2022ರ T20 ವಿಶ್ವಕಪ್ನಲ್ಲಿ ಪಾಕ್ ಸೊಕ್ಕಡಗಿಸಿದ್ದ ಕೊಹ್ಲಿ
ಪ್ರಚಂಡ ಫಾರ್ಮ್ನಲ್ಲಿ ಕೊಹ್ಲಿ ..ಪಾಕ್ ಸಂಹಾರಕ್ಕೆ ಕಾತರ
ಸೆಪ್ಟೆಂಬರ್ 2ಕ್ಕೆ ಬದ್ಧವೈರಿ ಇಂಡೋ-ಪಾಕ್ ಫೈಟ್
ಕಿಂಗ್ ಕೊಹ್ಲಿಗೆ ಎದುರಾಳಿ ಯಾರು ಅನ್ನೋದೆ ಮ್ಯಾಟರ್ ಆಗಲ್ಲ. ಅದರಲ್ಲೂ ಬದ್ಧವೈರಿ ಪಾಕಿಸ್ತಾನ ಅಂದ್ರಂತೂ ಮುಗಿದೇ ಹೋಯ್ತು. ಪಾಕ್ ಸಂಹರಿಸದೇ ವಾಪಾಸ್ಸು ಹೋಗಲ್ಲ. ಸೆಂಚುರಿ ಸರದಾರನ ಈ ಡೆಡ್ಲಿ ಬ್ಯಾಟಿಂಗ್ ಸದ್ಯ ಪಾಕ್ಗೆ ನಡುಕ ಹುಟ್ಟಿಸಿದೆ.
ಐರ್ಲೆಂಡ್ ಸರಣಿ ಮುಗಿಸಿದ ಟೀಮ್ ಇಂಡಿಯಾ ನೇರವಾಗಿ ಏಷ್ಯಾಕಪ್ ಅಖಾಡಕ್ಕೆ ಧುಮುಕಲಿದೆ. ಬದ್ಧವೈರಿ ಪಾಕಿಸ್ತಾನದ ಎದುರು ಅಭಿಯಾನ ಆರಂಭಿಸಲಿದ್ದು, ಪಂದ್ಯದ ಬಗ್ಗೆ ಸಾಕಷ್ಟು ಹೈಪ್ ಕ್ರಿಯೇಟ್ ಆಗಿದೆ. ಯಾಕಂದ್ರೆ ಈ ಟೂರ್ನಿಯಲ್ಲಿ ಒಂದಲ್ಲ, ಎರಡಲ್ಲ, ಮೂರು ಬಾರಿ ಇಂಡೋ – ಪಾಕ್ ಮುಖಾಮುಖಿಯಾಗೋ ಸಾಧ್ಯತೆಯಿದೆ. ಲೀಗ್ ಹಂತ ಒಂದಾದ್ರೆ, ಸೂಪರ್ – 4ನಲ್ಲಿ ಇನ್ನೊಮ್ಮೆ, ಇನ್ನು ಕ್ರಿಕೆಟ್ ಕಾ ದುಷ್ಮನ್ಸ್ ಫೈನಲ್ ಆಡಿದ್ರೆ ಟೂರ್ನಿಯಲ್ಲಿ ಮೂರು ಬಾರಿ ಮುಖಾಮುಖಿಯಾಗಲಿವೆ.
ನಿದ್ದೆಯಲ್ಲೂ ಕೊಹ್ಲಿ ಹೆಸರನ್ನೇ ಕನವರಿಸ್ತಿರೋದ್ಯಾಕೆ ಪಾಕ್..?
ಸೆಪ್ಟೆಂಬರ್ 2ರಂದು ಹೈವೋಲ್ಟೇಜ್ ಇಂಡೋ-ಪಾಕ್ ಪಂದ್ಯ ಕಣ್ತುಂಬಿಕೊಳ್ಳಲು ಕ್ರಿಕೆಟ್ ಜಗತ್ತು ಕಾಯ್ತಿದೆ. ಪಂದ್ಯಕ್ಕಿಂತ ಹೆಚ್ಚಾಗಿ ವಿರಾಟ್ ಕೊಹ್ಲಿ ಮೇಲೆ ವಿಶ್ವದ ಕಣ್ಣು ನೆಟ್ಟಿದೆ. ಈ ಮಹಾಸಮರ ಟೀಮ್ ಇಂಡಿಯಾ ವರ್ಸಸ್ ಪಾಕಿಸ್ತಾನ ಅಂತ ಕರೆಯುವ ಬದಲು ಕಿಂಗ್ ಕೊಹ್ಲಿ ವರ್ಸಸ್ ಪಾಕ್ ದಂಗಲ್ ಎಂದೇ ಬಿಂಬಿತವಾಗಿದೆ. ಯಾಕಂದ್ರೆ ಪಾಕ್ ವಿರುದ್ಧ ಕೊಹ್ಲಿ ಫೆಂಟಾಸ್ಟಿಂಗ್ ರೆಕಾರ್ಡ್ ಹೊಂದಿದ್ದಾರೆ. ಕೊಹ್ಲಿಯ ಈ ಸಾಲಿಡ್ ಫಾರ್ಮ್ ಬಾಬರ್ ಅಝಂ ಪಡೆಯ ನಿದ್ದೆಗೆಡಿಸಿದೆ.
