newsfirstkannada.com

ಕೊಹ್ಲಿ ಕಾಲು ಹಿಡಿಯುತ್ತಾ ಬಿಸಿಸಿಐ? ವಿರಾಟ್​​ ಮತ್ತೆ ಕ್ಯಾಪ್ಟನ್​​? ಮಹತ್ವದ ಸುಳಿವು ಕೊಟ್ಟ ಮಾಜಿ ಸೆಲೆಕ್ಟರ್​!

Share :

10-07-2023

    ಟೆಸ್ಟ್​ ಕ್ಯಾಪ್ಟನ್ಸಿಯಿಂದ ರೋಹಿತ್​ ಶರ್ಮಾಗೆ ಕೊಕ್​ ಸಾಧ್ಯತೆ

    ಮತ್ತೆ ಟೀಂ ಇಂಡಿಯಾ ಕ್ಯಾಪ್ಟನ್​ ಆಗ್ತಾರಾ ವಿರಾಟ್​ ಕೊಹ್ಲಿ?

    ಈ ಬಗ್ಗೆ ಮಹತ್ವದ ಸುಳಿವು ಕೊಟ್ಟ ಮಾಜಿ ಚೀಫ್​​ ಸೆಲೆಕ್ಟರ್​​

ಒಂದೂವರೆ ವರ್ಷದ ಹಿಂದೆ ವಿರಾಟ್​​ ಕೊಹ್ಲಿ ಮೊದಲು ಟಿ20 ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ರು. ಬಳಿಕ ಬಿಸಿಸಿಐ ಏಕದಿನ ತಂಡದ ನಾಯಕತ್ವದಿಂದಲೂ ಕೊಹ್ಲಿಯನ್ನು ತೆಗೆದು ಅವಮಾನ ಮಾಡಿತ್ತು. ಇದರಿಂದ ಬೇಸತ್ತ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಸೋಲಿನ ಬಳಿಕ ಟೆಸ್ಟ್​​ ಕ್ಯಾಪ್ಟನ್ಸಿಗೂ ರಾಜೀನಾಮೆ ನೀಡಿದ್ರು. ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ನಂತರ ಈಗ ರೋಹಿತ್ ಎಲ್ಲಾ ಮಾದರಿಯೂ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ.

ಇನ್ನು, ಯಾವಾಗ ಬೇಕಾದರೂ ರೋಹಿತ್​ ಶರ್ಮಾ ಟೆಸ್ಟ್​ ಕ್ಯಾಪ್ಟನ್ಸಿಗೆ ರಾಜೀನಾಮೆ ನೀಡಬಹುದು. ಭವಿಷ್ಯದಲ್ಲಿ ಹಾರ್ದಿಕ್ ಪಾಂಡ್ಯ ಭಾರತ ತಂಡದ ಟೆಸ್ಟ್​ ಕ್ಯಾಪ್ಟನ್​ ಆಗುವ ಬಗ್ಗೆ ಅನುಮಾನಗಳು ಇವೆ. ಹೀಗಿರುವಾಗಲೇ ಭಾರತ ಕ್ರಿಕೆಟ್ ತಂಡದ ಮಾಜಿ ಮುಖ್ಯ ಆಯ್ಕೆಗಾರ ಎಂಎಸ್‌ಕೆ ಪ್ರಸಾದ್, ಕೊಹ್ಲಿಯನ್ನೇ ಮತ್ತೆ ಟೆಸ್ಟ್ ತಂಡದ ನಾಯಕತ್ವಕ್ಕೆ ಪರಿಗಣಿಸಿ ಎಂದಿದ್ದಾರೆ.

ಕೊಹ್ಲಿ ಮತ್ತೆ ಟೆಸ್ಟ್ ತಂಡದ ನಾಯಕನಾಗಲಿ ಎಂದ ಎಂಎಸ್‌ಕೆ ಪ್ರಸಾದ್

ವಿರಾಟ್ ಕೊಹ್ಲಿ ಯಾಕೆ ಮತ್ತೆ ಭಾರತ ಟೆಸ್ಟ್ ತಂಡದ ನಾಯಕ ಆಗಬಾರದು? ಎಂದು ಪ್ರಶ್ನಿಸಿದ ಪ್ರಸಾದ್​​​, ಇದನ್ನು ಸೆಲೆಕ್ಷನ್​ ಕಮಿಟಿ ಗಂಭೀರವಾಗಿ ಪರಿಗಣಿಸಲಿ. ಆಯ್ಕೆಗಾರರ ​​ಮನಸ್ಥಿತಿ ಹೇಗೆ ಬೇಕಾದರೂ ಇರಬಹುದು. ಸಾಮಾನ್ಯವಾಗಿ ಈ ಅವರ ಮನಸ್ಥಿತಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಬಗ್ಗೆ ಫೋಕಸ್​ ಮಾಡುತ್ತದೆ ಎಂದರು.

ಸದ್ಯ ನಾಯಕತ್ವದ ಬಗ್ಗೆ ಕೊಹ್ಲಿ ಮನಸ್ಥಿತಿ ಹೇಗಿದೆಯೋ ಗೊತ್ತಿಲ್ಲ. ಆಯ್ಕೆಗಾರರು ರೋಹಿತ್ ಬದಲಿಗೆ ಯಾರಾದ್ರೂ ಕ್ಯಾಪ್ಟನ್​ ಆಗಲಿ ಎನ್ನುವುದಾದರೆ ವಿರಾಟ್ ಕೊಹ್ಲಿ ಮೊದಲ ಆಯ್ಕೆ ಆಗಲಿ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಹ್ಲಿ ಕಾಲು ಹಿಡಿಯುತ್ತಾ ಬಿಸಿಸಿಐ? ವಿರಾಟ್​​ ಮತ್ತೆ ಕ್ಯಾಪ್ಟನ್​​? ಮಹತ್ವದ ಸುಳಿವು ಕೊಟ್ಟ ಮಾಜಿ ಸೆಲೆಕ್ಟರ್​!

https://newsfirstlive.com/wp-content/uploads/2023/07/Kohli_Test.jpg

Load More