ಕೊಹ್ಲಿ ‘ನಿಗೂಢ ಸಂದೇಶ’ ಯಾರಿಗೆ? ಯಾಕೆ?
ಕೊಹ್ಲಿಗೆ ಕಾಡ್ತಿದ್ಯಾ ಭಯ, ಅನುಮಾನ, ಚಿಂತೆ?
WTC ಫೈನಲ್ ಬೆನ್ನಲ್ಲೇ ಹೆಚ್ಚಾದ ಅನುಮಾನ
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಅಂತ್ಯದ ಬೆನ್ನಲ್ಲೇ, ಮತ್ತೆ ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ವಾ ಅನ್ನೋ ಪ್ರಶ್ನೆ ಮತ್ತೆ ಹುಟ್ಟಿದೆ. ಈ ಬಗ್ಗೆ ಚರ್ಚೆಗಳು ಭುಗಿಲೆದ್ದಿವೆ. ವಿರಾಟ್ ಕೊಹ್ಲಿಯ ನಿಗೂಢ ನಡೆಯೇ ಇದಕ್ಕೆಲ್ಲಾ ಕಾರಣವಾಗಿದೆ. ಅಷ್ಟಕ್ಕೂ ವಿರಾಟ್ ಕೊಹ್ಲಿ ಮಾಡಿದ್ದೇನು ಅನ್ನೋದ್ರ ವಿವರ ಇಲ್ಲಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಫೈಟ್ ಅಂತ್ಯ ಕಂಡು 2 ದಿನ ಆಯ್ತು. ಆದ್ರೂ ಈ ಸೋಲಿನ ಆಘಾತದಿಂದ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಇನ್ನೂ ಹೊರಬಂದಿಲ್ಲ. ಫೈನಲ್ ಫೈಟ್ನಲ್ಲಿ ಟೀಮ್ ಇಂಡಿಯಾ ಮುಗ್ಗರಿಸಿದ್ದಕ್ಕೆ ಸಾಲು ಸಾಲು ಕಾರಣಗಳಿವೆ. ಈ ಸೋಲಿಗೆ ಕಾರಣಗಳನ್ನು ಹುಡುಕೋದ್ರಲ್ಲಿ ಕ್ರಿಕೆಟ್ ಎಕ್ಸ್ಪರ್ಟ್ಸ್, ಮಾಜಿ ಕ್ರಿಕೆಟರ್ಸ್ ಬ್ಯುಸಿಯಾಗಿದ್ದಾರೆ. ಇದ್ರ ನಡುವೆಯೇ ಕ್ರಿಕೆಟ್ ವಲಯದಲ್ಲಿ ಮತ್ತೊಂದು ಚರ್ಚೆ ಹುಟ್ಟಿದೆ. ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ನಲ್ಲಿ ಎಲ್ಲವೂ ಸರಿಯಿಲ್ವಾ ಎಂಬ ಪ್ರಶ್ನೆ ಎಲ್ಲರನ್ನೂ ಕಾಡ್ತಿದೆ. ಇದಕ್ಕೆಲ್ಲಾ ಕಾರಣ ವಿರಾಟ್ ಕೊಹ್ಲಿ.
ಟೀಮ್ ಇಂಡಿಯಾ ಡ್ರೆಸ್ಸಿಂಗ್ರೂಮ್ನಲ್ಲಿ ಬಿರುಗಾಳಿ..?
ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಅಂತ್ಯದ ಬೆನ್ನಲ್ಲೇ ಟೀಮ್ ಇಂಡಿಯಾ ಆಟಗಾರರ ಒಗ್ಗಟ್ಟಿನ ಬಗ್ಗೆ ಪ್ರಶ್ನೆ ಎದ್ದಿದೆ. ಟೀಮ್ ಇಂಡಿಯಾದಲ್ಲಿ ಪ್ರತಿಷ್ಠೆಯ ಫೈಟ್ ನಡೀತಿದೆ ಅನ್ನೋ ಸೀಕ್ರೆಟ್ ಆಗೇನೂ ಉಳಿದಿಲ್ಲ. ಆದ್ರೂ ಕಳೆದ ಕೆಲ ವರ್ಷಗಳಿಂದಲೂ ಆಗಾಗ ಈ ಬಗ್ಗೆ ಚರ್ಚೆಯಾದಾಗಲೆಲ್ಲಾ, ಆಟಗಾರರು ಇದಕ್ಕೆ ತೇಪೆ ಹಚ್ಚೋ ಕೆಲಸ ಮಾಡ್ತಿದ್ದಾರೆ. ಒಂದಲ್ಲ ಒಂದು ವಿಷ್ಯದಲ್ಲಿ ಇದು ರಿವೀಲ್ ಆಗ್ತಲೇ ಇರುತ್ತೆ. ಇದೀಗ ವಿರಾಟ್ ಕೊಹ್ಲಿ ಹಾಕಿರೋ ಒಂದು ಪೋಸ್ಟ್ ಮತ್ತೆ ಬಿರುಗಾಳಿ ಎಬ್ಬಿಸಿದೆ.
