newsfirstkannada.com

ಜಿಮ್​​ನಿಂದಲೇ ತೊಡೆ ತಟ್ಟಿದ ಕೊಹ್ಲಿ.. ಎದುರಾಳಿಗೆ ಕೊಟ್ರು ಸ್ಪೆಷಲ್​ ಮೆಸೇಜ್​

Share :

16-08-2023

    ಭಾರತೀಯ ಕ್ರಿಕೆಟ್​​ಗೆ ವಿರಾಟ್​ ಕೊಹ್ಲಿಯೇ ‘ಕಿಂಗ್​’.!

    ಈ ಎರಡೇ ಸದ್ಯಕ್ಕೆ ಕಿಂಗ್​ ಕೊಹ್ಲಿ ಟಾರ್ಗೆಟ್​ .!

    ಕೊಹ್ಲಿಯನ್ನ ODI,T20ಯಿಂದ ಕೈ ಬಿಡೋ ಪ್ಲಾನ್​

ಮುಂದೆ ಏನ್​ ಆಗುತ್ತೋ..? ಬಿಡುತ್ತೋ..? ಗೊತ್ತಿಲ್ಲ. ಸದ್ಯಕ್ಕಂತೂ ಕಿಂಗ್​ ಕೊಹ್ಲಿ ಮುಂದಿರೋದು ಎರಡೇ ಟಾರ್ಗೆಟ್​!. ಆ ಎರಡು ಗುರಿ ಸಾಧನೆ ವಿರಾಟ್​ ಪಣ ತೊಟ್ಟಾಗಿದೆ. ಆ ನಿಟ್ಟಿನಲ್ಲಿ ಸಮರಾಭ್ಯಾಸವೂ ಆರಂಭವಾಗಿದೆ. ಎದುರಾಳಿಗಳಿಗೆ ಎಚ್ಚರಿಕೆಯ ಸಂದೇಶವೂ ರವಾನೆಯಾಗಿದೆ. ಹಾಗಾದ್ರೆ, ವಿರಾಟ್​ ಕೊಹ್ಲಿ ಆ 2 ಗುರಿ ಏನು ಅಂತೀರಾ.? ಇಲ್ಲಿದೆ ನೋಡಿ ಕಂಪ್ಲೀಟ್​​ ಡಿಟೇಲ್ಸ್. ​

ಹಠ ಮತ್ತು ಸಾಧನೆ. ಈ ಎರಡು ಪದಕ್ಕೆ ಪರ್ಫೆಕ್ಟ್​​ ಅರ್ಥ ಕೊಡೋ ಆಟಗಾರ ಅಂದ್ರೆ ಅದು ವಿರಾಟ್​ ಕೊಹ್ಲಿ. ಕೊಹ್ಲಿಯಲ್ಲಿರೋ ಸಾಧನೆಯ ಹಸಿವು ಅಪರಿಮಿತ. ಸಾಧಿಸಲೇ ಬೇಕು ಎಂದು ಪಣ ತೊಟ್ಟು ನಿಂತ್ರೆ, ಅದೆಂತದ್ದೇ ಅಡೆತಡೆಗಳು ಬಂದ್ರೂ ಕೊಹ್ಲಿ ಹೆಜ್ಜೆ ಹಿಂದಿಟ್ಟ ಮಾತೇ ಇಲ್ಲ. ಹಾರ್ಡ್​​ವರ್ಕ್​, ಡೆಡಿಕೇಶನ್​ ವಿಚಾರದಲ್ಲಂತೂ ನೋ ಕಾಂಪ್ರಮೈಸ್​. ಸೋತರೂ ಸರಿ ಹೋರಾಡಿಯೇ ಸೋಲಬೇಕು ಅನ್ನೋದು ವಾರಿಯರ್​​ ವಿರಾಟನ ಹುಟ್ಟುಗುಣ.

ಜಿಮ್​ನಿಂದಲೇ ತೊಡೆ ತಟ್ಟಿದ ಕಿಂಗ್​ ಕೊಹ್ಲಿ.!

ವೆಸ್ಟ್​ ಇಂಡೀಸ್​​ ಪ್ರವಾಸದ ಬಳಿಕ ವಿಶ್ರಾಂತಿಯ ಮೂಡ್​ಗೆ ಜಾರಿದ್ದ ವಿರಾಟ್​ ಕೊಹ್ಲಿ, ಮತ್ತೆ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ. ಕೆರಬಿಯನ್​ ನಾಡಲ್ಲಿ ಸಾಲಿಡ್​ ಆಟವಾಡಿದ್ದ ವಿರಾಟ್​, ತವರಿಗೆ ವಾಪಾಸ್ಸಾದ ಬಳಿಕ ಕುಟುಂಬಕ್ಕೆ ಸಮಯ ಮೀಸಲಿಟ್ಟಿದ್ರು. ಇದೀಗ ಮುಂದಿರೋ ಮಹಾಯುದ್ಧಕ್ಕೆ ಸಿದ್ಧತೆ ಆರಂಭಿಸಿದ್ದಾರೆ. ಫಿಟ್​ನೆಸ್​ ಕಡೆ ಗಮನ ಹರಿಸಿರೋ ವಿರಾಟ್​, ಜಿಮ್​​ನಲ್ಲಿ ಬೆವರಿಳಿಸಿದ್ದಾರೆ. ಕೊಹ್ಲಿ ಹೀಗೆ ಜಿಮ್​ನಲ್ಲಿ ಭರ್ಜರಿ ವರ್ಕೌಟ್​ ಮಾಡಿರೋದ್ರ ಹಿಂದೆ ಬಿಗ್​ ಟಾರ್ಗೆಟ್​ ಇದೆ.

