newsfirstkannada.com

ಗೌರವ ಇಲ್ಲದ ಕಡೆ ನಾನ್ಯಾಕೆ ಇರಬೇಕು! ದೆಹಲಿ ಮುಖಂಡರ ಭೇಟಿಯ ಬಗ್ಗೆ ವಿನಯ್​ ಕುಲಕರ್ಣಿ ಏನಂದ್ರು?

Share :

Published July 2, 2024 at 11:41am

Update July 2, 2024 at 11:43am

  ದೆಹಲಿ ಭೇಟಿಯ ಬಗ್ಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ

  ಹಲವಾರು ದುರಾಡಳಿತ ನಡೆದಿರೋದು ಸಹಿಸಿಕೊಳ್ಳಲು ಆಗಲಿಲ್ಲ

  ಯಾವೆಲ್ಲಾ ಗೋಲ್​ಮಾಲ್​ ಆಗಿವೆ ತನಿಖೆ ನಡೆಯಲಿ ಎಂದ ವಿನಯ್​ ಕುಲಕರ್ಣಿ

ಗೌರವ ಇಲ್ಲದ ಕಡೆ ನಾನ್ಯಾಕೆ ಇರಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ್​​ ಕುಲಕರ್ಣಿ ಹೇಳಿದ್ದಾರೆ. ದೆಹಲಿ ಹೋದ ವಿಚಾರವಾಗಿ ಮಾತನಾಡಿದ ಅವರು ದುರಾಡಳಿತ ವ್ಯವಸ್ಥೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ನ್ಯೂಸ್​ಫಸ್ಟ್​ ಜೊತೆ ಮಾತನಾಡಿದ ವಿನಯ್​ ಕುಲಕರ್ಣಿ, ದೆಹಲಿಗೆ ಹೋಗಿದ್ದು ನಿಜ. ಅಸಮಾಧಾನವೇನಿಲ್ಲ. ಯಾರ ಮುಂದೆ ಅಸಮಾಧಾನ ವ್ಯಕ್ತಪಡಿಸಿಲ್ಲ. ಆ ಪ್ರಸಂಗ ಬಂದ್ರೆ ವ್ಯಕ್ತಪಡಿಸುತ್ತೇನೆ. ಆದರೆ ಅಲ್ಲಿ ಹಲವಾರು ದುರಾಡಳಿತ ನಡೆದಿರೋದು ಸಹಿಸಿಕೊಳ್ಳಲು ಆಗಲಿಲ್ಲ. ಬಂದಂತ ಸಮಯದಲ್ಲಿ ಆ ವಿಚಾರ ಹೇಳ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಒಡಲು ತುಂಬಿಸುತ್ತಿದ್ದಾಳೆ ಕಾವೇರಿ.. ಹೆಚ್ಚುತ್ತಿದೆ KRS ಡ್ಯಾಂನ ನೀರಿನ ಮಟ್ಟ; ಇಂದು ಎಷ್ಟಿದೆ ನೋಡೋಣ

ಬಳಿಕ ಮಾತನಾಡಿದ ವಿನಯ್​ ಕುಲಕರ್ಣಿ, ನಮ್ಮ ಬೋರ್ಡ್​ನಲ್ಲಿ ದುರಾಡಳಿತ ನಡೆದಿದೆ. ಯಾಕಂದ್ರೆ ಆ ಬೋರ್ಡ್​​ಗೆ ನಾನು ಹೆಡ್​​. ಅಲ್ಲಿ ವ್ಯವಸ್ಥೆ ಸರಿ ಇಲ್ಲ. ಲಾಸ್ಟ್​ ಟೈಂ ಮಂತ್ರಿಗಳು ಹೇಳಿದ್ದಾರೆ. ಇದನ್ನು CIDಗೆ ಕೊಡಬೇಕು ಎಂದು ಹೇಳಿದ್ರು. ಆದರೆ ಪರಿಶೀಲನೆ ನಡೆಸಲಾರದಂತಹ ದುರಾಡಳಿತ ನಡೆದಿದೆ. ಮೊನ್ನೆ ನಾವು ವಾಲ್ಮೀಕಿ ಬೋರ್ಡ್​ ವ್ಯವಸ್ಥೆ ನೋಡಿದ್ದೇವೆ. ಅದಕ್ಕಿಂತ ಕೆಟ್ಟ ವ್ಯವಸ್ಥೆ ಆಗೋದು ಬೇಡ. ಅದಕ್ಕಾಗಿ ಪತ್ರಗಳನ್ನು ಕೊಟ್ಟಿದ್ದೇನೆ. ಪ್ರಸಂಗ ಬಂದಾಗ ಹೇಳುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಬಾವನಿಂದಲೇ ಬಾಮೈದನ ಕೊಲೆ.. ಮಗನ ಸಾವಿನಿಂದ ಖಿನ್ನತೆಗೆ ಜಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ!

ದೆಹಲಿಗೆ ಹೋಗಿದ್ದು ನಿಜ. ನಮ್ಮ ಪಕ್ಷದ ಮುಖಂಡರಿಗೆ ತಿಳಿಸಿದ್ದೇವೆ. ಹತ್ತು ಹದಿನೈದು ಕಂಪನಿಗಳಿದ್ದಾವೆ. ಅದರಲ್ಲಿ ಯಾವೆಲ್ಲಾ ಗೋಲ್​ಮಾಲ್​ ಆಗಿವೆ ತನಿಖೆ ನಡೆಯಲಿ. ನಾನು ಪತ್ರ ಕೊಟ್ಟು ಎರಡುವರೆ ತಿಂಗಳಾಯ್ತು. ಮುಖ್ಯಮಂತ್ರಿಗೂ ವಿಚಾರ ತಿಳಿಸಿದ್ದೇನೆ ಎಂದು ವಿನಯ್​ ಕುಲಕರ್ಣಿ ಹೇಳಿದರು. ಬಳಿಕ ಅಸಮಾಧಾನ ವಿಚಾರವಾಗಿ ನಾನು ಗೌರವ ಇಲ್ಲದ ಕಡೆ ನಾನ್ಯಾಕೆ ಇರಬೇಕು ಎಂದು ಪರೋಕ್ಷವಾಗಿ ರಾಜೀನಾಮೆ ಹಿಂಟ್​ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗೌರವ ಇಲ್ಲದ ಕಡೆ ನಾನ್ಯಾಕೆ ಇರಬೇಕು! ದೆಹಲಿ ಮುಖಂಡರ ಭೇಟಿಯ ಬಗ್ಗೆ ವಿನಯ್​ ಕುಲಕರ್ಣಿ ಏನಂದ್ರು?

https://newsfirstlive.com/wp-content/uploads/2024/07/vinaya-Kulkarni.jpg

Load More