newsfirstkannada.com

SUPER SIX: ಆರ್​​ಸಿಬಿ ಆಟಗಾರ ಕಣ್ಣೀರು! ಪೊಲೀಸರ ಫೋಟೋಗೆ ಪೋಸ್ ಕೊಹ್ಲಿ.. ಇಲ್ಲಿವೆ ಕ್ರಿಕೆಟ್​ ಸುದ್ದಿ

Share :

27-08-2023

    ಪೊಲೀಸರ ಗ್ರೂಪ್ ಫೋಟೋಗೆ ಪೋಸ್​ ನೀಡಿದ ಕೊಹ್ಲಿ

    ನೆಚ್ಚಿನ ಶ್ವಾನಗಳೊಂದಿಗೆ ಆಟವಾಡಿದ ಯಜುವೇಂದ್ರ ಚಹಲ್

    ತಂಗಿಯ ಮದುವೆಯಲ್ಲಿ ಬೇಸರದಿಂದ ಕಣ್ಣೀರು ಹಾಕಿದ ಕ್ರಿಕೆಟಿಗ

ಪಾಕ್​​ ಆಹ್ವಾನಕ್ಕೆ ಬಿಸಿಸಿಐ ಅಸ್ತು.!

ಪಾಕ್​​ ಕ್ರಿಕೆಟ್ ಬೋರ್ಡ್​ ಆಹ್ವಾನಕ್ಕೆ ಬಿಸಿಸಿಐ ಅಸ್ತು ಎಂದಿದೆ. ಪಾಕ್ ಆಹ್ವಾನ ಸಮ್ಮತಿಸಿರುವ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹಾಗೂ ಉಪಾಧ್ಯಕ್ಷ ರಾಜೀವ್ ಶುಕ್ಲಾ ಏಷ್ಯಾಕಪ್ ಪಂದ್ಯಾವಳಿಗಳ ವೀಕ್ಷಣೆಗಾಗಿ ಪಾಕ್​ಗೆ ತೆರಳಲಿದ್ದಾರೆ. 4 ದಿನಗಳ ಕಾಲ ಪಾಕ್​ನಲ್ಲೇ ಉಳಿಯಲಿರುವ ರೋಜರ್​ ಬಿನ್ನಿ ಹಾಗೂ ರಾಜೀವ್ ಶುಕ್ಲಾಗೆ ಪಿಸಿಬಿ ಸೂಕ್ತ ವ್ಯವಸ್ಥೆ ಕಲ್ಪಿಸಿದೆ. ಸೆಪ್ಟೆಂಬರ್ 4ರಂದು ಲಾಹೋರ್‌ನ ಗವರ್ನರ್ ಹೌಸ್‌ನಲ್ಲಿ ಆಯೋಜಿಸಲಾಗಿರುವ ಔತಣಕೂಟದಲ್ಲೂ ಪಾಲ್ಗೊಳ್ಳಲಿದ್ದಾರೆ. ಮುಂಬೈ ದಾಳಿ ಬಳಿಕ ಮೊದಲ ಭೇಟಿ ಇದಾಗಿದ್ದು, ಭಾರೀ ಕುತೂಹಲ ಕೆರಳಿಸಿದೆ.

ಕ್ಯಾಂಪ್​ನಲ್ಲಿ ಕೆ.ಎಲ್.ರಾಹುಲ್ ಡ್ರಿಲ್..!

ಬೆಂಗಳೂರಿನಲ್ಲಿ ನಡೆಯುತ್ತಿರುವ ಏಷ್ಯಾಕಪ್​ ಕ್ಯಾಂಪ್​ನ 2ನೇ ದಿನ ಟೀಮ್ ಇಂಡಿಯಾಗೆ ಗುಡ್​ನ್ಯೂಸ್​ ಸಿಕ್ಕಿದೆ. ಟೀಮ್ ಇಂಡಿಯಾ ಕ್ಯಾಂಪ್​​ನ ಮೊದಲ ದಿನ ದೀರ್ಘಕಾಲ ಬ್ಯಾಟಿಂಗ್​ ನಡೆಸಿದ್ದ ಕನ್ನಡಿಗ ಕೆ.ಎಲ್.ರಾಹುಲ್, ನಿನ್ನೆ ಬ್ಯಾಟಿಂಗ್​ ಜೊತೆ ಜೊತೆಗೆ ವಿಕೆಟ್ ಕೀಪಿಂಗ್ ಅಭ್ಯಾಸ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ.! ಅಭ್ಯಾಸ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಹಾಗೂ ಶ್ರೇಯಸ್​ ಅಯ್ಯರ್ ಜೊತೆಯಾಗಿ ಬ್ಯಾಟಿಂಗ್ ಮಾಡಿದ್ದಾರೆ.

ಪೊಲೀಸರ ಫೋಟೋಗೆ ಕೊಹ್ಲಿ ಪೋಸ್​​​!

ಮುಂದಿನ ಏಷ್ಯಾಕಪ್​ ಟೂರ್ನಿಗಾಗಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ತಯಾರಿ ನಡೆಸುತ್ತಿದ್ದು, ಇದಕ್ಕಾಗಿ ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದಾರೆ. ಈ ನಡುವೆ ಕೆಲ ಖಾಸಗಿ ಕಾರ್ಯಕ್ರಮಕ್ಕೆ ತೆರಳಿದ್ದ ವಿರಾಟ್​ ಕೊಹ್ಲಿ, ಬೆಂಗಳೂರಿನ ಪೊಲೀಸ್ ಅಧಿಕಾರಿಗಳನ್ನ ಫುಲ್ ಖುಷ್ ಮಾಡಿದ್ದಾರೆ. ಪೊಲೀಸ್ ಅಧಿಕಾರಿಗಳ ಮನವಿಯಂತೆ ವಿರಾಟ್ ಕೊಹ್ಲಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಪೊಲೀಸರ ಗ್ರೂಪ್ ಫೋಟೋಗೆ ಪೋಸ್​ ನೀಡಿ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಮುಗಿಯದ ಗೆಲುವಿನ ಸಂಭ್ರಮ..!

ಐಪಿಎಲ್​ ಮುಗಿದು ಮೂರು ತಿಂಗಳು ಕಳೆದರೂ, ಐಪಿಎಲ್​​​​​​​ ಫೈನಲ್ ಗೆಲುವಿನ ಸಂಭ್ರಮಕ್ಕೆ ಮಾತ್ರ ಇನ್ನೂ ಬ್ರೇಕ್ ಬಿದ್ದಿಲ್ಲ. ಚೆನ್ನೈ ಸೂಪರ್ ಕಿಂಗ್ಸ್​ ನಾಯಕ ಎಮ್.ಎಸ್.ಧೋನಿ, ಜಿಮ್​ನಲ್ಲಿ 5ನೇ ಟ್ರೋಫಿ ಗೆಲುವನ್ನ ಜಿಮ್​ನಲ್ಲಿ ಸ್ನೇಹಿತರ ಜೊತೆ ಆಚರಿಸಿದ್ದಾರೆ. ಜಿಮ್​ನಲ್ಲಿ ಸ್ನೇಹಿತರ ಜೊತೆ ಕೇಕ್ ಕತ್ತರಿಸಿ ತಿನ್ನಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.

ಆರ್​​ಸಿಬಿ ಆಟಗಾರ ಹಸರಂಗ ಕಣ್ಣೀರು..!

ಸದಾ ಜಗಳವಾಡುತ್ತಾ ಇರುವ ಅಣ್ಣ ತಂಗಿಯರು ಮದುವೆಯ ಬಳಿಕ ತಂಗಿ ಗಂಡನ ಮನೆಗೆ ತೆರಳುವ ವೇಳೆ ಎಂತಹ ಅಣ್ಣನಾದರೂ ಕಣ್ಣೀರು ಸುರಿಸದೇ ಇರನು. ಇತಂಹದ್ದೇ ಘಟನೆ ಶ್ರೀಲಂಕಾದ ಕ್ರಿಕೆಟಿಗ ಹಸರಂಗ ಬಾಳಲ್ಲೂ ನಡೆದಿದೆ. ತಮ್ಮ ತಂಗಿಯ ಮದುವೆಯಲ್ಲಿ ಬೇಸರದಿಂದ ಕಣ್ಣೀರು ಹಾಕಿದ್ದಾರೆ. ಗಂಡನ ಮನೆಗೆ ಬೀಳ್ಕೊಡುವಾಗ ತಂಗಿಯನ್ನ ಅಪ್ಪಿಕೊಂಡು ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ತಂಗಿಯೂ ಕೂಡ ಅಣ್ಣನನ್ನು ಅಪ್ಪಿಕೊಂಡು ಕಣ್ಣೀರು ಸುರಿಸಿದ್ದಾರೆ.

ನೆಚ್ಚಿನ ಶ್ವಾನಗಳ ಜೊತೆ ಚಹಲ್..!

ಏಷ್ಯಾಕಪ್​​​​​​​​​​​​​​​​​​​​​​ನಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿರುವ ಲೆಗ್ ಸ್ಪಿನ್ನರ್​ ಯಜುವೇಂದ್ರ ಚಹಲ್, ಸದ್ಯ ಮನೆಯಲ್ಲಿ ಕಾಲಕಳೆಯುತ್ತಿದ್ದಾರೆ. ತಂಡದಲ್ಲಿ ಸ್ಥಾನ ಸಿಗದ ಬಗ್ಗೆ ಬೇಸರಗೊಂಡಿದ್ದ ಯಜುವೇಂದ್ರ ಚಹಲ್, ತಮ್ಮ ನೆಚ್ಚಿನ ಶ್ವಾನಗಳೊಂದಿಗೆ ಆಟವಾಡುತ್ತಿರುವ ವಿಡಿಯೋವೊಂದನ್ನ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ.! ಅತ್ಯಮೂಲ್ಯವಾದ ಫ್ಯಾಮಿಲಿ ಮೆಂಬರ್ ಜೊತೆ ಎಂದು ಟ್ಯಾಗ್ ಲೈನ್​​ ಬರೆದುಕೊಂಡಿದ್ದಾರೆ.

View this post on Instagram

A post shared by Yuzvendra Chahal (@yuzi_chahal23)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

SUPER SIX: ಆರ್​​ಸಿಬಿ ಆಟಗಾರ ಕಣ್ಣೀರು! ಪೊಲೀಸರ ಫೋಟೋಗೆ ಪೋಸ್ ಕೊಹ್ಲಿ.. ಇಲ್ಲಿವೆ ಕ್ರಿಕೆಟ್​ ಸುದ್ದಿ

https://newsfirstlive.com/wp-content/uploads/2023/08/Kohli-1-1.jpg

Load More