಡಾಗೆ ಸುಲಭಕ್ಕೆ ಬೀಳ್ತಾರೆ ವಿರಾಟ್​! ನಿಜನಾ?

Share :

14-11-2023

  ಮತ್ತೆ ಬಯಲಾಯ್ತು ಕಿಂಗ್​ ಕೊಹ್ಲಿಯ ವೀಕ್​ನೆಸ್​.!

  ಸೆಮಿಸ್​​​ ಕದನಕ್ಕೂ ಮುನ್ನ ಶುರುವಾಯ್ತು ಢವ.. ಢವ.!

  ವಿರಾಟ್​​ ಸಾಲಿಡ್​ ಫಾರ್ಮ್​ನಲ್ಲಿದ್ರೂ ತಂಡಕ್ಕೆ ಟೆನ್ಶನ್!

ನೆದರ್ಲೆಂಡ್​ ವಿರುದ್ಧದ ಪಂದ್ಯ ಅಂತ್ಯವಾದ ಬೆನ್ನಲ್ಲೇ ಹೊಸ ಟೆನ್ಶನ್​ ಶುರುವಾಗಿದೆ. ಟೀಮ್​ ಇಂಡಿಯಾ ಕ್ಯಾಂಪ್​ನಲ್ಲಿ ಈ ಬಾರಿ ಟೆನ್ಶನ್​ ತಂದಿಟ್ಟಿರೋದು ಬೇರಾರೂ ಅಲ್ಲ ಕಿಂಗ್​ ಕೊಹ್ಲಿ. ವಿರಾಟ್​​ ಸಾಲಿಡ್​ ಫಾರ್ಮ್​ನಲ್ಲಿದ್ರೂ, ತಂಡಕ್ಕೆ ಟೆನ್ಶನ್​ ಯಾಕೆ ಅಂತೀರಾ.?

ಇಂಡೋ – ನೆದರ್ಲೆಂಡ್​ ಕದನದಲ್ಲಿ ನಡೆದಿದ್ದು ಕಿಂಗ್​ ಕೊಹ್ಲಿಯ ಜಾತ್ರೆ. 2ND HOMEನಲ್ಲಿ ವಿರಾಟ್​ ಸೆಂಚುರಿ ಸಿಡಿಸ್ತಾರೆ ಅನ್ನೋ ಕನಸು ಕಂಡು ಮೈದಾನಕ್ಕೆ ಸಾವಿರಾರು ಫ್ಯಾನ್ಸ್​ ಎಂಟ್ರಿ ಕೊಟ್ಟಿದ್ರು. ಆರಂಭದಲ್ಲಿ ಕೊಹ್ಲಿ ಆಡಿದ ಆಟ ಸೆಂಚುರಿ ಭರವಸೆಯನ್ನ ಇನ್ನಷ್ಟು ಹೆಚ್ಚಿಸಿತ್ತು. ಆದ್ರೆ, ಅಂತ್ಯವಾಗಿದ್ದು ಮಾತ್ರ ತೀವ್ರ ನಿರಾಸೆಯಲ್ಲಿ.

ಹೌದು.. ವಿಶ್ವಕಪ್​ನಲ್ಲಿ ಇಷ್ಟು ದಿನದ್ದು ಒಂದು ಕಥೆಯಾದ್ರೆ, ನೆದರ್ಲೆಂಡ್​ ವಿರುದ್ಧ ಕೊಹ್ಲಿ ಔಟಾಗಿದ್ದು ಮತ್ತೊಂದು ಕಥೆ ಹೇಳ್ತಿದೆ. ವಿಶ್ವಕಪ್​ ಅಖಾಡದಲ್ಲಿ ಇಷ್ಟು ದಿನ ರನ್​ಸುನಾಮಿಯನ್ನ ಸೃಷ್ಟಿಸಿದ ಕೊಹ್ಲಿ, ಡಚ್ಚರ ವಿರುದ್ಧವೂ ಹಾಫ್​ ಸೆಂಚುರಿ ಸಿಡಿಸಿದ್ರು. ಆದ್ರೆ, ಈ ಹಿಂದಿನ ವೀಕ್​ನೆಸ್​ ಮತ್ತೆ ಮುಂದುವರೆಯಿತು. ಲೆಫ್ಟ್​ ಆರ್ಮ್​ ಸ್ಪಿನ್ನರ್​​ ವ್ಯಾನ್ ಡೆರ್​​ ಮೆರ್ವೆಗೆ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ವಿಕೆಟ್​ ಒಪ್ಪಿಸಿದ್ರು.

