newsfirstkannada.com

ವಿಶ್ವಕಪ್​​ನಲ್ಲಿ ಕೊಹ್ಲಿ VS ಬಾಬರ್​​​; ಈ ಬಾರಿ ಗೆಲುವಿನ ಹೀರೋ ಯಾರು? ಏನ್​​ ಹೇಳ್ತಿದೆ ಅಂಕಿ ಅಂಶ?

Share :

05-08-2023

    ಸದ್ಯದಲ್ಲೇ ನಡೆಯಲಿದೆ ಏಕದಿನ ವಿಶ್ವಕಪ್​​

    ಅ. 14ಕ್ಕೆ ಟೀಂ ಇಂಡಿಯಾ VS ಪಾಕಿಸ್ತಾನ!

    ಕೊಹ್ಲಿ, ಬಾಬರ್​​ ಇಬ್ಬರಲ್ಲಿ ಮಿಂಚೋದ್ಯಾರು?

ಸದ್ಯದಲ್ಲೇ ಏಕದಿನ ವಿಶ್ವಕಪ್​​ ನಡೆಯಲಿದೆ. ಅಕ್ಟೋಬರ್​​​ 14ನೇ ತಾರೀಕು ಅಹಮದಾಬಾದ್‌ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ನಡೆಯೋ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ, ಪಾಕಿಸ್ತಾನ ಸೆಣಸಲಿವೆ. ಈ ಪಂದ್ಯಕ್ಕಾಗಿ ಇಡೀ ಕ್ರೀಡಾ ಲೋಕವೇ ಕಾದು ಕುಳಿತಿದೆ.

ಕಳೆದ ವರ್ಷ ನಡೆದ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಗೆಲ್ಲಲು ಕಾರಣ ಕಿಂಗ್​​ ಕೊಹ್ಲಿ. ವಿರಾಟ್​​ ಭಾರತದ ಗೆಲುವಿನ ಹೀರೋ ಆಗಿದ್ದರು. ಇದಕ್ಕೂ ಮುನ್ನ 2021ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆಲ್ಲಲು ಕಾರಣ ಬಾಬರ್​ ಅಜಂ. ಅಂದು ಟೀಂ ಇಂಡಿಯಾ ವಿರುದ್ಧ ಮಿಂಚಿದ್ದು ಪಾಕಿಸ್ತಾನದ ಬಾಬರ್ ಅಜಂ. ಈ ಬಾರಿ ನಡೆಯೋ ಏಕದಿನ ವಿಶ್ವಕಪ್​​​ನಲ್ಲಿ ಯಾವ ಟೀಂ ಗೆಲ್ಲಲಿದೆ? ಕೊಹ್ಲಿ, ಅಜಂ ಇಬ್ಬರಲ್ಲಿ ಯಾರು ಹೀರೋ ಆಗಲಿದ್ದಾರೆ? ಎಂಬ ಚರ್ಚೆ ಜೋರಾಗಿದೆ.

ಕೊಹ್ಲಿ, ಬಾಬರ್​ ಇಬ್ಬರು ಹೀರೋಗಳೇ!

  • 2017 ಚಾಂಪಿಯನ್ಸ್ ಟ್ರೋಫಿ ಭಾಗವಾಗಿ ನಡೆದ ಪಂದ್ಯದಲ್ಲಿ ಕೊಹ್ಲಿ ಅಜೇಯ 81 ರನ್ ಗಳಿಸಿದರು. ಬಾಬರ್​​ ಅಜಂ ಕೇವಲ 8 ರನ್​ಗೆ ಔಟ್​ ಆಗಿದ್ದರು. ಹೀಗಾಗಿ ಟೀಂ ಇಂಡಿಯಾ ಗೆದ್ದು ಬೀಗಿತ್ತು. ಬಳಿಕ ನಡೆದ ಅದೇ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ಬಾಬರ್ ಅಜಂ 46 ರನ್‌ ಸಿಡಿಸಿದ್ದರು. ಕೊಹ್ಲಿ 5 ರನ್​ಗೆ ಔಟಾದ ಕಾರಣ ಪಾಕ್​​ ಭಾರತದ ವಿರುದ್ಧ ಗೆದ್ದು ಬೀಗಿತ್ತು.
  • 2019 ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಪಾಕ್​ ವಿರುದ್ಧ ಭಾರತ ಗೆದ್ದಿತ್ತು. ಅಂದು ಕೊಹ್ಲಿ 77 ರನ್ ಸಿಡಿಸಿದರೆ, ಬಾಬರ್ ಅಜಂ ಉತ್ತಮ 48 ರನ್ ಬಾರಿಸಿದರು.
  • 2021 ಐಸಿಸಿ ಟಿ20 ವಿಶ್ವಕಪ್​ನ ಹೈ-ವೋಲ್ಟೇಜ್ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಪಾಕ್​ ಗೆಲುವು ಸಾಧಿಸಿತ್ತು. ಬಾಬರ್ ಅಜಂ ಅಜೇಯ 68 ರನ್‌ ಗಳಿಸಿ ಪಾಕಿಸ್ತಾನವನ್ನು ಗೆಲ್ಲಿಸಿದರು. ಕೊಹ್ಲಿ 57 ರನ್ ಗಳಿಸಿ ಭಾರತ ತಂಡಕ್ಕೆ ನೆರವಾಗಿದ್ದರು.

ಭಾರತದ ಗೆಲುವಿನ ನಾಯಕ ಕೊಹ್ಲಿ

  • ಐಸಿಸಿ ಟಿ20 ವಿಶ್ವಕಪ್ 2022 ಪಂದ್ಯದಲ್ಲಿ ಟೀಂ ಇಂಡಿಯಾ, ಪಾಕ್​ ಎದುರಾಗಿತ್ತು. ಈ ರೋಚಕ ಕಾಳಗದಲ್ಲಿ ಕೊಹ್ಲಿ ಕೊನೆವರೆಗೂ ಇದ್ದು ಅಜೇಯ 82 ರನ್‌ ಗಳಿಸಿ ಭಾರತವನ್ನು ಗೆಲ್ಲಿಸಿದರು. ಇದು ಕೊಹ್ಲಿ ವೃತ್ತಿಜೀವನದ ಶ್ರೇಷ್ಠ ಇನ್ನಿಂಗ್ಸ್ ಆಗಿತ್ತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿಶ್ವಕಪ್​​ನಲ್ಲಿ ಕೊಹ್ಲಿ VS ಬಾಬರ್​​​; ಈ ಬಾರಿ ಗೆಲುವಿನ ಹೀರೋ ಯಾರು? ಏನ್​​ ಹೇಳ್ತಿದೆ ಅಂಕಿ ಅಂಶ?

https://newsfirstlive.com/wp-content/uploads/2023/08/Kohli-Babar.jpg

Load More