ವಾರಿಯರ್​ ವಿರಾಟನ ಮುಂದೆ ಎರಡು ಟಾರ್ಗೆಟ್.!

ವಿರಾಟ್​ ಕೊಹ್ಲಿ ಸದ್ಯ ಸಾಲಿಡ್​​​ ಫಾರ್ಮ್​ನಲ್ಲಿದ್ದಾರೆ. ಫಿಟ್​ನೆಸ್​ ಬಗ್ಗೆ ಯಾರೂ ಮಾತಾಡುವಂತೆ ಇಲ್ಲ. ಆದ್ರೂ, ಕೊಹ್ಲಿಯ ಕರಿಯರ್​ ಮೇಲೆ ಕರಿನೆರಳು ಬಿದ್ದಿದೆ. ಕೊಹ್ಲಿಯನ್ನ ವೈಟ್​ಬಾಲ್​ ಕ್ರಿಕೆಟ್​ನಿಂದ ಹೊರಗಿಡೋ ಯತ್ನಗಳು ಸದ್ದಿಲ್ಲದೇ ನಡೀತಿವೆ. 2024ರಲ್ಲಿ ವಿಂಡೀಸ್​ನಲ್ಲಿ ನಡೆಯೋ ಟಿ20 ವಿಶ್ವಕಪ್​​ ಟೂರ್ನಿಯಲ್ಲಿ ಕೊಹ್ಲಿ ಆಡೋದು ಸದ್ಯಕ್ಕಂತೂ ಅನುಮಾನವಾಗಿದೆ. ಇಷ್ಟೆಲ್ಲಾ ಅನಿಶ್ಚಿತತೆಗಳು ಮುಂದಿವೆ. ಆದ್ರೆ, ಕೊಹ್ಲಿ ಈ ವಿಚಾರಕ್ಕೆ ತಲೆನೆ ಕೆಡಿಸಿಕೊಂಡಿಲ್ಲ. ಯಾಕಂದ್ರೆ, ಸದ್ಯ ವಿರಾಟ್​​ ಟಾರ್ಗೆಟ್​​ ಈ ಎರಡು ವಿಚಾರಗಳು ಮಾತ್ರ.!

ಟಾರ್ಗೆಟ್​ ನಂ.1: ಏಷ್ಯಾಕಪ್​

ಅಗಸ್ಟ್​ 30ರಿಂದ ಆರಂಭವಾಗಲಿರುವ ಏಷ್ಯಾಕಪ್​ ಟೂರ್ನಿಯನ್ನ ವಿರಾಟ್​ ಕೊಹ್ಲಿ ಪ್ರತಿಷ್ಟೆಯ ಕಣವನ್ನಾಗಿ ಪರಿಗಣಿಸಿದ್ದಾರೆ. ಎಲ್ಲಾ ಫಾರ್ಮೆಟ್​ನಲ್ಲಿ ಕಮ್​ಬ್ಯಾಕ್​ ಮಾಡಿ ಅಬ್ಬರಿಸಿದ್ರೂ, ವಿರಾಟ್​ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳಿವೆ. ಈ ಎಲ್ಲಾ ಪ್ರಶ್ನೆಗಳಿಗೆ ಏಷ್ಯಾ ಕದನದಲ್ಲಿ ಘರ್ಜಿಸಿ ಉತ್ತರ ಕೊಡೋದೆ ಕಿಂಗ್​ ಕೊಹ್ಲಿಯ ಮೊದಲ ಟಾರ್ಗೆಟ್​.!

