newsfirstkannada.com

Video: ನಾಯಿ ಮರಿ ಜೊತೆಗೆ ಮೈದಾನದಲ್ಲಿ ಫುಟ್​ಬಾಲ್​ ಆಡಿದ ಕೊಹ್ಲಿ! ವಿರಾಟನ ಶ್ವಾನ ಪ್ರೀತಿಗೆ ಅಡ್ಬಿದ್ರು ಫ್ಯಾನ್ಸ್​

Share :

09-09-2023

  ವಿರಾಟ್​ ಕೊಹ್ಲಿ ಶ್ವಾನ ಪ್ರೀತಿಗೆ ಫಿದಾ ಆದ ಪ್ರಾಣಿ ಪ್ರಿಯರು

  ಮೈದಾನದಲ್ಲಿ ಮುದ್ದಾದ ನಾಯಿಮರಿ ಜೊತೆಗೆ ಕೊಹ್ಲಿ ಆಟ

  ಸೂಪರ್​ 4 ಪಂದ್ಯಕ್ಕೆ ನಾ ರೆಡಿ ಎನ್ನುತ್ತಿದ್ದಾರೆ ಟೀ ಇಂಡಿಯಾ ಬಾಯ್ಸ್​

ವಿರಾಟ್​ ಕೊಹ್ಲಿ ಅಂದ್ರೆ ಕ್ರಿಕೆಟ್​​ ಅಭಿಮಾನಿಗಳಿಗೆ ಮಾತ್ರ ಅಲ್ಲ ಶ್ವಾನಕ್ಕೂ ಬಲು ಇಷ್ಟ. ಅದಕ್ಕೆ ಸಾಕ್ಷಿ ಇಲ್ಲೊಂದು ಮುದ್ದಾದ ನಾಯಿ ಮರಿಯ ವಿಡಿಯೋ.

2023ರ ಏಷ್ಯಾಕಪ್‌ ಪಂದ್ಯಾಟ ನಡೆಯುತ್ತಿದೆ. ಸೆಪ್ಟೆಂಬರ್​ 10 ರಂದು ಭಾರತ ಮತ್ತು ಪಾಕ್​ ಸೆಣೆಸಾಡಲಿವೆ. ಸೂಪರ್​4 ಮೂಲಕ ಇತ್ತಂಡಗಳು ಮುಖಾಮುಖಿಯಾಗಲಿವೆ. ಆದರೆ ಅದಕ್ಕೂ ಮುನ್ನ ಟೀಂ ಇಮಡಿಯಾ ಪ್ಲೇಯರ್ಸ್​ ಭರ್ಜರಿ ಸಮರಭ್ಯಾಸ ನಡೆಸುತ್ತಿದ್ದಾರೆ. ಕ್ರೀಡಾಂಗಣದಲ್ಲಿ ಕೊಹ್ಲಿ ಸೇರಿದಂತೆ ಅನೇಕ ಕ್ರಿಕೆಟಿಗರು ಬೀಡುಬಿಟ್ಟಿದ್ದಾರೆ. ಇಂತಹ ಸಮಯದಲ್ಲಿ ಕೊಹ್ಲಿ ಮತ್ತು ಸ್ನೇಹಿತರು ಫುಟ್​ಬಾಲ್​ ಆಟವನ್ನ ಅಭ್ಯಾಸ ಮಾಡುತ್ತಿರುವಾಗ ಇವರನ್ನು ಕಂಡು ಮುದ್ದಾದ ನಾಯಿ ಮರಿಯೊಂದು ಮೈದಾನಕ್ಕೆದ ಎಂಟ್ರಿ ಕೊಟ್ಟಿದೆ.

ಕ್ರೀಡಾಂಗಣಕ್ಕೆ ಎಂಟ್ರಿಕೊಟ್ಟ ನಾಯಿಮರಿ ತಾನೂ ಆಟವಾಡುವಂತೆ ಆಟಗಾರರ ಮಧ್ಯೆ ಹೋಗಿದೆ. ಇದನ್ನ ಗಮನಿಸಿದ ವಿರಾಟ್​ ಕೊಹ್ಲಿ, ಶ್ವಾನದ ಜೊತೆ ಆಟವಾಡಿದ್ದಾರೆ. ಈ ದೃಶ್ಯ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಶೇರ್​ ಆಗಿದೆ. ಕೊಹ್ಲಿ ಅಭಿಮಾನಿಗಳಂತೂ ವಿರಾಟನ ಶ್ವಾನ ಪ್ರೀತಿಗೆ ಫಿದಾ ಆಗಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Video: ನಾಯಿ ಮರಿ ಜೊತೆಗೆ ಮೈದಾನದಲ್ಲಿ ಫುಟ್​ಬಾಲ್​ ಆಡಿದ ಕೊಹ್ಲಿ! ವಿರಾಟನ ಶ್ವಾನ ಪ್ರೀತಿಗೆ ಅಡ್ಬಿದ್ರು ಫ್ಯಾನ್ಸ್​

https://newsfirstlive.com/wp-content/uploads/2023/09/Kohli-4.jpg

Load More