ಆರೋಪಿಯನ್ನ ಸಾಯಿಸಲು ಕಿಟಕಿಗೆ ಇಟ್ಟಿಗೆ, ಕಲ್ಲನ್ನ ಎಸೆದ ಗ್ರಾಮಸ್ಥರು
ಆರೋಪಿಯನ್ನ ನಮಗೆ ಒಪ್ಪಿಸಿ, ನಾವು ಸಾಯಿಸಿ ಬಿಡುತ್ತೇವೆಂದು ಆಗ್ರಹ
ಪೊಲೀಸ್ ಪೇದೆ ಮೇಲೆ ಆತ ಮಚ್ಚಿನಿಂದ ಹಲ್ಲೆ ನಡೆಸಿದ ಆರೋಪಿ
ಹಲವು ಸ್ಟೋರಿಯನ್ನ ನರೇಟ್ ಮಾಡುವಾಗ ಹೀಗಾಯ್ತು.. ಹಾಗಾಯ್ತು ಅಂತಾ ಹೇಳಲಾಗುತ್ತೆ. ಆದ್ರೆ, ಈ ಸ್ಟೋರಿ ಆ ರೀತಿಯಲ್ಲ. ಅಲ್ಲಿ ನಡೆದ ಪ್ರತಿಯೊಂದು ಘಟನೆಯನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದ್ದು ಮರ್ಡರ್ ನಡೆದು ಹೋಗಿ ಬಿಟ್ಟಿದೆ. ಆ ದೃಶ್ಯವೂ ಸಿಸಿಟಿವಿಯಲ್ಲಿ ಸಿಕ್ಕಿದೆ. ಇದರ ಜೊತೆ ಹಳ್ಳಿಯಲ್ಲಿ ನಡೆದ ಆ ದೊಡ್ಡ ಹೈಡ್ರಾಮಾವೂ ಕ್ಯಾಪ್ಚರ್ ಆಗಿದೆ. ಹೆಂಡತಿಯನ್ನ ಬರ್ಬರವಾಗಿ ಕೊಂದ ಗಂಡನ ಪಾಪಕೃತ್ಯವೇ ಹೇಗಿದೆ?.
ಮಂಗಳವಾರ, ಮಧ್ಯಾಹ್ನ 3.30 ನಂಬಿಹಳ್ಳಿಯಲ್ಲಿ ಬರ್ಬರ ಕೊಲೆ
ಮಧ್ಯಾಹ್ನ 3.30ರ ಸಮಯ. ವ್ಯಕ್ತಿಯೋರ್ವ ಮನಬಂದಂತೆ ಮಚ್ಚಿನಿಂದ ಹಲ್ಲೆ ಮಾಡ್ತಾನೆ. ಈ ಕೃತ್ಯ ನೋಡಿ ಸಂಬಂಧಿಕರು ಓಡೋಡಿ ಬರ್ತಾರೆ. ಹಲ್ಲೆ ಮಾಡುತ್ತಿದ್ದವನನ್ನು ತಳ್ಳಲು ಪ್ರಯತ್ನಿಸುತ್ತಾರೆ. ಆದ್ರೆ, ಆತ ಮತ್ತೆ ಅವರ ಮೇಲೆ ಮಚ್ಚಿನಿಂದಲೇ ಹಲ್ಲೆ ಮಾಡ್ತಾನೆ.
ಜನರು ಆಗಮಿಸುತ್ತಿದ್ದಂತೆ ಭಯಗೊಂಡ ಕೊಲೆಗಡುಕ
ಕೂಗಾಟ ಕಿರುಚಾಟ ಕೇಳಿ ಊರಿನ ಜನರು ಹೊರಬರ್ತಾರೆ. ನೋಡ ನೋಡುತ್ತಿದ್ದಂತೆ, ಶ್ರೀನಿವಾಸಪುರ ತಾಲೂಕಿನ ನಂಬಿಹಳ್ಳಿಯ ಜನರು ಮನೆಯಿಂದ ಹೊರಬರ್ತಾರೆ. ಯಾವಾಗ ಜನರು ಆಗಮಿಸುತ್ತಾರೋ, ಭಯಗೊಂಡ ಕೊಲೆಗಡುಕ ಅಲ್ಲಿಂದ ಓಡಿ ಹೋಗ್ತಾನೆ. ಅವನ್ನ ಹಿಂಬಾಲಿಸಿಕೊಂಡು ಜನರು ಹೋಗ್ತಾರೆ. ಅಂದ್ಹಾಗೇ, ಇಲ್ಲಿ ಬರ್ಬರವಾಗಿ ಕೊಲೆಯಾದವರು ವಿಚ್ಛೇದಿತ ಪತ್ನಿ ರಾಧಮ್ಮ. ಈಕೆಯನ್ನ ಕೊಲೆ ಮಾಡಿದವನು ಪತಿ ನಾಗೇಶ್.
