ಬಾರ್ ಸಿಬ್ಬಂದಿ ಮೇಲೆ ಗಲಾಟೆ ಮಾಡಿದ್ದ ವಿಡಿಯೋ ವೈರಲ್
ಸರ್ಕಲ್ನಲ್ಲಿನ ಬಾರ್ ಸಿಬ್ಬಂದಿ ನಮಸ್ಕಾರ ಮಾಡಿಲ್ಲವೆಂದು ಹಲ್ಲೆ
ಉದಾಸೀನ ತೋರಿದ ಹಿನ್ನೆಲೆ ASI ಅಮಾನತು ಮಾಡಿ ಆದೇಶ
ಕೋಲಾರ: ಕುಡಿದು ಫುಲ್ ಟೈಟ್ ಆಗಿ ಬಾರ್ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗಿದ್ದ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್ಐ ಕೆ.ಸಿ ನಾರಾಯಣ ಸ್ವಾಮಿಯವರನ್ನು ಅಮಾನತು ಮಾಡಲಾಗಿದೆ.
ನವೆಂಬರ್ 11ರ ರಾತ್ರಿ ಸಮಯದಲ್ಲಿ ಕೋಲಾರ ನಗರದ ಬಂಗಾರಪೇಟೆ ವೃತ್ತದ ಅಶೋಕ್ ಬಾರ್ನಲ್ಲಿ ನಮಸ್ಕಾರ ಮಾಡಿಲ್ಲ ಎಂಬ ವಿಚಾರಕ್ಕೆ ಬಾರ್ ಸಿಬ್ಬಂದಿ ಮೇಲೆ ಗಲಾಟೆ ಮಾಡಿದ್ದನು. ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ವೇಳೆ ಬಾರ್ ಸಿಬ್ಬಂದಿ ಹಾಗೂ ಎಎಸ್ಐ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಎಎಸ್ಐ ರಸ್ತೆ ಬದಿ ಬಿದ್ದಿದ್ದ ಕಲ್ಲನ್ನು ಎತ್ತಿಕೊಂಡು ಬಂದು ಸಿಬ್ಬಂದಿ ಮೇಲೆ ಹಾಕಲು ಮುಂದಾಗಿರುವ ವಿಡಿಯೋ ವೈರಲ್ ಆಗಿತ್ತು.
ನನ್ನ ಮೆಲೆ ಹಲ್ಲೆಯಾಗಿದೆ ಎಂದು ಎಎಸ್ಐ ನಾರಾಯಣಸ್ವಾಮಿ ದೂರು ದಾಖಲು ಮಾಡಿದ್ದರು. ಆದ್ರೆ ಎಎಸ್ಐ ಸುಳ್ಳು ದೂರು ನೀಡಿದ್ದಾರೆಂದು ಆರೋಪಿಸಿ ಬಾರ್ ಅಸೋಸಿಯೇಷನ್ ಎಸ್ಪಿಗೆ ದೂರು ನೀಡಿತ್ತು. ಎಎಸ್ಐ ನಾರಾಯಣಸ್ವಾಮಿ ತಪ್ಪು ಮಾಡಿರೋದು ಸಾಬೀತಾದ ಹಿನ್ನೆಲೆ ಇಲಾಖೆ ಅಗೌರವ, ದುರ್ನಡತೆ, ಬೇಜವಾಬ್ದಾರಿತನ, ಉದಾಸೀನ ತೋರಿದ ಹಿನ್ನೆಲೆಯಲ್ಲಿ ASI KC ನಾರಾಯಣ ಸ್ವಾಮಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