newsfirstkannada.com

ಅಬ್ಬಾ.. ಟೊಮ್ಯಾಟೋ ಬೆಲೆ ಇಷ್ಟೊಂದು ಜಾಸ್ತಿನಾ; ಕೋಲಾರ, ಚಿಕ್ಕಬಳ್ಳಾಪುರ APMC ಇತಿಹಾಸದಲ್ಲೇ ಹೊಸ ದಾಖಲೆ

Share :

31-07-2023

    ದುಬಾರಿ ಟೊಮ್ಯಾಟೋ ಅಡುಗೆಗೆ ಹಾಕೋದೋ, ಬೇಡ್ವೋ?

    ದಿನದಿಂದ ದಿನಕ್ಕೆ ಟೊಮ್ಯಾಟೋ ಬೆಲೆಯಲ್ಲಿ ಭಾರೀ ಏರಿಕೆ

    ಟೊಮ್ಯಾಟೋ ಬೆಳೆದ ರೈತರು ಸಂತಸ, ಗ್ರಾಹಕರಿಗೆ ಸಂಕಷ್ಟ

ಕೋಲಾರ: ಕಳೆದ ಕೆಲವು ದಿನಗಳಿಂದ ಮಾರುಕಟ್ಟೆಯಲ್ಲಿ ಟೊಮ್ಯಾಟೋ ಬೆಲೆಯಲ್ಲಿ ನಿರಂತರ ಏರಿಕೆ ಆಗುತ್ತಿದೆ. ಇಂದೂ ಕೂಡ ಇದರ ಬೆಲೆ ಮತ್ತಷ್ಟು ಹೆಚ್ಚಳವಾಗಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ APMC ಮಾರುಕಟ್ಟೆಯಲ್ಲಿ ಟೊಮ್ಯಾಟೋ ಕ್ರೇಟ್​ಗಳು ದಾಖಲೆ ಮಟ್ಟದಲ್ಲಿ ಹರಾಜಾಗಿವೆ.

ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮ್ಯಾಟೋ ಕ್ರೇಟ್​​ಗಳು ಬಂಪರ್​ ಬೆಲೆಗೆ ಮಾರಾಟವಾಗುತ್ತಿವೆ. ಈ ಎಪಿಎಂಸಿಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 15 ಕೆ.ಜಿ ತೂಕದ ಒಂದು ಕ್ರೇಟ್​ ಬರೋಬ್ಬರಿ 2,600 ರೂಪಾಯಿಗೆ ಹರಾಜಾಗಿದೆ. ಅಂದ್ರೆ ಒಂದು ಕೆಜಿ ಟೊಮ್ಯಾಟೋಗೆ 173 ರೂಪಾಯಿ ಆಗಲಿದೆ. ನಿನ್ನೆ ಇದೇ ಎಪಿಎಂಸಿಯಲ್ಲಿ 2300 ರೂಪಾಯಿಗೆ ಹರಾಜು ಮಾಡಲಾಗಿತ್ತು. ಆದರೆ ಇಂದು ಮತ್ತೆ 300 ರೂಪಾಯಿ ಹೆಚ್ಚಳವಾಗಿದೆ. ಇದರಿಂದ ಟೊಮ್ಯಾಟೋ ಬೆಳೆದ ರೈತರು ಸಂತಸದಲ್ಲಿ ತೇಲಿದ್ದಾರೆ. ನಾಳೆನೂ ಈ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಕೋಲಾರದಲ್ಲಿ ಮಾತ್ರವಲ್ಲ ಪಕ್ಕದ ಜಿಲ್ಲೆ ಚಿಕ್ಕಬಳ್ಳಾಪುರದ ಚಿಂತಾಮಣಿ ನಗರದ ಎಪಿಎಂಸಿ ಮಾರುಕಟ್ಟೆಯಲ್ಲೂ ಟೊಮ್ಯಾಟೋ ಗಗನ ಕುಸುಮವಾಗಿದೆ. ಈ ಎಪಿಎಂಸಿಯಲ್ಲಿ 15 ಕೆ.ಜಿಯ ತೂಕದ ಒಂದು ಕ್ರೇಟ್​ 2300 ರೂಪಾಯಿಗೆ ಹರಾಜು ಮಾಡಲಾಗುತ್ತಿದೆ. ಕೋಲಾರಕ್ಕೆ ಹೋಲಿಕೆ ಮಾಡಿಕೊಂಡರೇ ಚಿಂತಾಮಣಿಯಲ್ಲಿ 300 ರೂಪಾಯಿ ಕಡಿಮೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಾ.. ಟೊಮ್ಯಾಟೋ ಬೆಲೆ ಇಷ್ಟೊಂದು ಜಾಸ್ತಿನಾ; ಕೋಲಾರ, ಚಿಕ್ಕಬಳ್ಳಾಪುರ APMC ಇತಿಹಾಸದಲ್ಲೇ ಹೊಸ ದಾಖಲೆ

https://newsfirstlive.com/wp-content/uploads/2023/07/KLR_TOMATO.jpg

Load More