ಎಡಗೈ ವೇಗಿಗಳೆ ಕೊಹ್ಲಿ ಪಾಲಿಗೆ ವಿಲನ್ಸ್.!
ಯಾಮಾರಿದ್ರೆ ವಿರಾಟ್ ಟೆಸ್ಟ್ ಕರಿಯರ್ ಖತಂ.!
ಹಿಂದೆ ಮಾಡಿದ ತಪ್ಪಿನಿಂದ ಪಾಠ ಕಲಿತಿಲ್ವಾ.?
ಇಂಡೋ – ವಿಂಡೀಸ್ ಟೆಸ್ಟ್ ಸರಣಿ ಆರಂಭಕ್ಕೆ ಕೌಂಟ್ಡೌನ್ ಸ್ಟಾರ್ಟ್ ಆಗಿದೆ. ಸತತ ಕ್ರಿಕೆಟ್ನಿಂದ ಬಳಲಿದ್ದ ಆಟಗಾರರು ಒಂದು ತಿಂಗಳ ಅಂತರದ ಬಳಿಕ ಮೈದಾನಕ್ಕೆ ಮರಳಲು ಸಜ್ಜಾಗಿದ್ದಾರೆ. ಆಟಗಾರರ ಮೇಲೆ ನಿರೀಕ್ಷೆಯೂ ಅಭಿಮಾನಿಗಳ ವಲಯದಲ್ಲಿ ದುಪ್ಪಟ್ಟಿದೆ. ಅದರಲ್ಲೂ ವಿರಾಟ್ ಕೊಹ್ಲಿಯಂತೂ ಅಬ್ಬರಿಸ್ತಾರೆ, ಸೆಂಚುರಿ ಸಿಡಿಸ್ತಾರೆ ಅಂತಾ ಫ್ಯಾನ್ಸ್ ಫಿಕ್ಸ್ ಆಗ್ಬಿಟ್ಟಿದ್ದಾರೆ.
3 ವರ್ಷಗಳ ಕಾಲ ಫಾರ್ಮ್ ಸಮಸ್ಯೆ ಎದುರಿಸಿದ್ದ ವಿರಾಟ್ ಕೊಹ್ಲಿ, ಕ್ರಿಕೆಟ್ನಿಂದ ಗ್ಯಾಪ್ ತೆಗೆದುಕೊಂಡು ಕಣಕ್ಕಿಳಿದ ಬಳಿಕ ಸೆಂಚೂರಿ ಬರಕ್ಕೆ ಬ್ರೇಕ್ ಹಾಕಿದ್ರು. ಈಗಲೂ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂತ್ಯದ ಬಳಿಕ ಮೈದಾನದಿಂದ ಹೊರಗುಳಿದಿದ್ದ ಕೊಹ್ಲಿ, ಕಮ್ಬ್ಯಾಕ್ಗೆ ಸಜ್ಜಾಗಿದ್ದಾರೆ. ಫುಲ್ ಫ್ರೆಶ್ ಮೂಡ್ ಧಮಾಕಾ ಸೃಷ್ಟಿಸ್ತಾರೆ ಅನ್ನೋದು ಫ್ಯಾನ್ಸ್ ನಂಬಿಕೆಯಾಗಿದೆ. ಆದ್ರೆ, ನಂಬಿಕೆ ಹುಸಿಯಾಗೋ ಸಾಧ್ಯತೆಯೆ ಜಾಸ್ತಿಯಿದೆ.
ಅಭ್ಯಾಸದಲ್ಲೇ ತಡವರಿಸಿದ ವಿರಾಟ್ ಕೊಹ್ಲಿ
ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾದ ಸಿದ್ಧತೆ ಜೋರಾಗಿದೆ. ಕೆರಬಿಯನ್ ನಾಡಲ್ಲಿ ನೆಟ್ಸ್ನಲ್ಲಿ ಬೆವರಿಳಿಸಿರೋ ಟೀಮ್ ಇಂಡಿಯನ್ಸ್ ಸದ್ಯ ಅಭ್ಯಾಸ ಪಂದ್ಯವನ್ನಾಡ್ತಿದ್ದಾರೆ. ಈ ಮೊದಲ ಅಭ್ಯಾಸದಲ್ಲೇ ಕಿಂಗ್ ಕೊಹ್ಲಿ ವೀಕ್ನೆಸ್ ಎಕ್ಸ್ಪೋಸ್ ಆಗಿದೆ.
