ಚೆಪಾಕ್ ಟೆಸ್ಟ್ನಲ್ಲಿ ಕಿಂಗ್ ಕೊಹ್ಲಿ ಫ್ಲಾಪ್ ಶೋ
ಬಾಂಗ್ಲಾ ಚಕ್ರವ್ಯೂಹಕ್ಕೆ ಸಿಲುಕಿ ಕೊಹ್ಲಿ ವಿಲವಿಲ
ಎಲ್ಲಿ ಹೋಯ್ತು ರನ್ ಮಷೀನ್ ಹಳೇ ಖದರ್..?
ಕಿಂಗ್ ಕೊಹ್ಲಿ ಅಂದ್ರೆ ಎದುರಾಳಿ ಪಡೆ ಬೆಚ್ಚಿಬೀಳುವ ಕಾಲ ಇತ್ತು. ಅಂತಹ ಎದುರಾಳಿ ತಂಡಗಳೇ ಈಗ ಕೊಹ್ಲಿಯನ್ನ ಸುಲಭವಾಗಿ ಖೆಡ್ಡಾಗೆ ಬೀಳಿಸ್ತಿವೆ. ಬಾಂಗ್ಲಾದೇಶದ ವಿರುದ್ಧ ವಿರಾಟ್ ಅಟ್ಟರ್ ಫ್ಲಾಪ್ ಶೋ ಕಂಟಿನ್ಯೂ ಆಗಿದೆ. ಜೊತೆಗೆ ತಾನೆಸಗಿದ ಮಹಾ ಪ್ರಮಾದಿಂದ ಎದುರಾಳಿಗೆ ವಿಕೆಟ್ ಗಿಫ್ಟ್ ನೀಡಿ, ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಚೆಪಾಕ್ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ಪ್ರವಾಸಿ ಬಾಂಗ್ಲಾದೇಶ ತಂಡದ ವಿರುದ್ಧ ಕಂಪ್ಲೀಟ್ ಪಾರಮ್ಯ ಮೆರೆದಿದೆ. ಫಸ್ಟ್ ಡೇ ಆಲ್ರೌಂಡರ್ಸ್ ಆರ್ಭಟಿಸಿದ್ರೆ ಎರಡನೇ ದಿನ ಬೌಲರ್ಸ್ ಬೆಂಕಿ ಉಗುಳಿದ್ರು. 308 ರನ್ ಮುನ್ನಡೆ ಗಳಿಸಿರೋ ರೋಹಿತ್ ಪಡೆ ಈಸಿಯಾಗಿ ಬಾಂಗ್ಲಾವನ್ನ ಬೇಟೆಯಾಡುವ ಹುಮ್ಮಸ್ಸಿನಲ್ಲಿದೆ. ಆದರೆ ಭಾರತ ಬೊಂಬಾಟ್ ಪರ್ಫಾಮೆನ್ಸ್ ನೀಡಿದ್ರೂ ಕಿಂಗ್ ಕೊಹ್ಲಿ ಮಾತ್ರ ಅಟ್ಟರ್ ಫ್ಲಾಪ್ ಆಗಿದ್ದಾರೆ.
ಇದನ್ನೂ ಓದಿ:ಗಿಲ್, ಪಂತ್ ಜವಾಬ್ದಾರಿಯುತ ಶತಕ.. ಟೆಸ್ಟ್ನಲ್ಲೂ ಬೌಂಡರಿ, ಸಿಕ್ಸರ್ಗಳ ಸುರಿಮಳೆಗೈದ ಪಂತ್..!
ಮೊದಲ ಇನ್ನಿಂಗ್ಸ್ಗೆ ಒಂದಂಕಿಗೆ ಕೊಹ್ಲಿ ಸುಸ್ತು
8 ತಿಂಗಳ ಬಳಿಕ ರೆಡ್ಬಾಲ್ ಕ್ರಿಕೆಟ್ಗೆ ಮರಳಿದ ಕಿಂಗ್ ಕೊಹ್ಲಿ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿತ್ತು. ಅದನ್ನ ರನ್ ಮಷೀನ್ ಹುಸಿಯಾಗಿಸಿದ್ರು. ರೆಡ್ ಸಾಡ್ ಪಿಚ್ನಲ್ಲಿ ಅಬ್ಬರಿಸಿ ತಂಡಕ್ಕೆ ಅಪತ್ಬಾಂಧವನಾಗಬೇಕಿದ್ದ ಕೊಹ್ಲಿ ಮೊದಲ ಇನ್ನಿಂಗ್ಸ್ನಲ್ಲಿ ಬರೀ 6 ರನ್ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ರು.
