newsfirstkannada.com

ತಂದೆ-ತಾಯಿ ಬುದ್ಧಿ ಮಾತು ಹೇಳಿದ್ದಕ್ಕೆ ಮನೆ ಬಿಟ್ಟು ಹೋದ 8ನೇ ತರಗತಿ ವಿದ್ಯಾರ್ಥಿ; ಏನಾಯ್ತು?

Share :

02-09-2023

  ತಿರುಪತಿ ದೇವಾಲಯಕ್ಕೆ ಬಾಲಕ ಹೋಗಿರಬಹುದೇ?

  ಶಾಲೆಗೆ ಹೋಗಿದ್ದ ಬಾಲಕ ಮತ್ತೆ ಮನೆಗೆ ಬಂದಿಲ್ಲ

  ಸ್ನೇಹಿತರ ಜತೆ ಟ್ರಿಪ್ ಹೋಗಲು ಪ್ಲಾನ್ ಮಾಡಿದ್ದ

ಕೋಲಾರ: ಪೋಷಕರು ಬುದ್ಧಿ ಮಾತು ಹೇಳಿದ್ದಕ್ಕೆ ಬೇಸರಗೊಂಡು 13 ವರ್ಷದ ಬಾಲಕನೊಬ್ಬ ಮನೆ ಬಿಟ್ಟು ಹೋಗಿರುವ ಘಟನೆ ಕೆಜಿಎಫ್ ತಾಲೂಕಿನ ಪೆದ್ದಪಲ್ಲಿ ಗ್ರಾಮದಲ್ಲಿ ನಡೆದಿದೆ.

ಪೆದ್ದಪಲ್ಲಿ ಗ್ರಾಮದ ಶೇಖರ್ ಎನ್ನುವರ ಪುತ್ರ ಹರ್ಷಿತ್ (13) ಕಾಣೆಯಾದ ಬಾಲಕ. ಕೆಜಿಎಫ್ ನಗರದಲ್ಲಿರುವ ಜೈನ್ ಶಾಲೆಯಲ್ಲಿ ಬಾಲಕನು 8 ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಇತ್ತೀಚೆಗೆ ಸ್ನೇಹಿತರ ಜೊತೆ ಸೇರಿ ತಿರುಪತಿಗೆ ಟ್ರಿಪ್ ಹೋಗುವುದಾಗಿ ತನ್ನ ತಂದೆ-ತಾಯಿ ಬಳಿ ಮಾತನಾಡಿದ್ದನು.

ಈ ಸಂಬಂಧ ಪೋಷಕರು ಮಗನಿಗೆ ಬೈದು ಬುದ್ಧಿ ಹೇಳಿದ್ದರು. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ನಿನ್ನೆ ಶಾಲೆಗೆ ಹೋಗಿದ್ದ ಬಾಲಕ ಮತ್ತೆ ಮನೆಗೆ ವಾಪಸ್ ಆಗಿಲ್ಲ. ಇದರಿಂದ ಗಾಬರಿಗೊಂಡ ಪೊಲೀಸರು ಪೊಲೀಸರ ಮೊರೆ ಹೋಗಿದ್ದು ರಾಬರ್ಟ್​ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದಾರೆ. ಇನ್ನು ಬಾಲಕ ತಿರುಪತಿ ತಿಮ್ಮಪ್ಪನ ದೇವಾಲಯಕ್ಕೆ ತೆರಳಿರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಂದೆ-ತಾಯಿ ಬುದ್ಧಿ ಮಾತು ಹೇಳಿದ್ದಕ್ಕೆ ಮನೆ ಬಿಟ್ಟು ಹೋದ 8ನೇ ತರಗತಿ ವಿದ್ಯಾರ್ಥಿ; ಏನಾಯ್ತು?

https://newsfirstlive.com/wp-content/uploads/2023/09/KOLAR_BOY_MISSING_1.jpg

Load More