ಅಭ್ಯಾಸ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಪೆವಿಲಿಯನ್ಗೆ ಮರಳಿದ ಪರಿಯಿದು. ಲೆಫ್ಟ್ ಆರ್ಮ್ ಪೇಸರ್ ಜಯದೇವ್ ಉನಾದ್ಕತ್ ಹಾಕಿದ ಔಟ್ ಸೈಡ್ ಆಫ್ ಸ್ಟಂಪ್ ಎಸೆತವನ್ನ ಸುಮ್ಮನಿರಲಾರದೇ ಕೆಣಕಿದ ಕೊಹ್ಲಿ, ಸ್ಲಿಪ್ನಲ್ಲಿದ್ದ ಫೀಲ್ಡರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ರು. ಇದನ್ನ ನೋಡಿದ ಮೇಲೇ ಹಲವು ಪ್ರಶ್ನೆಗಳು ಹುಟ್ಟಿರೋದು.
Virat kohli is dismissed to unadkat in the practice match. pic.twitter.com/GNGKzrRpyd
— MOHIT SHUKLA (@MohitShukla1030) July 5, 2023
ಹಿಂದೆ ಮಾಡಿದ ತಪ್ಪಿನಿಂದ ಪಾಠ ಕಲಿತಿಲ್ವಾ.?
ಕೊಹ್ಲಿಯ ಈ ಸಮಸ್ಯೆ ನಿನ್ನೆ ಮೊನ್ನೆಯದಲ್ಲ. ಕಳೆದ ಕೆಲ ವರ್ಷದ ಸಮಸ್ಯೆಯಿದು. ಆಫ್ ಸ್ಟಂಪ್ ಲೈನ್ನಲ್ಲಿ ಬಾಲ್ ಬಂದ್ರೆ ಸಾಕು ಸುಮ್ಮನಿರಲಾರದೇ ಕೆಣಕ್ತಿದ್ದಾರೆ. ಕವರ್ ಡ್ರೈವ್ ಹೊಡೆಯೋಕೆ ಹೋಗಿ ಹಲವು ಬಾರಿ ಔಟ್ ಆಗಿದ್ದರ ಉದಾಹರಣೆ ಸಿಕ್ಕಾಪಟ್ಟೆಯಿದೆ. ಹೀಗಾಗಿ ಈ ಹಿಂದೆ ಮಾಡಿದ ತಪ್ಪುಗಳಿಂದ ವಿರಾಟ್ ಪಾಠ ಕಲಿತಿಲ್ವಾ? ಅನ್ನೋ ಪ್ರಶ್ನೆ ಹುಟ್ಟಿದೆ.
ಎಡಗೈ ವೇಗಿಗಳೆ ಕೊಹ್ಲಿ ಪಾಲಿಗೆ ವಿಲನ್ಸ್.!
ವಿರಾಟ್ ಕೊಹ್ಲಿಯನ್ನ ಎಡಗೈ ವೇಗಿಗಳು ಬೆಂಬಿಡದೆ ಕಾಡ್ತಿದ್ದಾರೆ. ಅಭ್ಯಾಸ ಪಂದ್ಯದಲ್ಲಿ ಹೇಗೆ ಔಟ್ ಆದ್ರೋ ಹಾಗೆ ಸೇಮ್ ಟು ಸೇಮ್ ಹಲವು ಬಾರಿ ವಿಕೆಟ್ ಒಪ್ಪಿಸಿದ್ದಾರೆ. 56 ಟೆಸ್ಟ್ ಇನ್ನಿಂಗ್ಸ್ಗಳಲ್ಲಿ ಎಡಗೈ ವೇಗಿಗಳನ್ನ ಎದುರಿಸಿರೋ ಕೊಹ್ಲಿ, 16 ಬಾರಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದ್ದಾರೆ.
