ಬಾಂಗ್ಲಾದೇಶದ ವಿರುದ್ಧ ಗೆದ್ದು ಬೀಗಿದ್ದ ಟೀಂ ಇಂಡಿಯಾ
ಅಂದು ಶತಕ ಸಿಡಿಸಿದ್ದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ
ಈ ಬಗ್ಗೆ ಕನ್ನಡಿಗ ರಾಹುಲ್ ಬಿಚ್ಚಿಟ್ಟ ಅಸಲಿ ಸತ್ಯವೇನು..?
ಇತ್ತೀಚೆಗೆ ಬಾಂಗ್ಲಾದೇಶದ ವಿರುದ್ಧ ನಡೆದ ಐಸಿಸಿ ಏಕದಿನ ವಿಶ್ವಕಪ್ 4ನೇ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದು ಬೀಗಿದೆ. ಬಾಂಗ್ಲಾದೇಶ ನೀಡಿದ ಗುರಿ ಬೆನ್ನತ್ತಿದ ಟೀಂ ಇಂಡಿಯಾದ ಪರ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಶತಕ ಸಿಡಿಸಿ ತಂಡವನ್ನು ಗೆಲ್ಲಿಸಿದರು. ಆದರೀಗ, ಕೊಹ್ಲಿ ಸಿಡಿಸಿದ ಶತಕದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.
ಹೌದು, ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಭಾರತ ಪ್ರಚಂಡ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಶತಕ ಸಿಡಿಸಿದ್ದು ವೈಯಕ್ತಿಕ ಮೈಲುಗಲ್ಲು ತುಲುಪು ಉದ್ದೇಶದಿಂದ ಅನ್ನೋ ಚರ್ಚೆ ನಡೆಯುತ್ತಿದೆ. ಪರ-ವಿರೋಧದ ಚರ್ಚೆ ಬೆನ್ನಲ್ಲೇ ಈ ವಿವಾದಕ್ಕೆ ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಕೆ.ಎಲ್ ರಾಹುಲ್ ತೆರೆ ಎಳೆದಿದ್ದಾರೆ.
ಈ ಕುರಿತು ಮಾತಾಡಿದ ಕೆ.ಎಲ್ ರಾಹುಲ್, ವಿರಾಟ್ ನನ್ನ ಬಳಿಗೆ ಬಂದು ನೀನು ಸಿಂಗಲ್ ತೆಗೆದುಕೋ. ನಾನು ಶತಕ ಬಾರಿಸಲು ಎಂದೇ ಸಿಂಗಲ್ ಓಡುತ್ತಿಲ್ಲ ಎಂದು ಜನ ಕೆಟ್ಟದಾಗಿ ಮಾತಾಡುತ್ತಾರೆ. ಇದು ನನಗೆ ಸರಿ ಕಾಣಿಸುತ್ತಿಲ್ಲ ಎಂದಿದ್ದರು ಎಂದರು.
ನಾನೇ ಸಿಂಗಲ್ ಓಡಲ್ಲ ಅಂದೆ ಎಂದ ಕನ್ನಡಿಗ
ಇನ್ನು, ನಾನು ಆಗ ಸಿಂಗಲ್ ರನ್ ಓಡೋದನ್ನ ನಿರಾಕರಿಸಿದೆ. ಜತೆಗೆ ಜನ ಏನಾದ್ರೂ ಮಾತಾಡಿಕೊಳ್ಳಲಿ. ನಾವು ಈಗ ಜಯದ ಸನಿಹದಲ್ಲಿದ್ದೇವೆ. ಸೆಂಚುರಿ ಪೂರ್ಣಗೊಳಿಸಿ ಎಂದು ಹೇಳಿದೆ. ಅದಕ್ಕೆ ಕೊಹ್ಲಿ ಸೆಂಚೂರಿ ಬಾರಿಸಿದ್ದಾರೆ ಎಂದು ಕೆ.ಎಲ್ ರಾಹುಲ್ ಅಸಲಿ ಸತ್ಯ ಬಿಚ್ಚಿಟ್ಟರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