ಘಟನೆಯಲ್ಲಿ ರಾಧಮ್ಮ ಅವರ ತಂದೆ ಮುನಿಯಪ್ಪ, ಅಣ್ಣನ ಹೆಂಡತಿ ಅನುಷಾ ಮತ್ತು ಅಣ್ಣನ ಮಗ ವರುಣ್ ಕೂಡ ಗಾಯಗೊಂಡಿದ್ದಾರೆ. ಪತ್ನಿಯನ್ನ ಕೊಂದ ನಾಗೇಶ್, ಹಳ್ಳಿಯಲ್ಲಿಯೇ ಇರುವ ಹೋಟೆಲ್‌ವೊಂದರಲ್ಲಿ ಅವಿತುಕೊಂಡು ಬಿಡ್ತಾನೆ. ವಿಷಯ ತಿಳಿದ ಪೊಲೀಸರು, ಸ್ಥಳಕ್ಕೆ ಆಗಮಿಸುತ್ತಾರೆ. ನೋಡ ನೋಡ್ತಿದ್ದಂತೆ ಊರಿನ ತುಂಬಾ ಪೊಲೀಸರು ಮತ್ತು ಜನರೇ ತುಂಬಿ ಹೋಗ್ತಾರೆ.
ಯಾವಾಗ ರಾಧಮ್ಮ ಕೊಲೆಯಾಗಿ ಹಲವರು ಗಾಯಗೊಂಡರೋ ಗ್ರಾಮಸ್ಥರು ರೊಚ್ಚಿಗೆದ್ದರು. ಆರೋಪಿಯನ್ನ ನಮ್ಮ ವಶಕ್ಕೆ ಒಪ್ಪಿಸಿ, ನಾವು ಆತನನ್ನ ಸಾಯಿಸಿಬಿಡ್ತೀವಿ ಅಂತಾ ಪೊಲೀಸರ ಬಳಿ ಕೇಳಿದರು. ಪೊಲೀಸರು ಇದಕ್ಕೆ ಅವಕಾಶ ನೀಡದೇ ಇದ್ದಾಗ, ಮತ್ತಷ್ಟು ಕುಪಿತಗೊಂಡರು.
ಹೋಟೆಲ್‌ಗೆ ಸೀಮೆ ಎಣ್ಣೆ ಎರಚಿ, ಬೆಂಕಿಯಿಡಲು ಪ್ರಯತ್ನ
ಹೋಟೆಲ್ ಒಂದರಲ್ಲಿ ಕುಳಿತ್ತಿದ್ದ ಆರೋಪಿ ನಾಗೇಶ್, ಸಿಲಿಂಡರ್‌ನ ಮೇಲೆ ಮಚ್ಚು ಹಿಟ್ಟುಕೊಂಡು, ಕುಳಿತುಕೊಂಡಿದ್ದ. ಇದನ್ನ ನೋಡಿದ ಜನರು, ಕಿಟಕಿಗೆ ಇಟ್ಟಿಗೆ, ಕಲ್ಲನ್ನ ಎಸೆದರು. ಆತನನ್ನ ನಮಗೆ ಒಪ್ಪಿಸಿ ಒಪ್ಪಿಸಿ ಅಂತಾ ಆಗ್ರಹಿಸಿದರು. ಇಷ್ಟೇ ಅಲ್ಲ, ಆತನಿದ್ದ ಹೋಟೆಲ್‌ಗೆ ಸೀಮೆಎಣ್ಣೆ ಎರಚಿ, ಬೆಂಕಿಯಿಡಲು ಸಹ ಪ್ರಯತ್ನಪಟ್ಟರು. ಆದ್ರೆ, ಪೊಲೀಸರು ಇದನ್ನೆಲ್ಲಾ ವಿಫಲಗೊಳಿಸಿದರು.