ಯಾಮಾರಿದ್ರೆ ಟೆಸ್ಟ್ ಕರಿಯರ್ ಖತಂ.!
ಈಗಾಗಲೇ ವಿರಾಟ್ ಕೊಹ್ಲಿ ಟಿ20 ಕರಿಯರ್ ಬಹುತೇಕ ಖತಂ ಆಗಿದೆ. ಕಳೆದ ಟಿ20 ವಿಶ್ವಕಪ್ ಬಳಿಕ ಯಾವ ಟಿ20 ಸರಣಿಗೂ ಕೊಹ್ಲಿ ಸೆಲೆಕ್ಟ್ ಆಗಿಲ್ಲ. ಈಗ ಮಾಡ್ತಿರೋ ತಪ್ಪಿಂದ ಪಾಠ ಕಲೀದಿದ್ರೆ, ಟೆಸ್ಟ್ ಸ್ಥಾನಕ್ಕೂ ಕುತ್ತು ಬರಲಿದೆ. ಈಗಾಗಲೇ ಕೊಹ್ಲಿಯನ್ನ ರಿಪ್ಲೇಸ್ ಮಾಡೋಕೆ ಟ್ಯಾಲೆಂಟೆಡ್ ಯಂಗ್ಸ್ಟರ್ಸ್ ಕಾದು ಕುಳಿತಿದ್ದಾರೆ. ಬಿಸಿಸಿಐ & ಸೆಲೆಕ್ಷನ್ ಕಮಿಟಿ ಕೂಡ ಅನುಭವಿಗಳಿಗಿಂತ ಯುವ ಆಟಗಾರರಿಗೆ ಹೆಚ್ಚಿನ ಆದ್ಯತೆ ನೀಡ್ತಿದೆ.
ಒಟ್ಟಿನಲ್ಲಿ, ವಿರಾಟ್ ಕೊಹ್ಲಿ ಮಾಡ್ರನ್ ಕ್ರಿಕೆಟ್ ಲೋಕದ ಲೆಜೆಂಡ್ ಅನ್ನೋದ್ರಲ್ಲಿ ಡೌಟೇ ಇಲ್ಲ. ಅಸಾದ್ಯವಾದುದನ್ನ ಸುಲಭಕ್ಕೆ ಸಾಧಿಸಿರುವ ಕೊಹ್ಲಿಯ ಟ್ರ್ಯಾಕ್ ರೆಕಾರ್ಡ್ ಇದನ್ನ ಸಾರಿ ಸಾರಿ ಹೇಳುತ್ತೆ. ಆದ್ರೆ, ತಪ್ಪುಗಳನ್ನ ಸರಿಪಡಿಸಿಕೊಳ್ಳದೆ ಇರೋದು ಎಷ್ಟು ಸರಿ.? ಪಂದ್ಯದಿಂದ ಪಂದ್ಯಕ್ಕೆ ವೀಕ್ನೆಸ್ನ ಓವರ್ಕಮ್ ಮಾಡಬೇಕು. ಆದ್ರೆ, ಕೊಹ್ಲಿ ಮತ್ತದೇ ತಪ್ಪನ್ನೇ ಮಾಡ್ತಿದ್ದಾರೆ. ಇದೀಗ ಅಭ್ಯಾಸ ಪಂದ್ಯದಲ್ಲಾದ ತಪ್ಪನ್ನ ಅಸಲಿ ಕದನದಲ್ಲಾದ್ರೂ ಕೊಹ್ಲಿ ತಿದ್ದಿಕೊಳ್ತಾರಾ.? ಕಾದು ನೋಡೋಣ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