/newsfirstlive-kannada/media/post_attachments/wp-content/uploads/2024/11/VIRAT-KOHLI-3.jpg)
ಅಸಿಸ್​ ಕಾ ಬಾಸ್​​​..! ಟೀಮ್​ ಇಂಡಿಯಾ ಬ್ಯಾಟ್ಸ್​​ಮನ್​ ವಿರಾಟ್​ ಕೊಹ್ಲಿನ ಹೀಗೆ ಕರಿಯೋದ್ಯಾಕೆ ಅನ್ನೋದು ಪರ್ತ್​ ಟೆಸ್ಟ್​ನ 3ನೇ ದಿನದಾಟದಲ್ಲಿ ಮತ್ತೆ ಪ್ರೂವ್​ ಆಯ್ತು. ಅದೇನು ಬ್ಯಾಟಿಂಗ್​​.. ಅದೇನು ಇನ್ನಿಂಗ್ಸ್​.. ಅಗ್ರೆಶನ್​, ಇಂಟೆಂಟ್​, ಕ್ಲಾಸಿಕ್​ ಶಾಟ್ಸ್​​... ಅಬ್ಬಬ್ಬಾ..! ಕೊಹ್ಲಿಯನ್ನ ಕ್ರಿಕೆಟ್​ ಲೋಕದ ಕಿಂಗ್​ ಅನ್ನೋದ್ಯಾಕೆ ಅನ್ನೋ ಪ್ರಶ್ನೆಗೆ ನಿನ್ನೆಯ ಇನ್ನಿಂಗ್ಸ್​​ ಉತ್ತರವಾಗಿತ್ತು. ಕಿಂಗ್​ ಕೊಹ್ಲಿಯ ಕ್ಲಾಸಿನ್​ ಇನ್ನಿಂಗ್ಸ್​ನ ಹೈಲೆಟ್ಸ್​ ಇಲ್ಲಿದೆ ನೋಡಿ.
ಈ ಹಿಂದಿನ ಬಾಂಗ್ಲಾದೇಶ, ನ್ಯೂಜಿಲೆಂಡ್​ ವಿರುದ್ಧದ ಸರಣಿಯಲ್ಲೂ ವಿರಾಟ್​ ಕಳಪೆ ಪರ್ಫಾಮೆನ್ಸ್​ ನೀಡಿದ್ದ ಕೊಹ್ಲಿ, ಪರ್ತ್​ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲೂ ಫ್ಲಾಪ್​ ಶೋ ನೀಡಿದ್ರು. ವೈಫಲ್ಯ ಸುಳಿಗೆ ಸಿಲುಕಿದ್ದ ಕೊಹ್ಲಿಯನ್ನ ಟೀಕಿಸದವರೇ ಇಲ್ಲ. ಆ ಎಲ್ಲಾ ಟೀಕೆಗಳಿಗೆ ತನ್ನ ಬ್ಯಾಟ್​​ನಿಂದಲೇ ಕೊಹ್ಲಿ ಆನ್ಸರ್​ ಕೊಟ್ರು. ಅಂದು ಕಳಪೆ ಆಟ ನೋಡಿ ಟೀಕಿಸಿದವರೆಲ್ಲಾ, ಈಗ ಉಘೇ ಉಘೇ ಅಂತಿದ್ದಾರೆ.
/newsfirstlive-kannada/media/post_attachments/wp-content/uploads/2024/11/KOHLI_VIRAT.jpg)
ಕಿಂಗ್​ ಕೊಹ್ಲಿ ಆಟಕ್ಕೆ ಬೆಚ್ಚಿ ಬಿದ್ದ ಕಾಂಗರೂಸ್​.!
ಪರ್ತ್​​ ಟೆಸ್ಟ್​ನ ಮೂರನೇ ದಿನವೂ ಟೀಮ್​ ಇಂಡಿಯಾ ಪಾರಮ್ಯ ಮರೆಯಿತು. ಟೀಮ್​ ಇಂಡಿಯಾದ ಬ್ಯಾಟ್ಸ್​ಮನ್​ಗಳ ಆರ್ಭಟಕ್ಕೆ ಕಾಂಗರೂ ಬೌಲರ್​ಗಳು ಕಂಗಾಲ್​ ಆದ್ರು. ಆದ್ರಲ್ಲೂ, 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕಿಂಗ್​ ಕೊಹ್ಲಿಯ ಆಟಕ್ಕೆ ಆಸ್ಟ್ರೇಲಿಯಾ ಪಡೆ ಬೆಸ್ತು ಬಿದ್ರು. ಕ್ರಿಸ್​​​ಗಿಳಿದ ಆರಂಭದಲ್ಲಿ ಕೊಹ್ಲಿ ಎಚ್ಚರಿಕೆಯ ಆಟವಾಡಿದ್ರು. ಏಕಾಗ್ರತೆಯಿಂದ ಬ್ಯಾಟಿಂಗ್​ ನಡೆಸಿದ ಕೊಹ್ಲಿ, ಆಸ್ಟ್ರೇಲಿಯನ್​ ಬೌಲರ್​​ಗಳ ಸಖತ್​ ಆಗಿ ಡೀಲ್​ ಮಾಡಿದ್ರು.
