ಕಾಂಪ್ರಮೈಸ್ ಆಗಿದ್ದೇನೆ, ಅದು ನನ್ನ ದೌರ್ಬಲ್ಯ ಅಲ್ಲ; ಸತೀಶ್ ಜಾರಕಿಹೊಳಿ
ವಿರೋಧ ಪಕ್ಷಗಳಿಗಿಂತ ಸ್ವಪಕ್ಷದ ಶಾಸಕರಿಂದಲೇ ಪಕ್ಷಕ್ಕೆ ಮುಜುಗರ
ಮಾಧ್ಯಮಗಳ ಮುಂದೆ ಮಾತನಾಡಲು ನಾನಿದ್ದೇನೆ ಸಿಎಂ ಇದ್ದಾರೆ
ಬೆಂಗಳೂರು: ಕಾಂಗ್ರೆಸ್ ಶಾಸಕರು, ಸಚಿವರ ಸಾಲು, ಸಾಲು ಹೇಳಿಕೆಗಳು ಪಕ್ಷದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದೆ. ಈ ಮಾತಿನ ಗದ್ದಲಕ್ಕೆ ರೋಸಿ ಹೋದ ಕೆಪಿಸಿಸಿ ಅಧ್ಯಕ್ಷರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಯಾರೂ ಪಕ್ಷದ ಬಗ್ಗೆ ಏನೂ ಮಾತನಾಡಬಾರದು. ಬಹಿರಂಗವಾಗಿ ಯಾರೂ ಹೇಳಿಕೆಗಳು ನೀಡಬಾರದೆಂದು ಪಕ್ಷದ ಎಲ್ಲಾ ಶಾಸಕರಿಗೆ ಕೆಪಿಸಿಸಿ ಅಧ್ಯಕ್ಷರು ಖಡಕ್ ಸೂಚನೆ ಕೊಟ್ಟಿದ್ದಾರೆ.
ಇತ್ತೀಚೆಗೆ ಪಕ್ಷದ ಬಗ್ಗೆ ಹಲವು ನಾಯಕರು ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರ ಹಾಕಿದ್ದರು. ವಿರೋಧ ಪಕ್ಷಗಳಿಗಿಂತ ಸ್ವಪಕ್ಷದ ಶಾಸಕರ ಅಸಮಾಧಾನ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುಜುಗರವಾಗುವ ವಾತಾವರಣ ನಿರ್ಮಾಣ ತಂದಿತ್ತು. ಇದೇ ಮುಂದುವರಿದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನೆಡೆಯಾಗುವ ಆತಂಕ ಇತ್ತು. ಈ ಹಿನ್ನೆಲೆ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿರುವ ಡಿ.ಕೆ ಶಿವಕುಮಾರ್ ಅವರು ಇನ್ಮುಂದೆ ಯಾವ ಶಾಸಕರು ಪಾರ್ಟಿ ವಿಚಾರವನ್ನ ಮಾಧ್ಯಮಗಳ ಮುಂದೆ ಮಾತನಾಡಬಾರದು. ಮಾಧ್ಯಮಗಳ ಮುಂದೆ ಮಾತನಾಡಲು ನಾನಿದ್ದೇನೆ ಸಿಎಂ ಸಿದ್ದರಾಮಯ್ಯನವರು ಇದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: ಹಿಂದೆ ಹೇಳಿಲ್ಲ, ಮುಂದೆಯೂ ಹೇಳಲ್ಲ.. ಸತೀಶ್ ಜಾರಕಿಹೊಳಿ ಕ್ರೆಡಿಟ್ ಮಾತಿಗೆ ಡಿಕೆಶಿ ಖಡಕ್ ರಿಯಾಕ್ಷನ್
ಯಾವ್ಯಾವ ನಾಯಕರು ಏನ್ ಹೇಳಿದ್ರು?
1. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ
ಸಚಿವ ಸತೀಶ್ ಜಾರಕಿಹೊಳಿ ಅವರು ಡಿಸಿಎಂ ಡಿ.ಕೆ ಶಿವಕುಮಾರ್ ಅವರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದರು. ಕಾಂಪ್ರಮೈಸ್ ಆಗಿದ್ದೇನೆ, ಅದು ನನ್ನ ದೌರ್ಬಲ್ಯ ಅಲ್ಲ. ಸಮಾನ ಮನಸ್ಕ ಶಾಸಕರ ಜೊತೆಗೆ ಪ್ರವಾಸ ಹೋಗುವ ಚಿಂತನೆ ನಡೆಸಿದ್ದರು.
2. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಬೆಳಗಾವಿಗೆ ಬಂದ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಸ್ವಾಗತಕ್ಕೆ ಶಾಸಕರು ಹೋಗಬೇಕಿತ್ತು. ನನ್ನ ಮೌನ ದೌರ್ಬಲ್ಯ ಅಲ್ಲ ಎಂದಿದ್ದರು.
3. ಶಾಸಕ ಅಶೋಕ್ ಪಟ್ಟಣ್
ಎರಡೂವರೆ ವರ್ಷದ ಬಳಿಕ ಸಚಿವ ಸಂಪುಟ ಪುನಾರಚನೆ ಆಗಲಿದೆ ಎಂದು ರಾಮದುರ್ಗ ಶಾಸಕ ಅಶೋಕ್ ಪಟ್ಟಣ್ ಹೇಳಿಕೆ ನೀಡಿದ್ದರು.
4. ಶಾಸಕ ಬಸವರಾಜ್ ಶಿವಗಂಗಾ
ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ ಅವರು ಡಿಕೆಶಿ ಜೊತೆಗೆ ನೂತನ ಶಾಸಕರು ಇದ್ದೇವೆ ಎಂದಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