/newsfirstlive-kannada/media/post_attachments/wp-content/uploads/2023/11/Kohli-7.jpg)
ವಿರಾಟ್​ ಕೊಹ್ಲಿ ಒಬ್ಬ ಟ್ಯಾಟೂಪ್ರಿಯ ಅನ್ನೋದು ನಿಮಗೆ ಗೊತ್ತಿರೋ ವಿಚಾರ. ಕಿಂಗ್​ ಕೊಹ್ಲಿಯ ಟ್ಯಾಟೂ ವ್ಯಾಮೋಹ ಸ್ಟಾರ್ಟ್​ ಆಗಿದ್ದು, ಬೆಂಗಳೂರಿನ ಎಮ್​ಜಿ ರೋಡ್​ನಿಂದ ಅಂತೆ. ಅದೂ ಬಕ್ವಾಸ್​​ ಟ್ಯಾಟೂವೊಂದರಿಂದ​..! ಈ ಬಗ್ಗೆ ಇಂಟರೆಸ್ಟಿಂಗ್​ ಸ್ಟೋರಿ ಇಲ್ಲಿದೆ.
/newsfirstlive-kannada/media/post_attachments/wp-content/uploads/2023/11/kohli-2-3.jpg)
ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ ಟ್ಯಾಟೂಪ್ರಿಯ ಅನ್ನೋದು ನಿಮಗೆ ಗೊತ್ತಿರೋ ವಿಚಾರವೇ. ಈಗಂತೂ ಕೊಹ್ಲಿಯ ದೇಹದ ಬಹುತೇಕ ಭಾಗ ಟ್ಯಾಟೂಮಯವಾಗಿದೆ. ಕೊಹ್ಲಿಗೆ ಟ್ಯಾಟೂ ಅಂದ್ರೆ ವಿಚಿತ್ರವಾದ ಕ್ರೇಜ್​​ಯಿದೆ. ಈ ಕ್ರೇಜ್​ ಶುರುವಾಗಿದ್ದೆ ನಮ್ಮ ಬೆಂಗಳೂರಿನಿಂದ. ಅದು ಒಂದು ಕೆಟ್ಟ ಟ್ಯಾಟೂನಿಂದ.
/newsfirstlive-kannada/media/post_attachments/wp-content/uploads/2023/11/Kohli-1-3.jpg)
ಅದು ಸುಮಾರು 2007ರ ಸಮಯ. ಕ್ರಿಕೆಟ್​ನಲ್ಲಿ ಸ್ಟಾರ್​ ಆಗಿ ಇನ್ನೂ ಗುರುತಿಸಿಕೊಂಡಿರದ ವಿರಾಟ್​ ಕೊಹ್ಲಿ, ಒಂದು ದಿನ ಬೆಂಗಳೂರಿನ ಎಮ್​ಜಿ ರೋಡ್​ನಲ್ಲಿ ನಡೆದುಕೊಂಡು ಹೋಗ್ತಿದ್ರಂತೆ. ಈ ವೇಳೆ ಟ್ಯಾಟೂ ಪಾರ್ಲರ್ ಒಂದು ಕಾಣಿಸ್ತಂತೆ. ನೋಡಿದ ಕೂಡಲೇ ಒಳಗೆ ಹೋದ ವಿರಾಟ್​, ಅಂಗಡಿಗೆ ಹೋಗಿ ಚಿಪ್ಸ್​ ತೆಗೆದುಕೊಳ್ಳುವಂತೆ ಟ್ಯಾಟೂ ಹಾಕಿಸಿಕೊಂಡು ಬಂದ್ರಂತೆ.
/newsfirstlive-kannada/media/post_attachments/wp-content/uploads/2023/11/kohli-2-2.jpg)
ಅದೊಂದು ಟ್ರೈಬಲ್​ ಡಿಸೈನ್​ ಟ್ಯಾಟೂ ಆಗಿತ್ತಂತೆ. ಆದರೆ, ಟ್ಯಾಟೂ ಹಾಕಿಸಿಕೊಂಡು ಬಂದ ಬಳಿಕ, ಅದು ತುಂಬಾ ಬಕ್ವಾಸ್​ ಆಗಿ ಕಾಣ್ತಿತ್ತು ಅನ್ನೋದು ಕೊಹ್ಲಿಯ ಮಾತು. ಯಾಕಂದ್ರೆ ಅದರ ಅರ್ಥ ಕೂಡ ವಿರಾಟ್​ ಕೊಹ್ಲಿಗೆ ತಿಳಿದಿರಲಿಲ್ಲ. ಅದರ ಕೆಳಗೆ ಎಫ್​ ಎಂಬ ಪದ ಬರೆದಿತ್ತಂತೆ. ಹೀಗಾಗಿ ಯಾರಾದ್ರು ಅದರ ಅರ್ಥ ಏನು ಎಂದು ಕೇಳಿದ್ರೆ, FAITH ಅಂತಾ ಹೇಳ್ತಿದ್ದೆ ಅಂತಾ ವಿರಾಟ್​ ಕೊಹ್ಲಿ ಲೇಟೆಸ್ಟ್​ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us