ಕೊಹ್ಲಿಯ ‘ನಿಗೂಢ ಸಂದೇಶ’ ಯಾರಿಗೆ? ಯಾಕೆ?
ಮೊದಲೆಲ್ಲಾ ಸೋಷಿಯಲ್ ಮೀಡಿಯಾಗಳಿಂದ ಸಿಕ್ಕಾಪಟ್ಟೆ ದೂರ ಇದ್ದ ಕೊಹ್ಲಿ, ಕಮರ್ಷಿಯಲ್ ಪೋಸ್ಟ್ಗಳ ಮಾತ್ರ ಮಾಡ್ತಿದ್ರು. ಕಳೆದ ಕೆಲ ತಿಂಗಳಿಂದ ಕೊಹ್ಲಿ ನಡೆ ಬದಲಾಗಿದೆ. ಎಸ್ಪೆಷಲಿ ತಮ್ಮ ಇನ್ಸ್ಸ್ಟಾಗ್ರಾಂ ಖಾತೆಯಲ್ಲಿ ಹಲವು ಕೋಟ್ಗಳನ್ನ ಹಾಕೋಕೆ ಶುರುವಿಟ್ಟುಕೊಂಡಿದ್ದಾರೆ. ಟೆಸ್ಟ್ ಚಾಂಪಿಯನ್ ಶಿಪ್ ಸೋಲಿನ ಬಳಿಕವೂ ಒಂದು ಪೋಸ್ಟ್ ಹಾಕಿದ್ದಾರೆ. ಅದೇ ವಿವಾದದ ಕೇಂದ್ರ ಬಿಂದುವಾಗಿರೋದು.
ಮೌನ ಬಲಿಷ್ಠ ಬಲದ ಮೂಲವಾಗಿದೆ.. ಇಷ್ಟೇ ಕೊಹ್ಲಿ ಹಾಕಿರೋ ಪೋಸ್ಟ್ನ ಅರ್ಥ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸೋಲಿನ ಕಾರಣಕ್ಕೆ ಟೀಕೆಗಳು ವ್ಯಕ್ತವಾಗ್ತಿವೆ ಅದಕ್ಕೆ ಕೊಹ್ಲಿ ಈ ಪೋಸ್ಟ್ ಹಾಕಿದ್ದಾರೆ ಎಂದು ನೀವು ಹೇಳ್ಬೋದು. ಪಂದ್ಯದ 4ನೇ ದಿನದಾಟದ ಅಂತ್ಯದ ಬಳಿಕ ಹಾಕಿದ್ದ ಸ್ಟೋರಿ ಬೇರೆನೆ ಕಥೆ ಹೇಳುತ್ತೆ.
ಪೈನಲ್ ಪಂದ್ಯದ 2ನೇ ಇನ್ನಿಂಗ್ಸ್ನ 4ನೇ ದಿನದಾಟದಲ್ಲಿ ವಿರಾಟ್ ಕೊಹ್ಲಿ ಸಖತ್ ಆಗಿ ಇನ್ನಿಂಗ್ಸ್ ಕಟ್ಟಿದ್ರು. ಕಾನ್ಫಿಡೆಂಟ್ ಆಗಿ ಬ್ಯಾಟಿಂಗ್ ನಡೆಸ್ತಿದ್ದ ಕೊಹ್ಲಿ ದಿನದ ಅಂತ್ಯಕ್ಕೆ ಅರ್ಧಶತಕ ಸನಿಹ ಬಂದು ನಿಂತಿದ್ರು. ಕೊಹ್ಲಿ ಬ್ಯಾಟ್ನಿಂದ ಇನ್ನೊಂದು ಸೆಂಚುರಿ ಫಿಕ್ಸ್ ಎಂದು ಫ್ಯಾನ್ಸ್ ಅಂದುಕೊಂಡಿದ್ರು. ಕೊಹ್ಲಿ ಅಷ್ಟು ಸಾಲಿಡ್ ಆಗಿ ಬ್ಯಾಟಿಂಗ್ ನಡೆಸ್ತಾ ಇದ್ರು. ಆದ್ರೆ ದಿನದಾಟ ಮುಗಿದಿದ್ದೇ ಮುಗಿದಿದ್ದು ಕೊಹ್ಲಿ ನಿಗೂಢ ಪೋಸ್ಟ್ ಹಾಕಿ ಹಲ ಅನುಮಾನ ಹುಟ್ಟಿಸಿದ್ರು.
