2025ರ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ಗೆ ಇನ್ನೇನು 6 ತಿಂಗಳು..!
ವರ್ಷದ ಕೊನೆಗೆ ನಡೆಯಲಿದೆ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಆಕ್ಷನ್
ಕ್ಯಾಪ್ಟನ್ ಶ್ರೇಯಸ್ ಅಯ್ಯರ್ಗೆ ಬಿಗ್ ಶಾಕ್ ಕೊಟ್ಟ ಕೋಲ್ಕತ್ತಾ ನೈಟ್ ರೈಡರ್ಸ್
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ಗೆ ಇನ್ನೇನು 6 ತಿಂಗಳು ಮಾತ್ರ ಬಾಕಿ ಇದೆ. ವರ್ಷದ ಕೊನೆಗೆ ಐಪಿಎಲ್ ಮೆಗಾ ಆಕ್ಷನ್ ನಡೆಯಲಿದೆ. ಯಾರನ್ನು ರಿಲೀಸ್ ಮಾಡಬೇಕು? ಯಾರನ್ನು ರೀಟೈನ್ ಮಾಡಿಕೊಳ್ಳಬೇಕು? ಅನ್ನೋ ಚಿಂತೆಯಲ್ಲಿ ಮುಂಬೈ ಇಂಡಿಯನ್ಸ್ ತೊಡಗಿದೆ. ಹಾರ್ದಿಕ್ ಪಾಂಡ್ಯ ನಾಯಕರಾದ ಮೇಲಂತೂ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಲೇ ಇವೆ. ಸ್ಟಾರ್ ಆಟಗಾರರೇ ಮುಂಬೈ ಇಂಡಿಯನ್ಸ್ ಬಿಡಲಿದ್ದಾರೆ ಎಂಬ ಚರ್ಚೆ ಕೂಡ ಇದೆ. ಇದರ ಬೆನ್ನಲ್ಲೇ ಕೋಲ್ಕತ್ತಾ ನೈಟ್ ರೈಡರ್ಸ್ ಹೊಸ ದಾಳ ಉರುಳಿಸಿದೆ.
ಟೀಮ್ ಇಂಡಿಯಾ ಒನ್ ಡೇ ಮತ್ತು ಟೆಸ್ಟ್ ಕ್ಯಾಪ್ಟನ್ ಮುಂಬೈ ಇಂಡಿಯನ್ಸ್ ತೊರೆಯೋದು ಪಕ್ಕಾ ಆಗಿದೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾದ ಟಿ20 ಟೀಮ್ನ ಹೊಸ ಕ್ಯಾಪ್ಟನ್ ಸೂರ್ಯಕುಮಾರ್ಗೂ ಐಪಿಎಲ್ನ ಚಾಂಪಿಯನ್ ತಂಡ ಗಾಳ ಬೀಸಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಸದ್ಯ ನಾಯಕನ ಹುಡುಕಾಟದಲ್ಲಿದೆ. ಹೀಗಾಗಿ ಸೂರ್ಯಕುಮಾರ್ನ್ನ ತಮ್ಮ ಟೀಮ್ಗೆ ಕರೆದುಕೊಂಡು ಬಂದರೆ ಸೂಕ್ತ ಎಂದು ಅದು ಅಂದುಕೊಂಡಿದೆ. ಇದರಿಂದ ಸೂರ್ಯಕುಮಾರ್ರನ್ನ ಕೋಲ್ಕತ್ತಾ ಫ್ರಾಂಚೈಸಿ ಸಂಪರ್ಕ ಮಾಡಿದೆ ಎಂದು ಹೇಳಲಾಗುತ್ತಿದೆ.
ಶ್ರೇಯಸ್ ಅಯ್ಯರ್ಗೆ ಕೊಕ್
ಕೆಕೆಆರ್ ತಂಡದ ಕ್ಯಾಪ್ಟನ್ ಶ್ರೇಯಸ್ ಅಯ್ಯರ್. ಇವರ ನೇತೃತ್ವದಲ್ಲಿ ಕೆಕೆಆರ್ ತಂಡ ಕಳೆದ ಸೀಸನ್ನಲ್ಲಿ ಕಪ್ ಗೆದ್ದು ಚಾಂಪಿಯನ್ ಆಗಿದೆ. ಇಷ್ಟಾದ್ರೂ ಕೆಕೆಆರ್ ತಂಡದ ಕ್ಯಾಪ್ಟನ್ಸಿಯಿಂದ ಶ್ರೇಯಸ್ ಅಯ್ಯರ್ಗೆ ಕೊಕ್ ಯಾಕೆ? ಅನ್ನೋ ಚರ್ಚೆ ಇದೆ. ಸೂರ್ಯಕುಮಾರ್ ಯಾದವ್ ಕೆಕೆಆರ್ ತಂಡದ ಕ್ಯಾಪ್ಟನ್ ಆದ್ರೆ ಅಯ್ಯರ್ಗೆ ಕೊಕ್ ಪಕ್ಕಾ ಆಗಿದೆ.
ಇದನ್ನೂ ಓದಿ: 2ನೇ ಟೆಸ್ಟ್ ಪಂದ್ಯಕ್ಕೆ ಬಲಿಷ್ಠ ಟೀಮ್ ಇಂಡಿಯಾ; ನಾಲ್ವರು ಆರ್ಸಿಬಿ ಪ್ಲೇಯರ್ಸ್ಗೆ ಬಂಪರ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