2ನೇ ಇನ್ನಿಂಗ್ಸ್ನಲ್ಲಿ ಅದೇ ಕಥೆ..
ಮೊದಲ ಇನ್ನಿಂಗ್ಸ್ನಲ್ಲಿ ಫೇಲ್ಯೂರ್ ಆದ ಎರಡನೇ ಇನ್ನಿಂಗ್ಸ್ನಲ್ಲಿ ಅದೇ ಚಾಳಿ ಮುಂದವರಿಸಿದ್ರು. ಪಾಸಿಟಿವ್ ಆಗಿ ಕಾಣಿಸ್ತಿದ್ದ ವಿರಾಟ್, 17 ರನ್ ಗಳಿಸಿದ್ದಾಗ ಮೆಹಿದಿ ಹಸನ್ ಸ್ಪಿನ್ ಬಲೆಗೆ ಬಿದ್ರು. ಇದರೊಂದಿಗೆ ಲ್ಯಾಂಗ್ಗ್ಯಾಪ್ ಬಳಿಕ ಬಿಗ್ ಇನ್ನಿಂಗ್ಸ್ ಕಟ್ಟುವ ಸುವರ್ಣ ಅವಕಾಶವನ್ನ ಕೈಚೆಲ್ಲಿದ್ರು.
ಬ್ಯಾಟ್ ಎಡ್ಜ್ ಆಗಿದ್ರೂ DRS ತೆಗೆದುಕೊಳ್ಳದ ವಿರಾಟ್
ಮೆಹಿದಿ ಹಸನ್ಗೆ ಕೊಹ್ಲಿ LBW ಗೆ ಅಪೀಲ್ ಮಾಡಿದ್ದೇ ತಡ, ಅಂಪೈರ್ ಔಟ್ ರಿಚರ್ಡ್ ಕೆಟಲ್ಬರೋ ಔಟ್ ಎಂದು ತೀರ್ಪು ನೀಡಿದ್ರು. ಆದ್ರೆ ಅಸಲಿಗೆ ಕೊಹ್ಲಿ ಔಟಾಗಿರ್ಲೆ ಇಲ್ಲ. ಯಾಕಂದ್ರೆ ಅಲ್ಟ್ರಾಎಡ್ಜ್ನಲ್ಲಿ ಚೆಂಡು ಮೊದಲು ಬ್ಯಾಟ್ಗೆ ತಾಗಿದ್ದು, ಕ್ಲಿಯರ್ ಆಗಿ ಕಾಣ್ತಿತ್ತು. ಆದ್ರೆ ಇದನ್ನ ಕೊಹ್ಲಿ ಜಡ್ಜ್ ಮಾಡುವಲ್ಲಿ ಫೇಲಾದ್ರು.