/newsfirstlive-kannada/media/post_attachments/wp-content/uploads/2024/11/VIRAT_KOHLI-3.jpg)
ಕೊಹ್ಲಿ ಮೊದಲ ರನ್​ಗಳಿಸಿದ್ದು ಬರೋಬ್ಬರಿ 10ನೇ ಎಸೆತಕ್ಕೆ.! ಬೌಂಡರಿ ಸಿಡಿಸದ್ದು 22ನೇ ಎಸೆತಕ್ಕೆ.!
ಕ್ರಿಸ್​​ನಲ್ಲಿ ಸೆಟಲ್​ ಆಗೋವರೆಗೆ ತಾಳ್ಮೆಯ ಆಟವಾಡಿದ ವಿರಾಟ್​ ಕೊಹ್ಲಿ ಸೆಟಲ್​​​ ಆದ ಬಳಿಕ ಗೇರ್​ ಚೇಂಜ್​ ಮಾಡಿದ್ರು. ಕ್ರಿಸ್​​ ಕಚ್ಚಿ ನಿಂತ ಬಳಿಕ ಕೊಹ್ಲಿಯ ಕಾನ್ಫಿಡೆನ್ಸ್​​ ಯಾವ ರೇಂಜಿಗೆ ಹೆಚ್ಚಾಯ್ತು ಆಯ್ತು ಅಂದ್ರೆ ವೇಗಿ ಮಿಚೆಲ್​ ಸ್ಟಾರ್ಕ್​​ನ ಶರವೇಗದ ಎಸೆತಕ್ಕೆ ಸಿಕ್ಸರ್​ ಸಿಡಿಸುವಷ್ಟು.! ಕೊಹ್ಲಿ ಪ್ಲೇ ಮಾಡಿದ ಕಟ್​ ಶಾಟ್​​​ ಸಖತ್​ ಕ್ಲಾಸಿ ಆಗಿತ್ತು.
ಹಾಫ್​ ಸೆಂಚುರಿ ಗಡಿ ದಾಟುವವರೆಗೆ ಆಸಿಸ್​ ಬೌಲರ್​ಗಳ ತಾಳ್ಮೆ ಪರೀಕ್ಷೆ ಮಾಡಿದ ವಿರಾಟ್​ ಕೊಹ್ಲಿ, ಅರ್ಧಶತಕದ ಬಳಿಕ ಅಬ್ಬರದ ಆಟ ಶುರುವಿಟ್ಟುಕೊಂಡ್ರು. ಕಿಂಚಿತ್ತೂ ಹಿಂಜರಿಕೆಯಿಲ್ಲದೇ ಬ್ಯಾಟ್​ ಬೀಸಿದ ವಿರಾಟ್​ ಕೊಹ್ಲಿ, ಬೌಲರ್​ಗಳ ಮೇಲೆ ಸವಾರಿ ಮಾಡಿದ್ರು. ಫುಲ್​ ಶಾಟ್​, ಅಪ್ಪರ್ ​ಕಪ್​, ರಿವರ್ಸ್​ ಸ್ವೀಪ್​, ಸ್ವೀಪ್​​.. ಎಲ್ಲಾ ಶಾಟ್​​ಗಳನ್ನ ಕಾನ್ಫಿಡೆಂಟ್​ ಆಗಿ ಪ್ಲೇ ಮಾಡಿದ್ರು.
491 ದಿನಗಳ ಕೊರಗಿಗೆ ಪರ್ತ್​​ನಲ್ಲಿ ಬಿತ್ತು ಬ್ರೇಕ್​.! 30 ಟೆಸ್ಟ್​ ಸೆಂಚುರಿ ಸಿಡಿಸಿದ ವಿರಾಟ್​.!
