newsfirstkannada.com

‘Mr. ​​ಹೆಚ್​​ಡಿಕೆ.. ಕೆಸಿ ವ್ಯಾಲಿಗೆ ವಿಶ್ವಸಂಸ್ಥೆಯೇ ಶಬ್ಬಾಷ್​​ ಎಂದಿದೆ’- ಸಿಎಂ ಸಿದ್ದು ಕಿಡಿ!

Share :

11-11-2023

  ಯರಗೋಳ್ ಅಣೆಕಟ್ಟನ್ನು ಲೋಕಾರ್ಪಣೆ ಮಾಡಿದ ಸಿದ್ದರಾಮಯ್ಯ

  ಕಾರ್ಯಕ್ರಮದ ವೇಳೆ ಮಾಜಿ ಸಿಎಂ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

  ಕೆ.ಸಿ ವ್ಯಾಲಿಯ ನೀರಿನಿಂದ ದನ-ಕರು ಸಾಯುತ್ತವೆ ಎಂದಿದ್ರಾ HDK?

ಕೋಲಾರ: KC ವ್ಯಾಲಿ ವಿಚಾರಕ್ಕೆ ಸಂಬಂಧ ಪಟ್ಟಂತೆ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿಗೆ, ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಕೋಲಾರ, ಚಿಕ್ಕಬಳ್ಳಾಪುರಕ್ಕೆ KC, HN ವ್ಯಾಲಿ ಕೊಟ್ಟಿದ್ದೇನೆ. ಆದ್ರೆ ಆ ನೀರು ವಿಷ ಎಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಟೀಕೆ ಮಾಡಿದ್ದರು ಎಂದು ಹೇಳಿದ್ದಾರೆ.

ಬಂಗಾರಪೇಟೆಯ ಯರಗೋಳ್ ಗ್ರಾಮದ ಬಳಿ ನಿರ್ಮಾಣವಾಗಿರುವ ಯರಗೋಳ್ ಅಣೆಕಟ್ಟನ್ನು ಸಿಎಂ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಿ, ಭಾಗಿನ‌ ಅರ್ಪಿಸಿದರು. ಬಳಿಕ ಮಾತನಾಡಿದ ಸಿಎಂ, ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು. ಇಡೀ ದೇಶದಲ್ಲಿ ರಾಜಸ್ತಾನ ಬಿಟ್ಟರೆ, ಕರ್ನಾಟಕದಲ್ಲಿ ಮಾತ್ರ ಹೆಚ್ಚು ಬರಡು ಭೂಮಿ ಇರೋದು. ಹೀಗಾಗಿ ಕೆ.ಸಿ ವ್ಯಾಲಿ, ಹೆಚ್.ಎನ್.ವ್ಯಾಲಿ ಮಾಡಿದ್ರೆ ಸಾವಿರಾರು ಜನರಿಗೆ ಉಪಯೋಗವಾಗುತ್ತದೆ ಎಂದು ನಾನು ಮೊದಲು ಮುಖ್ಯಮಂತ್ರಿ ಆಗಿದ್ದಾಗ ಈ ನೀರಾವರಿ ಯೋಜನೆ ಕೊಟ್ಟಿರೋದು. ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಅವರು ಕೆಸಿ ವ್ಯಾಲಿ ವಿಷ ಎಂದು ಟೀಕೆ ಮಾಡಿ, ದನ, ಕರುಗಳು ಸಾಯುತ್ತವೆ ಎಂದು ಹೇಳಿದ್ದರು. ಈಗ ಇದಕ್ಕೆ ಜನರು ಉತ್ತರ ಕೊಡಬೇಕು ಎಂದು ಸಿಎಂ ಹೇಳಿದ್ದಾರೆ.

CM ಸಿದ್ದರಾಮಯ್ಯ

ನಾವು ನೀರನ್ನ ಪರೀಕ್ಷಿಸಿ ಇದರಲ್ಲಿ ಯಾವುದೇ ಹಾನಿಕಾರಕ ಇಲ್ಲ ಎಂದು ಯೋಜನೆ ತಂದಿದ್ದೇವೆ. ಕೆಸಿ ವ್ಯಾಲಿಗೆ ವಿಶ್ವಸಂಸ್ಥೆಯವರು ಪರಿಶೀಲನೆ ಮಾಡಿ ಶಬ್ಬಾಷ್​​ ಗಿರಿ ಕೊಟ್ಟಿದ್ದಲ್ಲದೇ ಒಳ್ಳೆಯ ಯೋಜನೆ ಎಂದು ಹೇಳಿದ್ದಾರೆ. ಜನರ ದಾರಿ ತಪ್ಪಿಸುವ ಕೆಲಸ ಮಾಡಬಾರದು. ಮಿಸ್ಟರ್ ಹೆಚ್​ಡಿ ಕುಮಾರಸ್ವಾಮಿ ಕೇಳಿ ತಿಳಿದುಕೊಳ್ಳಿ. ಅಂಡರ್​ ಸ್ಟಾಂಡ್ ಎಂದು ಸಿಎಂ ತಮ್ಮ ಮಾತಿನ ವರಸೆಯಲ್ಲೇ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘Mr. ​​ಹೆಚ್​​ಡಿಕೆ.. ಕೆಸಿ ವ್ಯಾಲಿಗೆ ವಿಶ್ವಸಂಸ್ಥೆಯೇ ಶಬ್ಬಾಷ್​​ ಎಂದಿದೆ’- ಸಿಎಂ ಸಿದ್ದು ಕಿಡಿ!

https://newsfirstlive.com/wp-content/uploads/2023/11/SIDDARAMAIAH_CM_HDK.jpg

Load More