ಏಕದಿನ ಮಾದರಿಯಲ್ಲಿ ಪಾಕ್ ವಿರುದ್ಧ ಕೊಹ್ಲಿ
ಪಂದ್ಯ – 13
ರನ್ – 536
ಎವರೇಜ್ – 48.72
100/50 – 2/2
ಕೊಹ್ಲಿ ಪಾಕ್ ವಿರುದ್ಧ ಈವರೆಗೆ ಒಟ್ಟು 13 ಏಕದಿನ ಪಂದ್ಯಗಳನ್ನ ಆಡಿದ್ದಾರೆ. 48.72 ರ ಬ್ಯಾಟಿಂಗ್ ಎವರೇಜ್ನಲ್ಲಿ 536 ರನ್ ಬಾರಿಸಿದ್ದಾರೆ. ತಲಾ ಎರಡು ಶತಕ ಹಾಗೂ ಎರಡು ಹಾಫ್ಸೆಂಚುರಿ ಮೂಡಿಬಂದಿವೆ.
ಇನ್ನು ಬರೀ ಒನ್ಡೇಯಷ್ಟೇ ಅಲ್ಲ, ಟಿ20 ಮಾದರಿಯಲ್ಲೂ ಕಿಂಗ್ ಕೊಹ್ಲಿ ಪಾಕ್ ವಿರುದ್ಧ ನರಸಿಂಹನ ಉಗ್ರರೂಪವನ್ನೇ ತಾಳಿದ್ದಾರೆ. ಆ ಬ್ಯಾಟಿಂಗ್ ಖದರ್ನ ನೀವೆ ನೋಡಿ.
ಟಿ20 ಮಾದರಿಯಲ್ಲಿ ಪಾಕ್ ವಿರುದ್ಧ ಕೊಹ್ಲಿ
ಪಂದ್ಯ – 10
ರನ್ – 488
ಎವರೇಜ್ – 81.33
100/50 – 0/5
ಪಾಕಿಸ್ತಾನ ವಿರುದ್ಧ ಆಡಿದ 10 ಟಿ20 ಪಂದ್ಯಗಳಿಂದ 81.33ರ ಬ್ಯಾಟಿಂಗ್ ಎವರೇಜ್ನಲ್ಲಿ ಬರೋಬ್ಬರಿ 488 ರನ್ ಕೊಳ್ಳೆ ಹೊಡೆದಿದ್ದಾರೆ. ಇದ್ರಲ್ಲಿ 5 ಹಾಫ್ಸೆಂಚುರಿ ಹೊಡೆದಿದ್ದಾರೆ.
ಬಿಗ್ ಟೂರ್ನಮೆಂಟ್ಗಳಲ್ಲಿ ಕೊಹ್ಲಿಯೇ ಬಿಗ್ ಥ್ರೆಟ್.!
ಬಿಗ್ ಟೂರ್ನಾಮೆಂಟ್ಗಳಲ್ಲಿ ಕೊಹ್ಲಿ ಬಿಗ್ ಥ್ರೆಟ್. ಆದ್ರಲ್ಲೂ ಪಾಕ್ ಅಂದ್ರಂತೂ ಮತ್ತಷ್ಟು ವೈಲೆಂಟ್ ಆಗ್ತಾರೆ. ಇದಕ್ಕೆ 2022ರ ಟಿ20 ವಿಶ್ವಕಪ್ ಪಂದ್ಯವೇ ಸಾಕ್ಷಿ. ಗ್ರೂಪ್ ಸ್ಟೇಜ್ ಮ್ಯಾಚ್ನಲ್ಲಿ ಪಾಕ್ ಭಾರತ ವಿರುದ್ಧ ಗೆದ್ದೆ ಬಿಟ್ಟೆವು ಅನ್ನೋ ಓವರ್ ಕಾನ್ಫಿಡೆಂಟ್ನಲ್ಲಿತ್ತು. ಆದ್ರೆ ಕೊಹ್ಲಿ ಸಿಂಹಘರ್ಜನೆ ನಡೆಸಿ ಪಾಕ್ ಗೆಲುವಿಗೆ ಕೊಳ್ಳಿಯಿಟ್ಟಿದ್ರು. 53 ಎಸೆತಗಳಲ್ಲಿ ಸಿಡಿಲಬ್ಬರದ 82 ರನ್ ಸಿಡಿಸಿ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿಕೊಟ್ಟಿದ್ರು.
ಪ್ರಚಂಡ ಫಾರ್ಮ್ನಲ್ಲಿ ಕೊಹ್ಲಿ ..ಪಾಕ್ ಸಂಹಾರಕ್ಕೆ ಕಾತರ..
ಪಾಕ್ ವಿರುದ್ಧ ಅವಕಾಶ ಸಿಕ್ಕಾಗಲೆಲ್ಲಾ ಕೊಹ್ಲಿ ಅಕ್ಷರಶಃ ಅಬ್ಬರಿಸಿ ಬೊಬ್ಬಿರಿದ್ದಾರೆ. ಈ ವ ರ್ಷವಂತೂ ಪ್ರಚಂಡ ಫಾರ್ಮ್ನಲ್ಲಿದ್ದು ಆಡಿದ 9 ಇನ್ನಿಂಗ್ಸ್ಗಳಿಂದ 427 ರನ್ ಚಚ್ಚಿದ್ದಾರೆ. ಕೊಹ್ಲಿಯ ಈ ಹಾಟ್ಫಾರ್ಮ್ ಸದ್ಯ ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿದೆ. ಒಂದು ವೇಳೆ ಮಾಡ್ರನ್ ಕ್ರಿಕೆಟ್ ದೊರೆ ಏಷ್ಯಾಕಪ್ ಟೂರ್ನಿಯಲ್ಲೂ ಇದೇ ರಗಢ್ ಫಾರ್ಮ್ ಕಂಟಿನ್ಯೂ ಮಾಡಿದ್ರೆ ಪಾಕ್ ಉಡೀಸ್ ಆಗೋದು ಗ್ಯಾರಂಟಿ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