ಕೋಲಾರದಲ್ಲಿ ಪೋಷಕರಿಂದ ವಿಕೃತ ಕೃತ್ಯ
ಕೊಲೆ ಮಾಡಿ ಶವ ಹೂತಿಟ್ಟಿದ್ದ ಕುಟುಂಬಸ್ಥರು
ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಕೇಸ್
ಕೋಲಾರ: ತಂದೆಯೇ ಹೆತ್ತ ಮಗಳನ್ನು ಕೊಲೆ ಮಾಡಿರುವ ಪೈಶಾಚಿಕ ಕೃತ್ಯ ಕೋಲಾರದ ತೊಟ್ಲಿ ಗ್ರಾಮದಲ್ಲಿ ನಡೆದಿದೆ.
ತಂದೆ ವೆಂಕಟೇಶ್ ತನ್ನ 19 ವರ್ಷದ ಮಗಳನ್ನ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಮಗಳು ರಮ್ಯಾ ಅನ್ಯಜಾತಿಯ ಯುವಕನನ್ನು ಪ್ರೀತಿಸ್ತಿರುವ ಮಾಹಿತಿ ಸಿಕ್ಕ ಹಿನ್ನೆಲೆ ಮಗಳಿಗೆ ಬುದ್ಧಿ ಹೇಳಿದ್ದಾರೆ. ಆದ್ರೂ ಮಾತು ಕೇಳದಿದ್ದರಿಂದ ಮಗಳನ್ನು ಕೊಲೆ ಮಾಡಿ ಹೆತ್ತವರು ಅಂತ್ಯ ಸಂಸ್ಕಾರ ಮಾಡಿದ್ದಾರೆ.
ಬಳಿಕ ಊರಿನಲ್ಲಿ ಕೊಲೆ ಮಾಡಿರುವ ಕುರಿತು ಗುಸುಗುಸು ಶುರುವಾದ ಹಿನ್ನಲೆ ಪೊಲೀಸರು ವೆಂಕಟೇಶ್ನನ್ನ ವಿಚಾರಣೆ ನಡೆಸಿದಾಗ ಪ್ರಕರಣ ಬಯಲಾಗಿದೆ. ಬಳಿಕ ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