newsfirstkannada.com

ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್.. ಮೊದಲ ಬಾರಿಗೆ DCM ಅಲಂಕರಿಸ್ತಿರುವ ಶಿವಕುಮಾರ್ ರಾಜಕೀಯ ಹೆಜ್ಜೆ ರೋಚಕ..!

Share :

20-05-2023

    ಮೊದಲ ಚುನಾವಣೆಯಲ್ಲೇ ದೇವೇಗೌಡರ ಎದುರಾಳಿ

    ಸಾತನೂರಿನ ಸೋಲೇ ಬಂಡೆ ಗೆಲುವಿನ ಮೆಟ್ಟಿಲುಗಳಾಯ್ತು

    ಕಾಂಗ್ರೆಸ್ ವಿರುದ್ಧ ಬಂಡೆದ್ದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ

ಕಾಂಗ್ರೆಸ್ ಪಕ್ಷದ ಕಟ್ಟಾಳು ಡಿ.ಕೆ.ಶಿವಕುಮಾರ್‌ಗೆ ಡಿಸಿಎಂ ಪಟ್ಟ ಒಲಿಸಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ನೂತನ ಉಪಮುಖ್ಯಮಂತ್ರಿ ಆಗಿ, ಇವತ್ತು ಡಿಕೆ.ಶಿವಕುಮಾರ್​ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇವತ್ತು ರಾಜ್ಯದಲ್ಲಿ ಕಾಂಗ್ರೆಸ್​ಗೆ ಸ್ಪಷ್ಟ ಬಹುಮತ ಸಿಕ್ಕಿರೋದಕ್ಕೆ ಡಿ.ಕೆ.ಶಿವಕುಮಾರ್​ ಅವರ ಪರಿಶ್ರಮ ತುಂಬಾನೇ ಇದೆ. ಎದುರಾದ ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ಕಾಂಗ್ರೆಸ್​ ಪಾಲಿನ ಟ್ರಬಲ್​ ಶೂಟರ್​ ಡಿ.ಕೆ.ಶಿವಕುಮಾರ್​ಗೆ ಡಿಸಿಎಂ ಪಟ್ಟ ಒಲಿದೆ.

ರಾಜ್ಯ ರಾಜಕೀಯದಲ್ಲಿ ಟ್ರಬಲ್​ ಶೂಟರ್​ ಎಂದೇ ಪ್ರಖ್ಯಾತರಾಗಿರುವ ಡಿಕೆ ಶಿವಕುಮಾರ್ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಕೆಪಿಸಿಸಿ ಚುಕ್ಕಾಣಿ ವಹಿಸಿಕೊಂಡವರು. ಎಂತಹ ಕಠಿಣ ಪರಿಸ್ಥಿತಿಯಲ್ಲೂ ಎದೆಗುಂದದೆ ಮುನ್ನುಗ್ಗುವ ಅವರ ಗುಣವೇ ಈ ನಿರ್ಧಾರಕ್ಕೆ ಕಾರಣ. ಕನಕಪುರದಿಂದ 8ನೇ ಬಾರಿಗೆ ದಾಖಲೆ ಮತಗಳ ಅಂತರದಿಂದ ಶಾಸಕರಾಗಿ ಆಯ್ಕೆಯಾಗಿರುವ ಡಿಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ತಮ್ಮದೇ ಆದ ವರ್ಚಸ್ಸು ಇದೆ.

ಡಿಕೆಶಿ ರಾಜಕೀಯ ಹೆಜ್ಜೆ 

  • 1985 ಮೊದಲ ಬಾರಿಗೆ ಸಾತನೂರು ಕ್ಷೇತ್ರದಿಂದ ಸ್ಪರ್ಧೆ
  • ಹೆಚ್‌.ಡಿ. ದೇವೇಗೌಡರ ವಿರುದ್ಧ ಸೋಲನುಭವಿಸಿದ್ದ ಡಿಕೆಶಿ
  • 1989 ‘ಕೈ’ ಅಭ್ಯರ್ಥಿಯಾಗಿ ಸಾತನೂರಲ್ಲಿ ಮೊದಲ ಗೆಲುವು
  • 1991 ಎಸ್.ಬಂಗಾರಪ್ಪ ಸಂಪುಟದಲ್ಲಿ ಬಂಧಿಖಾನೆ ಸಚಿವ
  • 1994 ತಪ್ಪಿದ ಕೈ ಟಿಕೆಟ್‌, ಪಕ್ಷೇತರ ಅಭ್ಯರ್ಥಿಯಾಗಿ ಜಯ
  • 1999 ಹೆಚ್‌.ಡಿ ಕುಮಾರಸ್ವಾಮಿ ವಿರುದ್ಧ ಸಾತನೂರಲ್ಲಿ ಗೆಲುವು
  • 1999 ಸಹಕಾರ ಖಾತೆ ಸಚಿವ, ನಗರಾಭಿವೃದ್ಧಿ ಖಾತೆ ಸಚಿವ
  • 2002 ನಗರಾಭಿವೃದ್ಧಿ ಸಚಿವಾಲಯದ ಉಸ್ತುವಾರಿ ಸೇವೆ
  • 2004 ವಿಧಾನಸಭೆ ಚುನಾವಣೆಯಲ್ಲಿ ಸಾತನೂರಿನಿಂದ ಗೆಲುವು
  • 2008 ಕ್ಷೇತ್ರ ಪುನರ್ ವಿಂಗಡನೆ, ಕನಕಪುರದಿಂದ ಸ್ಪರ್ಧಿಸಿ ಗೆಲುವು
  • 2013 ಚುನಾವಣೆಯಲ್ಲಿ ಗೆದ್ದು ಇಂಧನ ಖಾತೆ ಸಚಿವರಾಗಿ ಆಯ್ಕೆ
  • 2018 ಜಲಸಂಪನ್ಮೂಲ-ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ
  • 2020 ಕೆಪಿಸಿಸಿ 23ನೇ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಆಯ್ಕೆ
  • 2023 ಮೇ.20 ಮೊದಲ ಬಾರಿಗೆ ಡಿಸಿಎಂ ಆಗಿ ಪದಗ್ರಹಣ

ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಎನ್ ಎಸ್ ಯುಐ ಮೂಲಕ ರಾಜಕೀಯವಾಗಿ ಕಾಂಗ್ರೆಸ್‌ನಲ್ಲಿ ಸಕ್ರಿಯವಾಗಿದ್ದ ಡಿಕೆ ಶಿವಕುಮಾರ್ ಅವರು, 1985 ಮೊದಲ ಬಾರಿಗೆ ಸಾತನೂರು ವಿಧಾನ ಸಭಾ ಕ್ಷೇತ್ರದಲ್ಲಿ ಜನತಾ ದಳದ ಎಚ್. ಡಿ. ದೇವೇಗೌಡರ ವಿರುದ್ಧ ಪ್ರಬಲ ಸ್ಪರ್ಧೆ ಮಾಡಿ ಸೋಲು ಅನುಭವಿಸಿದರು. ಬಳಿಕ 1989ರಲ್ಲಿ ಸಾತನೂರು ಕ್ಷೇತ್ರದಲ್ಲಿ ಮತ್ತೆ ಸ್ಪರ್ಧಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. 1991ರಲ್ಲಿ ಬಂಗಾರಪ್ಪ ಅವರ ಸಂಪುಟದಲ್ಲಿ ಬಂದೀಖಾನೆ ಖಾತೆ ಸಚಿವರಾದರು. 1994ರಲ್ಲಿ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಸಾತನೂರಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಗಳಿಸಿದರು.

1999 ಚುನಾವಣೆಯಲ್ಲಿ ಸಾತನೂರು ಕ್ಷೇತ್ರದಿಂದ ಮರು ಆಯ್ಕೆಯಾದ ಅವರು, ಎಸ್. ಎಂ. ಕೃಷ್ಣ ಅವರ ಸಂಪುಟದಲ್ಲಿ ಸಹಕಾರ ಖಾತೆ ಸಚಿವರಾಗಿ ಬಳಿಕ ನಗರಾಭಿವೃದ್ಧಿ ಖಾತೆಯನ್ನು ನಿಭಾಯಿಸಿದರು. ನಂತರ 2002 ನಗರಾಭಿವೃದ್ಧಿ ಸಚಿವಾಲಯದ ಉಸ್ತುವಾರಿ ಸೇವೆ ಸಲ್ಲಿಸಿದ್ದಾರೆ. 2004 ವಿಧಾನಸಭೆ ಚುನಾವಣೆಯಲ್ಲಿ ಸಾತನೂರಿನಿಂದ ಗೆಲುವು ಸಾಧಿಸಿದ್ರು. 2008 ಕ್ಷೇತ್ರ ಪುನರ್ ವಿಂಗಡನೆ, ಕನಕಪುರದಿಂದ ಸ್ಪರ್ಧಿಸಿ ಜಯದ ಯಾತ್ರೆ ಮುಂದುವರೆಸಿದ್ರು.

2013 ಚುನಾವಣೆಯಲ್ಲಿ ಗೆದ್ದು ಇಂಧನ ಖಾತೆ ಸಚಿವರಾಗಿ ಆಯ್ಕೆ ಆದ್ರು. ಬಳಿಕ 2018ರ ಮೈತ್ರಿ ಸರ್ಕಾರದಲ್ಲಿ ಜಲಸಂಪನ್ಮೂಲ-ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಕಾರ್ಯ ನಿರ್ವಹಿಸಿದ್ರು. ಮೈತ್ರಿ ಸರ್ಕಾರದ ಪತನದ ಬಳಿಕ, 2020ರಲ್ಲಿ ಕೆಪಿಸಿಸಿ 23ನೇ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಆಯ್ಕೆಯಾದ್ರು. ಸಾಕಷ್ಟು ಸವಾಲುಗಳನ್ನು ಮೆಟ್ಟಿನಿಂತ ಡಿಕೆ ಶಿವಕುಮಾರ್​​ಗೆ ಮೊದಲ ಬಾರಿಗೆ ಡಿಸಿಎಂ ಸ್ಥಾನ ಒಲಿದು ಬಂದಿದ್ದು, ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಒಟ್ಟಾರೆ.. ಕಾಂಗ್ರೆಸ್​ ಪಕ್ಷದ ಕಟ್ಟಾಳು.. ಟ್ರಬಲ್​ ಶೂಟರ್​ನ ಪರಿಶ್ರಮಕ್ಕೆ ಸಿಎಂ ಸ್ಥಾನವೇ ಒಲಿಯಬೇಕಿತ್ತು. ಆದ್ರೆ ಕೆಲವೊಂದು ಕಾರಣಗಳಿಂದ ಡಿಸಿಎಂ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ತೃಪ್ತಿ ಪಟ್ಟುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್.. ಮೊದಲ ಬಾರಿಗೆ DCM ಅಲಂಕರಿಸ್ತಿರುವ ಶಿವಕುಮಾರ್ ರಾಜಕೀಯ ಹೆಜ್ಜೆ ರೋಚಕ..!

https://newsfirstlive.com/wp-content/uploads/2023/05/Dk-Shivakumar-17.jpg

Load More