‘ಬಿಟ್ಟು ಬಿಡುವುದನ್ನ ಕಲಿಯಬೇಕಿದೆ’
‘ನಮಗೆ ಹಲವಾರು ಚಿಂತೆಗಳು, ಭಯಗಳು ಮತ್ತು ಅನುಮಾನಗಳು ಇದ್ದರೆ, ಅಲ್ಲಿ ಇರಲು ಅಥವಾ ಪ್ರೀತಿಸಲು ಅವಕಾಶವೇ ಇರಲ್ಲ. ಹೀಗಾಗಿ ನಾವು ಬಿಟ್ಟು ಬಿಡುವುದನ್ನ ಕಲಿಯಬೇಕಿದೆ’
ವಿರಾಟ್ ಕೊಹ್ಲಿ
ಡ್ರೆಸ್ಸಿಂಗ್ ರೂಮ್ನಲ್ಲಿ ಭಯ, ಅನುಮಾನ?
ಕೊಹ್ಲಿ 4ನೇ ದಿನದ ಅಂತ್ಯದಲ್ಲಿ ಹಾಕಿದ್ದ ಪೋಸ್ಟ್ಗೂ, 5ನೇ ದಿನದಾಟದ ಅಂತ್ಯದ ಬಳಿಕ ಹಾಕಿದ ಪೋಸ್ಟ್ಗೂ ಕನೆಕ್ಷನ್ ಇರೋದು ಪಕ್ಕಾ. ಹೀಗಾಗಿಯೇ ಈ ಸ್ಟೋರಿ ನೋಡಿರೋ ಫ್ಯಾನ್ಸ್, ರೋಹಿತ್ ಶರ್ಮಾ ಕಡೆಗೆ ಬೊಟ್ಟು ಮಾಡ್ತಿದ್ದಾರೆ. ಆನ್ಫೀಲ್ಡ್ ಹಾಗೂ ಆಫ್ ಫೀಲ್ಡ್ನಲ್ಲಿ ಕೊಹ್ಲಿ-ರೋಹಿತ್ ಸದಾ ಅಂತರ ಕಾಯ್ದುಕೊಂಡೆ ಇರ್ತಾರೆ. ಹೀಗಾಗಿಯೇ ಕೊಹ್ಲಿ ಹೇಳಿದಂತೆ ಟೀಮ್ ಇಂಡಿಯಾದಲ್ಲಿ ಭಯ & ಅನುಮಾನದ ವಾತಾವರಣ ಇದ್ಯಾ ಎಂಬ ಪ್ರಶ್ನೆ ಹುಟ್ಟಿದೆ.
ಕೊಹ್ಲಿ ಸಲಹೆ ನೀಡಿದ್ರೆ ದಿವ್ಯ ನಿರ್ಲಕ್ಷ್ಯ?
ಈ ತೆರನಾದ ಒಂದು ಸುದ್ದಿಯೂ ಟೀಮ್ ಕ್ಯಾಂಪ್ನಿಂದ ಹೊರಬಿದ್ದಿದೆ. ಇದೇ ಕಾರಣಕ್ಕೆ ಸೋಲಿನ ಬಳಿಕ ಕೊಹ್ಲಿ ಸ್ಟೋರಿಗಳನ್ನ ಹಾಕಿದ್ದು ಎನ್ನಲಾಗ್ತಿದೆ. ಫೈನಲ್ ಪಂದ್ಯದ ಆರಂಭಕ್ಕೂ ಮುನ್ನವೇ ಟೀಮ್ ಸೆಲೆಕ್ಷನ್ ವಿಚಾರದಲ್ಲಿ ಕೊಹ್ಲಿ ಬಹುಮುಖ್ಯ ಸಲಹೆ ನೀಡಿದ್ರಂತೆ. ಕ್ಯಾಪ್ಟನ್-ಕೋಚ್ ಇದನ್ನ ನಿರ್ಲ್ಯಕ್ಷಿಸಿದ್ರಂತೆ.. ಇದೇ ಕಾರಣಕ್ಕೆ ವಿರಾಟ್ ಅಸಮಾಧಾನಗೊಂಡಿದ್ದಾರೆ ಅನ್ನೋದು ತಂಡದ ಮೂಲಗಳ ಮಾಹಿತಿಯಾಗಿದೆ.
ಈ ಹಿಂದಿನ ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ತಮ್ಮ ಆತ್ಮಕಥೆಯಲ್ಲೇ ಕೊಹ್ಲಿ vs ರೋಹಿತ್ ನಡುವೆ ಪ್ರತಿಷ್ಠೆಯ ಫೈಟ್ ಇದ್ದಿದ್ದನ್ನ ಬಿಚ್ಚಿಟ್ಟಿದ್ರು. ಇಷ್ಟು ದಿನ ಇದು ಬೂದಿ ಮುಚ್ಚಿದ ಕೆಂಡದಂತಿತ್ತು. ಇದೀಗ ಮತ್ತೆ ಮುನ್ನಲೆಗೆ ಬಂದಿದೆ. ಮುಂದೆ ಏನಾಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್