ವರ್ಗಾವಣೆ ದಂಧೆ, CMರನ್ನು ದೇವರ ಕಟಕಟೆಗೆ ಕರೆದ ಈಶ್ವರಪ್ಪ
ಸಿದ್ದರಾಮಯ್ಯ, ಡಾ.ಯತೀಂದ್ರಗೆ ಮಾಜಿ ಸಚಿವ ಈಶ್ವರಪ್ಪ ಸವಾಲ್
‘ನಾನೇಳಿದ್ದು ಸುಳ್ಳಾದರೆ ದೇವರು ನನಗೆ ಶಾಪ ಕೊಡಲಿ’ ಎಂದ KSE
ಕೋಲಾರ: ನೀವು, ನಿಮ್ಮ ಮಗ ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿಲ್ಲ ಅಂತ ಗಣಪತಿ ದೇವಸ್ಥಾನದಲ್ಲಿ ಪ್ರಮಾಣ ಮಾಡಿ ಎಂದು ಸಿಎಂ ಸಿದ್ದರಾಮಯ್ಯರವರಿಗೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಚಾಲೆಂಜ್ ಮಾಡಿದ್ದಾರೆ.
ಕೋಲಾರದ ಕುರುಡು ಮನೆ ಗಣಪತಿ ದೇವಾಲಯದ ಎದುರು ಮಾತನಾಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು, ಸಿಎಂ ಸಿದ್ದರಾಮಯ್ಯಗೆ ಒಂದೇ ಒಂದು ಸವಾಲ್ ಹಾಕುತ್ತೇನೆ. ನೀವು, ನಿಮ್ಮ ಮಗ ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿಲ್ಲ ಎಂದು ಗಣಪತಿ ದೇವಸ್ಥಾನದಲ್ಲಿ ಪ್ರಮಾಣ ಮಾಡಿ. ಈ ಹಿಂದೆ ಬಿಜೆಪಿ ಸರ್ಕಾರದ ಮೇಲೆ ವರ್ಗಾವಣೆ ಆರೋಪ ಮಾಡುತ್ತಿದ್ದವರು. ಆದ್ರೆ ಈಗ ಈಗಿನ ಸರ್ಕಾರ ದಂಧೆಯಲ್ಲಿ ತೊಡಗಿದೆ. ಬೇಕಾದರೆ ಹಾಲಿ ಅಥವಾ ನಿವೃತ್ತ ಜಡ್ಜ್ ನೇಮಕ ಮಾಡಿ ತನಿಖೆ ಮಾಡಿಸಲಿ. ನನಗೂ ಮಕ್ಕಳಿದ್ದಾರೆ. ಒಂದು ವೇಳೆ ಇದು ಸುಳ್ಳು ಆಗಿದ್ದರೆ ಕುರುಡು ಮನೆ ಗಣಪತಿ ನನಗೆ ಏನು ಬೇಕಾದರೂ ಶಾಪ ಕೊಡಲಿ ಎಂದಿದ್ದಾರೆ.
ಈಗಿನ ಎಲ್ಲ ವರ್ಗಾವಣೆ ಸಿದ್ದರಾಮಯ್ಯ ಗಮನಕ್ಕೆ ತರಬೇಕಂತೆ. ಈಗಾಗಲೇ ವರ್ಗಾವಣೆ ದಂಧೆ ಶುರುವಾಗಿದೆ. ಇದು ಸುಳ್ಳು ಆಗಿದ್ದರೆ ಸಿದ್ದರಾಮಯ್ಯ ಗಣಪತಿ ಮುಂದೆ ಬಂದು ಪ್ರಮಾಣ ಮಾಡಿ, ನಾನು ಲಂಚ ತೆಗೆದುಕೊಂಡಿಲ್ಲ ಎಂದು ಹೇಳಲಿ ಎಂದು ಈಶ್ವರಪ್ಪ ಸವಾಲ್ ಹಾಕಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