newsfirstkannada.com

ಭಾರೀ ಚರ್ಚೆ ಆಗ್ತಿದೆ ಈ ವಿದ್ಯಾರ್ಥಿನಿಯ ಆತ್ಮಹತ್ಯೆ- ಅಸಲಿಗೆ ಆಗಿದ್ದೇನು..?

Share :

07-06-2023

    ಕೇರಳದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

    ಮಾನಸಿಕ ಕಿರುಕುಳದಿಂದ ಆತ್ಮಹತ್ಯೆ ಎಂದ ಸಹಪಾಠಿ

    ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ

ಕೊಟ್ಟಾಯಂನ ಕಂಜಿರಪಳ್ಳಿಯಲ್ಲಿರುವ ಅಮಲ್ ಜ್ಯೋತಿ ಇಂಜಿನಿಯರಿಂಗ್ ಕಾಲೇಜಿನ 20 ವರ್ಷದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದು, ಈ ಪ್ರಕರಣವು ಇಡೀ ಕೇರಳ ರಾಜ್ಯವನ್ನು ಬೆಚ್ಚಿಬೀಳಿಸಿದೆ. ವಿದ್ಯಾರ್ಥಿನಿ ಶ್ರದ್ಧಾ ಸತೀಶ್ ಜೂನ್ 2 ರಂದು ಸಂಜೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಫುಡ್ ಟೆಕ್ನಾಲೊಜಿ ವಿದ್ಯಾರ್ಥಿನಿಯಾಗಿದ್ದ ಶ್ರದ್ಧಾ, ಹಾಸ್ಟೆಲ್​ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ, ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಕಾಲೇಜಿನ ಆಡಳಿತ ಸಿಬ್ಬಂದಿ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಟುಡೆಂಟ್ ಫೆಡರೇಷನ್ ಆಫ್ ಇಂಡಿಯಾ (ಎಸ್​ಎಫ್​ಐ) ನೇತೃತ್ವದಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ಆಕೆಯ ಆತ್ಮಹತ್ಯೆಗೆ ಕಾಲೇಜು ಸಿಬ್ಬಂದಿಯ ಮಾನಸಿಕ ಕಿರುಕುಳವೇ ಕಾರಣ ಎಂದು ಆರೋಪಿಸಿದ್ದಾರೆ.

ಶುಕ್ರವಾರ ಮಧ್ಯಾಹ್ನದವರೆಗೆ ಆಕೆ ಚೆನ್ನಾಗಿಯೇ ಇದ್ದಳು. ಲ್ಯಾಬ್​ಗೆ ಬರುತ್ತಿದ್ದಂತೆಯೇ ಆಕೆಯ ಮೊಬೈಲ್ ಅನ್ನು ಸಿಬ್ಬಂದಿಯೊಬ್ಬರು ಕಸಿದುಕೊಂಡಿದ್ದರು. ನಂತರ ಟೀಚರ್ ಒಬ್ಬರು ಆಕೆಯನ್ನು ಡಿಪಾರ್ಟ್​​ಮೆಂಟ್​ನ ಹೆಚ್​ಒಡಿ ಬಳಿ ಕರೆದುಕೊಂಡು ಹೋಗಿದ್ದರು. ಅಲ್ಲಿ ಆಕೆಗೆ ಹೆದರಿಸಲಾಗಿದೆ. ಅಲ್ಲಿಂದ ಬರುವಷ್ಟರಲ್ಲಿ ಏನೆಲ್ಲಾ ಆಗಿತ್ತು ಎಂದು ನಮಗೆ ಗೊತ್ತಿಲ್ಲ. ಹೆಚ್​ಒಡಿ ಭೇಟಿಯಾಗಿ ಬರುತ್ತಿದ್ದಂತೆ, ಆಕೆ ಯಾರ ಜೊತೆಗೂ ಸೇರಲಿಲ್ಲ. ನಮ್ಮ ಪ್ರಕಾರ ಅಲ್ಲಿ ಏನೋ ಕೆಟ್ಟದಾಗಿ ನಡೆದಿರುತ್ತದೆ. ಅದಕ್ಕೆ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಶ್ರದ್ಧಾ ಸಹಪಾಠಿ ರಿಷಣಾ ಆರೋಪಿಸಿದ್ದಾಳೆ. ಸೋಶಿಯಲ್ ಮೀಡಿಯಾದಲ್ಲೂ ಕೂಡ ಶ್ರದ್ಧಾ ಆತ್ಮಹತ್ಯೆ ಬಗ್ಗೆ ಭಾರೀ ಚರ್ಚೆಗೆ ಕಾರಣವಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರೀ ಚರ್ಚೆ ಆಗ್ತಿದೆ ಈ ವಿದ್ಯಾರ್ಥಿನಿಯ ಆತ್ಮಹತ್ಯೆ- ಅಸಲಿಗೆ ಆಗಿದ್ದೇನು..?

https://newsfirstlive.com/wp-content/uploads/2023/06/SHRADDHA-SATISH.jpg

Load More