ಅಂತಿಮವಾಗಿ ಮಾನರ್ಸ್​​ ಲಬುಶೇನ್​ 134.3ನೇ ಎಸೆತವನ್ನ ಬೌಂಡರಿ ಸಿಡಿಸಿದ ವಿರಾಟ್​​ ಕೊಹ್ಲಿ, ಬರೋಬ್ಬರಿ 491 ದಿನಗಳ ಕೊರಗಿಗೆ ಬ್ರೇಕ್​ ಹಾಕಿದ್ರು. ಪರ್ತ್​​ನಲ್ಲಿ 30ನೇ ಟೆಸ್ಟ್​ ಸೆಂಚುರಿ ಸಿಡಿಸಿ ಸಂಭ್ರಮಿಸಿದ್ರು. 491 ದಿನಗಳಿಂದ ಶತಕ ಸಿಡಿಸಿಲ್ಲ ಅನ್ನೋ ಕೊರಗು ಕೊಹ್ಲಿಯನ್ನ ಎಷ್ಟು ಕಾಡಿತ್ತು ಅನ್ನೋದನ್ನ ಶತಕ ಸಿಡಿಸಿದ ಬಳಿಕ ಕೊಹ್ಲಿ ಸಂಭ್ರಮಿಸಿದ ಪರಿಯೇ ಹೇಳ್ತಿತ್ತು.
/newsfirstlive-kannada/media/post_attachments/wp-content/uploads/2024/11/VIRAT-KOHLI-2-1.jpg)
ಸಚಿನ್​ ದಾಖಲೆ ಬ್ರೇಕ್​​, ಆಸಿಸ್​​​ನಲ್ಲಿ ಕೊಹ್ಲಿನೇ ‘ಕಿಂಗ್​’.!
ಆಸ್ಟ್ರೇಲಿಯಾ ನೆಲದಲ್ಲಿ ದಿಗ್ಗಜ ಸಚಿನ್​ ತೆಂಡುಲ್ಕರ್​​ 6 ಟೆಸ್ಟ್​ ಸೆಂಚುರಿ ಸಿಡಿಸಿದ್ರು. ಇದೀಗ 7ನೇ ಟೆಸ್ಟ್​​ ಶತಕ ಪೂರೈಸಿದ ಕೊಹ್ಲಿ ಈಗ ಸಚಿನ್​ ದಾಖಲೆ ಬ್ರೇಕ್​ ಮಾಡಿದ್ರು. ಕಾಂಗರೂ ನಾಡಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಭಾರತೀಯ ಎಂಬ ಖ್ಯಾತಿಗೆ ಕೊಹ್ಲಿ ಪಾತ್ರರಾದ್ರು.
ಇದು ಆರಂಭ ಅಷ್ಟೇ.. ಕಾದಿದೆ ವಿರಾಟ್​ ವೀರಾವೇಷ.!
ಆಸಿಸ್​ ವಿರುದ್ಧದ ಆಡೋದಂದ್ರೆ ಕೊಹ್ಲಿಗೆ ಸಿಕ್ಕಾಪಟ್ಟೆ ಇಷ್ಟ.! ಕಾಂಗರೂ ನಾಡಿನ ಟಫ್​ ಪಿಚ್​ಗಳಲ್ಲಿ ರನ್​ಗಳಿಸೋದು ಮತ್ತಷ್ಟು ಇಷ್ಟ.! ಮೊದಲ ಟೆಸ್ಟ್​ನಲ್ಲಿ ಶತಕ ಸಿಡಿಸಿ ಮಿಂಚಿರೋ ವಿರಾಟ್​ ಕೊಹ್ಲಿ, ಫಾರ್ಮ್​ಗೆ ಮರಳಿದ್ದಾರೆ. ಸಹಜವಾಗಿಯೇ ಈ ಶತಕದಿಂದ ಕೊಹ್ಲಿಯ ಕಾನ್ಫಿಡೆನ್ಸ್​ ಹೆಚ್ಚಾಗಿದೆ. ಮೊದಲ ಟೆಸ್ಟ್​ನಲ್ಲಿ ವೀರಾವೇಶದಿಂದ ಬ್ಯಾಟಿಂಗ್​ ನಡೆಸಿರೋ ಕೊಹ್ಲಿ, ಸರಣಿಯ ಉಳಿದ ಪಂದ್ಯಗಳಲ್ಲೂ ಮಿಂಚು ಹರಿಸೋದು ಪಕ್ಕಾ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us