ಇದನ್ನು ಓದಿ: ಹಳೆ ಸಾಲ.. ಹೊಸ ಲೆಕ್ಕ.. ನಾಳೆ ಸೆಮಿಫೈನಲ್​​ ಅಲ್ಲ, ಸೇಡಿನ ಫೈಟ್​; ಗೆಲ್ಲೋರು ಯಾರು?

ಕಿಂಗ್​ ಕೊಹ್ಲಿ ಲೆಫ್ಟ್​ ಆರ್ಮ್​ ಸ್ಪಿನ್​ ಫೋಬಿಯಾ.?

ಹೌದು. ವಿಶ್ವವನ್ನೇ ಗೆದ್ದಿರುವ ಜಗದೇಕ ವೀರನಿಗೆ ಕಳೆದ ಕೆಲ ವರ್ಷಗಳಿಂದ ಲೆಫ್ಟ್​ ಆರ್ಮ್ ಸ್ಪಿನ್​​ ಫೋಬಿಯಾ ಕಾಡ್ತಿದೆ. ಲೀಲಾಜಾಲವಾಗಿ ರನ್​ಗಳಿಸೋ ಕೊಹ್ಲಿ, ಲೆಫ್ಟ್​ ಆರ್ಮ್​ ಸ್ಪಿನ್ನರ್​ ದಾಳಿಗಿಳಿದ್ರೆ ಸಿಕ್ಕಾಪಟ್ಟೆ conscious ಆಗ್ತಿದ್ದಾರೆ. ತೀರಾ ಎಚ್ಚರಿಕೆಯ ಆಟವನ್ನಾಡಲು ಮುಂದಾಗೋ ವಿರಾಟ್​, ಸುಲಭಕ್ಕೆ ವಿಕೆಟ್ ಒಪ್ಪಿಸ್ತಿದ್ದಾರೆ.

ನೆದರ್ಲೆಂಡ್​​ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಔಟಾಗಿದ್ರಿಂದ ಶತಕ ಮಿಸ್​ ಆಯ್ತೇ ವಿನಃ ತಂಡಕ್ಕೆ ಹಿನ್ನಡೆಯಾಗಲಿಲ್ಲ. ಆದ್ರೆ, ಮಹತ್ವದ ಸೆಮೀಸ್​ ಕದನದಲ್ಲಿ ಹೀಗಾಗಿ ಬಿಟ್ರೆ ಏನ್​ ಗತಿ.? ಇಷ್ಟೊಂದು ಆತಂಕ ಹುಟ್ಟಲು ಒಂದು ಕಾರಣ ಇದೆ. ಅದೇ ಮಿಚೆಲ್​ ಸ್ಯಾಂಟ್ನೆರ್​..!

ಸ್ಯಾಂಟ್ನೆರ್​ ಖೆಡ್ಡಾಗೆ ಸುಲಭಕ್ಕೆ ಬೀಳ್ತಾರೆ ಕಿಂಗ್​ ಕೊಹ್ಲಿ.!

ಹೌದು. ನ್ಯೂಜಿಲೆಂಡ್​ ತಂಡದ ಮೇನ್​ ವೆಪೆನ್​ ಮಿಚೆಲ್​ ಸ್ಯಾಂಟ್ನೆರ್, ಬೌಲಿಂಗ್​ ಎದುರಿಸೋದು ಕಿಂಗ್​ ಕೊಹ್ಲಿ ಪಾಲಿಗೆ ಸವಾಲಿನ ವಿಚಾರವಾಗಿದೆ. ಈ ಹಿಂದಿನ ಇತಿಹಾಸ ಇದನ್ನ ಸಾರಿ ಸಾರಿ ಹೇಳ್ತಿದೆ. ಸ್ಯಾಂಟ್ನೆರ್​ ಎದುರು 17 ಪಂದ್ಯಗಳಿಂದ ಕೇವಲ 9.33ರ ಸರಾಸರಿಯಲ್ಲಿ ರನ್​ಗಳಿಸಿರೋ ವಿರಾಟ್​ ಕೊಹ್ಲಿ, 3 ಬಾರಿ ಔಟ್​ ಆಗಿದ್ದಾರೆ.