ಇದಿಷ್ಟೇ ಅಲ್ಲ, ಆರೋಪಿ ಸಿಲಿಂಡರ್ ಸ್ಫೋಟಿಸೋದಾಗಿ ಅಲ್ಲಿಂದಲೇ ಕಿರುಚುತ್ತಿದ್ದ. ಜನರು ಆಗ ಇನ್ನೂ ರೊಚ್ಚಿಗೆದ್ದರು. ಅವರೇ ಇನ್ನೆರೆಡು ಸಿಲಿಂಡರ್ ತಂದ, ಆಚೆಯಿಂದಲೇ ಸ್ಫೋಟಿಸೋದಾಗಿ ಹೇಳಿದರು.
ಜನರನ್ನ ಚದುರಿಸಲು ಪೊಲೀಸರು ಹರಸಾಹಸ ಪಟ್ಟರು. ಟಿಯರ್ ಗ್ಯಾಸ್ ಸಿಡಿಸಿದರು ಪ್ರಯೋಜನವಾಗ್ಲಿಲ್ಲ. ಲಾಠಿಚಾರ್ಚ್ ಮಾಡಿದರು ಜನರು ಚದುರಲಿಲ್ಲ. ಆಗ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು.
ಪೊಲೀಸ್ ಪೇದೆ ಮೇಲೆ ಆತ ಮಚ್ಚಿನಿಂದ ಹಲ್ಲೆ
ಇದಾದ ನಂತರ ಜನವೇನೋ ಮನೆಗೆ ವಾಪಸ್ ಆದರು. ನಂತರ ಆರೋಪಿಯ ಹೈಡ್ರಾಮಾ ಶುರುವಾಗತ್ತೆ. ನನ್ನನ್ನ ಅರೆಸ್ಟ್ ಮಾಡಲು ಬಂದರೆ ಸಿಲಿಂಡರ್ ಸ್ಫೋಟಿಸೋದಾಗಿ ಬೆದರಿಕೆ ಹಾಕಿದ. ಇದಕ್ಕೆ ಜಗ್ಗದ ಪೊಲೀಸರು ಆತ ಅವಿತ್ತಿದ್ದ ಹೋಟೆಲ್‌ನ ಬಾಗಿಲು ಮುರಿದ ಒಳಗೆ ಹೋದಾಗ, ಪೊಲೀಸ್ ಪೇದೆ ಮೇಲೆ ಆತ ಮಚ್ಚಿನಿಂದ ಹಲ್ಲೆ ನಡೆಸಿದ. ನಂತರ ಪೊಲೀಸರು ಆತ್ಮರಕ್ಷಣೆಗಾಗಿ ಆತನ ಕಾಲು ಮತ್ತು ಕೈಗೆ ಗುಂಡು ಹಾರಿಸಿದರು.
ಸದ್ಯ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಷ್ಟಕ್ಕೂ ಆರೋಪಿ ನಾಗೇಶ್ ಪತ್ನಿಯನ್ನ ಕೊಲ್ಲಲು ಕೌಟುಂಬಿಕ ಕಾರಣವೇ ಆಗಿದೆ. ಅದೇನಂದ್ರೆ, 15 ವರ್ಷದ ಹಿಂದೆ ರಾಧಮ್ಮ ಜೊತೆ ಮದ್ವೆಯಾಗಿದ್ದ ನಾಗೇಶ್ ನಂತರ ಇನ್ನೊಂದು ಮಹಿಳೆಯನ್ನ ಮದ್ವೆಯಾಗಿದ್ದ. ಈ ವಿಚಾರ ಗೊತ್ತಾದ ನಂತರ ರಾಧಾಮ್ಮ ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಪ್ರತಿ ತಿಂಗಳು, 8 ಸಾವಿರ ಪರಿಹಾರ ಧನ ನೀಡಲು ನಾಗೇಶ್‌ಗೆ ಸೂಚಿಸಿತ್ತು. ಇದರಿಂದ ಕುಪಿತಗೊಂಡ ನಾಗೇಶ್, ರಾಧಮ್ಮನ ಕೊಂದು ಬಿಟ್ಟಿದ್ದಾನೆ. ಇಡೀ ಘಟನೆ ಕುರಿತು ಪೊಲೀಸ್ ಮಹಾನಿರ್ದೇಶಕರಿಗೆ ಎಸ್ಪಿ ನಾರಾಯಣ್, ವಿಸ್ತೃತ ವರದಿ ಸಲ್ಲಿಸಿದ್ದಾರೆ. ಸದ್ಯ ಆರೋಪಿಯನ್ನ ಬಂಧಿಸಲಾಗಿದ್ದು, ಆತ ಚಿಕಿತ್ಸೆ ಪಡೆಯುತ್ತಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