ಲೋಕಸಭಾ ಚುನಾವಣೆಯ ಯುದ್ಧಕ್ಕೆ ರೆಡಿಯಾಗಿದ್ದ ಟ್ರಬಲ್ ಶೂಟರ್‌ಗೆ ಬ್ರೇಕ್?
ವಿಜಯದಶಮಿ ಬಳಿಕ ಆಪರೇಷನ್ ಹಸ್ತಕ್ಕೆ ಯೋಜನೆ ಹಾಕಿದ್ದ ಡಿಕೆ ಶಿವಕುಮಾರ್
ಟ್ರಬಲ್ ಶೂಟರ್ ರಾಜ್ಯ ಪ್ರವಾಸ, ಚುನಾವಣಾ ಪ್ರಚಾರಕ್ಕೂ ಅಡ್ಡಿ ಉಂಟಾಗುತ್ತಾ?
ಬೆಂಗಳೂರು: ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಭಾರೀ ಸಂಕಷ್ಟ ಎದುರಾಗಿದೆ. ಇದು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷರಿಗೆ ಅಡ್ಡಿಯಾಗುತ್ತಾ, ಟ್ರಬಲ್ ಶೂಟರ್ ವೇಗಕ್ಕೆ ಬ್ರೇಕ್ ಬೀಳುತ್ತಾ ಅನ್ನೋದೇ ರಾಜಕೀಯ ವಲಯದಲ್ಲಿ ಹಾಟ್ ಟಾಪಿಂಗ್ ಆಗಿದೆ.
ವಿಧಾನಸಭಾ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಿರುವ ಕೆಪಿಸಿಸಿ ಅಧ್ಯಕ್ಷರ ಸದ್ಯದ ಟಾರ್ಗೆಟ್ 2024ರ ಲೋಕಸಭಾ ಸಮರ. ಮಹಾಯುದ್ಧಕ್ಕೆ ರೆಡಿಯಾಗಿರೋ ಟ್ರಬಲ್ ಶೂಟರ್, ಬಿಜೆಪಿ ನಾಯಕರನ್ನು ಕಾಂಗ್ರೆಸ್‌ನತ್ತ ಸೆಳೆಯೋ ಮೂಲಕ ಕಮಲ ಪಾಳಯಕ್ಕೆ ಶಾಕ್ ಕೊಟ್ಟಿದ್ದಾರೆ. ಈ ಮಧ್ಯೆ ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ಡಿ.ಕೆ ಶಿವಕುಮಾರ್ ಅವರಿಗೆ ಸಿಬಿಐ ವಿಚಾರಣೆಯ ಆತಂಕ ಎದುರಾಗಿದೆ.
ಇದನ್ನೂ ಓದಿ: Breaking News: ಡಿಸಿಎಂ ಡಿ.ಕೆ.ಶಿವಕುಮಾರ್ಗೆ ಇಲ್ಲ ರಿಲೀಫ್; ಹೈಕೋರ್ಟ್ನಿಂದ ಮಹತ್ವದ ತೀರ್ಪು ಪ್ರಕಟ..!
ಕಳೆದ ಅಕ್ಟೋಬರ್ 19ರಂದು ಹೈಕೋರ್ಟ್ ಆದಾಯಕ್ಕೂ ಮೀರಿ ಆಸ್ತಿ ಸಂಪಾದನೆ ಕೇಸ್ನ ತನಿಖೆಗೆ ಅಸ್ತು ಎಂದಿತ್ತು. ಹೈಕೋರ್ಟ್ಗೆ ಡಿ.ಕೆ. ಶಿವಕುಮಾರ್ ಅವರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಲಾಗಿತ್ತು. ಇದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಹೊಸ ಟೆನ್ಷನ್ ತಂದಿದೆ. ಯಾಕಂದ್ರೆ ದಸರಾ ಹಬ್ಬದ ಬಳಿಕ ಮುಂದಿನ ಲೋಕಸಭೆ ಚುನಾವಣೆಗೆ ಡಿ.ಕೆ ಶಿವಕುಮಾರ್ ಅವರು ಭರ್ಜರಿ ತಯಾರಿ ನಡೆಸಿದ್ದರು. ಇದೀಗ ಸಿಬಿಐ ತನಿಖೆ ಎದುರಿಸಬೇಕಾಗಿರುವುದರಿಂದ ಡಿಕೆ ಶಿವಕುಮಾರ್ ಅವರ ರಾಜಕೀಯ ತಂತ್ರಗಾರಿಕೆಗೆ ಅಡಚಣೆ ಆಗುವ ಸಾಧ್ಯತೆ ಇದೆ.
ಬಿಜೆಪಿ-ಜೆಡಿಎಸ್ 18-20 ನಾಯಕರಿಗೆ ಗಾಳ!
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ವಿಜಯದಶಮಿ ಬಳಿಕ ಭರ್ಜರಿ ಆಪರೇಷನ್ ಹಸ್ತಕ್ಕೆ ಯೋಜನೆ ಹಾಕಿದ್ದರು. ಬಿಜೆಪಿ-ಜೆಡಿಎಸ್ನ ಸುಮಾರು 18-20 ನಾಯಕರಿಗೆ ಡಿ.ಕೆ. ಶಿವಕುಮಾರ್ ಗಾಳ ಹಾಕಿದ್ದರು ಎನ್ನಲಾಗಿದೆ. ಆದ್ರೀಗ ಹೈಕೋರ್ಟ್ ಆದೇಶದ ಹಿನ್ನೆಲೆ ಪ್ಲಾನಿಂಗ್ ಬದಲಾಗುವ ಸಾಧ್ಯತೆ ಇದೆ.
ಹೈಕೋರ್ಟ್ ಆದೇಶಕ್ಕೆ ಡಿ.ಕೆ ಶಿವಕುಮಾರ್ ಅವರು ಸುಪ್ರೀಂಕೋರ್ಟ್ ಮೊರೆ ಹೋಗುವುದಕ್ಕೂ ತಯಾರಿ ನಡೆಸಿದ್ದಾರೆ. ಅಲ್ಲೂ ಹಿನ್ನಡೆಯಾದರೆ ಡಿ.ಕೆ. ಶಿವಕುಮಾರ್ ಅವರ ಲೋಕಸಭಾ ಎಲೆಕ್ಷನ್ ತಯಾರಿಗೆ ಹೊಡೆತ ಬೀಳಲಿದೆ. ಲೋಕಸಭಾ ಚುನಾವಣೆ ಸಮಯದಲ್ಲಿ ಸಿಬಿಐ ವಿಚಾರಣೆಗೆ ಕರೆದರೆ ರಾಜ್ಯ ಪ್ರವಾಸ, ಚುನಾವಣಾ ಪ್ರಚಾರ ಮಾಡೋಕೆ ಅಡ್ಡಿ ಉಂಟಾಗುತ್ತದೆ. ಇದಲ್ಲದೇ ಚುನಾವಣಾ ಸಮಯದಲ್ಲಿ ಡಿಸಿಎಂ ಅವರನ್ನ ಸಿಬಿಐ ವಿಚಾರಣೆ ನಡೆಸಿದರೆ ವಿರೋಧ ಪಕ್ಷಗಳಿಗೂ ಭಾರೀ ಅಸ್ತ್ರವೇ ಸಿಕ್ಕಂತೆ ಆಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