ಟಾರ್ಗೆಟ್​ ನಂ.2: ವಿಶ್ವಕಪ್​

ದಶಕದಿಂದ ಐಸಿಸಿ ಟ್ರೋಫಿ ಗೆಲುವಿನ ಬರ ಟೀಮ್​ ಇಂಡಿಯಾವನ್ನ ಬಿಡದೇ ಕಾಡ್ತಿದೆ. 12 ವರ್ಷಗಳ ಬಳಿಕ ತವರು ಭಾರತದಲ್ಲಿ ಮಹಾ ಕದನ ನಡೀತಾ ಇದೆ. ಈ ಪ್ರತಿಷ್ಟೆಯ ಕದನದಲ್ಲಿ ಭಾರತದ ಚಾಂಪಿಯನ್​ ಪಟ್ಟಕ್ಕೇರಬೇಕಂದ್ರೆ ವಿರಾಟ್​ ಕೊಹ್ಲಿಯ ಪರ್ಫಾಮೆನ್ಸ್​ ಟೀಮ್​ ಇಂಡಿಯಾ ಪಾಲಿಗೆ ನಿರ್ಣಾಯಕವಾಗಲಿದೆ. ಅಸಂಖ್ಯ ಅಭಿಮಾನಿಗಳ ಕನಸನ್ನ ನನಸು ಮಾಡಬೇಕು, ಏಕದಿನ ವಿಶ್ವಕಪ್​ ಟ್ರೋಫಿಗೆ ಮುತ್ತಿಕ್ಕಬೇಕು ಅನ್ನೋದು ಕೊಹ್ಲಿಯ 2ನೇ ಟಾರ್ಗೆಟ್​.!

2 ಟೂರ್ನಿಗಳಲ್ಲಿ ಅಬ್ಬರಿಸಿದ್ರೆ ಲೈನ್​ ಕ್ಲೀಯರ್​.!

ಏಷ್ಯಾಕಪ್​ ಹಾಗೂ ವಿಶ್ವಕಪ್​ ಟೂರ್ನಿಯಲ್ಲಿ ವಿರಾಟ್​​ ಕೊಹ್ಲಿ ಸಾಲಿಡ್​ ಪರ್ಫಾಮೆನ್ಸ್​ ನೀಡಿದ್ರೆ, ಟೀಮ್​ ಇಂಡಿಯಾವನ್ನ ಟಚ್​​ ಮಾಡೋರೆ ಇಲ್ಲ. ಅಷ್ಟೇ ಅಲ್ಲ. ಟೀಮ್​ ಇಂಡಿಯಾದಲ್ಲೂ ವಿರಾಟ್​ ಕೊಹ್ಲಿಯನ್ನ ಯಾರೂ ಕಟ್ಟಿ ಹಾಕೋಕೆ ಆಗಲ್ಲ. ಕೊಹ್ಲಿಯನ್ನ ವೈಟ್​ಬಾಲ್​ ಫಾರ್ಮೆಟ್​​ನಿಂದ ಕೈ ಬಿಡಬೇಕು ಅನ್ನೋ ಕೂಗು ಹಂಡ್ರೆಂಡ್​ ಪರ್ಸೆಂಟ್​ ನಿಲ್ಲಲಿದೆ. ಇದ್ರ ಜೊತೆಗೆ ಭಾರತೀಯ ಕ್ರಿಕೆಟ್​​ನಲ್ಲಿ ಮತ್ತೆ ಸಾಮ್ರಾಟನ ಅಧಿಪತ್ಯ ಶುರುವಾಗಲಿದೆ.

ತವರಿನಲ್ಲಿ ನಡೆಯೋ ಪ್ರತಿಷ್ಟೆಯ ವಿಶ್ವಕಪ್​ ಕದನದಲ್ಲಿ ಭಾರತ ಚಾಂಪಿಯನ್​ ಆಗಬೇಕು ಅನ್ನೋದು ಅಸಂಖ್ಯ ಅಭಿಮಾನಿಗಳ ಕನಸಾಗಿದೆ. ಮುಂಬರುವ ಏಷ್ಯಾಕಪ್​ನಲ್ಲಿ ಕೊಹ್ಲಿ ರೆಡ್​ಹಾಟ್​ ಫಾರ್ಮ್​ನಲ್ಲಿ ಅಬ್ಬರಿಸಿದ್ರೆ, ಆ ಕನಸಿಗೆ ಮತ್ತಷ್ಟು ರೆಕ್ಕೆಪುಕ್ಕ ಬರಲಿವೆ. ಇನ್ನು, ವಿಶ್ವಕಪ್​ ಟೂರ್ನಿಯಲ್ಲಿ ಕೊಹ್ಲಿ, ರನ್ ​ಮಳೆ ಹರಿಸಿದ್ರೆ, ಕಪ್​ ನಮ್ದಾಗೋ ಆತ್ಮವಿಶ್ವಾಸ ಡಬಲ್​ ಆಗೋದ್ರಲ್ಲಿ ಅನುಮಾನವೇ ಇಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಜಿಮ್​​ನಿಂದಲೇ ತೊಡೆ ತಟ್ಟಿದ ಕೊಹ್ಲಿ.. ಎದುರಾಳಿಗೆ ಕೊಟ್ರು ಸ್ಪೆಷಲ್​ ಮೆಸೇಜ್​

https://newsfirstlive.com/wp-content/uploads/2023/07/Kohli-2.jpg

Load More