ಇದನ್ನೂ ಓದಿ:ಆಕೆ ನನಗೆ ಚೆನ್ನಾಗಿ ಪರಿಚಯ- ಮಹಿಳೆಯ ಗಂಭೀರ ಆರೋಪಕ್ಕೆ ಟ್ವಿಸ್ಟ್ ಕೊಟ್ಟ ಮುನಿರತ್ನ
ಗಲಿಬಿಲಿಯಲ್ಲೆ ಹೊರನಡೆದ ಸಾಮ್ರಾಟ
ಆನ್ಫೀಲ್ಡ್ನಲ್ಲಿ ಫುಲ್ ಆ್ಯಕ್ಟಿವ್ ಆಗಿರುವ ಕೊಹ್ಲಿ ನಿನ್ನೆ ಮಾತ್ರ ತಮ್ಮ ಬ್ಯಾಟ್ಗೆ ಬಾಲ್ ತಾಗಿದೆ ಅನ್ನೋದನ್ನ ಜಡ್ಜ್ ಮಾಡ್ಲಿಲ್ಲ. ಇದಕ್ಕೆ ಕಾರಣ ರನ್ ಬರ. ಈ ವರ್ಷಪೂರ್ತಿ ರೆಡ್ಬಾಲ್ ಕ್ರಿಕೆಟ್ನಲ್ಲಿ ದಯನೀಯ ವೈಫಲ್ಯ ಕಂಡಿದ್ದಾರೆ. ಇದರ ಜೊತೆಗೆ ಲಂಡನ್ನಿಂದ ನೇರವಾಗಿ ಭಾರತಕ್ಕೆ ಬಂದಿಳಿದು ಸರಿಯಾಗಿ ಅಭ್ಯಾಸ ನಡೆಸಲಿಲ್ಲ. ಹಾಗೇನೆ ಅಖಾಡಕ್ಕೆ ಧುಮುಕಿದ್ರು. ಈ ಎರಡು ಕಾರಣದಿಂದ ಗಲಿಬಿಲಿ ಆದ ಕೊಹ್ಲಿ ಡಿಆರ್ಎಸ್ ತೆಗೆದುಕೊಳ್ಳುವ ಅವಕಾಶವಿದ್ರೂ ಹಿಂದೆ ಮುಂದೆ ಯೋಚಿಸದೇ ಔಟ್ ಎಂದು ಭಾವಿಸಿ ಹೊರನಡೆದ್ರು.
2024ರಲ್ಲಿ ಕಿಂಗ್ ಕೊಹ್ಲಿ ಅತಿ ಕೆಟ್ಟ ಪ್ರದರ್ಶನ
ಪ್ರಸಕ್ತ ಬಾಂಗ್ಲಾ ಟೆಸ್ಟ್ ಸರಣಿ ಅಷ್ಟೇ ಅಲ್ಲ. ಈ ವರ್ಷದುದ್ದಕ್ಕೂ ವಿರಾಟ್ ಕೆಟ್ಟ ಪ್ರದರ್ಶನ ನೀಡಿದ್ದಾರೆ. 2024 ರ ಟಿ20 ವಿಶ್ವಕಪ್ ಫೈನಲ್ ಪಂದ್ಯದ ಅರ್ಧಶತಕ ಹೊರತುಪಡಿಸಿದ್ರೆ , ಮೂರು ಫಾರ್ಮೆಟ್ನಲ್ಲಿ ದಯನೀಯ ವೈಫಲ್ಯ ಕಂಡಿದ್ದಾರೆ. 17 ಇನ್ನಿಂಗ್ಸ್ಗಳಿಂದ 18.76 ರ ಎವರೇಜ್ನಲ್ಲಿ ಬರೀ 319 ರನ್ನಷ್ಟೇ ಗಳಿಸಿದ್ದಾರೆ. ಇದು ಅವರ ವೃತ್ತಿ ಜೀವನದ ಅತಿ ಕೆಟ್ಟ ಪ್ರದರ್ಶನವಾಗಿದೆ. ಕಿಂಗ್ ಕೊಹ್ಲಿ ಫಾರ್ಮ್ ಭಾರತಕ್ಕೆ ತುಂಬಾನೇ ಮುಖ್ಯ. ಚೆಪಾಕ್ನಲ್ಲಿ ಸೈಲೆಂಟಾದ ವಿರಾಟ್ ಕಾನ್ಪುರ ಟೆಸ್ಟ್ನಲ್ಲಾದ್ರು ವಿಜೃಂಭಿಸ್ತಾರಾ ? ಇಲ್ಲ ಎರಡನೇ ಟೆಸ್ಟ್ನಲ್ಲೂ ಕೊಹ್ಲಿ ಬ್ಯಾಟ್ ಸೈಲೆಂಟಾಗುತ್ತಾ ಅನ್ನೋದನ್ನ ಕಾದು ನೋಡೋಣ.
ಇದನ್ನೂ ಓದಿ:ಬೂಮ್ರಾ ಔಟ್, ಕಿಶನ್ ಇನ್! KL ರಾಹುಲ್ಗೆ ಇಲ್ಲ ಸ್ಥಾನ? 2ನೇ ಟೆಸ್ಟ್ಗೆ ಸಂಭಾವ್ಯ ತಂಡ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