ಇದನ್ನು ಓದಿ: Virat Kohli: ನಂಬಿಕೆ ಇಲ್ಲ ಎಂದಿದ್ದ ಕೊಹ್ಲಿ ದೇವರ ಮೊರೆ ಹೋಗಿದ್ದೇಕೆ? ವಿರಾಟ್​ ಇಂಥಾ ಬದಲಾವಣೆಗೆ ಕಾರಣ ಯಾರು?

ಸಾಲಿಡ್​​ ಫಾರ್ಮ್​ನಲ್ಲಿ ಸ್ಯಾಂಟ್ನೆರ್​, ಕೊಹ್ಲಿ ಸ್ಪೆಷಲ್​ ಪ್ರಾಕ್ಟಿಸ್​.!

ಈ ಹಿಂದೆ ಕೊಹ್ಲಿಯನ್ನ ಬಿಡದೆ ಕಾಡಿರುವ ಸ್ಯಾಂಟ್ನೆರ್​, ಈ ವಿಶ್ವಕಪ್​ನಲ್ಲೂ ಸಾಲಿಡ್​ ಫಾರ್ಮ್​ನಲ್ಲಿದ್ದಾರೆ. ಆಡಿದ 9 ಪಂದ್ಯಗಳಲ್ಲಿ 16 ವಿಕೆಟ್​​ ಬೇಟೆಯಾಡಿದ್ದಾರೆ. ಸ್ಯಾಂಟ್ನೆರ್​ ಈ ಹಿಂದೆ ಮಾಡಿದ ಸಾಧನೆಯ ಇತಿಹಾಸ ಹಾಗೂ ಈಗಿರುವ ಫಾರ್ಮ್​ ಎರಡೂ ಕೊಹ್ಲಿಗೆ ಟೆನ್ಶನ್​ ತಂದಿಟ್ಟಿದೆ. ಹೀಗಾಗಿಯೇ ನೆದರ್ಲೆಂಡ್​ ವಿರುದ್ಧದ ಪಂದ್ಯಕ್ಕೂ ಮುಂಚಿನಿಂದಲೇ ಕೊಹ್ಲಿ ಸ್ಪೆಷಲ್​ ಪ್ರಾಕ್ಟಿಸ್​ ಶುರುವಿಟ್ಟು ಕೊಂಡಿದ್ದಾರೆ. ನೆಟ್ಸ್​ನಲ್ಲಿ ಜಡೇಜಾ, ಕುಲ್​​ದೀಪ್​ ಯಾದವ್​ ಸ್ಪಿನ್​ ಬೌಲಿಂಗ್​ ದಾಳಿಯನ್ನ ಸತತವಾಗಿ ಎದುರಿಸಿದ್ದಾರೆ.

ಒಟ್ಟಿನಲ್ಲಿ, ಈಗಾಗಲೇ ಕಳೆದ 2 ವಿಶ್ವಕಪ್​ ಟೂರ್ನಿಗಳಲ್ಲಿ ಸೆಮಿಫೈನಲ್​ನಲ್ಲಿ ಟೀಮ್​ ಇಂಡಿಯಾ ನಿರಾಸೆ ಅನುಭವಿಸಿದೆ. ಈ ಬಾರಿ ಟ್ರೋಫಿ ಗೆಲ್ಲೋ ಕನವರಿಕೆಯಲ್ಲಿರೋ ತಂಡ ಕಿಂಗ್​ ಕೊಹ್ಲಿಯನ್ನ ಅಪಾರವಾಗಿ ನೆಚ್ಚಿಕೊಂಡಿದೆ. ವೀಕ್​ನೆಸ್​ ಮೆಟ್ಟಿ ನಿಂತು ಸೆಮಿಸ್​ನಲ್ಲಿ ಕೊಹ್ಲಿ ಘರ್ಜಿಸಲಿ ಅನ್ನೋದು ಎಲ್ಲರ ಆಶಯವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕೊಹ್ಲಿಗಿದೆ ಲೆಫ್ಟ್​ ಆರ್ಮ್​ ಸ್ಪಿನ್​ ಫೋಬಿಯಾ.. ಆತನ ಖೆಡ್ಡಾಗೆ ಸುಲಭಕ್ಕೆ ಬೀಳ್ತಾರೆ ವಿರಾಟ್​! ನಿಜನಾ?

https://newsfirstlive.com/wp-content/uploads/2023/11/Kohli_Fifty.jpg

Load More