newsfirstkannada.com

ಐಫೋನ್, ಐಪ್ಯಾಡ್​, ಪಾಸ್​​ಪೋರ್ಟ್ ಎಲ್ಲ ಮರೀತಾರೆ.. ರೋಹಿತ್ ಬಗ್ಗೆ ಕೊಹ್ಲಿ ಅಚ್ಚರಿ ಹೇಳಿಕೆ!

Share :

Published August 20, 2024 at 11:42am

    ಟಿ20 ವಿಶ್ವಕಪ್ ಗೆದ್ದಿರೋ ಹಿಂದಿದೆಯಾ ರೋಹಿತ್ ಸೀಕ್ರೆಟ್?

    ಏರ್​​ಪೋರ್ಟ್​, ಹೋಟೆಲ್​​​ನಲ್ಲಿ ಮರೆತು ಹೋಗಿದ್ದು ಇದೆ

    ತನ್ನ ನೆಚ್ಚಿನ ಕ್ಯಾಪ್ಟನ್ ಕುರಿತು ವಿರಾಟ್ ಇನ್ನೇನು ಹೇಳಿದ್ರು?

ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮಾ ಎಂತಾ ಮರೆಗುಳಿ ಅನ್ನೋದನ್ನ ಬಿಡಿಸಿ ಹೇಳೋ ಅಗತ್ಯತೆ ಇಲ್ಲ. ಆದ್ರೆ, ಒಂದು ವಿಚಾರವನ್ನ ಮಾತ್ರ ರೋಹಿತ್ ಯಾವುದೇ ಕಾರಣಕ್ಕೂ ಮರೆಯಲ್ವಂತೆ. ಕ್ಯಾಪ್ಟನ್​​ ಆಗಿ ಸಕ್ಸಸ್​ ಕಂಡಿರೋದ್ರ ಹಿಂದಿನ ಸೀಕ್ರೆಟ್ ಕೂಡ​ ಅದೇ. ಆ ಸೀಕ್ರೆಟ್​ ಏನು?.

ಇದನ್ನೂ ಓದಿ: KL ರಾಹುಲ್​ಗೆ ಮೋಸವಾಗುತ್ತಾ..? ಪಾಂಡ್ಯ ಖರೀದಿಗೆ ಕೋಟಿ ಕೋಟಿ ಹಣ ಸುರಿಯಲು​ ಮುಂದಾದ RCB

ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮಾ ತನ್ನ ಸಿಡಿಲಬ್ಬರದ ಬ್ಯಾಟಿಂಗ್​, ಚಾಣಾಕ್ಷ ನಾಯಕತ್ವದಿಂದ ಕ್ರಿಕೆಟ್​ ಲೋಕದಲ್ಲಿ ಫೇಮಸ್​. ತನ್ನ ಆಟದಿಂದ ಎಷ್ಟು ಖ್ಯಾತಿಯನ್ನ ಹೊಂದಿದ್ದಾರೋ, ಮರೆವಿನಿಂದಲೂ ಅಷ್ಟೇ ಖ್ಯಾತಿ ಹೊಂದಿದ್ದಾರೆ. ರೋಹಿತ್​ ಶರ್ಮಾ ಮರೆಯದೆ ಇರೋ ವಸ್ತುಗಳೇ ಇಲ್ಲ. ಮೊಬೈಲ್​, ಐಪ್ಯಾಡ್​, ಪಾಸ್​​ಪೋರ್ಟ್ ಹಾಗೂ ಐಫೋನ್​​ ಎಲ್ಲವನ್ನೂ ರೋಹಿತ್​ ಮರೀತಾರೆ ಅಂತಾ ಟೀಮ್​ ಮೇಟ್​ ವಿರಾಟ್​ ಕೊಹ್ಲಿಯೇ ಹೇಳಿಕೊಂಡಿದ್ರು.

ಇದನ್ನೂ ಓದಿ: RCB ಮಾಜಿ ಪ್ಲೇಯರ್​ ಸ್ಫೋಟಕ ಬ್ಯಾಟಿಂಗ್​.. 48 ಎಸೆತದಲ್ಲಿ 9 ಸಿಕ್ಸರ್​, 124 ರನ್ಸ್​

ಇನ್ನು ಟಾಸ್​ಗೆ ಬಂದು ಬ್ಯಾಟಿಂಗ್​ ತೆಗೆದುಕೊಳ್ಳಬೇಕಾ, ಬೌಲಿಂಗ್​​ ತೆಗೆದುಕೊಳ್ಳಬೇಕಾ ಅನ್ನೋದನ್ನೇ ಮರೆತು ರೋಹಿತ್​ ಪಜೀತಿಗೆ ಸಿಲುಕಿದ ಘಟನೆಯು ಇದೆ. ಇಂತ ಮರೆಗುಳಿ ರೋಹಿತ್​, ಗೇಮ್​ಪ್ಲಾನ್​ ಅನ್ನ ಯಾವುದೇ ಕಾರಣಕ್ಕೂ ಮರೆಯಲ್ವಂತೆ. ಪಂದ್ಯಕ್ಕೂ ಮುನ್ನ ಏನೆಲ್ಲ ಡಿಸ್ಕಷನ್​ ನಡೆದಿರುತ್ತೋ, ಯಾವ ಆಟಗಾರನಿಗೆ, ಏನು ಗೇಮ್​ಪ್ಲಾನ್​ ರೂಪಿಸಲಾಗಿರುತ್ತೋ ಅದನ್ನ ಆನ್​​ಫೀಲ್ಡ್​​ನಲ್ಲಿ​ ಮರೆಯದೇ ಎಕ್ಸಿಕ್ಯೂಟ್​ ಮಾಡ್ತಾರಂತೆ. ಗೇಮ್​ಪ್ಲಾನ್​ ವಿಚಾರದಲ್ಲೂ ಮರೆವು ರೋಹಿತ್​ನ ಆವರಿಸಿದ್ರೆ, ಗ್ರೇಟ್​ ಕ್ಯಾಪ್ಟನ್​ ಎಂಬ ಹೆಗ್ಗಳಿಕೆಗೆ ಬರೋದಕ್ಕೆ ಸಾಧ್ಯಾನೆ ಇರ್ತಾ ಇರಲಿಲ್ಲ. ಟೀಮ್​ ಇಂಡಿಯಾ ಟಿ20 ವಿಶ್ವಕಪ್​ ಗೆಲ್ಲೋದು ಅಸಾಧ್ಯದ ಮಾತಾಗಿತ್ತು ಬಿಡಿ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಐಫೋನ್, ಐಪ್ಯಾಡ್​, ಪಾಸ್​​ಪೋರ್ಟ್ ಎಲ್ಲ ಮರೀತಾರೆ.. ರೋಹಿತ್ ಬಗ್ಗೆ ಕೊಹ್ಲಿ ಅಚ್ಚರಿ ಹೇಳಿಕೆ!

https://newsfirstlive.com/wp-content/uploads/2024/08/KOHLI_ROHIT-1.jpg

Load More